Latest Updates
-
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
ಕೂದಲು ಸೊಂಪಾಗಿ ಬೆಳೆಯುಲು ಆಲಿವ್ ಎಣ್ಣೆಯನ್ನು ಬಳಸುವುದು ಹೇಗೆ?
ಕೂದಲು ಸೌಂದರ್ಯದ ಒಂದು ಭಾಗ. ಕೂದಲು ಆರೋಗ್ಯ ಹಾಗೂ ಕಾಂತಿಯುತವಾಗಿದ್ದರೆ ಸೌಂದರ್ಯವು ಎದ್ದು ಕಾಣುವುದು. ಅದೇ ಕೂದಲು ನಿಸ್ತೇಜವಾಗಿದ್ದರೆ ಆಗ ಆಕರ್ಷಣೆಯೇ ಇಲ್ಲದಂತೆ ಆಗುವುದು. ಹೆಚ್ಚಾಗಿ ಕೂದಲಿನ ಆರೈಕೆಗೆ ಹಿಂದಿನಿಂದಲೂ ಎಣ್ಣೆಗಳನ್ನು ಬಳಸಿಕೊಂಡು ಬರಲಾಗುತ್ತಾ ಇದೆ. ಅದರಲ್ಲೂ ಮುಖ್ಯವಾಗಿ ಆಲಿವ್ ತೈಲವನ್ನು ಬಳಸಿಕೊಂಡು ಬರಲಾಗಿದೆ. ಆಲಿವ್ ತೈಲವು ಕೂದಲಿಗೆ ಹಲವಾರು ಲಾಭಗಳನ್ನು ನೀಡುತ್ತದೆ. ಆಲಿವ್ ತೈಲವು ಕೂದಲಿಗೆ ಕಾಂತಿ, ಮೃಧುತ್ವ, ಕೂದಲಿನ ಪ್ರಮಾಣವನ್ನು ಹೆಚ್ಚಿಸುವುದು. ಈ ಎಣ್ಣೆಯಲ್ಲಿ ಇರುವಂತಹ ಕೆಲವೊಂದು ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ಇದರಲ್ಲಿ ಮುಖ್ಯವಾಗಿ ಒಲೀಕ್ ಆಮ್ಲ, ಪಾಲ್ಮಿಟಿಕ್ ಆಮ್ಲ, ಸ್ಕ್ವಾಲೀನ್ ಇದೆ.
ಈ ಎಲ್ಲಾ ಅಂಶಗಳಲ್ಲಿ ಕೂದಲನ್ನು ನಯವಾಗಿಸುವ ಮತ್ತು ಮೊಶ್ಚಿರೈಸ್ ಮಾಡುವ ಗುಣ ಹೊಂದಿವೆ. ಆಲಿವ್ ತೈಲವು ಕೂದಲನ್ನು ಬಲಗೊಳಿಸಿ ಮೊಶ್ಚಿರೈಸ್ ಕಾಪಾಡುವುದು. ಕೂದಲಿಗೆ ಆಲಿವ್ ತೈಲವನ್ನು ಹಚ್ಚಿಕೊಂಡ ಬಳಿಕ ಬರುವಂತಹ ಕಾಂತಿಯು ಕೂದಲಿನ ಹೊರಭಾಗವನ್ನು ನಯಗೊಳಿಸುವ ಕಾರಣದಿಂದಾಗಿ ಬರುವುದು. ಇದನ್ನು ದಿನನಿತ್ಯವು ಬಳಕೆ ಮಾಡಿಕೊಳ್ಳಬೇಕು ಮತ್ತು ನಿಮ್ಮ ಕೂದಲಿನ ಆರೈಕೆಯಲ್ಲಿ ಬಳಸಿಕೊಳ್ಳಬೇಕು. ಆಲಿವ್ ತೈಲವನ್ನು ವಿವಿಧ ರೀತಿಯಿಂದ ಬಳಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಕಂಡೀಷನರ್, ಬಿಸಿ ಎಣ್ಣೆ ಚಿಕಿತ್ಸೆ. ವಯಸ್ಸಾಗುತ್ತಾ ಹೋದಂತೆ ಕುದಲಿನ ರಚನೆಯಲ್ಲಿ ನಿಧಾನವಾಗಿ ಬದಲಾಗುತ್ತಾ ಹೋಗುತ್ತದೆ. ಇದರಿಂದಾಗಿ ಕೂದಲು ಉದುರುವುದು ಮತ್ತು ಬಿಳಿಯಾಗುವುದು. ಅನುವಂಶೀಯತೆ ಕೂದಲು ಉದುರುವಿಕೆಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಇದಕ್ಕೆ ಇತರ ಕೆಲವು ಕಾರಣಗಳು ಈ ರೀತಿಯಾಗಿ ಇದೆ. ಮಾಲಿನ್ಯ, ಅತಿಯಾಗಿ ಕೂದಲಿನ ಉತ್ಪನ್ನಗಳ ಬಳಕೆ, ಕೂದಲಿಗೆ ಬಣ್ಣ ಹಾಕುವುದು, ಅನಾರೋಗ್ಯಕರ ಜೀವನಶೈಲಿ, ಅನಾರೋಗ್ಯಕರ ಆಹಾರ ಇತ್ಯಾದಿಗಳು.

ಕೂದಲಿಗೆ ಆಲಿವ್ ತೈಲದಿಂದ ಸಿಗುವ ಲಾಭಗಳು
ತಲೆಹೊಟ್ಟು ನಿವಾರಿಸುವುದು
ತಲೆಬುರುಡೆಯು ಒಣಗಿದ್ದರೆ ಮತ್ತು ಚರ್ಮವು ಸೀಳುಬಿಟ್ಟಿದ್ದರೆ ಆಗ ತಲೆಹೊಟ್ಟು ಸಮಸ್ಯೆಯು ಬರುವುದು. ಲಿಂಬೆಯು ತಲೆಹೊಟ್ಟನ್ನು ಸಡಿಲಗೊಳಿಸಿದರೆ, ಆಲಿವ್ ತೈಲವು ಚರ್ಮದ ಹೊಸ ಮತ್ತು ಕಿತ್ತುಹಾಕಿದ ಬಳಿಕದ ಚರ್ಮವನ್ನು ಮೊಶ್ಚಿರೈಸ್ ಮಾಡುವುದು. ನೀವು ಲಿಂಬೆರಸ, ಆಲಿವ್ ತೈಲ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಹಾಕಿಕೊಂಡು ಬಳಕೆ ಮಾಡಿ. ಇದನ್ನು ತಲೆಬುರುಡೆಗೆ ಸುಮಾರು 20 ನಿಮಿಷ ಕಾಲ ಮಸಾಜ್ ಮಾಡಿ. ಇದರ ಬಳಿಕ ಶಾಂಪೂ ಹಾಕಿಕೊಂಡು ತೊಳೆಯಿರಿ. ಎರಡು ವಾರಕ್ಕೊಮ್ಮೆ ನೀವು ಈ ತಲೆಹೊಟ್ಟು ನಿವಾರಣೆ ಮಾಡುವ ವಿಧಾನವನ್ನು ಬಳಸಿಕೊಳ್ಳಬಹುದು. ಲಿಂಬೆರಸದಲ್ಲಿ ಇರುವಂತಹ ಹೆಚ್ಚಿನ ಆಮ್ಲೀಯತೆಯು ಕೂದಲು ಅಕಾಲಿಕವಾಗಿ ಬಿಳಿಯಾಗುವಂತೆ ಮಾಡುವುದು.
