Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಕೂದಲ ಉದುರುವುದು ತಡೆಗಟ್ಟಲು ದಾಸವಾಳದ ಎಣ್ಣೆ ಮಾಡುವುದು ಹೇಗೆ?
ದಾಸವಾಳ ಹೂವು, ರಾತ್ರಿಯೆಲ್ಲ ನಿದ್ರೆ ಮಾಡಿ ಬೆಳಗ್ಗೆ ಕಣ್ಣುಜ್ಜಿಕೊಂಡು ಮೇಲೇಳುತ್ತಾ ಮನೆ ಬಾಗಿಲು ತೆರೆದು ಹೊರಗೆ ನೋಡಿದರೆ ಹೂಕುಂಡದಲ್ಲಿ ಅಂಗೈಯಗಲ ಅರಳಿ ನಮ್ಮನ್ನು ನಗುನಗುತ್ತಾ ಸ್ವಾಗತಿಸುವ ಬಹುತೇಕ ಪೂಜೆಯಲ್ಲಿ ಉಪಯೋಗಿಸಲ್ಪಡುವ ಸುಂದರ ಹೂವು.
ಆದರೆ ಇದು ಕೇವಲ ಪೂಜೆಗೆ ಮಾತ್ರ ಸೀಮಿತ ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ತನ್ನ ಸೊಂಪಾದ ದಳ ರಾಶಿಯೊಂದಿಗೆ ಅರಳಿ ನಿಂತಿರುವ ದಾಸವಾಳ ನಿಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅದ್ಭುತವಾಗಿ ಕೆಲಸ ಮಾಡುತ್ತದೆ.
ದಾಸವಾಳ ಹೂವಿನ ಬಗ್ಗೆ ನಾವು ನೀವು ಅಷ್ಟೇ ಏಕೆ ಕೂದಲುದುರುವಿಕೆ ಸಮಸ್ಯೆಯನ್ನು ಅನುಭವಿಸುತ್ತಿರುವ ಅನೇಕರು ಸಾಕಷ್ಟು ತಿಳಿದುಕೊಳ್ಳಬೇಕಾಗಿದೆ. ಸಂಪೂರ್ಣವಾಗಿ ತಲೆ ಕೂದಲು ಉದುರಿ ಹೋಗಿ ಬಹಳ ಬೇಸರದಿಂದ ಜೀವನ ಸಾಗಿಸುತ್ತಿರುವವರು ಒಮ್ಮೆ ನಿಮ್ಮ ಕೂದಲಿನ ವಿಚಾರವಾಗಿ ದಾಸವಾಳ ಹೂವಿನ ಉಪಯೋಗ ಮಾಡಿ ನೋಡಿ.

ದಾಸವಾಳ ಕೂದಲಿಗೆ ಒಳ್ಳೆಯದು ಏಕೆ?
ದಾಸವಾಳ ಹೂವಿನಲ್ಲಿ ನೈಸರ್ಗಿಕವಾಗಿ ಅಮೈನೋ - ಆಮ್ಲಗಳು ಹೆಚ್ಚಾಗಿದ್ದು, ಕೂದಲಿನ ಬೇರುಗಳಿಗೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು ದಾಸವಾಳದಲ್ಲಿ ಸಿಗುತ್ತವೆ. ಇದರಿಂದ ತಲೆ ಕೂದಲಿನ ಬೆಳವಣಿಗೆ ವೃದ್ಧಿಯಾಗುತ್ತದೆ. ದಾಸವಾಳದಲ್ಲಿ ಕಂಡು ಬರುವ ಅಮೈನೋ ಆಮ್ಲದ ಕೆಲಸವನ್ನು ನೋಡುವುದಾದರೆ ತಲೆ ಕೂದಲಿನ ಪ್ರಮುಖ ಅಂಶ ಎಂದು ಗುರುತಿಸಿಕೊಂಡ ಕೆರಟಿನ್ ಪ್ರೋಟೀನ್ ಅಂಶವನ್ನು ಹೆಚ್ಚು ಮಾಡುತ್ತದೆ.
ಒಂದೊಂದು ಕೂದಲಿನ ಮೇಲೆ ಕೆರಟಿನ್ ಅಂಶ ಶೇಖರಣೆ ಆಗಿರುವುದರಿಂದ ನಮ್ಮ ಕೂದಲು ಅರ್ಧಕ್ಕೆ ಮುರಿದುಕೊಳ್ಳುವುದು ತಪ್ಪುತ್ತದೆ ಮತ್ತು ತಲೆ ಕೂದಲು ಹೆಚ್ಚು ಸದೃಢವಾಗಿ ಇರುತ್ತದೆ. ದಾಸವಾಳ ಹೂವು ಮತ್ತು ಎಲೆಗಳಲ್ಲಿ ನಮ್ಮ ತಲೆ ಕೂದಲಿಗೆ ನೈಸರ್ಗಿಕವಾಗಿ ಕಂಡೀಷನರ್ ರೀತಿ ಕೆಲಸ ಮಾಡುವ ಗುಣ ಲಕ್ಷಣಗಳಿವೆ.
ಹಾಗಾಗಿ ಬಹಳ ಹಿಂದಿನಿಂದಲೂ ಕೂದಲಿನ ಆರೋಗ್ಯದ ವಿಚಾರಕ್ಕೆ ಬಂದರೆ ದಾಸವಾಳ ಎಣ್ಣೆಗೆ ಇಂದಿಗೂ ಕೂಡ ಅತಿ ಹೆಚ್ಚು ಮೌಲ್ಯವಿದೆ. ಉತ್ತಮ ತಲೆ ಕೂದಲಿನ ಬೆಳವಣಿಗೆಗಾಗಿ ಮನೆಯಲ್ಲಿ ಸ್ವತಹ ನೀವೇ ದಾಸವಾಳ ಎಣ್ಣೆಯನ್ನು ತಯಾರು ಮಾಡಿಕೊಳ್ಳಬಹುದು.

