Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲು ಉದುರುವ ಸಮಸ್ಯೆ ಇದ್ದರೆ, ಖಾರ ಮೆಣಸು ಬಳಸಿ ನೋಡಿ!
ಕೂದಲು ಉದುರುವ ಸಮಸ್ಯೆಯು ಇಂದು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುವುದು. ಇದು ಆಧುನಿಕ ಜಗತ್ತಿಗೆ ಬಂದಿರುವ ದೊಡ್ಡ ಮಟ್ಟದ ಸಮಸ್ಯೆ. ಇಂದಿನ ಕಲುಷಿತ ವಾತಾವರಣ, ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಹಾರ್ಮೋನು ಅಸಮತೋಲನದಿಂದಾಗಿ ಸಮಸ್ಯೆಗಳು ಕಾಣಿಸುವುದು. ತಲೆಹೊಟ್ಟು, ಕೂದಲು ತುಂಡಾಗುವುದು ಇತ್ಯಾದಿ ಸಮಸ್ಯೆಗಳು ಕೂದಲು ಉದುರುವಿಕೆಗೆ ಕಾರಣವಾಗುವುದು. ಈ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಆದರೆ ಈ ಎಲ್ಲಾ ರೀತಿಯ ಉತ್ಪನ್ನಗಳಲ್ಲಿ ರಾಸಾಯನಿಕಗಳು ಇದ್ದು, ಕೂದಲಿಗೆ ಮತ್ತಷ್ಟು ಹಾನಿಯುಂಟು ಮಾಡುವುದು. ಈ ಕಾರಣದಿಂದಾಗಿ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಳ್ಳುವುದು ತುಂಬಾ ಸುರಕ್ಷಿತ. ಮೆಣಸು ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಿ, ಕೂದಲು ಬೆಳೆಯಲು ನೆರವಾಗುವುದು ಎಂದು ನಿಮಗೆ ತಿಳಿದಿದೆಯಾ? ಹೌದು, ಅಡುಗೆಯಲ್ಲಿ ಬಳಸುವಂತಹ ಮೆಣಸು ಕೂದಲು ಬೆಳೆಯಲು ತುಂಬಾ ಸಹಕಾರಿ. ಇದು ರೇಷ್ಮೆ ಹಾಗೂ ನಯವಾದ ಕೂದಲು ನೀಡುವುದು. ಮೆಣಸನ್ನು ಹೇಗೆ ಬಳಸಿಕೊಳ್ಳುವುದು ಎಂದು ನೀವು ತಿಳಿಯಿರಿ.

ಆಲಿವ್ ತೈಲ ಮತ್ತು ಮೆಣಸು
ಬೇಕಾಗುವ ಸಾಮಗ್ರಿಗಳು
*1 ಕಪ್ ಆಲಿವ್ ತೈಲ
*5-6 ಮೆಣಸು

ತಯಾರಿಸುವ ವಿಧಾನ
•ಮೊದಲು ನೀವು ಮೆಣಸನ್ನು ಸಣ್ಣ ತುಂಡುಗಳನ್ನಾಗಿ ಮಾಡಿ.
•ಇದಕ್ಕೆ ಆಲಿವ್ ತೈಲ ಬೆರಸಿ ಮತ್ತು 10-15 ದಿನಗಳ ಕಾಲ ತಂಪಾದ ಜಾಗದಲ್ಲಿಡಿ.
•ಕೆಲವು ದಿನಗಳ ಬಳಿಕ ಸೋಸಿಕೊಂಡು ಮೆಣಸನ್ನು ಬೇರ್ಪಡಿಸಿ.
•ಈ ಎಣ್ಣೆಯ ಕೆಲವು ಹನಿ ಹಾಕಿಕೊಂಡು ಇದನ್ನು ಬುಡದಿಂದ ತುದಿಯ ತನಕ ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಹಾಗೆ ಬಿಡಿ.
•ಶಾಂಪೂ ಬಳಸಿಕೊಂಡು ತೊಳೆಯಿರಿ. ವಾರದಲ್ಲಿ ಮೂರು ಸಲ ಹೀಗೆ ಮಾಡಿ.

