Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕೂದಲು ಕಪ್ಪಾಗಿ, ಉದ್ದವಾಗಿ ಬೆಳೆಯಬೇಕಾ..? ಈ ಎಣ್ಣೆಗಳನ್ನು ಟ್ರೈ ಮಾಡಿ ನೋಡಿ
ಕೂದಲು ಉದುರುತ್ತಿದೆಯೇ? ಕೂದಲು ಉದುರುವುದನ್ನು ತಡೆಗಟ್ಟಲು ಯಾವ ಎಣ್ಣೆಯನ್ನು ಬಳಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ನೀವು ಈ ಎಣ್ಣೆಗಳಲ್ಲಿ ಒಂದನ್ನು ಟ್ರೈ ಮಾಡಬಹುದು. ಈ ಎಣ್ಣೆಗಳು ಕೂದಲು ಉದುರುವುದನ್ನು ತಡೆಗಟ್ಟುವುದು ಮಾತ್ರವಲ್ಲ, ಅಕಾಲಿಕ ನೆರೆ ತಡೆಗಟ್ಟುತ್ತೆ, ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯುವುದು.

ಈ ಎಣ್ಣೆಗಳು ಆರೋಗ್ಯಕರ ಕೂದಲು ನೀಡುವುದು ನೋಡಿ:

1. ತೆಂಗಿನೆಣ್ಣೆ
ತುಂಬಾ ಜನರು ಕೂದಲಿನ ಆರೈಕೆಗೆ ತೆಂಗಿನೆಣ್ಣೆ ಬಳಸುತ್ತಾರೆ, ಇದರಲ್ಲಿ ವಿಟಮಿನ್ ಇ, ಆ್ಯಂಟಿಆಕ್ಸಿಡೆಂಟ್ ಇದು ನಿಮ್ಮ ತಲೆಬುಡದ ಆರೋಗ್ಯ ಹೆಚ್ಚಿಸುತ್ತೆ, ಇದರಿಂದ ಕೂದಲು ಬಲವಾಗಿರುತ್ತೆ. ಅಲ್ಲದೆ ಈ ಎಣ್ಣೆ ಎಲ್ಲಾ ಬೆಯ ಕೂದಲಿಗೂ ಸೂಕ್ತ.

2. ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಇ ಹಾಗೂ ಮೆಗ್ನಿಷ್ಯಿಯಂ ಇದ್ದು ಕೂದಲು ಬೆಳೆಯಲು ಸಹಕಾರಿಯಾಗಿದೆ. ನಿಮ್ಮದು ತುಂಬಾ ಒಣ ಕೂದಲಾಗಿದ್ದರೆ ಈ ಎಣ್ಣೆ ಬಳಸಿದರೆ ಕೂದಲು ಒರಟಾಗಿರಲ್ಲ.

3. ಈರುಳ್ಳಿ ಎಣ್ಣೆ
ಈರುಳ್ಳಿ ರಸ ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ನೀವು ತಲೆಗೆ ಬಳಸುವ ಎಣ್ಣೆಗೆ ಈರುಳ್ಳಿ ರಸ ಮಿಕ್ಸ್ ಮಾಡಿ ಹಚ್ಚಿ, ಕೂದಲು ಉದುರುವುದು ಕಡಿಮೆಯಾಗುವುದು, ಕೂದಲು ಚೆನ್ನಾಗಿ ಬೆಳೆಯುವುದು.

4. ಹರಳೆಣ್ಣೆ
ಹರಳೆಣ್ಣೆ ಬಳಸುತ್ತಿರುವವರಿಗೆ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆ ಇರಲ್ಲ, ನಿಮಗೆ ಕೂದಲಿನ ಸಮಸ್ಯೆ ಇದ್ದರೆ ಹರಳೆಣ್ಣೆ ಬಳಸಿ, ಇದು ಕೂದಲು ದಟ್ಟವಾಗಿ ಬೆಳೆಯುವಂತೆ ಮಾಡುವುದು ಮಾತ್ರವಲ್ಲ, ಚಿಕ್ಕ ಪ್ರಾಯದಲ್ಲಿ ಬಿಳಿ ಕೂದಲಿನ ಸಮಸ್ಯೆ ಇರಲ್ಲ.

5. ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆ ಹಚ್ಚುವುದರಿಂದಲೂ ಕೂದಲು ದಟ್ಟವಾಗಿ ಬೆಳೆಯುತ್ತದೆ. ನೀವು ಲ್ಯಾವೆಂಡರ್ ಎಣ್ಣೆಯನ್ನು ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಇನ್ನೂ ಒಳ್ಳೆಯದು.

6. ಗ್ರೇಪ್‌ಸೀಡ್ ಎಣ್ಣೆ
ಗ್ರೇಪ್‌ಸೀಡ್ ಎಣ್ಣೆ ಕೂಡ ಕೂದಲಿನ ಬೆಳವಣಿಗೆಗೆ ಸಹಕಾರಿ. ಇದನ್ನು ಬಳಸುವುದರಿಂದ ಕೂದಲು ಉದ್ದ ಬೆಳೆಯುವುದು ಅಲ್ಲದೆ ಬೆಳೆಯುವ ಕೂದಲು ಬಲವಾಗಿರುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು.

7. ಟೀ ಟ್ರೀ ಎಣ್ಣೆ
ಟೀ ಟ್ರೀ ಎಣ್ಣೆ ಕೂದಲಿನ ಬುಡದ ಆರೈಕೆಗೆ ತುಂಬಾ ಸಹಕಾರಿ. ನೀವು ವಾರದಲ್ಲಿ ಎರಡು ಬಾರಿ ಈ ಎಣ್ಣೆಯಿಂದ ಕೂದಲಿನ ಆರೈಕೆ ಮಾಡುವುದು ಒಳ್ಳೆಯದು. ನೀವು ಬೇಕಾದರೆ ಈ ಎಣ್ಣೆಯನ್ನು ಇತರ ಎಣ್ಣೆಯೊಂದಿಗೆ ಮಿಕ್ಸ್ ಮಾಡಿಯೂ ಹಾಕಬಹುದು, ಈ ಎಣ್ಣೆ ಬಳಸಿದರೆ ಕೂದಲು ತುಂಬಾ ಮಂದವಾಗಿ ಕಾಣುವುದು ಅಲ್ಲದೆ ಬೇಗನೆ ಜಿಡ್ಡಾಗಲ್ಲ.



Click it and Unblock the Notifications
