ಕೂದಲು ಕವಲೊಡೆಯುವುದನ್ನು ತಡೆಗಟ್ಟಲು ಇಲ್ಲಿದೆ ಟಿಪ್ಸ್

ಕೂದಲು ಉದ್ದ ಬರಲಿ ಎಂಬ ಆಸೆಯಿಂದ ಬೆಳೆಸುತ್ತಿರುತ್ತೇವೆ, ಆದರೆ ಕೂದಲು ಸ್ವಲ್ಪ ಉದ್ದ ಬೆಳೆಯುತ್ತಿದ್ದಂತೆ ಸ್ವಲ್ಪ ಆರೈಕೆ ಕಡಿಮೆಯಾದರು ಕೂದಲಿನ ತುದಿಯಲ್ಲಿ ಒಂದು ಕೂದಲು ಎರಡಾಗಿ ಕವಲೊಡಿದಿರುತ್ತದೆ. ಕೂದಲು ಹೀಗಾದರೆ ನಂತರ ಉದ್ದ ಬೆಳೆಯುವುದೇ ಇಲ್ಲ, ಕವಲೊಡೆದ ಕೂದಲನ್ನು ಕತ್ತರಿಸಿದರೆ ಮಾತ್ರ ಕೂದಲು ಬೆಳೆಯುತ್ತದೆ.

ಕೂದಲು ಕವಲೊಡೆಯುವ ಸಮಸ್ಯೆ ಸ್ವಲ್ಪ ಉದ್ದ ಕೂದಲಿನವರಲ್ಲಿ ಕಂಡು ಬರುವುದು ಸಾಮಾನ್ಯ. ಎಷ್ಟೋ ಬಾರಿ ನಮಗೆ ಗೊತ್ತಿಲ್ಲದೆ ಕೂದಲಿಗೆ ಹಾನಿ ಮಾಡುತ್ತೇವೆ ಇದರಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗುವುದು. ಕೂದಲಿಗೆ ನೋವಾಗುವಂತೆ ಬಾಚುವುದು, ಕೆಲವೊಂದು ಹೇರ್‌ಸ್ಟೈಲ್, ಕೂದಲಿಗೆ ಎಣ್ಣೆ ಹಚ್ಚಿ ಆರೈಕೆ ಮಾಡದೇ ಇರುವುದು ಇವೆಲ್ಲಾ ಕೂದಲು ಕವಲೊಡೆಯಲು ಪ್ರಮುಖ ಕಾರಣಗಳಾಗಿವೆ. ಒಮ್ಮೆ ಕೂದಲು ಕವಲೊಡೆದರೆ ಅದನ್ನು ಕತ್ತರಿಸದೆ ಸರಿಪಡಿಸಲು ಸಾಧ್ಯನೇ ಇಲ್ಲ. ಕೂದಲು ಉದ್ದವಾಗಿ, ಆಕರ್ಷಕವಾಗಿ ಬೆಳೆಯಬೇಕೆಂದರೆ ಕೂದಲು ಕವಲೊಡೆಯದಂತೆ ಈ ರೀತಿ ಆರೈಕೆ ಮಾಡಿ:

