Latest Updates
-
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್!
ಕೂದಲಿಗೆ ರೆಡ್ ವೈನ್ ಬಳಸಿ-ಇದರಿಂದ ಸಾಕಷ್ಟು ಪ್ರಯೋಜನಗಳಿವೆ
ತುಂಬಾ ನೈಸರ್ಗಿಕ ವಿಧಾನದಿಂದ ತಯಾರಿಸುವಂತಹ, ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗಿರುವಂತಹ ಕೆಂಪು ವೈನ್ (ರೆಡ್ ವೈನ್) ನ್ನು ನೀವು ಈಗಾಗಲೇ ಹಲವಾರು ಭಾರೀ ಕುಡಿದಿರಬಹುದು ಅಥವಾ ಇದರ ಆರೋಗ್ಯ ಲಾಭಗಳ ಬಗ್ಗೆ ತಿಳಿದಿರಬಹುದು. ಇದು ನಮ್ಮ ಆರೋಗ್ಯ ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದೆಂದು ಹಲವಾರು ಅಧ್ಯಯನಗಳು ಹೇಳಿವೆ. ವೈನ್ ನಿಂದ ನಮ್ಮ ದೇಹವು ಹಲವಾರು ರೋಗಗಳನ್ನು ತಡೆಯುವಂತಹ ಶಕ್ತಿಯನ್ನು ಹೊಂದುವುದು ಎನ್ನಲಾಗಿದೆ.
ಆದರೆ ಇದನ್ನು ಮಿತವಾಗಿ ಸೇವನೆ ಮಾಡಿದರೆ ಇದರ ಆರೋಗ್ಯ ಲಾಭಗಳು ಸಿಗುವುದು. ಕೆಂಪು ವೈನ್ ಕೇವಲ ಆರೋಗ್ಯ ಮಾತ್ರವಲ್ಲದೆ ಕೂದಲಿನ ಆರೈಕೆಗೂ ಬಳಸಬಹುದು ಎಂದು ನಿಮಗೆ ಇದುವರೆಗೆ ತಿಳಿದಿದೆಯಾ? ಇಲ್ಲ ತಾನೇ? ಹಾಗಾದರೆ ನಾವು ಈ ಲೇಖನದಲ್ಲಿ ನಿಮಗೆ ಕೆಂಪು ವೈನ್ ಬಳಸಿಕೊಂಡು ಕೂದಲಿನ ಆರೈಕೆ ಮಾಡುವ ಬಗ್ಗೆ ತಿಳಿಸಿಕೊಡಲಿದ್ದೇವೆ.

ಕೂದಲಿನ ಆರೈಕೆಗೆ ಕೆಂಪುವೈನ್ ಯಾಕೆ ಬಳಸಬೇಕು?
ನಿಮ್ಮ ಆರೋಗ್ಯ ಹಾಗೂ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಕೂದಲಿಗೂ ಇಷ್ಟೇ ಮಟ್ಟದ ಗಮನ ಅಗತ್ಯವಾಗಿ ಬೇಕು. ಕೂದಲು ಉದುರುವಿಕೆ ಎನ್ನುವುದು ಪ್ರತಿಯೊಬ್ಬರಿಗೂ ಸಾಮಾನ್ಯವೆನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೆಂಪು ವೈನ್ ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ಕೆಂಪುವೈನ್ ನಲ್ಲಿ ರೆಸ್ವೆರಟ್ರೊಲ್ ಎನ್ನುವ ಅಂಶವಿದ್ದು, ಕೂದಲು ಉದುರುವಿಕೆ ತಡೆಯಲು ನೆರವಾಗುವುದು. ಕೆಂಪು ವೈನ್ ಕೂದಲು ಉದುರುವಿಕೆ ನಿಲ್ಲಿಸುವುದು ಮಾತ್ರವಲ್ಲದೆ, ದಪ್ಪ, ಉದ್ದ ಮತ್ತು ಬಲಿಷ್ಠ ಕೂದಲು ನೀಡುವುದು.

