Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲಿಗೆ ಮೆಹಂದಿ ಹಚ್ಚುವಾಗ ಈ ಮಿಸ್ಟೇಕ್ಸ್ ಮಾಡದಿರಿ
ಬಿಳಿ ಕೂದಲು ಮರೆ ಮಾಚಲು, ಕೂದಲಿಗೆ ಹೊಳಪು ನೀಡಲು ಹೆಚ್ಚಿನವರು ಹೆನ್ನಾ ಅಥವಾ ಮೆಹಂದಿ ಹಚ್ಚುತ್ತಾರೆ. ಮೆಹಂದಿ ಸೊಪ್ಪನ್ನು ತಂದು ಅರಿದು ಹಚ್ಚುವವರು ಕಡಿಮೆ , ಹೆಚ್ಚಿನವರು ಮಾರುಕಟ್ಟೆಯಲ್ಲಿ ದೊರೆಯುವ ಹೆನ್ನಾ ಹಚ್ಚುತ್ತಾರೆ. ಹೆನ್ನಾ ಹಚ್ಚುವಾಗ ಅದರಿಂದ ಕೂದಲಿನ ಹೊಳಪು ಹೆಚ್ಚುವುದು, ಆದರೆ ಕೆಲವೊಮ್ಮೆ ತಲೆಗೆ ಹೆನ್ನಾ ಹಚ್ಚಿದಾಗ ನಾವು ಬಯಸಿದ ಫಲಿತಾಂಶ ದೊರೆಯುವುದಿಲ್ಲ, ಅದಕ್ಕೆ ಕಾರಣವೇನು ಗೊತ್ತಾ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳಾಗಿವೆ.
ಹೆನ್ನಾ ಬಳಸುವವರು ಹೆಚ್ಚಾಗಿ ಅದನ್ನು ಸರಿಯಾದ ರೀತಿಯಲ್ಲಿ ಮಾಡುವುದಿಲ್ಲ, ತಲೆಗೆ ಮೆಹಂದಿ ಹಚ್ಚುವಾಗ ಈ ತಪ್ಪುಗಳನ್ನು ಮಾಡದಿರಿ:

ಮೊಸರು ಜೊತೆ ಮಿಕ್ಸ್ ಮಾಡಬಾರದು
ನಮ್ಮಲ್ಲಿ ಹೆಚ್ಚಿನವರು ಹೆನ್ನಾವನ್ನು ಮೊಸರು ಜೊತೆ ಮಿಶ್ರ ಮಾಡಿ ಹಚ್ಚುತ್ತಾರೆ, ಆದರೆ ಮೆಹಂದಿಗೆ ಮೊಸರು ಮಿಶ್ರ ಮಾಡಬಾರದು. ಹೀಗೆ ಮಾಡಿದರೆ ಕೂದಲಿಗೆ ಹೆನ್ನಾದಲ್ಲಿರುವ ಪ್ರೊಟೀನ್ ದೊರೆಯುವುದಿಲ್ಲ. ಆದ್ದರಿಂದ ಹೀಗೆ ಮಾಡಬೇಡಿ.

ಹೆನ್ನಾವನ್ನು ಮಿಕ್ಸ್ ಮಾಡಿದ ತಕ್ಷಣ ಹಚ್ಚಬಾರದು
ಹೆನ್ನಾವನ್ನು ಮಿಕ್ಸ್ ಮಾಡಿ ಕನಿಷ್ಠ 10-12 ಗಂಟೆಗಳ ಕಾಲ ಇಡಬೇಕು. ಅಷ್ಟೊ ಹೊತ್ತು ನೆನೆಸಿ ಇಡದಿದ್ದರೆ ನೀವು ಹೆನ್ನಾ ಚೆನ್ನಾಗಿಲ್ಲವೆಂದು ಹೇಳಿ ಪ್ರಯೋಜನವಿಲ್ಲ, ಏಕೆಂದರೆ ನಿಮಗೆ ಬೇಕಾದ ಫಲಿತಾಂಶ ದೊರೆಯುವುದಿಲ್ಲ.

ಹೆನ್ನಾ ಹಚ್ಚುವಾಗ ಎಣ್ಣೆಯನ್ನು ಹಚ್ಚಬೇಡಿ
ತುಂಬಾ ಜನರು ತಲೆಗೆ ಹೆನ್ನಾ ಹಚ್ಚುವ ಮುನ್ನ ಎಣ್ನೆ ಹಚ್ಚುತ್ತಾರೆ. ಕೂದಲಿಗೆ ಎಣ್ಣೆ ಹಚ್ಚಿದಾಗ ಮೆಹಂದಿ ಹಚ್ಚಿದಾಗ ಕೂದಲು ಅಷ್ಟಾಗಿ ಹೀರಿಕೊಳ್ಳುವುದಿಲ್ಲ. ನೀವು ಕೂದಲಿಗೆ ಹೆನ್ನಾ ಹಚ್ಚಿ ಕೂದಲನ್ನು ತೊಳೆದು ಒಣಗಿಸಿದ ಬಳಿಕ ಎಣ್ನೆ ಹಚ್ಚುವುದು ಒಳ್ಳೆಯದು.

ಬರೀ ನೀರಿನಲ್ಲಿ ಹೆನ್ನಾ ಮಿಶ್ರ ಮಾಡಬೇಡಿ
ಹೆನ್ನಾವನ್ನು ಬರೀ ನೀರಿನಲ್ಲಿ ಮಿಶ್ರ ಮಾಡಬೇಡಿ, ಬದಲಿಗೆ ನೀರಿಗೆ ಕಾಫಿ ಪುಡಿ ಹಾಕಿ ಕುದಿಸಿ ಆ ನೀರು ತಣ್ಣಗಾದ ಮೇಲೆ ಅದರಲ್ಲಿ ಮಿಕ್ಸ್ ಮಾಡಿ ಇಡಿ. ಮಿಕ್ಸ್ ಮಾಡಿ 10 ಗಂಟೆ ಆದ ಮೇಲೆ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗಿ ಕಾಣುವುದು.



Click it and Unblock the Notifications
