Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಈ ನೈಸರ್ಗಿಕ ಡೈ ಹಚ್ಚಿದರೆ ಬಿಳಿಯಾಗುತ್ತಿರುವ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುವುದು
ಕಪ್ಪು-ಬಿಳಿ ಕೂದಲು ಕೆಲವರಿಗೆ ಸ್ಟೈಲಿಷ್ ಲುಕ್ ನೀಡಿದರೆ ಇನ್ನು ಕೆಲವರು ವಯಸ್ಸು ಸ್ವಲ್ಪ ಹೆಚ್ಚಿಸುತ್ತೆ, ಆಗ ಆ ಕೂದಲನ್ನು ಮರೆ ಮಾಚಬೇಕೆಂದು ಅನಿಸುವುದು. ಆದರೆ ಬಿಳಿ ಕೂದಲನ್ನು ಮರೆ ಮಾಚಲು ರಾಸಾಯನಿಕವಿರುವ ಡೈ ಬಳಸಿದರೆ ಒಂದೆರಡು ಕೂದಲು ಬೆಳ್ಳಗಾಗಿದ್ದರೆ ಸ್ವಲ್ಪ ದಿನದಲ್ಲಿ ಕೂದಲೆಲ್ಲಾ ಬೆಳ್ಳಗಾಗುವುದು.
ಕೂದಲು ಬಿಳಿಯಾದರೆ ರಾಸಾಯನಿಕಗಳನ್ನು ಬಳಸುವ ಈ ಹೋಂ ಮೇಡ್ ಹೇರ್ ಡೈ ಬಳಸಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದು ಹಾಗೂ ಕೂದಲು ಉದುರುವ ಸಮಸ್ಯೆಯೂ ಉಂಟಾಗುವುದಿಲ್ಲ.

ಮೆಹಂದಿ
ಹರಳೆಣ್ಣೆಗೆ ನೈಸರ್ಗಿಕವಾದ ಮೆಹಂದಿ ಹಾಕಿ ಕುದಿಸಿ, ಎಣ್ಣೆ ಮೆಹಂದಿ ಬಣ್ಣಕ್ಕೆ ತಿರುಗುವಷ್ಟು ಹೊತ್ತು ಕುದಿಸಿ, ನಂತರ ತಣ್ಣಗಾಗಲು ಬಿಡಿ, ಈಗ ಆ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ. ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ. ಹದಿನೈದು ದಿನಕ್ಕೊಮ್ಮೆ ಈ ರೀತಿ ಮಾಡಿ.

ಕಾಫಿ
ನೀವು ಕಾಫಿ ಮಾಡಲಿ ಬಳಸುವ ಕಾಫಿ ಪುಡಿಯೇ ಸಾಕು ನಿಮ್ಮ ನೆರೆತ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಲಿ. ಒಂದು ಕಪ್ ನೀರಿಗೆ ಕಾಫಿ ಪುಡಿ ಹಾಕಿ ಚೆನ್ನಾಗಿ ಕುಸಿಸಿ, ಪುಡಿ ಸ್ವಲ್ಪ ಅಧಿಕ ಹಾಕಿಡಿ, ಕಾಫಿ ಕಪ್ಪು ಬಣ್ಣದಲ್ಲಿರಲಿ, ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಅದನ್ನು ಸ್ಪ್ರೇ ಬಾಟಲಿಗೆ ಹಾಕಿ ಕೂದಲಿಗೆ, ಕೂದಲಿನ ಬುಡಕ್ಕೆ ಸ್ಪ್ರೇ ಮಾಡಿ, ನಂತರ ಒಂದು ಗಂಟೆಯ ಬಳಿಕ ತಲೆ ತೊಳೆಯಿರಿ. ಹೀಗೆ ಮಾಡಿದರೆ ಅಕಾಲಿಕ ನೆರೆ ಉಂಟಾಗಿದ್ದರೆ ಕಪ್ಪು ಬಣ್ಣಕ್ಕೆ ತಿರುಗುವುದು.

ಬ್ಲ್ಯಾಕ್ ಟೀ
ಅಕಾಲಿಕ ನೆರೆ ತಡೆಗಟ್ಟಲು ಬ್ಲ್ಯಾಕ್ ಟೀ ಕೂಡ ಸಹಕಾರಿ. ಬ್ಲ್ಯಾಕ್ ಟೀ ಮಾಡಿ ನೀರನ್ನು ತಲೆ ಬುಡಕ್ಕೆ, ಕೂದಲಿಗೆ ಹಚ್ಚಿ ಒಂದು ಗಂಟೆ ಬಳಿಕ ತಲೆ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದು. ತಲೆ ಸ್ನಾನ ಮಾಡುವಾಗೆಲ್ಲಾ ಈ ರೀತಿ ಮಾಡಿದರೆ ನೀವು ಬಯಸಿದ ಫಲಿತಾಂಶ ಸಿಗುವುದು.

ವಾಲ್ನಟ್ ಚಿಪ್ಪೆಗಳು
ಇದು ನಿಮ್ಮ ಕೂದಲಿಗೆ ಬ್ರೌನ್ ಲುಕ್ ನೀಡುವುದು. ಆದರೆ ಇದನ್ನು ಬಳಸಿದಾಗ ಬಟ್ಟೆ ಕಲೆಯಾಗುವುದು. ನೀವು ವಾಲ್ನಟ್ ಸಿಪ್ಪೆ ಬಟ್ಟೆ ಕಲೆಯಾಗುವಂತೆ ಮಾಡುವುದು, ಆ ಸಮಯದಲ್ಲಿ ಹಳೆಯ ಬಟ್ಟೆ ಧರಿಸಿ ಇದನ್ನು ಕೂದಲಿಗೆ ಹಚ್ಚಬೇಕು.
ಮೊದಲಿಗೆ ವಾಲ್ನಟ್ ಸಿಪ್ಪೆಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ, ನಂತರ ಆ ನೀರು ತಣ್ಣಗಾದ ಮೇಲೆ ಸ್ವಲ್ಪ ಹತ್ತಿ ತೆಗೆದು ಅದನ್ನು ನೀರಿನಲ್ಲಿ ಅದ್ದಿ ಕೂದಲು ಹಾಗೂ ಬುಡಕ್ಕೆ ಹಚ್ಚಿ. ಒಂದು ಗಂಟೆ ಬಿಟ್ಟ ಮೇಲೆ ತಲೆ ತೊಳೆಯಿರಿ. ಹೀಗೆ ತಲೆ ಕೂದಲು ಕಂದು ಬಣ್ಣದಿಂದ ಫಳ-ಫಳ ಹೊಳೆಯುವುದು.



Click it and Unblock the Notifications