ಕೂದಲಿಗೆ ಬೇಕಿದೆ ಎಣ್ಣೆ ಚಿಕಿತ್ಸೆ

ಕೂದಲಿಗೆ ಬೇಕಿದೆ ಎಣ್ಣೆ ಚಿಕಿತ್ಸೆ

ಎಣ್ಣೆ ಮಸಾಜ್‌ ಕೂದಲಿನ ತುದಿ ಕವಲೊಡೆಯುವುದನ್ನು ತಡೆಯುವುದು ಮಾತ್ರವಲ್ಲ, ಕೂದಲು ಉದುರುವುದು, ತಲೆ ಹೊಟ್ಟು ಈ ರೀತಿಯ ಸಮಸ್ಯೆಗಳನ್ನು ತಡೆಗಟ್ಟಿ ಕೂದಲು ಉದ್ದ ಬೆಳೆಯಲು ಸಹಾಯ ಮಾಡುತ್ತದೆ. ತಲೆಗೆ ಚೆನ್ನಾಗಿ ಎಣ್ಣೆ ಮಸಾಜ್‌ ಮಾಡಿ ತಲೆ ಸ್ನಾನ ಮಾಡುವುದರಿಂದ ಶ್ಯಾಂಪೂ ಹಚ್ಚಿದಾಗ ಕೂದಲು ಹಾಳಾಗದಂತೆ ತಡೆಗಟ್ಟಬಹುದು. ಆದ್ದರಿಂದ ತಲೆ ಸ್ನಾನ ಮಾಡುವಾಗ ಕನಿಷ್ಠ ಒಂದು ಗಂಟೆ ಮುಂಚೆ ತಲೆಗೆ ಎಣ್ಣೆ ಹಚ್ಚಿ ನಂತರ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ಕೂದಲಿನ ಬುಡ ಕೂಡ ಬಲವಾಗುತ್ತದೆ.

ಕೂದಲನ್ನು ಮೃದುವಾಗಿ ಬಾಚಿ

ಕೂದಲನ್ನು ಮೃದುವಾಗಿ ಬಾಚಿ

ಸಾಮಾನ್ಯವಾಗಿ ಹೆಚ್ಚಿವರು ಕೂದಲನ್ನು ಬಾಚುವಾಗ ಗಮನ ಕೊಡುವುದೇ ಇಲ್ಲ. ಕೈಗೆ ಸಿಕ್ಕಿದ ಬಾಚಣಿಕೆ ಬಳಸಿ ತಲೆ ಬಾಚುತ್ತಾರೆ. ಕೂದಲು ಬಾಚುವ ಮುನ್ನ ಸೂಕ್ತ ಬಾಣಿಕೆಯನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಬಾಚುವಾಗ ಕೂದಲು ಹಾಳಾಗುವುದು. ಕೂದಲ ಸಿಕ್ಕು ಬಿಡಿಸಲು ಬೇರೆ ಬಾಚಣಿಕೆ ಬಳಸಬೇಕು, ಹೇರ್‌ ಸ್ಟೈಲ್ ಮಾಡಲು ಬೇರೆ ಬಾಚಣಿಕೆ ಬಳಸಬೇಕು. ಸಿಕ್ಕು ಬಿಡಿಸಲು ದೊಡ್ಡ ಹಲ್ಲಿನ ಬಾಚಣಿಕೆ ಬಳಸಿ. ಎಣ್ಣೆ ಹಚ್ಚುವ ಮುನ್ನ ಕೂದಲನ್ನು ಬಾಚಿ ನಂತರ ಎಣ್ಣೆ ಹಚ್ಚಬೇಕು. ಇನ್ನು ಒದ್ದೆ ಕುದಲಿನಲ್ಲಿ ತಲೆ ಬಾಚಬಾರದು, ಒದ್ದೆ ಕೂದಲಿನಲ್ಲಿ ತಲೆ ಬಾಚಿದರೆ ಕೂದಲಿನ ತುದಿ ಕವಲೊಡೆಯುವುದು ಮಾತ್ರವಲ್ಲ, ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುವುದು.

ಕೂದಲಿನ ಅಲಂಕಾರಕ್ಕೆ ಬಿಸಿ ಉಪಕರಣಗಳನ್ನು ಬಳಸುವುದು

ಕೂದಲಿನ ಅಲಂಕಾರಕ್ಕೆ ಬಿಸಿ ಉಪಕರಣಗಳನ್ನು ಬಳಸುವುದು

ಹೇರ್‌ ಸ್ಟ್ರೈಟ್ನಿಂಗ್, ಕರ್ಲಿಂಗ್‌ ಅಂತ ಬಿಸಿ ಉಪಕರಣಗಳನ್ನು ಆಗಾಗ ಬಳಸುತ್ತಿದ್ದರೆ ಕೂದಲು ಹಾಳಾಗುವುದು. ಈ ರೀತಿಯ ಉಪಕರಣಗಳನ್ನು ಬಳಸುತ್ತಿದ್ದರೆ ಕೂದಲು ಬಲಹೀನವಾಗಿ ಕೂದಲು ಉದುರಲು ಪ್ರಾರಂಭವಾಗುವುದು. ಒದ್ದೆ ಕೂದಲನ್ನು ಒಣಗಿಸಲು ಹೇರ್‌ ಡ್ರೈಯರ್ ಬಸಬೇಡಿ, ರೂಮಿನ ಉಷ್ಣತೆಯಲ್ಲಿ ಕೂದಲು ಒಣಗಲು ಬಿಡಿ.

