Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಚಳಿಗಾಲದಲ್ಲಿ ಕಾಡುವ ತಲೆ ಹೊಟ್ಟಿನ ಸಮಸ್ಯೆ ತಡೆಗಟ್ಟಬೇಕೆ?
ಚಳಿಗಾಲದಲ್ಲಿ ಕಾಡುವ ಪ್ರಮುಖ ಕೂದಲಿನ ಸಮಸ್ಯೆಯೆಂದರೆ ತಲೆ ಹೊಟ್ಟು. ಈ ತಲೆಹೊಟ್ಟಿನ ಸಮಸ್ಯೆ ತಲೆಯಲ್ಲಿ ಮಾತ್ರವಲ್ಲ, ಹುಬ್ಬಿನಲ್ಲೂ ಕೂಡ ಕಂಡು ಬರುವುದು, ಚಳಿಗಾಲದಲ್ಲಿ ಕಾಡುವ ತಲೆ ಹೊಟ್ಟಿನ ಸಮಸ್ಯೆ ಕಡಿಮೆ ಮಾಡಲು ಈ ಟಿಪ್ಸ್ ಪಾಲಿಸಿ.


ಚಳಿಗಾಲದಲ್ಲಿ ತಲೆಹೊಟ್ಟು ತಡೆಗಟ್ಟಲು ಟಿಪ್ಸ್
* ವಾರದಲ್ಲಿ ಎರಡು ಬಾರಿ ಶುದ್ಧ ತೆಂಗಿನೆಣ್ಣೆ ಬಿಸಿ ಮಾಡಿ, ಅದನ್ನು ತಲೆ ಬುಡಕ್ಕೆ ಕೈಯಿಂದ ಅಥವಾ ಕಾಟನ್‌ನಲ್ಲಿ ಅದ್ದಿ ಹಚ್ಚಿ, ತುಂಬಾ ಬಿಸಿ ಎಣ್ಣೆ ಹಾಕಬೇಡಿ, ಕೈಯಲ್ಲಿ ಮುಟ್ಟುವಾಗ ಸ್ವಲ್ಪ ಬಿಸಿ ಇರಬೇಕು, ಇಲ್ಲದಿದ್ದರೆ ನೆತ್ತಿ ಸುಡುತ್ತದೆ.
* ಎಣ್ಣೆ ಹಚ್ಚಿದ ಬಳಿಕ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ, ಅದನ್ನು ಹಿಂಡಿ ತಲೆಗೆ ಸುತ್ತಿ, ಇದರಿಂದ ಕೂದಲಿನ ಬುಡ ಎಣ್ಣೆಯನ್ನು ಹೀರಿಕೊಳ್ಳುವುದು, ಇದರಿಂದ ತಲೆಹೊಟ್ಟು ಕಡಿಮೆಯಾಗುವುದು, ಕೂದಲಿನ ಬುಡ ಬಲವಾಗುವುದು.
* ಈ ಹಾಟ್ ಟವಲ್ ಟ್ರೀಟ್ಮೆಂಟ್ ಎರಡರಿಂದ ಮೂರು ಬಾರಿ ಮಾಡಿ.
* ನಂತರ ತಲೆಯಲ್ಲಿ ಎಣ್ಣೆಯನ್ನು ಹಾಗೆಯೇ ಒಂದು ರಾತ್ರಿ ಬಿಡಿ.
ನಂತರ ತಲೆ ಬುಡಕ್ಕೆ ನಿಂಬೆರಸ ಹಚ್ಚಿ 20 ನಿಮಿಷದ ಬಳಿಕ ಸ್ನಾನ ಮಾಡಿ.
* ಸ್ನಾನ ಮಾಡಿದ ಬಳಿಕ 2 ಚಮಚ ಆ್ಯಪಲ್ ಸಿಡರ್ ವಿನೆಗರ್ ಅನ್ನು ಮಗ್‌ಗೆ ಹಾಕಿ ಕೊನೆಗೆ ತಲೆಗೆ ಸುರಿದು ಕೂದಲು ಒರೆಸಿ.
ಈ ರೀತಿ ಎರಡು ಬಾರಿ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುವುದು.
ಕೂದಲಿಗೆ ಈ ಬಗೆಯ ಕಂಡೀಷನರ್ ಒಳ್ಳೆಯದು
* ಶ್ಯಾಂಪೂ ಹಚ್ಚಿದ ಬಳಿಕ ಕ್ರೀಮಿ ಕಂಡೀಷನರ್ ಬಳಸುವುದು ಕೂದಲಿಗೆ ತುಂಬಾ ಒಳ್ಳೆಯದು.
* ಕಂಡೀಷನರ್ ಹಚ್ಚಿ ಒಂದೆರಡು ನಿಮಿಷ ಬಿಟ್ಟು ತಲೆ ತೊಳೆಯಿರಿ.
* ಕೂದಲು ತುಂಬಾ ಡ್ರೈಯಾಗಿದ್ದರೆ ಹೇರ್ ಕಂಡೀಷನರ್ ತುಂಬಾ ತೊಳೆಯಬೇಡಿ.
* ಲೀವ್ ಆನ್ ಕಂಡೀಷನರ್ ಬಳಸಬಹುದು.