ಹರಳೆಣ್ಣೆ ಮತ್ತು ಮೆಣಸು
ಬೇಕಾಗುವ ಸಾಮಗ್ರಿಗಳು
*1 ಕಪ್ ಹರಳೆಣ್ಣೆ
*2 ಚಮಚ ಮೆಣಸು
ತಯಾರಿಸುವ ವಿಧಾನ
•ಹರಳೆಣ್ಣೆ ಮತ್ತು ಮೆಣಸನ್ನು ಒಂದು ಜಾರ್ ಗೆ ಹಾಕಿಕೊಳ್ಳಿ
•ಇದನ್ನು ತಂಪಾದ ಜಾಗದಲ್ಲಿ ಇಡಿ ಮತ್ತು 2 ವಾರಗಳ ಕಾಲ ಬಿಸಿಲು ತಾಗದಂತೆ ಇಡಿ.
•ಬಳಿಕ ಒಂದು ಚಮಚ ಎಣ್ಣೆ ತೆಗೆದುಕೊಂಡು ಅದನ್ನು ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಿ.
•30-40 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಶಾಂಪೂ ಹಾಕಿ ತೊಳೆಯಿರಿ. ವಾರದಲ್ಲಿ 3-4 ಸಲ ಇದನ್ನು ಬಳಸಿ.

ಆ್ಯಪಲ್ ಸೀಡರ್ ವಿನೇಗರ್ ಮತ್ತು ಮೆಣಸಿನ ಸಾರ
ಬೇಕಾಗುವ ಸಾಮಗ್ರಿಗಳು
*1 ಚಮಚ ಆ್ಯಪಲ್ ಸೀಡರ್ ವಿನೇಗರ್
*1-2 ಹನಿ ಮೆಣಸಿನ ಸಾರ
ತಯಾರಿಸುವ ವಿಧಾನ
•ಒಂದು ಶುದ್ಧವಾದ ಪಿಂಗಾಣಿಯಲ್ಲಿ ಆ್ಯಪಲ್ ಸೀಡರ್ ವಿನೇಗರ್ ಮತ್ತು ಮೆಣಸಿನ ಸಾರ ಬೆರೆಸಿ.
•ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ.
•ಕೆಲವು ನಿಮಿಷ ಕಾಲ ಇದು ಹಾಗೆ ಇರಲಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ನೀವು ವಾರದಲ್ಲಿ ಒಂದು ಅಥವಾ ಎರಡು ಸಲ ಬಳಸಿ.

ತೆಂಗಿನೆಣ್ಣೆ ಮತ್ತು ಮೆಣಸು
ಬೇಕಾಗುವ ಸಾಮಗ್ರಿಗಳು
*½ ಕಪ್ ತೆಂಗಿನೆಣ್ಣೆ
*½ ಕಪ್ ಆಲಿವ್ ತೈಲ
*2 ಚಮಚ ಮೆಣಸಿನ ಹುಡಿ
ತಯಾರಿಸುವ ಕ್ರಮ
•ತೆಂಗಿನೆಣ್ಣೆ ಮತ್ತು ಮೆಣಸಿನ ಹುಡಿ ಮಿಶ್ರಣ ಮಾಡಿಕೊಂಡು ಗಾಜಿನ ಜಾರ್ ನಲ್ಲಿ ಹಾಕಿಡಿ.
•ಎರಡು ವಾರಗಳ ಕಾಲ ಬಿಸಿಲು ಬೀಳದಂತೆ ತಣ್ಣಗಿನ ಪ್ರದೇಶದಲ್ಲಿ ಇದನ್ನು ಇಡಬೇಕು.
•ಬಳಿಕ ಕೆಲವು ಹನಿ ಎಣ್ಣೆ ತೆಗೆದುಕೊಂಡು ಅದನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ.
•30 ನಿಮಿಷ ಹಾಗೆ ಬಿಡಿ ಮತ್ತು ಶಾಂಪೂ ಹಾಕಿ ತೊಳೆಯಿರಿ.



Click it and Unblock the Notifications
