Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್-ಕೂದಲಿನ ಎಲ್ಲಾ ಸಮಸ್ಯೆಗೆ ತ್ವರಿತ ಪರಿಹಾರ
ಕಾಂತಿಯುತವಾದ ಕೇಶರಾಶಿ ಬೇಕಾದರೆ ಅದಕ್ಕಾಗಿ ಪ್ರತಿನಿತ್ಯವು ಸ್ವಲ್ಪ ಸಮಯ ಮೀಸಲಿಡಬೇಕು. ಸಮಯವಿಲ್ಲದೆ ಇದ್ದರೆ ಕೂದಲಿನ ಆರೈಕೆ ಮಾಡಲು ಸಾಧ್ಯವಿಲ್ಲ. ಹೆಚ್ಚಿನವರು ವ್ಯಸ್ತ ಸಮಯದಿಂದಾಗಿ ಕೂದಲಿನ ಆರೈಕೆ ಮಾಡಲು ಆಗಲ್ಲ. ಪ್ರತಿನಿತ್ಯ ಕೂದಲಿನ ಆರೈಕೆ ಮಾಡದೆ ಇದ್ದರೆ ಆಗ ನೈಸರ್ಗಿಕ ಬಣ್ಣವು ಮಾಸುವುದು.
ನಿಸ್ತೇಜ, ಒಣ ಹಾಗೂ ಗುಂಗುರುಕಟ್ಟಿದ ಕೂದಲು ನಿಮ್ಮದಾಗುವುದು. ಹಣವಿದ್ದವರು ಶಾಂಪೂ, ಬ್ಯೂಟಿ ಪಾರ್ಲರ್ ಅಂತ ವ್ಯಯಿಸಬಹುದು. ಇದು ತುಂಬಾ ದುಬಾರಿ ಮತ್ತು ರಾಸಾಯನಿಕಗಳಿಂದ ಸಮಸ್ಯೆಯು ಮತ್ತಷ್ಟು ಹೆಚ್ಚಾಗುವುದು. ಮನೆಯಲ್ಲೇ ಇರುವಂತಹ ಮನೆಮದ್ದನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಿದರೆ ತುಂಬಾ ಒಳ್ಳೆಯದು.
ಈ ಲೇಖನದಲ್ಲಿ ಪಪ್ಪಾಯಿ ಬಳಸಿಕೊಂಡು ಕೂದಲಿನ ಆರೈಕೆ ಮಾಡುವುದು ಹೇಗೆ ಎಂದು ನಿಮಗೆ ತಿಳಿಸಿಕೊಲಿದ್ದೇವೆ. ಇದು ಕೂದಲಿನ ಕಾಂತಿ ಹಾಗೂ ಆರೋಗ್ಯವನ್ನ ಕಾಪಾಡುವುದು. ಇದನ್ನು ತಯಾರಿಸುವುದು ಹೇಗೆ ಮತ್ತು ಬಳಸುವುದು ಹೇಗೆ ಎಂದು ತಿಳಿಯುವ...

ಪಪ್ಪಾಯಿ ಹೇರ್ ಮಾಸ್ಕ್
ಬೇಕಾಗುವ ಸಾಮಗ್ರಿಗಳು
*½ ಕಪ್ ಹಣ್ಣಾದ ಪಪ್ಪಾಯಿ ತಿರುಳು
*¼ ಕಪ್ ತೆಂಗಿನ ಹಾಲು
*1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ
•ಹಣ್ಣು ಪಪ್ಪಾಯಿ ತೆಗೆದುಕೊಂಡು ಸಿಪ್ಪೆ ತೆಗೆಯಿರಿ.
•ಸಣ್ಣ ತುಂಡುಗಳನ್ನಾಗಿ ಮಾಡಿ ಮತ್ತು ಮಿಕ್ಸಿಗೆ ಹಾಕಿ.
•ಇದಕ್ಕೆ ತೆಂಗಿನ ಹಾಲನ್ನು ಹಾಕಿಕೊಳ್ಳಿ.
•ಅಂತಿಮವಾಗಿ ಮಿಕ್ಸಿಗೆ ಜಾರ್ ಗೆ ಕೆಲವು ಹನಿ ಜೇನುತುಪ್ಪ ಹಾಕಿ.
•ನಯವಾದ ಪೇಸ್ಟ್ ಆಗುವ ತನಕ ರುಬ್ಬಿಕೊಳ್ಳಿ.
•ಒಂದು ಶುದ್ಧವಾದ ಪಾತ್ರೆಗೆ ಇದನ್ನು ಹಾಕಿ.