ಸೀಳು ತುದಿಗೆ ಚಿಕಿತ್ಸೆ
ಚಳಿಗಾಲದಲ್ಲಿ ಕೂದಲು ತುಂಡಾಗುವುದು, ಸೀಳುವುದು ಮತ್ತು ಒರಟಾಗುವುದು ಸಾಮಾನ್ಯ ಸಂಗತಿಯಾಗಿದೆ. ಈ ವೇಳೆ ನೀವು ಕೂದಲಿಗೆ ಆಲಿವ್ ತೈಲವನ್ನು ಬಳಸಿಕೊಂಡರೆ ಆಗ ಕೂದಲು ತುಂಬಾ ನಯ, ತೂಕ ಮತ್ತು ಮೊಶ್ಚಿರೈಸ್ ಪಡೆದುಕೊಂಡು ಸಮಸ್ಯೆ ರಹಿತವಾಗುವುದು. ನೀವು ಕೂದಲು ಬಾಚಿಕೊಂಡ ಬಳಿಕ ಆಲಿವ್ ತೈಲವನ್ನು ಕೈಬೆರಳಿಗೆ ಹಾಕಿಕೊಂಡು ಅದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ.
ಕೂದಲನ್ನು ಬಲಗೊಳಿಸುವುದು
ನೀವು ನಿಯಮಿತವಾಗಿ ಬಳಸಿಕೊಳ್ಳುವಂತಹ ಕಂಡೀಷನರ್ ನ್ನು ಇಷ್ಟಪಡುತ್ತಿದ್ದರೆ ಖಂಡಿತವಾಗಿಯೂ ಅದರಲ್ಲಿ ಇರುವಂತಹ ರಾಸಾಯನಿಕದ ಬಗ್ಗೆ ತಿಳಿದಿರಲಿಕ್ಕಿಲ್ಲ. ಆಲಿವ್ ತೈಲವು ಕೂದಲಿಗೆ ಮೊಶ್ಚಿರೈಸರ್ ನ್ನು ಉಂಟು ಮಾಡುವುದು ಮತ್ತು ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದು. ಇದು ರಾಸಾಯನಿಕ ಮುಕ್ತವಾಗಿದ್ದು, ವಿಟಮಿನ್ ಎ, ಇ ಮತ್ತು ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿದೆ. ಇದು ಕೂದಲಿನಲ್ಲಿ ಕೆರಟಿನ್ ನ್ನು ಕಾಪಾಡುವುದು ಮತ್ತು ಮೊಶ್ಚಿರೈಸ್ ನ್ನು ಉಳಿಸುವುದು. ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುವಂತಹ ಮೇಧೋಗ್ರಂಥಿ ಸ್ರಾವದ ಜಮೆಯಾಗಿರುವುದನ್ನು ಇದು ತೆಗೆಯುವುದು ಮತ್ತು ಕೂದಲು ಬೆಳವಣಿಗೆಯಾಗಲು ನೆರವಾಗುವುದು.
ಕೂದಲಿನ ನಿರ್ವಹಣೆಗೆ ನೆರವಾಗುವುದು
ಕೆಲವೊಂದು ಸಲ ಕೂದಲು ತುಂಬಾ ನಿಸ್ತೇಜವಾಗಿ ಕಾಣಿಸುವುದು. ಇದು ಗುಂಗುರು ಕೂಡ ಆಗಿರಲ್ಲ. ಆದರೆ ಇದನ್ನು ಬೇಕಾದಂತೆ ಬಾಚಿಕೊಳ್ಳುವುದು ತುಂಬಾ ಕಷ್ಟ. ಇದಕ್ಕೆ ಮುಖ್ಯ ಕಾರಣ ಸರಿಯಾದ ಪೋಷಣೆಯು ಕೂದಲಿಗೆ ಸಿಗದೆ ಇರುವುದು. ಬಿಸಿ ಎಣ್ಣೆಯ ಚಿಕಿತ್ಸೆಯನ್ನು ಕೂದಲಿಗೆ ಬಳಸಿಕೊಳ್ಳಿ. ಅದರಲ್ಲೂ ಆಲಿವ್ ತೈಲವನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಿದರೆ ಅದರ ನಿರ್ವಹಣೆ ಸಾಧ್ಯವಾಗುವುದು. ಅರ್ಧ ಕಪ್ ಆಲಿವ್ ತೈಲವನ್ನು ಕೂದಲಿಗೆ ಹಚ್ಚಿಕೊಳ್ಳಿ. ಹಾಗೆ 30 ನಿಮಿಷ ಬಿಡಿ. ಇದರ ಬಳಿಕ ಶಾಂಪೂ ಹಚ್ಚಿಕೊಂಡರೆ ಆಗ ನಿಮ್ಮ ಕೂದಲಿಗೆ ಒಳ್ಳೆಯ ಮೊಶ್ಚಿರೈಸರ್ ಸಿಗುವುದು.
