Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಿಳಿ ಕೂದಲಿಗೆ ನೈಸರ್ಗಿಕವಾಗಿ ಹೆನ್ನಾ ಹೇರ್ ಡೈ ಮಾಡುವುದು ಹೇಗೆ?
ವಯಸ್ಸಾಗುತ್ತಿದ್ದಂತೆ ಕಪ್ಪು ಕೇಶ ರಾಶಿಯ ನಡುವೆ ಒಂದೆರಡು ಬೆಳ್ಳಿ ಕೂದಲು ಮೂಡುವುದು ಪ್ರಕೃತಿ ಸಹಜವಾದ ನಿಯಮ ಆದರೂ ಬಿಳಿ ಕೂದಲು ಎದ್ದು ಕಾಣುವುದನ್ನು ಮಧ್ಯ ವಯಸ್ಸಿನವರು ಇಷ್ಟಪಡುವುದಿಲ್ಲ. ಇನ್ನು ಕೆಲವರಿಗೆ ಯೌವನದ ಪ್ರಾಯದಲ್ಲಿ ಅಷ್ಟೇ ಏಕೆ ಕೆಲ ಮಕ್ಕಳಲ್ಲಿ ಬಾಲ ನೆರೆ ಉಂಟಾಗುತ್ತದೆ.

ಈ ರೀತಿ ಬಿಳಿ ಕೂದಲು ಬಂದಾಗ ಅದನ್ನು ಮರೆ ಮಾಚಲು ಸಾಮಾನ್ಯವಾಗಿ ಸುಲಭವಾಗಿ ಬಳಸಬಹುದಾದ ಹೇರ್ ಡೈ ಮೊರೆ ಹೋಗುತ್ತಾರೆ. ಹೇರ್ ಡೈ ಬಳಸುವುದರಿಂದ ಕೂದಲು ಕಪ್ಪಗೆ ಅಥವಾ ನೀವು ಬಯಸಿದ ಬಣ್ಣದಲ್ಲಿ ಕಾಣುತ್ತದೆ. ಆದರೆ ಇದರಿಂದ ಶರೀರದ ಮೇಲಾಗುವ ದುಶ್ಚಪರಿಣಾಮಗಳು ಮಾತ್ರ ತುಂಬಾ ಇವೆ. ಆದ್ದರಿಂದ ನೆರೆ ಕೂದಲು ಮರೆ ಮಾಚಲು ಮೆಹಂದಿ ಅಥವಾ ಹೆನ್ನಾ ಬಳಸುವುದು ಒಳ್ಳೆಯದು.

ಬಿಳಿ ಕೂದಲಿಗೆ ನೈಸರ್ಗಿಕವಾದ ಹೆನ್ನಾ ಹೇರ್ ಡೈ ಮಾತ್ರ ಬಳಸಿ
ತಲೆಗೆ ಮೆಹಂದಿ ಹಚ್ಚಿದರೆ ಬಿಳಿ ಕೂದಲು ಮರೆಯಾಗುವುದು ಮಾತ್ರವಲ್ಲ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಇರುವುದರಿಂದ ಕೂದಲಿನ ಆರೋಗ್ಯ ಕೂಡ ಹೆಚ್ಚುವುದು, ಕೂದಲು ಮೃದುವಾಗಿ ಹೊಳಪು ಹೆಚ್ಚುವುದು ಹಾಗೂ ತಲೆಗೆ ತುಂಬಾ ತಂಪು ಕೂಡ. ಈ ಪ್ರಯೋಜನಗಳು ನಿಮಗೆ ಹೇರ್ ಡೈ ಮಾಡಿದರೆ ಖಂಡಿತ ಸಿಗುವುದಿಲ್ಲ.
ಇನ್ನು ಹೆನ್ನಾ ಒಳ್ಳೆಯದೆಂದು ಮಾರ್ಕೆಟ್‌ನಲ್ಲಿ ಸಿಗುವ ಮೆಹಂದಿ ಪುಡಿ ತಂದು ಹಚ್ಚಿದರೆ ಕೂದಲಿಗೆ ಒಳ್ಳೆಯದೆಂದು ನಾವು ಹೇಳುವುದಿಲ್ಲ. ಏಕೆಂದರೆ ಅವುಗಳು ಶುದ್ಧವಾದ ಮೆಹಂದಿ ಪುಡಿಗಳೆಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ನಾವು ಕೂದಲಿನ ಆರೋಗ್ಯಕ್ಕಾಗಿ ನೈಸರ್ಗಿಕವಾಗಿ ಮೆಹಂದಿ ಪುಡಿ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

ಮೆಹಂದಿ ಪುಡಿ ಮಾಡಲು ಬೇಕಾಗುವ ಸಾಮಗ್ರಿ
* ಒಂದು ಮುಷ್ಠಿಯಷ್ಟು ದಾಸವಾಳದ ಎಲೆ
* ಸ್ವಲ್ಪ ದಾಸವಾಳದ ಹೂ
* ಒಂದು ಮುಷ್ಠಿಯಷ್ಟು ಕರಿಬೇವಿನ ಎಲೆ
* ಮೆಹಂದಿ ಎಲೆ
ಮಾಡುವ ವಿಧಾನ
* ಈ ಎಲೆ ಹಾಗೂ ಹೂಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಇಲ್ಲದಿದ್ದರೆ ಪುಡಿ ಮಾಡಲು ಸಾಧ್ಯವಾಗುವುದಿಲ್ಲ.
* ಒಳ್ಳೆಯ ಬಿಸಿಲಿನಲ್ಲಿ 3-4 ದಿನ ಬಿಸಿಲಿನಲ್ಲಿ ಹಾಕಿ. ನೀವು ಕೈಯಿಂದ ಮುಟ್ಟುವಾಗಲೇ ಪುಡಿ-ಪುಡಿ ಆದರೆ ಚೆನ್ನಾಗಿ ಒಣಗಿದೆ ಎಮದು ಅರ್ಥ.
* ನಂತರ ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿಟ್ಟು ಬೇಕಾದಾಗ ಬಳಸಿ.
ಹೆನ್ನಾ ಹೇರ್ ಡೈ ಮಾಡುವುದು ಹೇಗೆ?
3-4 ಚಮಚ ಹೆನ್ನಾ ಪುಡಿ
ಅರ್ಧ ಕಪ್ ನಿರು
1 ಮುಷ್ಟಿಯಷ್ಟು ಟೀ ಸೊಪ್ಪು
1 ಚಮಚ ನೆಲ್ಲಿಕಾಯಿ ಪುಡಿ