ಹಚ್ಚಿಕೊಳ್ಳುವುದು ಹೇಗೆ
• ಕೂದಲನ್ನು ವಿಂಗಡಿಸಿಕೊಳ್ಳಿ.
• ಒಂದು ಬ್ರಷ್ ತೆಗೆದುಕೊಂಡು ಕೂದಲಿನ ಪ್ರತಿಯೊಂದು ಭಾಗಕ್ಕೂ ಪಪ್ಪಾಯಿ ಮಾಸ್ಕ್ ಹಚ್ಚಿಕೊಳ್ಳಿ.
• ಕೂದಲಿನ ಬುಡದಿಂದ ತುದಿಯವರೆಗೆ ಇದನ್ನು ಹಚ್ಚಿಕೊಳ್ಳಿ.
• 30-45 ನಿಮಿಷ ಕಾಲ ಹಾಗೆ ಬಿಡಿ. ಕೂದಲನ್ನು ಮುಚ್ಚಲು ಶವರ್ ಕ್ಯಾಪ್ ಹಾಕಿಕೊಳ್ಳಿ.
• 45 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ಸಲ್ಫೇಟ್ ಮುಕ್ತ ಶಾಂಪೂ ಹಾಕಿ ತೊಳೆಯಿರಿ.
• ಕಾಂತಿಯುತ ಹಾಗೂ ಆರೋಗ್ಯಕಾರಿ ಕೂದಲಿಗೆ ವಾರದಲ್ಲಿ ಒಂದು ದಿನ ಇದನ್ನು ಬಳಸಿ.

ಪಪ್ಪಾಯಿಯ ಲಾಭಗಳು
ಪಪ್ಪಾಯಿಯು ಕೂದಲಿನ ಬೆಳವಣಿಗೆ, ಕೂದಲು ತುಂಬಾ ನಯ, ಕಾಂತಿ ಹಾಗೂ ರೇಷ್ಮೆಯಂತೆ ಮಾಡಲು ನೆರವಾಗುವುದು. ಇದರಲ್ಲಿ ಮೆಗ್ನಿಶಿಯಂ, ಕಾಪರ್, ಪೊಟಾಶಿಯಂ ಮತ್ತು ವಿಟಮಿನ್ ಎ ಹಾಗೂ ಸಿ ಇದೆ. ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು. ತಲೆಹೊಟ್ಟು ನಿವಾರಿಸಲು ಇದು ಪರಿಣಾಮಕಾರಿ. ಪಪ್ಪಾಯಿಯಲ್ಲಿರುವಂತಹ ಕಿಣ್ವಗಳು ತಲೆಬುರುಡೆಯಲ್ಲಿ ಕಲ್ಮಷ ಮತ್ತು ಅತಿಯಾದ ಎಣ್ಣೆಯಿಂದ ಪದರ ನಿರ್ಮಾಣವಾಗದಂತೆ ನೋಡಿಕೊಳ್ಳುವುದು. ಸಣ್ಣ ಪ್ರಮಾಣದಲ್ಲಿ ಇದನ್ನು ಬಳಸಿದಾಗ ಇದು ನಿಸ್ತೇಜ ಕೂದಲಿಗೆ ಒಳ್ಳೆಯ ಕಂಡೀಷನರ್ ಆಗಿ ಕೆಲಸ ಮಾಡುವುದು.

ತೆಂಗಿನ ಹಾಲಿನ ಲಾಭಗಳು
ಸೌಂದರ್ಯವರ್ಧಕವಾಗಿ ಅದರಲ್ಲೂ ಕೂದಲಿಗೆ ತೆಂಗಿನ ಎಣ್ಣೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಅದೇ ರೀತಿ ತೆಂಗಿನ ಹಾಲು ಕೂಡ ಇದೇ ಪ್ರಮಾಣದಲ್ಲಿ ಕೂದಲಿಗೆ ನೆರವಾಗುವುದು. ತೆಂಗಿನ ಹಾಲಿನಲ್ಲಿ ವಿಟಮಿನ್ ಇ ಮತ್ತು ಕೊಬ್ಬು ಇದೆ. ಇದು ಕೂದಲನ್ನು ಬುಡದಿಂದ ಬಲಗೊಳಿಸುವುದು. ತೆಂಗಿನ ಹಾಲು ಕೂದಲಿಗೆ ಕಾಂತಿ ಒದಗಿಸಿಕೊಡುವುದು. ತೆಂಗಿನ ಹಾಲಿನಿಂದ ನೀವು ಪ್ರತಿನಿತ್ಯ ತಲೆಬುರುಡೆಗೆ ಮಸಾಜ್ ಮಾಡಿದರೆ ಅದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.