ರೇಷ್ಮೆಯಂತಹ ಕೂದಲು
ಬಿಡಿಬಿಡಿಯಾದ ಮತ್ತು ಗುಂಗುರುಕಟ್ಟಿದಂತಹ ಕೂದಲು ಆಕರ್ಷಣೆ ಇಲ್ಲದಂತೆ ಮಾಡುವುದು. ಇದಕ್ಕೆ ನೀವು ಕೂದಲನ್ನು ನಯವಾಗಿಸಲು ಆಲಿವ್ ತೈಲ ಬಳಸಿ. ಇದು ನೈಸರ್ಗಿಕವಾಗಿ ಕಂಡೀಷನಿಂಗ್ ಮಾಡುವುದು. ಸಿಲಿಕಾನ್ ಇರುವಂತಹ ಕಂಡೀಷನರ್ ಬಳಸುವ ಬದಲು ಪ್ರತೀ ವಾರ ಆಲಿವ್ ತೈಲ ಬಳಸಿದರೆ ಆಗ ಕೂದಲು ಕೆಲವೇ ವಾರಗಳಲ್ಲಿ ನಯವಾಗುವುದು.
ಕೂದಲ ಬೆಳವಣಿಗೆಗೆ ಆಲಿವ್ ತೈಲದ ಬಳಕೆ ಹೇಗೆ?
ಕೂದಲು ಉದುರುವಿಕೆಗೆ ಮುಖ್ಯವಾಗಿ ಡಿಟಿಎಚ್ ಎನ್ನುವುದು ಪ್ರಮುಖ ಕಾರಣವಾಗಿದೆ. ಇದು ಕೂದಲಿನ ಕಿರುಚೀಲಗಳನ್ನು ಕಿರಿದಾಗಿಸುವುದು. ಆಲಿವ್ ತೈಲವು ಇದನ್ನು ತಡೆಯುವುದು ಮತ್ತು ಕೂದಲು ತುಂಬಾ ಉದ್ದವಾಗಿ ಬೆಳೆಯಲು ನೆರವಾಗುವುದು.
ಆಲಿವ್ ತೈಲವು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ, ಇದು ತಲೆಬುರುಡೆಯ ಆರೋಗ್ಯ, ಶಿಲೀಂಧ್ರ ವಿರುದ್ಧ ಹೋರಾಟ ಮತ್ತು ಬ್ಯಾಕ್ಟೀರಿಯಾ ನಾಶ ಮಾಡಿ ರಕ್ತ ಸಂಚಾರವನ್ನು ಸುಗಮಗೊಳಿಸುವುದು. ರಕ್ತಸಂಚಾರವು ಉತ್ತಮವಾದರೆ ಆಗ ಕಿರುಚೀಲಗಳು ಉತ್ತೇಜಿಸಲ್ಪಡುವುದು ಮತ್ತು ಇದರಿಂದ ಕೂದಲು ತುಂಬಾ ದಪ್ಪ ಮತ್ತು ಆರೋಗ್ಯವಾಗುವುದು.