ಮಾಡುವ ವಿಧಾನ
* ಅರ್ಧ ಕಪ್ ನೀರು ತೆಗೆದು ಕುದಿಸಿ ಅದಕ್ಕೆ ಟೀ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ, ನಂತರ ನೀರನ್ನು ಒಂದು ಕಪ್‌ಗೆ ಸೋಸಿ, ಈ ನೀರನ್ನು ಮೆಹಂದಿ ಪುಡಿಗೆ ಹಾಕಿ ಕಲೆಸಿ.
* ಕಲೆಸಿದ ಮೆಹಂದಿಯನ್ನು 8 ಗಂಟೆಗಳ ಕಾಲ ಇಡಿ, ನಂತರ ಆಮ್ಲ ಪುಡಿ(ನೆಲ್ಲಿಕಾಯಿ) ಹಾಕಿ ಮಿಶ್ರ ಮಾಡಿ, ನಂತರ ತಲೆಗೆ ಹಚ್ಚಿ.
ಈ ವಿಧಾನದಿಂದ ಕೂದಲು ಕಪ್ಪಾಗುವುದು ಹಾಗೂ ಕೂದಲಿನ ಬೆಳವಣಿಗೆಯೂ ಚೆನ್ನಾಗಿರುತ್ತದೆ.
ಸೂಚನೆ: ನೀವು ತಲೆಗೆ ಮೆಹಂದಿ ಹಚ್ಚುವ ಮುನ್ನ ಚೆನ್ನಾಗಿ ತಲೆ ತೊಳೆದು ಒಣಗಿಸಿ ಹಚ್ಚಿದರೆ ಚೆನ್ನಾಗಿ ಹಿಡಿಯುತ್ತದೆ, ಹಾಗೂ ಮೆಹಂದಿ ಹಚ್ಚಿದ ದಿನ ಶ್ಯಾಂಪೂ ಹಾಕಿ ತೊಳೆಯಬೇಡಿ.

ಹೆನ್ನಾ ಹಚ್ಚುವುದು ಹೇಗೆ?
ಹೆನ್ನಾ ಹಚ್ಚುವ ಮೊದಲು ಹಳೆಯ ಬಟ್ಟೆ ಧರಿಸಿ, ಇದರಿಂದ ಬಟ್ಟೆ ಹಾಳಾಗುವುದಿಲ್ಲ. ಕೈಗಳಿಗೆ ಬಣ್ಣ ಮೆತ್ತದಿರಲು ಗ್ಲೌಸ್ ಹಾಕಿ. * ಈಗ ಕೂದಲನ್ನು ಬಾಚಿ ಸ್ವಲ್ಪ-ಸ್ವಲ್ಪ ಕೂದಲು ತೆಗೆದು ಬುಡದಿಂದ ತುದಿಯವರೆಗೆ ಮೆಹಂದಿ ಹಚ್ಚಿ ಆ ಕೂದಲನ್ನು ಸುತ್ತಿ ಹಿಡಿ, ನಂತರ ಸ್ವಲ್ಪ-ಸ್ವಲ್ಪ ಕೂದಲು ತೆಗೆದು ಹಚ್ಚುತ್ತಾ ಆ ಕೂದಲನ್ನು ಸುತ್ತಿಡುತ್ತಾ ಬನ್ನಿ, ಕೊನೆಗೆ ಕ್ಲಿಪ್ ಹಾಕಿ, ಶವರ್ ಕ್ಯಾಪ್ ಹಾಕಿ 2-3 ಗಂಟೆ ಬಿಡಿ.

ತಲೆ ತೊಳೆಯುವುದು
ನಾವೀಗ ಕೊನೆಯ ಹಂತಕ್ಕೆ ಬಂದದ್ದೇವೆ, ಹೆನ್ನಾ ಹಚ್ಚಿದ ಮೇಲೆ ಕೂದಲನ್ನು ಈ ರೀತಿ ತೊಳೆಯಿರಿ.
* ತಲೆಗೆ ತಣ್ಣೀರು ಹಾಕಿದರೆ ತುಂಬಾ ಒಳ್ಳೆಯದು, ಇಲ್ಲದಿದ್ದರೆ ಉಗುರು ಬೆಚ್ಚಗಿನ ನೀರಿನಿಂದ ಕೂಡ ತೊಳೆಯಬಹುದು.
* ನಂತರ ತಲೆಯನ್ನು ಒಣಗಿಸಿ ಎಣ್ಣೆ ಹಚ್ಚಿ.
ಮಾರನೆಯ ದಿನ ಮೈಲ್ಡ್ ಶ್ಯಾಂಪೂ ಹಾಗೂ ಕಂಡೀಷನರ್ ಬಳಸಿ ಹಚ್ಚಿ ತೊಳೆದರೆ ಮಿರಮಿರ ಕೆಂಚು ಬಣ್ಣದ ಕೂದಲು ನಿಮ್ಮದಾಗುವುದು.



Click it and Unblock the Notifications