ತಲೆಹೊಟ್ಟು-ತಲೆ ತುರಿಕೆಗೆ ಸಮಸ್ಯೆಗಳಿಗೆಲ್ಲಾ ಪರಿಹಾರ
ಕೂದಲು ಉದುರುವಿಕೆ ತಡೆಯುವುದು ಮಾತ್ರವಲ್ಲದೆ, ರೆಡ್ ವೈನ್ ಹಲವಾರು ರೀತಿಯ ಲಾಭಗಳನ್ನು ನೀಡುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ತಲೆಬುರುಡೆಯಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುವುದು. ತಲೆಹೊಟ್ಟಿನ ನಿವಾರಣೆ ಮಾಡುವುದು ಮತ್ತು ತುರಿಕೆ ಉಂಟುಮಾಡುವ ತಲೆಬುರುಡೆ ಸಮಸ್ಯೆ ನಿವಾರಿಸುವುದು. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವಂತಹ ಕೆಂಪುವೈನ್ ಕೂದಲಿನ ಆರೈಕೆಗೆ ಮೊದಲ ಆಯ್ಕೆಯಾಗಿದೆ. ಕೂದಲಿನ ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸುವ ಐದು ವಿಧಾನಗಳನ್ನು ಕೆಳಗೆ ಕೊಡಲಾಗಿದೆ.

ತುರಿಕೆಯುಂಟುಮಾಡುವ ತಲೆಬುರುಡೆಗೆ
* ½ ಕಪ್ ರೆಡ್ ವೈನ್
* 2 ಚಮಚ ಕತ್ತರಿಸಿದ ಬೆಳ್ಳುಳ್ಳಿ

ತಯಾರಿಸುವ ವಿಧಾನ
*ಪಿಂಗಾಣಿಗೆ ಸ್ವಲ್ಪ ವೈನ್ ಹಾಕಿಕೊಂಡು ಅದಕ್ಕೆ ಕತ್ತರಿಸಿ ಬೆಳ್ಳುಳ್ಳಿ ಹಾಕಿ.
ಇದನ್ನು ರಾತ್ರಿಯಿಡಿ ಹಾಗೆ ಬಿಡಿ.
*ಮರುದಿನ ಬೆಳಗ್ಗೆ ಇದನ್ನು ತೆಗೆದುಕೊಂಡು ತಲೆಬುರುಡೆ ಮತ್ತು ಕೂದಲಿಗೆ ಮಸಾಜ್ ಮಾಡಿ. ಇದರಿಂದ ತುರಿಕೆಯುಂಟು ಮಾಡುವ ತಲೆಬುರುಡೆ ನಿವಾರಣೆಯಾಗುವುದು.
*ಪ್ರತಿನಿತ್ಯ ಎರಡು ಸಲ ಹೀಗೆ ಮಾಡಿ.

ತಲೆಹೊಟ್ಟು ನಿವಾರಣೆಗೆ ಕೆಂಪುವೈನ್
ಬೇಕಾಗುವ ಸಾಮಗ್ರಿಗಳು
*1 ಕಪ್ ರೆಡ್ ವೈನ್
*1 ಕಪ್ ನೀರು

ತಯಾರಿಸುವ ವಿಧಾನ
• ಪಿಂಗಾಣಿಗೆ ರೆಡ್ ವೈನ್ ಮತ್ತು ನೀರು ಹಾಕಿ ಮಿಶ್ರಣ ಮಾಡಿ.
•ಇದನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಂಡು ಮಸಾಜ್ ಮಾಡಿ.
•ತಲೆಗೆ ಕವರ್ ಹಾಕಿಕೊಂಡು ಅರ್ಧ ಗಂಟೆ ಕಾಲ ಹಾಗೆ ಬಿಡಿ.
•ಶಾಂಪೂ ಅಥವಾ ಕಂಡೀಷನರ್ ಹಾಕಿ ಕೂದಲು ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಬಳಸಿ.

ಕೂದಲ ಬೆಳವಣಿಗೆಗೆ
ಬೇಕಾಗುವ ಸಾಮಗ್ರಿಗಳು
- 2 ಮೊಟ್ಟೆಗಳು
- 2 ಚಮಚ ತೆಂಗಿನೆಣ್ಣೆ
- 2 ಚಮಚ ಆಲಿವ್ ತೈಲ
- 4 ಚಮಚ ರೆಡ್ ವೈನ್
- ಒಂದು ಕಪ್ ಕೆಂಪು ವೈನ್

