Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಸೊಂಪಾದ ಕೂದಲಿಗಾಗಿ ದಾಸವಾಳ ಹಾಗೂ ಕರಿಬೇವಿನ ಎಲೆಯ ಎಣ್ಣೆ ಮಾಡುವುದು ಹೇಗೆ?
ಕೂದಲಿನ ಆರೋಗ್ಯ ವೃದ್ಧಿಸಬೇಕು, ನನ್ನ ಕೂದಲು ಯಾವುದೇ ಸಮಸ್ಯೆಯಿಲ್ಲದೆ ಸೊಂಪಾಗಿ ಇರಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ ದಾಸಾವಾಳದ ಮನೆಮದ್ದು ಟ್ರೈ ಮಾಡಿದ್ದೀರಾ?
ದಾಸವಾಳ ಕೂದಲಿಗೆ ಒಳ್ಳೆಯದು ಎಂದು ಹಿಂದಿನಿಂದಲೂ ಬಳಸುತ್ತಿದ್ದರೂ. ಇತ್ತೀಚಿನ ವರ್ಷಗಳಲ್ಲಿ ಶ್ಯಾಂಪೂ, ಕಂಡಿಷರ್ ಅಂತ ಬಳಸಲಾರಂಭಿಸಿದ ಮೇಲೆ ಇವುಗಳ ಬಳಕೆ ಮಾಡುವವರು ಕಡಿಮೆ.
ಈ ದಾಸವಾಳದ ಎಲೆ ಅಥವಾ ಹೂ ಎರಡೂ ಕೂದಲಿನ ರಕ್ಷಣೆ ಮಾಡುತ್ತದೆ. ಇವುಗಳು ಕೂದಲಿಗೆ ಅತ್ಯಾಕರ್ಷಕವಾದ ನೈಸರ್ಗಿಕ ಕಂಡೀಷನರ್‌ಗಳಾಗಿವೆ. ದಾಸವಾಳ ಹೂವಿನ ಎಣ್ಣೆ ಕೂಡ ಕೂದಲಿಗೆ ಒಳ್ಳೆಯದು.

ಅದರಂತೆ ಕರಿಬೇವು ಕೂಡ ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲು ಉದುರುವುದನ್ನು ತಡೆಗಟ್ಟುತ್ತದೆ, ನೆರೆಕೂದಲು ತಡೆಗಟ್ಟಿ, ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ. ಆದ್ದರಿಂದ ಕೆಲವರು ಕರಿಬೇವಿನ ಎಣ್ಣೆ ಕೂಡ ಬಳಸುತ್ತಾರೆ.
ಹಾಗಾದರೆ ದಾಸವಾಳದ ಹೂ ಹಾಗೂ ಕರಿಬೇವಿನ ಎಲೆಯ ಎಣ್ಣೆಯ ಕಾಂಬಿನೇಷನ್ ಇನ್ನೂ ಸೂಪರ್ ಆಗಿರುತ್ತೆ ಅಲ್ವಾ? ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:
ದಾಸವಾಳ ಹೂ ಹಾಗೂ ಕರಿಬೇವಿನ ಎಲೆಯಿಂದ ಕೂದಲಿನ ಆರೈಕೆ
ದಾಸವಾಳದ ಹೂ ನೈಸರ್ಗಿಕವಾದ ಕಂಡೀಷನರ್, ಇದು ಕೂದಲಿನ ಬುಡವನ್ನು ಬಲವಾಗಿಸುತ್ತೆ, ಕರಿಬೇವಿನ ಎಲೆ ಕೂದಲಿನ ಬೆಳವಣಿಗೆಗೆ ಸಹಕಾರಿ, ಇವೆರಡು ಬಳಸಿ ಎಣ್ಣೆ ತಯಾರಿಸಿ ಹಚ್ಚಿದರೆ ತುಂಬಾನೇ ಒಳ್ಳೆಯದು.
