Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಸೊಂಪಾದ ಕೂದಲಿಗೆ ನೈಸರ್ಗಿಕ ಶ್ಯಾಂಪೂ ಆಪಲ್ ಸೈಡರ್ ವಿನೆಗರ್ ಬಳಸಿ
ಕೂದಲ ಬಗೆಗಿನ ಕಾಳಜಿ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಬಹಳ ಮುಖ್ಯವೇ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಬೊಕ್ಕ ತಲೆ ನಿಮ್ಮದಾಗಬಹುದು. ಆದ್ದರಿಂದ ಎಲ್ಲರೂ ನಿಯಮಿತವಾಗಿ ಕೂದಲ ಕಾಳಜಿ ಮಾಡಲೇಬೇಕು. ಇದಕ್ಕೆ ಅನೇಕ ಮನೆಮದ್ದುಗಳಿವೆ, ಇವುಗಳಲ್ಲಿ ಬಹಳ ಮುಖ್ಯವಾದ ಹಾಗೂ ಇತ್ತೀಚೆಗೆ ಟ್ರೆಂಡ್ ಆಗಿರುವ ಮನೆಮದ್ದು ಎಂದರೆ ಆಪಲ್ ಸೈಡರ್ ವಿನೆಗರ್‌ನಿಂದ ಕೂದಲನ್ನು ತೊಳೆಯುವುದು.
ಹೌದು, ಕೂದಲು ಉದುರುವ ಸಮಸ್ಯೆ ಇರುವವರು, ಕೂದಲ ಹೊಟ್ಟು, ಕೂದಲಿನ ಸೀಳು ತುದಿ ಇಂಥಾ ಅನೇಕಾನೇಕ ಸಮಸ್ಯೆಗಳಿಗೆ ಆಪಲ್ ಸೈಡರ್ ವಿನೆಗರ್‌ನಿಂದ ಕೂದಲನ್ನು ನೆನೆಸಿ ಕೂದಲ ರಕ್ಷಣೆ ಮಾಡಬಹುದು.
ಆಪಲ್ ಸೈಡರ್ ವಿನೆಗರ್ ಕೂದಲನ್ನು ಡಿಫ್ರೆಜ್ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕೂದಲನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಬಳಸುವುದು ಹೇಗೆ?
ವೃತ್ತಿಪರ ತಜ್ಞರ ಪ್ರಕಾರ, ಆಪಲ್ ಸೈಡರ್ ವಿನೆಗರ್ ಅನ್ನು ಶಾಂಪೂಗೆ ಪರ್ಯಾಯವಾಗಿ ಬಳಸಲಾಗುತ್ತದೆ. ನಿಮ್ಮ ಕೂದಲಿನ ಬಣ್ಣವನ್ನು ತೆಗೆಯದಂತೆ ಕೂದಲು ಅಥವಾ ನೆತ್ತಿಯ ಮೇಲೆ ಅಂಟಿಕೊಂಡಿರುವ ಎಲ್ಲಾ ಕೊಳೆಯನ್ನು ಇದು ನಿವಾರಿಸುತ್ತದೆ.

ಆಪಲ್ ಸೈಡರ್ ವಿನೆಗರ್ ನಲ್ಲಿರುವ ಪೋಷಕಾಂಶಗಳು
ಆಪಲ್ ಸೈಡರ್ ವಿನೆಗರ್ ನಲ್ಲಿ ಕೂದಲ ರಕ್ಷಣೆಗೆ ಅವಶ್ಯವಾದ ಅದ್ಭುತವಾದ ಪೋಷಕಾಂಶಗಳಿವೆ. ಇದು ವಿಟಮಿನ್ ಬಿ, ಫೋಲಿಕ್ ಆಸಿಡ್, ವಿಟಮಿನ್ ಸಿ ಇದ್ದು, ಇದು ಕೂದಲ ಮಂದತೆ ಮತ್ತು ಫ್ರಿಜ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇನ್ನು ವಿಶೇಷವೆಂದರೆ ಇದು ಎಲ್ಲಾ ರೀತಿಯ ಕೂದಲುಗಳಿಗೂ ಹೊಂದಿಕೊಳ್ಳುತ್ತದೆ, ಪರಿಣಾಮಕಾರಿಗಿದೆ.

ಇದನ್ನು ನೆನಪಿಡಿ!
ನಿಮ್ಮ ಕೂದಲನ್ನು ತೊಳೆಯಲು ಶುದ್ಧವಾದ ಆಪಲ್ ಸೈಡರ್ ವಿನೆಗರ್ ಅನ್ನೇ ಬಳಸಿ ಹಾಗೂ ನೇರವಾಗಿ ಬಳಸುವ ಮೊದಲು ಜಾಗರೂಕರಾಗಿರಿ. ನೇರವಾಗಿ ವಿನೆಗರ್ ಬಳಸುವ ಬದಲು ಇದಕ್ಕೆ ಕಂಡೀಷನಿಂಗ್ ನೈಸರ್ಗಿಕ ಪದಾರ್ಥಗಳನ್ನು ಬೆರೆಸಿ. ಅಥವಾ ನೀವು ಮನೆಯಲ್ಲೇ ತಯಾರಿಸಿದ ಆಪಲ್ ಸೈಡರ್ ವಿನೆಗರ್ ಅನ್ನು ಬಳಸಲು ಬಯಸಿದರೆ ಕನಿಷ್ಟ 4 ಕಪ್ ನೀರಿನೊಂದಿಗೆ 3 ಟೇಬಲ್ಸ್ಪೂನ್ಗಳನ್ನು ಮಿಶ್ರಣ ಮಾಡಿ ಬಳಸಿ. ಇದು ಸಲ್ಫೇಟ್‌ಗಳನ್ನು ಹೊಂದಿರದ ಕಾರಣ ಅದು ನೊರೆಯಾಗುವುದಿಲ್ಲ ಎಂಬುದನ್ನು ನೆನಪಿಡಿ.



Click it and Unblock the Notifications