ಕೂದಲಿಗೆ ಈ ಬಗೆಯ ಕಂಡೀಷನರ್ ಒಳ್ಳೆಯದು
* ಶ್ಯಾಂಪೂ ಹಚ್ಚಿದ ಬಳಿಕ ಕ್ರೀಮಿ ಕಂಡೀಷನರ್ ಬಳಸುವುದು ಕೂದಲಿಗೆ ತುಂಬಾ ಒಳ್ಳೆಯದು.
* ಕಂಡೀಷನರ್ ಹಚ್ಚಿ ಒಂದೆರಡು ನಿಮಿಷ ಬಿಟ್ಟು ತಲೆ ತೊಳೆಯಿರಿ.
* ಕೂದಲು ತುಂಬಾ ಡ್ರೈಯಾಗಿದ್ದರೆ ಹೇರ್ ಕಂಡೀಷನರ್ ತುಂಬಾ ತೊಳೆಯಬೇಡಿ.
* ಲೀವ್ ಆನ್ ಕಂಡೀಷನರ್ ಬಳಸಬಹುದು.

ಕೂದಲಿನ ಆರೈಕೆಗೆ ಮನೆಮದ್ದು
ಕೂದಲಿನ ಹೇಗೆ ಆರೈಕೆ ಮಾಡಬೇಕು ಎಂಬುವುದು ತಿಳಿದರೆ ಕೂದಲಿನ ಆರೋಗ್ಯ ತುಂಬಾನೇ ಚೆನ್ನಾಗಿರುತ್ತದೆ. ಕೂದಲಿನ ಆರೈಕೆಗೆ ಈ ಮನೆಮದ್ದುಗಳು ಸಹಕಾರಿ
* ಕೂದಲು ಸೊಂಪಾಗಿ ಬೆಳೆಯಲು
ಒಂದು ಕಪ್‌ಗೆ ಸ್ವಲ್ಪ ಹಾಲು ಹಾಕಿ ಅದಕ್ಕೆ ಮೊಟ್ಟೆ ಹಾಕಿ ಚೆನ್ನಾಗಿ ಕದಡಿ, ನಂತರ ತಲೆ ಬುಡಕ್ಕೆ ಹಚ್ಚಿ 5 ನಿಮಿಷ ಬಿಟ್ಟು ತಲೆ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ.
ಮೊಟ್ಟೆ ತಲೆಗೆ ಹಾಕಿದರೆ ತುಂಬಾನೇ ಚೆನ್ನಾಗಿ ತೊಳೆಯಬೇಕು, ಇಲ್ಲದಿದ್ದರೆ ಕೂದಲು ದುರ್ವಾಸನೆ ಬೀರುವುಉದ, ಹಾಗಂತ ಕೆಮಿಕಲ್ ಅಧಿಕವಿರುವ ಶ್ಯಾಂಪೂ ಬಳಸಬೇಡಿ, ಮೈಲ್ಡ್ ಶ್ಯಾಂಪೂ ಬಳಸಿ.
ಕೂದಲು ಕವಲೊಡೆಯುತ್ತಿದ್ದರೆ
ನಿಮ್ಮ ಕೂದಲಿನ ಕವಲೊಡೆಯುತ್ತಿದ್ದರೆ ಒಂದು ಬೌಲ್‌ಗೆ 1 ಚಮಚ ಎಣ್ಣೆ, 1 ಚಮಚ ಗ್ಲಿಸರಿನ್, 1 ಮೊಟ್ಟೆಯ ಹಳದಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಕೂದಲಿನ ತುದಿಗೆ ಹಚ್ಚಿ. ನಿಮ್ಮ ಕೂದಲು ಉದ್ದವಿದ್ದರೆ ಸ್ವಲ್ಪ ಅಧಿಕ ಎಣ್ಣೆ ಬಳಸಿ, ನಂತರ 30 ನಿಮಿಷದ ಬಳಿಕ ತಲೆ ತೊಳೆಯಿರಿ. ಈ ರೀತಿ ವಾರದಲ್ಲಿ 2 ಬಾರಿ ಮಾಡಿ, ಕೂದಲು ಕವಲೊಡೆಯುವುದಿಲ್ಲ ಅಲ್ಲದೆ ಕೂದಲಿನ ಹೊಳಪು ಹೆಚ್ಚುವುದು.
