Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಹೀಟ್ ವೇವ್: ಬೆವರು ಕಜ್ಜಿ, ತುರಿಕೆ ತಡೆಗಟ್ಟುವುದು ಹೇಗೆ?
ಉಸ್ಸಾಪ್ಪಾ... ಎಂಥ ಬಿಸಿಲು, ಈ ಉರಿ ಬಿಸಿಲಿಗೆ ಮನೆಯಿಂದ ಹೊರಗಡೆ ಕಾಲಿಡಕ್ಕೆ ಸಾಧ್ಯವಾಗುತ್ತಿಲ್ಲ, ಅಷ್ಟೊಂದು ಉರಿ ಬಿಸಿಲು. ಕೆಲವು ಕಡೆ ಈಗಾಗಲೇ ಉಷ್ಣಾಂಶ 38 ಡಿಗ್ರಿC ದಾಟಿದೆ. ಮೇ ತಿಂಗಳಿನಲ್ಲಿ ಕೆಲವು ಕಡೆಗಳಲ್ಲಿ ಉಷ್ಣಾಂಶ 45 ಡಿಗ್ರಿ C ದಾಟಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಸಿದೆ.
ಈ ಉರಿ ಬಿಸಿಲಿನ ಕಾರಣದಿಂದಾಗಿ ಮಕ್ಕಳಲ್ಲಿ, ದೊಡ್ಡವರಲ್ಲಿ ಬೆವರು ಕಜ್ಜಿಗಳು ಕಂಡು ಬರುತ್ತದೆ. ಈ ಬೆವರು ಕಜ್ಜಿ ಮುಖ, ಕುತ್ತಿಗೆ, ಬೆನ್ನು ಹೀಗೆ ದೇಹದ ಯಾವುದೇ ಭಾಗದಲ್ಲಿ ಬೊಬ್ಬೆ ಏಳುವುದು ಅಥವಾ ಕಜ್ಜಿ ಕಂಡು ಬರುವುದು. ಅದರಲ್ಲೂ ಮಕ್ಕಳ ತ್ವಚೆ ತುಂಬಾನೇ ಸೆನ್ಸಿಟಿವ್ ಇರುವುದರಿಂದ ಈ ಬೇಸಿಗೆಯಲ್ಲಿ ಹೆಚ್ಚಿನ ಆರೈಕೆ ಮಾಡಬೇಕಾಗುತ್ತದೆ.
ಬೇಸಿಗೆಯಲ್ಲಿ ಈ ಬೆವರು ಕಜ್ಜಿ ತಡೆಗಟ್ಟುವುದು ಹೇಗೆ ಎಂದು ನೋಡೋಣ:

ಮಕ್ಕಳು
ದೊಡ್ಡವರಿಗಿಂತ ಮಕ್ಕಳ ದೇಹ ಹೆಚ್ಚು ಬೆಚ್ಚಗಿರುತ್ತದೆ, ಹವಾಮಾನದ ಉಷ್ಣಾಂಶ ಕೂಡ ಅಧಿಕವಾದಾಗ ಬೆವರು ಕಜ್ಜಿ ಉಂಟಾಗುವುದು.
ಈ ರೀತಿ ಕಂಡು ಬಂದಾಗ
* ಮಕ್ಕಳ ದೇಹವನ್ನು ತಂಪು ಮಾಡಿ
ಮಕ್ಕಳ ಮೈಗೆ ಸೋಪು ಹಚ್ಚಬೇಡಿ ಉಗುರು ಬೆಚ್ಚಗಿನ ಅಥವಾ ತಣ್ಣೀರು ಅಭ್ಯಾಸವಿದ್ದರ ತಣ್ಣೀರಿನಲ್ಲಿ ಮೈ ತೊಳಸಿ.
* ಕಲಾಮೈನ್ ಲೋಷನ್ ಹಚ್ಚಿ
ಕಲಾಮೈನ್ ಲೋಷನ್ ಮಕ್ಕಳಿಗೆ ಸುರಕ್ಷಿತ, ಇದನ್ನು ಮೈಗೆ ಹಚ್ಚಿ, ಆದರೆ ಕಣ್ಣು ಬಳಿ ಅಥವಾ ತುಟಿಗೆ ಹಚ್ಚಿ.
* ಓಟ್‌ಮೀಲ್ ಪೇಸ್ಟ್ ಹಚ್ಚಿ
ಓಟ್‌ಮೀಲ್ ಪೇಸ್ಟ್‌ನಿಂದ ಮೈ ತಿಕ್ಕಿ ಇದರಿಂದ ತುರಿಕೆ ಕಡಿಮೆಯಾಗುವುದು.