ದಾಸವಾಳ ಎಣ್ಣೆ ತಯಾರು ಮಾಡಿಕೊಳ್ಳಲು ನಿಮಗೆ ಬೇಕಾದ ಸಾಮಗ್ರಿಗಳು
1 ಕಪ್ ತೆಂಗಿನೆಣ್ಣೆ
ಸುಮಾರು 8 ದಾಸವಾಳ ಹೂವುಗಳು
ಸುಮಾರು 8 ದಾಸವಾಳ ಎಲೆಗಳು

ಈಗ ದಾಸವಾಳ ಎಣ್ಣೆಯನ್ನು ತಯಾರು ಮಾಡುವ ವಿಧಾನವನ್ನು ನೋಡೋಣ
ಹಂತ - 1 : -
ಮೊದಲಿಗೆ ನೀವು ತೆಗೆದುಕೊಂಡ 8 ದಾಸವಾಳ ಹೂವುಗಳು ಮತ್ತು 8 ದಾಸವಾಳ ಎಲೆಗಳನ್ನು ಒಂದು ಮಿಕ್ಸರ್ ಗ್ರೈಂಡರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರು ಮಾಡಿಕೊಳ್ಳಬೇಕು.
ಹಂತ - 2 : -
ಬೇರೆ ಇನ್ನೊಂದು ಪಾತ್ರೆಯಲ್ಲಿ 1 ಕಪ್ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಂಡು ದಾಸವಾಳದ ಪೇಸ್ಟ್ ಗೆ ಬೆರೆಸಬೇಕು.
ಹಂತ - 3 : -
ಈ ಮಿಶ್ರಣವನ್ನು ಚೆನ್ನಾಗಿ ಬಿಸಿ ಮಾಡಿ ನಂತರ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ
ಹಂತ - 4 : -
ಈಗ ತಲೆ ಕೂದಲಿಗೆ ಬಳಕೆ ಮಾಡಲು ದಾಸವಾಳದ ಎಣ್ಣೆ ತಯಾರಾಗಿದೆ. ಇದನ್ನು ಸುಮಾರು 10 ನಿಮಿಷಗಳ ಕಾಲ ನಿಮ್ಮ ತಲೆಯ ನೆತ್ತಿಯ ಭಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿ ಸುಮಾರು 30 ನಿಮಿಷಗಳು ಹಾಗೆ ಬಿಡಿ.
ಹಂತ - 5 : -
ಈಗ ನಿಮ್ಮ ತಲೆ ಕೂದಲನ್ನು ಮತ್ತು ನೆತ್ತಿಯ ಭಾಗವನ್ನು ಶಾಂಪೂ ಮತ್ತು ಉಗುರು ಬೆಚ್ಚಗಿನ ನೀರಿನೊಂದಿಗೆ ತೊಳೆದುಕೊಳ್ಳಿ.
ನೀವು ಬೇಕಾದರೆ ತೆಂಗಿನೆಣ್ಣೆ ಬದಲಿಗೆ ಇಲ್ಲಿ ಆಲಿವ್ ಆಯಿಲ್ ಅಥವಾ ಬಾದಾಮಿ ಎಣ್ಣೆ ಬಳಕೆ ಮಾಡಬಹುದು. ಮುಂದಿನ ಬಳಕೆಗಾಗಿ ನೀವು ಇದನ್ನು ಒಂದು ಗ್ಲಾಸ್ ಕಂಟೈನರ್ ನಲ್ಲಿ ಹಾಕಿ ಎತ್ತಿಡಬಹುದು.