ಕವಲೊಡೆದ ಕೂದಲನ್ನು ಕೀಳಬೇಡಿ

ಕವಲೊಡೆದ ಕೂದಲನ್ನು ಕೀಳಬೇಡಿ

ಕವಲೊಡೆದ ಕೂದಲನ್ನು ನೋಡುವಾಗ ಅದನ್ನು ಕೀಳುವಂತೆ ಮನಸ್ಸಾಗುವುದು, ಹಾಗಂತ ಕೀಳಲು ಹೋಗಬೇಡಿ, ಇದರಿಂದ ಕೂದಲಿಗೆ ಮತ್ತಷ್ಟು ಹಾನಿಯುಂಟಾಗುವುದು ಹಾಗೂ ಕೂದಲು ಮತ್ತಷ್ಟು ಕವಲೊಡೆಯುವುದು. ಕೂದಲು ಕವಲೊಡೆದರೆ ಕೂದಲಿನ ತುದಿ ಸ್ವಲ್ಪ ಕತ್ತರಿಸಿ, ಇದರಿಂದ ಕೂದಲು ಆಕರ್ಷಕವಾಗಿ ಬೆಳೆಯುತ್ತದೆ.

ಕಂಡೀಷನರ್ ಬಳಸಿ

ಕಂಡೀಷನರ್ ಬಳಸಿ

ಆಕರ್ಷಕ ಹಾಗೂ ಆರೋಗ್ಯಕರ ಕೂದಲು ಬೇಕೆನ್ನುವವರು ಕಂಡೀಷನರ್ ಬಳಸಬೇಕು.ಸಾಮಾನ್ಯವಾಗಿ ತಲೆ ತೊಳೆಯುವಾಗ ಕಂಡೀಷನರ್ ಹಚ್ಚಿ ತೊಳೆಯುತ್ತೇವೆ, ಆದರೆ ಕೂದಲು ಕವಲೊಡೆದ ಸಮಸ್ಯೆಯನ್ನು ಹೋಗಲಾಡಿಸಲು ಕಂಡೀಷನರ್ ಹಚ್ಚಿ ಬಿಡಬೇಕು. ಮೊಟ್ಟೆಯ ಬಿಳಿ, ಬಾಳೆ ಹಣ್ಣು, ಮೊಸರು ಇವೆಲ್ಲಾ ನೈಸರ್ಗಿಕವಾದ ಕಂಡೀಷನರ್ ಆಗಿದ್ದು ಇದನ್ನು ಹಚ್ಚಿ ಬಿಡಬಹುದು.

ಕೂದಲನ್ನು ಒಣಗಿಸಿ

ಕೂದಲನ್ನು ಒಣಗಿಸಿ

ತಲೆಸ್ನಾನ ಮಾಡಿ ಕೂದಲನ್ನು ಹಾಗೇ ಬಾಚಿ ಕಟ್ಟಬೇಡಿ, ಕೂದಲು ಒಣಗಿದ ಬಳಿಕವಷ್ಟೇ ಬಾಚಿ, ಹೀಗೆ ಮಾಡಿದರೆ ಕೂದಲ ತುದಿ ಹಾಳಾಗುವುದಿಲ್ಲ. ಕೂದಲನ್ನು ಒರೆಸಲು ಮೃದುವಾದ ಟವಲ್ ಬಳಸಿ. ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಬಳಸುವುದು, ಫ್ಯಾನ್‌ ಕೆಳಗಡೆ ಕೂದಲನ್ನು ಒಣಗಿಸುವುದು ಮಾಡಿದರೆ ಕೂದಲಿಗೆ ಹಾನಿಯುಂಟಾಗುವುದು. ತಲೆಸ್ನಾನ ಬಳಿಕ ಕೂದಲನ್ನು ಒರೆಸಿ ಕೂದಲನ್ನು ಹರಡಿ ರೂಮಿನ ಉಷ್ಣತೆಯಲ್ಲಿ ಒಣಗಲು ಬಿಡಿ. ರಾತ್ರಿ ತಲೆಸ್ನಾನ ಮಾಡುವ ಅಭ್ಯಾಸವಿದ್ದರೆ ಒದ್ದೆ ಕೂದಲಿನಲ್ಲಿ ಮಲಗಬೇಡಿ.