ಕೂದಲು ಮಂದವಾಗಿ ಕಾಣಲು
ಒಂದು ಚಮಚ ಹರಳೆಣ್ಣೆಗೆ, 1 ಚಮಚ ತೆಂಗಿನೆಣ್ಣೆ ಮಿಶ್ರ ಮಾಡಿ ಆ ಎಣ್ಣೆಯನ್ನು ಬಿಸಿ ಮಾಡಿ ತಲೆ ಬುಡಕ್ಕೆ ಹಚ್ಚಿ ರಾತ್ರಿ ಹಾಗೇ ಬಿಟ್ಟು, ಬೆಳಗ್ಗೆ ತಲೆ ತೊಳೆಯಿರಿ. ಹೀಗೆ ಮಾಡುವುದರಿಂದ ಅಕಾಲಿಕ ನೆರೆ ಕೂದಲು ತಡೆಗಟ್ಟಬಹುದು ಅಲ್ಲದೆ ಕೂದಲು ಮಂದವಾಗಿ ಬೆಳೆಯುವುದು.

ಇತರ ಕೆಲ ಟಿಪ್ಸ್
ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಈ ಟಿಪ್ಸ್ ಕೂಡ ಪಾಲಿಸಿ
* ಒಂದು ಸ್ಪ್ರೇ ಬಾಟಲಿಗೆ ಕ್ರೀಮಿ ಕಂಡಿಷನರ್ ಹಾಕಿಟ್ಟು ಅದನ್ನು ತಲೆಗೆ ಸ್ಪ್ರೇ ಮಾಡಿ ತಲೆ ಬಾಚಿ, ಕೂದಲು ಹರಡಿಕೊಂಡಿರುತ್ತದೆ.
* ನೀವು ಹೇರ್ ಡ್ರೈಯರ್ ಬಳಸುತ್ತಿದ್ದರೆ 10 ಅಡಿ ದೂರ ಹಿಡಿಯಿರಿ, ಹೀಗೆ ಮಾಡಿದರೆ ಕೂದಲಿಗೆ ಹಾನಿಯಾಗುವುದು ತಡೆಗಟ್ಟಬಹುದು
* ಬಿಸಿಲಿನಲ್ಲಿ ಓಡಾಡುವಾಗ ತಲೆಗೆ ಕ್ಯಾಪ್ ಅಥವಾ ಬಟ್ಟೆ ಹಾಕಿ
* ವಾರದಲ್ಲಿ ಎರಡು ಬಾರಿ ಮೊಸರಿಗೆ ಸ್ವಲ್ಪ ಮೊಟ್ಟೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ತಲೆ ತೊಳೆಯಿರಿ.
ಈ ರೀತಿಯ ಆರೈಕೆಯಿಂದ ಚಳಿಗಾಲದಲ್ಲಿ ನಿಮ್ಮ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಬಹುದು.



Click it and Unblock the Notifications