ಎಣ್ಣೆಯ ಉತ್ಪನ್ನ ಬಳಸಬೇಡಿ
ಪಟ್ರೋಲಿಯಂ ಜೆಲ್ಲಿ, ಮಿನರಲ್ ಆಯಿಲ್ ಇವುಗಳು ಬೇಸಿಗೆ ಸೂಕ್ತವಲ್ಲ, ಚಳಿಗಾಲಕ್ಕಷ್ಟೇ ಸೂಕ್ತ ಆದ್ದರಿಂದ ಬೇಸಿಗೆಯಲ್ಲಿ ಇವುಗಳನ್ನು ಬಳಸಬೇಡಿ.
ದೊಡ್ಡವರು
* ದೊಡ್ಡವರು ಕೂಡ ಅಷ್ಟೇ ತಣ್ಣೀರಿನಲ್ಲಿ ಮೈ ತೊಳೆಯಿರಿ
* ಹೊರಗಡೆ ಹೋಗುವಾಗ ತಲೆಗೆ ಕ್ಯಾಪ್ ಬಳಸಿ.
ಬೆವರು ಕಜ್ಜಿ ಲಕ್ಷಣಗಳು
* ಮೈಯಲ್ಲಿ ಕೆಂಪು ಕೆಂಪು ಗುಳ್ಳೆ.
* ಉರಿಕೆ
* ಉರಿ
* ಉರಿಯೂತ
ಈ ಮುನ್ನೆಚ್ಚರಿಕೆವಹಿಸಿ
* ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್ ಹಚ್ಚಿ
* ಮೈ ಉಷ್ಣತೆ ಉಷ್ಣಾಂಶ ಹೆಚ್ಚಾದಾಗ ತಣ್ಣೀರ ಸ್ನಾನ ಮಾಡಿ, ಮಕ್ಕಳ ಮೈಯನ್ನು ತಣ್ಣೀರಿನಲ್ಲಿ ಒರೆಸಿ.
ಬೆವರು ಕಜ್ಜಿ ತಡೆಗಟ್ಟಲು ಏನು ಮಾಡಬೇಕು?
* ತಣ್ಣೀರಿನಲ್ಲಿ ಸ್ನಾನ ಮಾಡಿ
* ಕೋಲ್ಡ್ ಕಂಪ್ರೆಸ್ ತೆಗೆದುಕೊಳ್ಳಿ
* ಏರ್ ಕಂಡೀಷನರ್ ಅಥವಾ ಫ್ಯಾನ್‌ನಡಿಯಲ್ಲಿ ಕುಳಿತುಕೊಳ್ಳಿ.
* ಸಡಿಲವಾದ ಕಾಟನ್ ಬಟ್ಟೆ ಧರಿಸಿ.
* ಕಲಾಮೈನ್ ಲೋಷನ್ ಬಳಸಿ
* ಓಟ್ ಮೀಲ್ ಸ್ನಾನ ಒಳ್ಳೆಯದು
* ತುರಿಕೆ ತುಂಬಾ ಇದ್ದಾಗ ಆಂಟಿಇಸ್ತಾಮೈನ್( antihistamine) ತೆಗೆದುಕೊಳ್ಳಿ. ಇದರಿಂದ ತುರಿಕೆ ತಡೆಗಟ್ಟಬಹುದು.
* ಅಡುಗೆ ಸೋಡಾ ಹಾಕಿ ಸ್ನಾನ ಮಾಡಿ : ಸ್ನಾನದ ನೀರಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಸ್ನಾನ ಮಾಡಿದರೆ ತುರಿಕೆ ಕಡಿಮೆ ಮಾಡುವುದು.
* ಲೋಳೆಸರ ಹಚ್ಚಿ: ಮಕ್ಕಳಿಗೆ ಲೋಳೆಸರ ಹಚ್ಚಿ, ದೊಡ್ಡವರು ಕೂಡ ಲೋಳೆರ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.
* ಸಾಕಷ್ಟು ನೀರು ಕುಡಿಯಿರಿ
* ಎಳನೀರು ಸೇವಿಸಿ
* ಹಣ್ಣು, ತರಕಾರಿಗಳನ್ನು ಬಳಸಿ.
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
* ಮೈ ತುಂಬಾ ಕಜ್ಜಿ ಉಂಟಾಗಿದ್ದರೆ
* ಜ್ವರ
* ತುಂಬಾ ತುರಿಕೆ
* ಕಜ್ಜಿ ಒಡೆದು ನೀರು ಬರುತ್ತಿದ್ದರೆ
* ಗಾಯದಿಂದ ರಕ್ತ ಬರುತ್ತಿದ್ದರೆ
* ಗುಳ್ಳೆಗಳು ಇದ್ದಕ್ಕಿದ್ದಂತೆ ಮೈ ಪೂರ್ತಿ ಹರಡಿದರೆ
ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಚರ್ಮರೋಗ ತಜ್ಞರಿಗೆ ತೋರಿಸಿ.



Click it and Unblock the Notifications

