Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ನೀವು ಕೂದಲಿನ ಆರೈಕೆಯಲ್ಲಿ ಸೆರಮ್ ಬಳಸುತ್ತಿದ್ದೀರಾ? ಸೆರಮ್ ಬಳಸುವುದರಿಂದ ಏನಾಗುತ್ತೆ ಗೊತ್ತಾ?
ನಿಮ್ಮ ತಲೆ ಕೂದಲಿನ ಆರೈಕೆಯಲ್ಲಿ ಸೆರಮ್ ಬಳಸುತ್ತಿದ್ದೀರಾ? ಇಲ್ಲಾಂದ್ರೆ ನಿಮ್ಮ ಕೂದಲಿನ ಆರೈಕೆಯಲ್ಲಿ ಈಗಲೇ ಸೆರಮ್ ಸೇರಿಸಿ, ಇದನ್ನು ನಾವು ಹೇಳುತ್ತಿಲ್ಲ, ನೀವು ಯಾವುದೇ ಹೇರ್ ಕೇರ್ ಎಕ್ಸ್‌ಪರ್ಟ್ ಬಳಿ ಹೋದರೆ ಅವರು ನಿಮಗೆ ಸೆರಮ್ ಬಳಸುವಂತೆ ಸಲಹೆ ಮಾಡುತ್ತಾರೆ.

ಸೆರಮ್ ಕೂದಲಿನ ಬುಡವನ್ನು ಬಲಪಡಿಸಲು ತುಂಬಾನೇ ಸಹಕಾರಿ. ನಿಮ್ಮ ಕೂದಲು ತುಂಬಾ ಉದುರುತ್ತಿದ್ದರೆ ನೀವು ಸೆರಮ್ ಬಳಸಿ ನೋಡಿ ತುಂಬಾನೇ ಬದಲಾವಣೆ ಕಾಣುವಿರಿ.
ನೀವು ಸೆರಮ್ ಬಳಸುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ಮಾಯಿಶ್ಚರೈಸರ್: ನೀವು ದಿನಕ್ಕೆ 2-3 ಬಾರಿ ಸೆರಮ್ ಬಳಸುವುದರಿಂದ ಕೂದಲು ಡ್ರೈಯಾಗುವುದು ತಡೆಗಟ್ಟುವುದು, ತಲೆಹೊಟ್ಟು, ತುರಿಕೆ ಈ ಬಗೆಯ ಸಮಸ್ಯೆ ತಡೆಗಟ್ಟುವುದು.
ಕೂದಲಿನ ಬೆಳವಣಿಗೆಗೆ ಸಹಕಾರಿ
ಸೆರಮ್‌ನಲ್ಲಿ ಬಯೋಟಿನ್, ವಿಟಮಿನ್ ಮತ್ತು ಖನಿಜಾಂಶಗಳಿರುತ್ತದೆ. ಇದು ಕೂದಲಿನ ಬೆಳವಣಿಗೆಗೆ ತುಂಬಾನೇ ಸಹಕಾರಿ.
ಕೂದಲು ಉದುರುವುದು ತಡೆಗಟ್ಟುತ್ತದೆ
ನೀವು ಕೂದಲಿಗೆ ಎಣ್ಣೆ ಹಾಕಿ ಆರೈಕೆ ಮಾಡುವುದು ಮಾತ್ರವಲ್ಲ, ಸೆರಮ್ ಕೂಡ ಬಳಸಿ. ವಾರದಲ್ಲಿ 2-3 ಬಾರಿ ಎಣ್ಣೆ ಬಳಸಿದರೆ, ಸೆರಮ್ ದಿನದಲ್ಲಿ 2 ಬಾರಿ ಬಳಸಿ. ಸರಮ್ ತಲೆ ಬುಡಕ್ಕೆ 3-4 ಹನಿ ಹಾಕಿದರೆ ಸಾಕು. ಇದರಿಂದಾಗಿ ಕೂದಲಿನ ಬುಡ ಗಟ್ಟಿಯಾಗುವುದು, ಕೂದಲು ಉದುರುವುದು ಕಡಿಮೆಯಾಗುವುದು.
ತಲೆಹೊಟ್ಟಿನ ಸಮಸ್ಯೆ ಉಂಟಾಗುವುದು
ನೀವು ಟೀ ಟ್ರೀ ಆಯಿಲ್ ಬಳಸುವುದರಿಂದ ಕೂದಲಿನ ಬುಡ ಒಣಗುವುದು ತಡೆಗಟ್ಟಬಹುದು. ಇದರಿಂದ ತಲೆಹೊಟ್ಟಿನ ಸಮಸ್ಯೆ ತಡೆಗಟ್ಟಬಹುದು.
