Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೂದಲು ದಟ್ಟವಾಗಿ ಕಾಣಲು ಬ್ಯಾಕ್‌ಕೋಂಬಿಂಗ್ ಮಾಡುತ್ತಿದ್ದರೆ ಈಗಲೇ ನಿಲ್ಲಿಸಿ
ಕೂದಲಿನ ದಟ್ಟತೆ ಕಡಿಮೆಯಿದ್ದಾಗ, ಹೆಚ್ಚಿನವರು ಮೊರೆಹೋಗುವ ಹೇರ್‌ಸ್ಟೈಲ್ ಅಂದರೆ ಬ್ಯಾಕ್‌ಕೋಂಬಿಂಗ್ ಅಥವಾ ಹಿಂದಕ್ಕೆ ಬಾಚಿಕೊಳ್ಳುವುದು. ಇದರಿಂದ ನಿಮ್ಮ ಕೂದಲು ತಾತ್ಕಾಲಿಕವಾಗಿ ದಟ್ಟವಾಗಿ ಕಾಣುತ್ತದೆ. ಇದು ಬಹಳ ಸುಲಭ ಹಾಗೂ ಯಾರ ಅಗತ್ಯವೂ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದಕ್ಕೆ ಹೆಚ್ಚಿನವರು ತಮ್ಮ ಕೂದಲನ್ನು ಹಿಂದಕ್ಕೆ ಬಾಚಿಕೊಳ್ಳುತ್ತಾರೆ. ಆದರೆ, ಇದು ನಿಮ್ಮ ಕೂದಲಿಗೆ ಹಾನಿಕಾರಕ ಎಂಬುದು ನಿಮಗೆ ಗೊತ್ತೇ? ಹೌದು, ಕೂದಲನ್ನು ಹಿಂದಕ್ಕೆ ಬಾಚಿಕೊಳ್ಳುವುದು ಅಥವಾ ಬ್ಯಾಕ್‌ಕೋಂಬಿಂಗ್ ಎನ್ನುವುದು ಕೂದಲು ಉದುರುವಿಕೆ ಸೇರಿದಂತೆ ನಾನಾ ಕೂದಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದು ಹೇಗೆ? ಇದಕ್ಕೆ ಕಾರಣಗಳೇನು? ಪರಿಹಾರಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೂದಲನ್ನು ಹಿಂದಕ್ಕೆ ಬಾಚುವುದು ನಿಮ್ಮ ಕೂದಲಿಗೆ ಹೇಗೆ ಹಾನಿ ಮಾಡುತ್ತದೆ?
ಬ್ಯಾಕ್‌ಕೋಂಬಿಂಗ್ ಅಥವಾ ಹಿಂದಕ್ಕೆ ಬಾಚುವುದರಿಂದ ನಿಮ್ಮ ಕೂದಲು ಕಿರುಚೀಲಗಳು ಹಾನಿಗೊಂಡು ಉದುರುವಿಕೆಗೆ ಕಾರಣವಾಗಬಹುದು. ಈ ರೀತಿಯ ಹೇರ್ ಸ್ಟೈಲಿಂಗ್‌ನಲ್ಲಿ, ಕೂದಲಿನ ಹೊರಪೊರೆಗಳನ್ನು ಎತ್ತಬೇಕಾಗುತ್ತದೆ. ಅಂದರೆ, ಬಾಚಣಿಗೆಯ ಸಹಾಯದಿಂದ ನಿಮ್ಮ ಕೂದಲಿನ ಎಳೆಗಳನ್ನು ನಿಧಾನವಾಗಿ ಹಿಮ್ಮುಖವಾಗಿ ಬಾಚುವುದು. ಇದು ನಿಮ್ಮ ಕೂದಲು ದಟ್ಟವಾಗಿ ಕಾಣುವಂತೆ ಮಾಡಬಹುದು. ಆದರೆ ನಿಮ್ಮ ಕೂದಲಿಗೆ ಹಾನಿಕಾರಕವಾಗಿದ್ದು, ಉದುರುವಿಕೆಗೆ ಕಾರಣವಾಗುತ್ತದೆ. ಅದು ಹೇಗೆ ಎಂಬುದನ್ನು ಈ ಕೆಳಗೆ ನೋಡೋಣ.
ಕೂದಲನ್ನು ಹಿಂದಕ್ಕೆ ಬಾಚುವುದರಿಂದ ಕೂದಲಿಗೆ ಆಗುವ ಸಮಸ್ಯೆಗಳೇನು?
1. ಕೂದಲನ್ನು ಹಿಂದಕ್ಕೆ ಬಾಚಿಕೊಳ್ಳುವುದರಿಂದ ಸಿಕ್ಕಾಗಿ, ಗಂಟುಗಳು ಉಂಟಾಗಬಹುದು. ಇದರಿಂದ ಕೂದಲು ತುಂಡಾಗಬಹುದು.
2. ನಿಮ್ಮ ಕೂದಲು ಎಂದಿಗೂ ಮೊದಲಿನ ಸಮತಟ್ಟಾದ ವ್ಯವಸ್ಥೆಗೆ ಹಿಂತಿರುಗುವುದಿಲ್ಲ. ಇದರಿಂದ ಕೂದಲಿನ ಹೊರಪೊರೆಗಳು ಸಡಿಲಗೊಂಡು, ಕೂದಲಿನ ತುದಿಗಳು ಸೀಳಾಗಲು ಪ್ರಾರಂಭಿಸುತ್ತವೆ.