ನಿಧಾನವಾಗಿ ಕೂದಲು ಉದುರುವಿಕೆಯನ್ನು ತಡೆಯುವ ಆಲಿವ್ ತೈಲವು ಕೂದಲು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಆಲಿವ್ ತೈಲದ ಅದ್ಭುತ ಗುಣವಾಗಿದೆ.
ನಿಯಮಿತವಾಗಿ ಆಲಿವ್ ತೈಲವನ್ನು ಬಳಸಿಕೊಂಡರೆ ಅದರಿಂದ ಕೂದಲಿನ ಕಾಂತಿಯನ್ನು ಮರಳಿ ಪಡೆಯಬಹುದು. ಕೂದಲಿಗೆ ಆಲಿವ್ ತೈಲವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು ಕೂಡ ಅಷ್ಟೇ ಅಗತ್ಯವಾಗಿರುವುದು.
ಕೂದಲಿನ ಬೆಳವಣಿಗೆಗೆ ಆಲಿವ್ ತೈಲವನ್ನು ಬಳಸುವುದು ಹೇಗೆ?
- ಕೂದಲ ಬೆಳವಣಿಗೆಗೆ ಒಂದು ಪಿಂಗಾಣಿಯಲ್ಲಿ 20-30 ಮಿ.ಲೀ. ಆಲಿವ್ ತೈಲ ತೆಗೆದುಕೊಳ್ಳಿ ಮತ್ತು ಇದಕ್ಕೆ 10 ಮಿ.ಲೀ. ತೆಂಗಿನೆಣ್ಣೆ ಹಾಕಿ.
- ಈ ಮಿಶ್ರಣವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ. ಇದು ಹೆಚ್ಚು ಬಿಸಿಯಾಗುವುದು ಬೇಡ. ಬೆರಳುಗಳಿಗೆ ಹಾನಿಯಾಗದಷ್ಟು ಮಟ್ಟದಲ್ಲಿ ಈ ಎಣ್ಣೆಯು ಬಿಸಿಯಾಗಿರಲಿ.
- ಕೂದಲನ್ನು ಒಂದೊಂದು ಭಾಗವನ್ನಾಗಿ ಮಾಡಿಕೊಂಡು ಅದಕ್ಕೆ ಈಗ ಆಲಿವ್ ತೈಲವನ್ನು ಹಚ್ಚಿಕೊಳ್ಳಿ. ಈ ವಿಧಾನವನ್ನು ನೀವು ಮುಂದುವರಿಸಿ, ಒಂದೊಂದೇ ಭಾಗಕ್ಕೆ ಹಚ್ಚಿಕೊಳ್ಳಿ.
- ಇನ್ನು ಸ್ವಲ್ಪ ಆಲಿವ್ ತೈಲವನ್ನು ಅಂಗೈಯಲ್ಲಿ ತೆಗೆದುಕೊಂಡು ಅದನ್ನು ಕೂದಲಿನ ಬುಡದಿಂದ ತುದಿ ತನಕ ಹಚ್ಚಿಕೊಳ್ಳಿ. ಇದು ಕೂದಲಿನ ಎಳೆಗಳನ್ನು ಕಂಡೀಷನ್ ಮಾಡುವುದು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು.
- ಬಿಸಿ ನೀರಿನಲ್ಲಿ ಟವೆಲ್ ಅದ್ದಿಕೊಳ್ಳಿ ಮತ್ತು ಹೆಚ್ಚುವರಿ ನೀರನ್ನು ಹಿಂಡಿ ತೆಗೆಯಿರಿ. ಟವೆಲ್ ನ ಬಿಸಿಯು ಅತಿಯಾಗಿ ಇರದಂತೆ ನೋಡಿಕೊಳ್ಳಿ.