ತಯಾರಿಸುವ ವಿಧಾನ
•ಪಿಂಗಾಣಿಗೆ ಮೊಟ್ಟೆಗಳನ್ನು ಒಡೆದು ಹಾಕಿ ಮತ್ತು ಅದಕ್ಕೆ ತೆಂಗಿನೆಣ್ಣೆ ಮಿಶ್ರಣ ಮಾಡಿ.
•ಇದರ ಬಳಿಕ ಆಲಿವ್ ತೈಲ ಹಾಕಿ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
•ಅಂತಿಮವಾಗಿ ಕೆಂಪು ವೈನ್ ಹಾಕಿಕೊಂಡು, ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕ ದಪ್ಪಗಿನ ಪೇಸ್ಟ್ ಆಗುವಂತೆ ಮಾಡಿ.
•ಇದನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ.
•ಕೂದಲಿಗೆ ಟವೆಲ್ ಸುತ್ತಿಕೊಂಡು ಅರ್ಧಗಂಟೆ ಹಾಗೆ ಬಿಡಿ.
•ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ. ಬಳಿಕ ಕಂಡೀಷನರ್ ಹಾಕಿ.
•ಈ ಹೇರ್ ಮಾಸ್ಕ್ ನ್ನು ವಾರಕ್ಕೊಂದು ಸಲ ತಿಂಗಳ ಕಾಲ ಬಳಸಿದರೆ ಫಲಿತಾಂಶ ಸಿಗುವುದು.

ಕೂದಲು ಬಲಿಷ್ಠಗೊಳ್ಳಲು
ಬೇಕಾಗುವ ಸಾಮಗ್ರಿಗಳು
*6 ಚಮಚ ಮದರಂಗಿ
*½ಕಪ್ ಕೆಂಪು ವೈನ್
*1 ಚಮಚ ಚೆನ್ನಾಗಿ ರುಬ್ಬಿರುವ ಕಾಫಿ ಹುಡಿ
*2 ಚಮಚ ಆಲಿವ್ ತೈಲ
*½ಚಮಚ ಆ್ಯಪಲ್ ಸೀಡರ್ ವಿನೇಗರ್
ತಯಾರಿಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಕೆಂಪು ವೈನ್ ಮತ್ತು ಮದರಂಗಿ ಬೆರೆಸಿಕೊಳ್ಳಿ.
•ಇದಕ್ಕೆ ಆಲಿವ್ ತೈಲ ಹಾಕಿ. ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಒಂದರ ಬಳಿಕ ಒಂದು ಸಾಮಗ್ರಿಗಳನ್ನು ಹಾಕಿಕೊಳ್ಳಿ.
•ಕಾಫಿ ಹುಡಿ ಹಾಕಿ ಮತ್ತು ಅಂತಿಮವಾಗಿ ಆ್ಯಪಲ್ ಸೀಡರ್ ವಿನೇಗರ್ ಹಾಕಿ.
•ಇದು ಸರಿಯಾಗಿ ಮಿಶ್ರಣಗೊಂಡ ಬಳಿಕ ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಂಡು ಒಂದುವರೆ ಗಂಟೆ ಕಾಲ ಹಾಗೆ ಬಿಡಿ.
•ನೀರಿನಿಂದ ತೊಳೆಯಿರಿ. ಶಾಂಪೂ ಅಥವಾ ಕಂಡೀಷನರ್ ಹಾಕಿ.
•ವಾರದಲ್ಲಿ ಒಂದು ಸಲ ಹೀಗೆ ಮಾಡಿ.

ಕೂದಲು ಉದುರುವಿಕೆ ತಡೆಯಲು
ಬೇಕಾಗುವ ಸಾಮಗ್ರಿಗಳು
ತಯಾರಿಸುವ ವಿಧಾನ
•ಹೆಚ್ಚಿನ ಪ್ರಮಾಣದಲ್ಲಿ ಕೆಂಪು ವೈನ್ ತೆಗೆದುಕೊಂಡು ಅದನ್ನು ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಿ.
•ಒಂದೊಂದು ಕೂದಲಿಗೂ ಇದು ತಾಗುವಂತೆ ನೋಡಿಕೊಳ್ಳಿ.
•10-15ನಿಮಿಷ ಕಾಲ ತಲೆಬುರುಡೆ ಹಾಗೂ ಕೂದಲಿಗೆ ಮಸಾಜ್ ಮಾಡಿ.
•ಮತ್ತೆ 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಶಾಂಪೂ ಅಥವಾ ಕಂಡೀಷನರ್ ಬಳಸಿ ತೊಳೆಯಿರಿ.
•ವಾರದಲ್ಲಿ ಒಂದು ಸಲ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.



Click it and Unblock the Notifications