ಹೇಗೆ ಬಳಸಬೇಕು?
ನೀವು ಇಡೀ ರಾತ್ರಿ ನಿಮ್ಮ ತಲೆ ಕೂದಲಿಗೆ ದಾಸವಾಳದ ಹೇರ್ ಆಯಿಲ್ ಅನ್ವಯಿಸುವುದಾದರೆ ನೀವು ಮಲಗಿಕೊಳ್ಳುವ ಸಂದರ್ಭದಲ್ಲಿ ವಾರದಲ್ಲಿ ಒಂದು ಬಾರಿ ತಲೆಗೆ ಹಚ್ಚಿ ಐದಾರು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ಕೂದಲಿನ ಸೌಂದರ್ಯ ಮತ್ತು ಹೊಳಪನ್ನು ಹೆಚ್ಚಿಸಿಕೊಳ್ಳಬಹುದು. ನಿಮಗೆ ಹೇರ್ ಸ್ಪಾ ರೀತಿಯ ಅನುಭವ ಉಂಟಾಗಬೇಕಾದರೆ ಒಂದು ಕಾಟನ್ ಟವಲ್ ತೆಗೆದುಕೊಂಡು ಅದನ್ನು ಬಿಸಿ ನೀರಿನಲ್ಲಿ ಅದ್ದಿ ಹಿಂಡಿ ತಲೆಗೆ ಎಣ್ಣೆ ಹಚ್ಚಿದ ಮೇಲೆ ಅದನ್ನು ತಲೆ ಕೂದಲಿನ ಸುತ್ತ ಸುತ್ತಿಕೊಳ್ಳಿ. ಟವಲ್ ಬಿಸಿ ಆಗಿರುವ ಕಾರಣ ದಾಸವಾಳದ ಎಣ್ಣೆ ನಿಮ್ಮ ತಲೆ ಕೂದಲಿನ ಬುಡದವರೆಗೆ ಸಾಕಷ್ಟು ಹೀರಿಕೊಳ್ಳಲು ಅನುವಾಗುತ್ತದೆ.
ಮೊದಲೇ ಹೇಳಿದಂತೆ ನೀವು ಕೆರಿಯರ್ ಆಯಿಲ್ ಆಗಿ ಕೇವಲ ಕೋಕನಟ್ ಆಯಿಲ್ ಮಾತ್ರ ಬಳಕೆ ಮಾಡಬೇಕು ಎಂದೇನಿಲ್ಲ. ಬದಲಿಗೆ ಆಲಿವ್ ಆಯಿಲ್ ಅಥವಾ ಆಲ್ಮಂಡ್ ಆಯಿಲ್ ಕೂಡ ಉಪಯೋಗಿಸಬಹುದು ಅಥವಾ ಮೂರನ್ನು ಒಟ್ಟಿಗೆ ಸೇರಿಸಿ ಸಹ ಬಳಸಬಹುದು. ನಿಮ್ಮ ಕೂದಲಿಗೆ ಅದ್ಭುತ ಮಾಯಿಸ್ಚರೈಸರ್ ಆಗಿ ಇದು ಕೆಲಸ ಮಾಡುತ್ತದೆ. ನಿಮ್ಮ ತಲೆ ಕೂದಲನ್ನು ಒಣಗದಂತೆ ನೋಡಿಕೊಂಡು ದೀರ್ಘ ಕಾಲ ಆರೋಗ್ಯಕರವಾಗಿ ಇರಿಸುತ್ತದೆ.



Click it and Unblock the Notifications