- ಈ ಟವೆಲ್ ನ್ನು ತಲೆಗೆ ಕಟ್ಟಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಇರಲಿ. ಇದು ತಲೆಬುರುಡೆಯು ಎಣ್ಣೆಯನ್ನು ಸರಿಯಾಗಿ ಹೀರಿಕೊಳ್ಳಲು ನೆರವಾಗುವುದು. ಇದರೊಂದಿಗೆ ತಲೆಬುರುಡೆಯಲ್ಲಿ ರಕ್ತ ಸಂಚಾರವು ಸರಿಯಾಗಿ ಇರುವಂತೆ ಮಾಡುವುದು.
- ಬೇಸಿಗೆ ಕಾಲದಲ್ಲಿ ಕೂದಲಿಗೆ ಎಣ್ಣೆ ಹಚ್ಚಿಕೊಂಡ ಬಳಿಕ ಶಾವರ್ ಕ್ಯಾಪ್ ಹಾಕಿಕೊಂಡು 30 ನಿಮಿಷ ಹಾಗೆ ಬಿಟ್ಟರೆ ತಲೆಬುರುಡೆಗೆ ಬೇಕಾಗಿರುವ ಬಿಸಿ ಸಿಗುವುದು.
- ನಯವಾಗಿ ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ. ಬೇಬಿ ಶಾಂಪೂ ಬಳಸಿಕೊಳ್ಳಬಹುದು. ಇದು ತುಂಬಾ ಲಘುವಾಗಿ ಇರುತ್ತದೆ. ಈ ವಿಧಾನವನ್ನು ನೀವು ವಾರದಲ್ಲಿ ಒಂದು ಅಥವಾ ಎರಡು ಸಲ ಬಳಸಿಕೊಳ್ಳಿ. ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುವುದು.
- ಕೆಲವೊಂದು ಗಿಡಮೂಲಿಕೆ ಮತ್ತು ಮಸಾಲೆಗಳು ಆಲಿವ್ ತೈಲದ ಪರಿಣಾಮ ಹೆಚ್ಚಿಸುವುದು. ಒಂದು ಚಮಚ ಮೆಂತ್ಯೆ ಕಾಳನ್ನು ಆಲಿವ್ ತೈಲಕ್ಕೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಇದು ತಲೆಹೊಟ್ಟು ಮತ್ತು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ ಆಗಿರಲಿದೆ.
- ಆಲಿವ್ ತೈಲವು ಕೂದಲಿಗೆ ಅದ್ಭುತವನ್ನು ಉಂಟು ಮಾಡುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ನೀವು ಆಲಿವ್ ತೈಲ ಬಳಸುವ ಜತೆಗೆ ಕೆಲವೊಂದು ಜೀವನಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಒಳ್ಳೆಯ ಆಹಾರ ಸೇವಿಸಬೇಕು, ಬಾದಾಮಿ, ಸಮುದ್ರಾಹಾರ ಮತ್ತು ಮೊಸರು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕೂದಲಿನ ಆರೈಕೆಗೆ ಸಲಹೆಗಳು
- ಆಲಿವ್ ತೈಲವು ಕೂದಲು ಉದುರುವಿಕೆ ತಡೆಯುವುದು ಮತ್ತು ಪರಿಹರಿಸುವುದು.
- ಆಲಿವ್ ತೈಲದಿಂದ ಸಂಪೂರ್ಣ ತಲೆಬುರುಡೆಗೆ ನೆರವಾಗುವುದು.
- ಸೀಳು ಮತ್ತು ಒಣ ತಲೆಬುರುಡೆಗೆ ಆಲಿವ್ ತೈಲವು ನೆರವಾಗುವುದು. ಕೂದಲನ್ನು ಇದು ನಯ ಹಾಗೂ ಕಾಂತಿಯುತವಾಗಿಸುವುದು.
- ಆಲಿವ್ ತೈಲದ ಮಸಾಜ್ ನಿಂದ ತಲೆಬುರುಡೆಯಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸುವುದು.



Click it and Unblock the Notifications