ಪ್ರೊಟೀನ್ ಹೇರ್ ಮಾಸ್ಕ್ ಬಳಸಿ

ಪ್ರೊಟೀನ್ ಹೇರ್ ಮಾಸ್ಕ್ ಬಳಸಿ

ನಾವು ಕೂದಲಿಗೆ ಮಾಡುವ ಮತ್ತೊಂದು ಹಾನಿಯೆಂದರೆ ಅದಕ್ಕೆ ಅಗ್ಯತವಾದ ಪ್ರೊಟೀನ್ ಒದಗಿಸದೆ ಇರುವುದು. ಕೂದಲಿನ ಅರೋಗ್ಯಕ್ಕೆ ಪ್ರೊಟೀನ್ ಅವಶ್ಯಕ. ಅದ್ದರಿಂದ ಪ್ರೊಟೀನ್ ಮಾಸ್ಕ್ ಬಳಸಿ, ಇದು ಕೂದಲಿನ ಅರೈಕೆ ಮಾಡಿ, ಕವಲೊಡೆಯದಂತೆ ತಡೆಯುತ್ತದೆ. ಪ್ರೊಟೀನ್ ಹೇರ್‌ ಮಾಸ್ಕ್‌ ಅನ್ನು ತಿಂಗಳಿಗೊಮ್ಮೆಯಾದರೂ ಹಾಕಿಕೊಳ್ಳಿ, ಇದು ನಿಮ್ಮ ಕೂದಲನ್ನು ರಕ್ಷಣೆ ಮಾಡುವುದು ಮಾತ್ರವಲ್ಲ ಆಕರ್ಷಕ ಲುಕ್ ನೀಡುತ್ತದೆ.

ಕೂದಲನ್ನು ಆಗಾಗ ಕತ್ತರಿಸಿ

ಕೂದಲನ್ನು ಆಗಾಗ ಕತ್ತರಿಸಿ

ಉದ್ದ ಕೂದಲು ಬೇಕೆಂದು ಬಯಸುವವರು ಮೂರು ತಿಂಗಳಿಗೊಮ್ಮೆ ಕುದಲಿನ ಬುಡಕ್ಕೆ ಸ್ವಲ್ಪ ಕತ್ತರಿ ಹಾಕಿದರೆ ಈ ರೀತಿಯ ಒಡೆದ ಕೂದಲನ್ನು ತೆಗೆಯಬಹುದು ಹಾಗೂ ಕೂದಲು ಚೆನ್ನಾಗಿ ಬೆಳೆಯುತ್ತದೆ. ಕೂದಲು ಕತ್ತರಿಸಿದ ಬಳಿಕ ತಲೆ ಬುಡಕ್ಕೆ ಚೆನ್ನಾಗಿ ಎಣ್ಣೆ ಹಾಕಿ ಮಸಾಜ್ ಮಾಡಿ, ಇದರಿಂದ ಸೊಂಪಾದ ಕೂದಲು ಬೆಳೆಯುವುದು.

English summary

Tips To Tackle Split Ends Without Cutting Your Hair

There are certain tips to avoid split hair, if you paid attention it will help you tackle the damage that is split ends. Here we have for you certain tips that can help you to tackle split ends and help you fix them.
Story first published: Monday, October 28, 2019, 19:00 [IST]
X
Desktop Bottom Promotion