ಜೇನುತುಪ್ಪದ ಲಾಭಗಳು
ಜೇನುತುಪ್ಪವು ಕೂದಲಿಗೆ ಮೊಶ್ಚಿರೈಸ್ ಮಾಡುವುದು ಎಂದು ಪರಿಗಣಿಸಲಾಗಿದೆ. ಇದು ತುಂಬಾ ನಯ ಮತ್ತು ಪೋಷಕಾಂಶವುಳ್ಳ ಕೂದಲು ನೀಡುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಕೂದಲಿಗೆ ನೆರವಾಗುವುದು. ಗುಂಗುರು ಕೂದಲು ಹೊಂದಿದ್ದರೆ ಕೆಲವು ಹನಿ ಜೇನುತುಪ್ಪವನ್ನು ನೀವು ಬಳಸುವಂತಹ ಶಾಂಪೂಗೆ ಹಾಕಿ. ಇದು ತೇವಾಂಶ ನೀಡುವುದರೊಂದಿಗೆ ಕೂದಲನ್ನು ಮೊಶ್ಚಿರೈಸ್ ಮಾಡುವುದು. ಪಪ್ಪಾಯ ಹಣ್ಣಿನಿಂದ ಮಾಡಬಹುದಾದ ಇನ್ನಷ್ಟು ಪ್ರಯೋಜನಕಾರಿ ಹೇರ್ ಪ್ಯಾಕ್ ನೀಡಿದ್ದೇವೆ.. ಮುಂದೆ ಓದಿ

ಪಪ್ಪಾಯಿ+ಮೊಸರು ಬೆರೆಸಿ ಮಾಡಿದ ಹೇರ್ ಪ್ಯಾಕ್
ಒಂದು ಚೆನ್ನಾಗಿ ಹಣ್ಣಾದ ಪಪ್ಪಾಯಿ ಹಣ್ಣನ್ನು ರಬ್ಬಿಕೊಂಡು, ಅದಕ್ಕೆ ಒಂದು ಕಪ್ ಮೊಸರು ಸೇರಿಸಿಕೊಂಡು, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಚೆನ್ನಾಗಿ ಲೇಪಿಸಿ. 30 ನಿಮಿಷ ಬಿಟ್ಟು, ನಂತರ ಇದನ್ನು ತೊಳೆಯಿರಿ. ಇದು ಒಡೆದ ಮತ್ತು ಹಾಳಾದ ಕೂದಲಿಗೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.

ಬಾಳೆಹಣ್ಣು ಹಾಗೂ ಪಪ್ಪಾಯ ಹಣ್ಣು
*ಹಣ್ಣದ ಪಪ್ಪಾಯ ತುಂಡು ಮಾಡಿರುವುದು ಒಂದು ಕಪ್
*ಹಣ್ಣಾದ ಬಾಳೆಹಣ್ಣು ಒಂದು ಕಪ್ಪು ತುಂಡು ಮಾಡಿರುವುದು
*ತೆಂಗಿನ ಎಣ್ಣೆ ಒಂದು ಚಮಚ
*ಮೊಸರು ಒಂದು ಕಪ್

ಮಾಡುವ ವಿಧಾನ
• ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿಕೊಂಡು ರುಬ್ಬಿಕೊಳ್ಳಿ.
ಯಾವುದೇ ತುಂಡು ಮಿಕ್ಸಿಯಲ್ಲಿ ಉಳಿಯದಂತೆ ನೋಡಿಕೊಳ್ಳಿ.
• ಈ ಪೇಸ್ಟ್ ಅನ್ನು ಒಣ ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ.
• ಪೇಸ್ಟ್ ಹಚ್ಚಿಕೊಂಡ ಬಳಿಕ ಪ್ಲಾಸ್ಟಿಕ್ ಅಥವಾ ಶವರ್ ಕ್ಯಾಪ್ ಹಾಕಿಕೊಳ್ಳಿ.
• ಅರ್ಧ ಗಂಟೆ ಕಾಲ ಹಾಗೆ ಬಿಟ್ಟುಬಿಡಿ.
• ಈಗ ಶವರ್ ಕ್ಯಾಪ್ ಸುತ್ತಲೂ ಒಂದು ಟವೆಲ್ ಅನ್ನು ಸರಿಯಾಗಿ ಕಟ್ಟಿಕೊಂಡು ಉಷ್ಣತೆ ಹೆಚ್ಚಾಗುವಂತೆ ನೋಡಿಕೊಳ್ಳಿ.
• ಅರ್ಧ ಗಂಟೆ ಕಾಲ ಹಾಗೆ ಬಿಟ್ಟುಬಿಡಿ.
• ನಿಯಮಿತವಾಗಿ ಕೂದಲು ತೊಳೆಯುವಂತೆ ಕೂದಲು ತೊಳೆಯಿರಿ.
• ಕಂಡೀಷನರ್ ಅನ್ನು ಬಳಸಬಹುದಾಗಿದೆ. ಇದರಿಂದ ಕೂದಲು ಮತ್ತಷ್ಟು ರೇಷ್ಮೆಯಂತೆ ಆಗಬಹುದು.



Click it and Unblock the Notifications