ಒಟ್ಟು ಮೊತ್ತ ಕೂದಲಿನ ಆರೈಕೆಗೆ ಒಳ್ಳೆಯದು
ಸೆರಮ್ ಬಳಸುವುದರಿಂದ ನಿಮ್ಮ ಕೂದಲಿನ ಆರೋಗ್ಯ ಹೆಚ್ಚುವುದು, ಅಲ್ಲದೆ ಕೂದಲಿನ ಹೊಳಪು ಹೆಚ್ಚುವುದು, ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು.
ಸೆರಮ್ ಹೇಗೆ ಬಳಸಬೇಕು?
ಈ ಸೆರಮ್ ಅನ್ನು ಈ ರೀತಿ ಬಳಸಿ
ಸ್ಟೆಪ್ 1: ನೀವು ಸೆರಮ್ ಹಚ್ಚುವ ಮುನ್ನ ನಿಮ್ಮ ಕೂದಲಿಗೆ ಬೇರೆ ಏನೂ ಹಚ್ಚಿರಬಾರದು ಅಲ್ಲದೆ ಕೂದಲು ಒದ್ದೆಯಾಗಿರಬಾರದು. ನೀವು ಸೆರಮ್ ಅನ್ನು ಸ್ನಾನದ ಬಳಿಕ ಬಳಸುವುದು ಒಳ್ಳೆಯದು.
ಸ್ಟೆಪ್ 2: ಮೈಲ್ಡ್ ಶ್ಯಾಂಪೂ ಹಚ್ಚಿ ತಲೆತೊಲೆದು ನಂತರ ಕಂಡೀಷನರ್ ಬಳಸಿ ಕೂದಲನ್ನು ಒಣಗಿಸಿ, ನಂತರ 3-4 ಹನಿ ಸೆರಮ್ ತಲೆಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇಲ್ಲದಿದ್ದರೆ ಅಂಗೈಗೆ ಹಾಕಿ ಉಜ್ಜಿ ಬಿಸಿ ಮಾಡಿ ಅದನ್ನು ತಲೆಗೆ ಹಚ್ಚಿ. ಸೆರಮ್ ಹಾಕಿ ತಲೆಬುಡವವನ್ನು ತುಂಬಾ ಉಜ್ಜಬೇಡಿ, ಮೃದುವಾಗಿ ಮಸಾಜ್ ಮಾಡಿ.
ನೀವು ಸೆರಮ್ ಅನ್ನು ತಲೆಬುಡದ ಮುಂಭಾಗಕ್ಕೆ ಹಚ್ಚಿ, ಹಿಂದುಗಡೆ ಕೂಡ ಹಚ್ಚಿ. ನೀವು ಸೆರಮ್ ಹಚ್ಚಿ ಉಗುರನ್ನು ತಲೆ ಮೇಲೆ 10 ನಿಮಿಷ ಆಡಿಸುತ್ತಾ ಮಸಾಜ್ ಮಾಡಿ. ಉಗುರನ್ನು ವೃತ್ತಾಕಾರವನ್ನಾಗಿ ಆಡಿಸಿ.
ಕೂದಲಿನ ಉದ್ದ ಎಷ್ಟೇ ಇದ್ದರೂ ಬಳಸುವ ವಿಧಾನ ಒಂದೇ
ನೀವು ಸೆರಮ್ ಅನ್ನು ಕೂದಲಿಗೆ ಹಚ್ಚುವುದು ಅಲ್ಲ, ಕೂದಲಿನ ಬುಡಕ್ಕೆ ಹಚ್ಚುವುದು, ಆದ್ದರಿಂದ ಬಳಸುವ ಪ್ರಮಾಣ ಮತ್ತು ವಿಧಾನ ಒಂದೇ.
ನೀವು ಸೆರಮ್ ಬಳಸುವುದರಿಂದ ಇದು ತಲೆ ಬುಡದಲ್ಲಿ ಸೋಂಕು ಉಂಟಾಗುವುದು ತಡೆಗಟ್ಟುವುದು ಮಾತ್ರವಲ್ಲ ನಿಮ್ಮ ಕೂದಲಿನ ರಕ್ಷಣೆ ಮಾಡುತ್ತದೆ. ನಿಮಗೆ ಕೂದಲು ಉದುರುತ್ತಿದ್ದರೆ ಸೆರಮ್ ಬಳಸಲು ಪ್ರಾರಂಭಿಸಿ ಒಂದು ತಿಂಗಳಿಗೆಲ್ಲಾ ಅದರ ಪ್ರಭಾವ ಕಂಡು ಬರುವುದು.



Click it and Unblock the Notifications