ಎಣ್ಣೆಯನ್ನು ಹಲವು ರೀತಿಯಲ್ಲಿ ತಯಾರಿಸಬಹುದು
ವಿಧಾನ 1
1/4 ಲೀಟರ್ ತೆಂಗಿನೆಣ್ಣೆ ಸಿಮ್‌ನಲ್ಲಿ ಬಿಸಿ ಮಾಡಿ ಅದಕ್ಕೆ 10-15 ದಾಸವಾಳದ ಹೂ ಹಾಗೂ ಕರಿಬೇವಿನ ಎಲೆ ಹಾಕಿ ಬಿಸಿ ಮಾಡಿ, ಉರಿಯಿಂದ ಇಳಿಸಿ ತಣ್ಣಗಾದ ಮೇಲೆ ಸೋಸಿ ಬಾಟಲಿನಲ್ಲಿ ಇಟ್ಟು ಬಳಸಿ.
ಸಲಹೆ : ಈ ಎಣ್ಣೆ ತುಂಬಾ ದಿನ ಇಟ್ಟರೆ ವಾಸನೆ ಬೀರಬಹುದು, ಆದ್ದರಿಂದ ವಾರಕ್ಕೆ ಅಥವಾ ತಿಂಗಳಿಗೆ ಆಗುವಷ್ಟು ಮಾಡಿ ಬಳಸಿ.
ವಿಧಾನ 2
* 10-15 ದಾಸವಾಳ ಎಲೆ ಹಾಗೂ 10-15 ಕರಿಬೇವಿನ ಎಲೆ, 1 ಚಮಚ ಎಣ್ಣೆ ಹಾಕಿ ರುಬ್ಬಿಕೊಳ್ಳಿ.
* ಈಗ 3 ಚಮಚ ತೆಂಗಿನೆಣ್ಣೆ ಬಿಸಿ ಮಾಡಿ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ1-2 ನಿಮಿಷ ಬಿಸಿ ಮಾಡಿ ಆ ಎಣ್ಣೆ ತಲೆಗೆ ಹಚ್ಚಿದರೆ ಕೂದಲಿನ ಬುಡ ಸ್ಟ್ರಾಂಗ್ ಆಗುವುದು.
ವಿಧಾನ 3
ಕೂದಲಿನ ಆರೈಕೆಗೆ ಇನ್ನೂ ಹೆಚ್ಚಿನ ಪೋಷಕಾಂಶಗಳು
ಇನ್ನೂ ಹೆಚ್ಚಿನ ಕೂದಲಿನ ಆರೈಕೆಗೆ ಕರಿಬೇವು, ದಾಸವಾಳದ ಜೊತೆಗೆ ಮೆಂತೆ, ನೆಲ್ಲಿಕಾಯಿ, ಕಹಿ ಬೇವು ಬಳಸಿದರೆ ಇನ್ನೂ ಒಳ್ಳೆಯದು. ನೀವು ಬೇಕಿದ್ದರೆ ನುಗ್ಗೆಕಾಯಿ ಹೂ ಕೂಡ ಸೇರಿಸಬಹುದು.
ವಿಧಾನ 4
ದಾಸವಾಳದ ಹೂ, ದಾಸವಾಳ ಎಲೆ ಹಾಗೂ ಕರಿಬೇವು ಪೇಸ್ಟ್ ಮಾಡಿ 1 ಚಮಚ ಎಣ್ಣೆ, ಮೊಸರು ಜೊತೆ ಮಿಕ್ಸ್ ಮಾಡಿ ತಲೆಗೆ ಮಾಸ್ಕ್ ರೀತಿ ಕೂಡ ಬಳಸಬಹುದು. ವಾರಕ್ಕೊಮ್ಮೆ ಈ ರೀತಿ ಮಾಡಿದರೆ ಒಳ್ಳೆಯದು
ಈ ಎಣ್ಣೆ ನೀವು 6 ತಿಂಗಳವರೆಗೆ ಬಳಸುತ್ತಾ ಬಂದಾಗ ಕೂದಲು ಉದುರುವುದು ಕಡಿಮೆಯಾಗಿ ನಿಮ್ಮ ಕೂದಲು ಮತ್ತೆ ಹುಟ್ಟುವುದು. ಅಲ್ಲದೆ ಕೂದಲು ಮಾಯಿಶ್ಚರೈಸರ್‌ನಿಂದ ಕೂಡಿರುವುದರಿಂದ ಆಕರ್ಷಕವಾಗಿರುತ್ತದೆ.



Click it and Unblock the Notifications