3. ಇದು ಎಳೆತದ ಅಲೋಪೆಸಿಯಾವನ್ನು ಉಂಟುಮಾಡಬಹುದು. ಅಲೋಪೆಸಿಯಾವು ಕೂದಲಿನ ಕಿರುಚೀಲಗಳ ಅತಿಯಾದ ಎಳೆಯುವಿಕೆಯಿಂದಾಗಿ ಉಂಟಾಗುವ ಕೂದಲು ಉದುರುವಿಕೆಯ ಒಂದು ರೂಪವಾಗಿದೆ. ಕೂದಲನ್ನು ಹಿಂದಕ್ಕೆ ಬಾಚಿಕೊಳ್ಳುವಾಗ ಸಹಜವಾಗಿಯೇ ಹೆಚ್ಚು ಎಳೆತ ಉಂಟಾಗುವುದು. ಇದರಿಂದ ಕೂದಲು ಉದುರುವಿಕೆ ಉಂಟಾಗುವುದು.
ಕೂದಲನ್ನು ಹಿಂದಕ್ಕೆ ಬಾಚುವುದರಿಂದ ಉಂಟಾಗುವ ಕೂದಲಿನ ಹಾನಿಯನ್ನು ಕಡಿಮೆ ಮಾಡಲು ಕೆಲವು ಸರಳ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:
1. ಕ್ಲೀನ್ ಮತ್ತು ಚೆನ್ನಾಗಿ ಬಾಚಿದ ಕೂದಲಿನೊಂದಿಗೆ ಪ್ರಾರಂಭಿಸಿ. ಸಿಕ್ಕು -ಸಿಕ್ಕಾದ ಕೂದಲಿನೊಂದಿಗೆ ನೀವು ಮತ್ತೆ ಹಿಮ್ಮುಖವಾಗಿ ಬಾಚಲು ಆರಂಭಿಸಿದರೆ, ಕೂದಲಿಗೆ ಹಾನಿಯಾಗುವುದು.
2. ಮೊದಲು ಕೂದಲನ್ನು ಸಣ್ಣ ಭಾಗಗಳಾಗಿ ವಿಂಗಡಿಸಿ. ಸ್ವಲ್ಪ--ಸ್ವಲ್ಪವೇ ಕೂದಲನ್ನು ತೆಗೆದುಕೊಳ್ಳುವುದು ಉತ್ತಮ.
3. ಕೂದಲಿನ ಒಂದು ಸಣ್ಣ ಭಾಗವನ್ನು ತೆಗೆದುಕೊಂಡು ಮೃದುವಾದ ಬಾಚಣಿಗೆಯನ್ನು ಬಳಸಿ, ನಿಧಾನವಾಗಿ ಹಿಮ್ಮುಖವಾಗಿ ಬಾಚಿಕೊಳ್ಳಿ.
4. ಮೊದಲಿಗೆ ಕೆಳಗಿನಿಂದ ಬಾಚಿ, ತದನಂತರ ಮೇಲಿನಿಂದ ಬಾಚಿಕೊಳ್ಳಿ.
5. ಮೇಲಿನಿಂದ-ಕೆಳಕ್ಕೆ ಒಮ್ಮಲೆ ಬಾಚಬೇಡಿ, ಕೂದಲಿನೊಂದಿಗೆ ತುಂಬಾ ಸೌಮ್ಯವಾಗಿ ವರ್ತಿಸುವುದು ಉತ್ತಮ.
6. ಉತ್ತಮವಾದ ಕಂಡೀಷನರ್ ಬಳಸುವುದು ಉತ್ತಮ ದಾರಿ.
ಹಿಂದಕ್ಕೆ ಕೂದಲನ್ನು ಬಾಚುವುದರಿಂದ ಉಂಟಾಗುವ ಹಾನಿ ತಡೆಯಲು ಪರ್ಯಾಯ ವಿಧಾನಗಳು:
1. ನಿಮ್ಮ ಕೂದಲನ್ನು ಸ್ಟೈಲ್ ಮಾಡಲು ಕ್ರಿಂಪರ್ ಅಥವಾ ಸ್ಟ್ರೈಟ್ನರ್ ಬಳಸಿ
2. ನಿಮ್ಮ ಕೂದಲಿನ ದಟ್ಟತೆಯನ್ನು ಹೆಚ್ಚಿಸುವ ಕೆಲವೊಂದು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ಬಳಸಿ. ಆದರೆ, ಬಳಸುವ ಮುನ್ನ ಅವುಗಳಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂಬುದನ್ನು ಪರಿಶೀಲಿಸಿ.
3. ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಉತ್ತಮ ಪ್ರೋಟೀನ್ ಮತ್ತು ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ತೆಗೆದುಕೊಳ್ಳಿ
ಗಮನಿಸಿ: ಹೊಸ ವಿಷಯಗಳನ್ನು ಪ್ರಯತ್ನಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡುವುದನ್ನು ಖಚಿತಪಡಿಸಿಕೊಳ್ಳಿ.



Click it and Unblock the Notifications