Latest Updates
-
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ!
ಚಳಿಗಾಲದಲ್ಲಿ ಕೂದಲಿನ ಆರೈಕೆ ಮಾಡಲು ಹೇರ್ ಮಾಸ್ಕ್
ಚಳಿಗಾಲವೆಂದರೆ ಹೆಚ್ಚಿನವರು ಇಷ್ಟಪಡುವಂತಹ ಋತು. ಆದರೆ ಇನ್ನು ಕೆಲವರಿಗೆ ಇದು ಇಷ್ಟವಾಗಲ್ಲ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಚಳಿಗಾಲದಲ್ಲಿ ಒಣ ಹವೆಯಿಂದಾಗಿ ಚರ್ಮ ಹಾಗೂ ಕೂದಲು ಒಣಗುವುದು ದೊಡ್ಡ ಸಮಸ್ಯೆಯಾಗಿರುವುದು. ಒಣ ಹವೆಯಿಂದಾಗಿ ಕೂದಲು ಯಾವಾಗಲೂ ಒಣಗಿರುವುದು ಮತ್ತು ಒರಟಾಗಿರುವುದು. ಪ್ರತಿನಿತ್ಯವು ಕೂದಲನ್ನು ತೊಳೆಯುವುದು ಒಳ್ಳೆಯ ಪರಿಹಾರವಲ್ಲ ಮತ್ತು ಪ್ರತಿನಿತ್ಯ ಕೂದಲು ತೊಳೆಯದೆ ಇದ್ದರೆ ಆಗ ಕೂದಲು ತುಂಬಾ ಜಿಡ್ಡು, ಎಣ್ಣೆಯಂಶದಿಂದ ಕೂಡಿರುವುದು.
ಆದರೆ ಚಳಿಗಾಲದಲ್ಲಿ ಕೂದಲಿನ ಆರೈಕೆ ಮಾಡಲು ನೀವು ಕೆಲವೊಂದು ನೈಸರ್ಗಿಕದತ್ತವಾಗಿರುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಹೇರ್ ಮಾಸ್ಕ್ ತಯಾರಿಸಿಕೊಳ್ಳಬಹುದು. ಈ ಹೇರ್ ಮಾಸ್ಕ್ ಗಳು ಕೂದಲನ್ನು ತುಂಬಾ ನಯ ಹಾಗೂ ರೇಷ್ಮೆಯಂತೆ ಮಾಡುವುದು. ಇದಕ್ಕಾಗಿ ನೀವು ಮಾರುಕಟ್ಟೆಗೆ ಹೋಗಿ ದುಬಾರಿ ಯಾಗಿರುವಂತಹ ಕೂದಲಿನ ಆರೈಕೆಯ ಉತ್ಪನ್ನಗಳನ್ನು ತರುವುದು ತಪ್ಪುವುದು. ಇದನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದು ಹೇಗೆ ಎಂದು ತಿಳಿಯಿರಿ. ಮನೆಯಲ್ಲೇ ನೀವು ತಯಾರಿಸಬಹುದಾದ ಹೇರ್ ಮಾಸ್ಕ್ ಗಳು ಈ ರೀತಿಯಾಗಿದೆ.

ತೆಂಗಿನೆಣ್ಣೆ ಮತ್ತು ಜೇನುತುಪ್ಪದ ಮಾಸ್ಕ್
ಹೆಚ್ಚಿನೆಲ್ಲಾ ಕೂದಲಿನ ಆರೈಕೆಯ ಉತ್ಪನ್ನಗಳಲ್ಲಿ ತೆಂಗಿನೆಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಯಾಕೆಂದರೆ ಇದು ತಲೆಬುರುಡೆಗೆ ಆಳವಾಗಿ ಪೋಷಣೆ ನೀಡಲು ನೆರವಾಗುವುದು. ಇದರೊಂದಿಗೆ ಕೂದಲಿನ ಕಿರುಚೀಲಗಳನ್ನು ಕೂಡ ಬಲಪಡಿಸುವುದು. ಶಿಲೀಂಧ್ರ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿರುವಂತಹ ತೆಂಗಿನೆಣ್ಣೆಯು ತಲೆಹೊಟ್ಟು ಮತ್ತು ತಲೆಬುರುಡೆಯ ಇತರ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಜೇನುತುಪ್ಪದಲ್ಲಿ ಕೂಡ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದು ಕೂದಲು ಹಾಗೂ ತಲೆಬುರುಡೆಯನ್ನು ತೇವಾಂಶ ಹಾಗೂ ಮೊಶ್ಚಿರೈಸ್ ಆಗಿಡುವುದು.
ಬೇಕಾಗುವ ಸಾಮಗ್ರಿಗಳು
- ½ ಕಪ್ ತೆಂಗಿನೆಣ್ಣೆ
- ¼ ಕಪ್ ಜೇನುತುಪ್ಪ
ತಯಾರಿಸುವ ವಿಧಾನ
ಶುದ್ಧವಾಗಿರುವ ಪಿಂಗಾಣಿಯಲ್ಲಿ ತೆಂಗಿನೆಣ್ಣೆ ಮತ್ತು ಜೇನುತುಪ್ಪ ಹಾಕಿಕೊಳ್ಳಿ. ತೆಂಗಿನೆಣ್ಣೆಯು ಗಟ್ಟಿಯಾಗಿದ್ದರೆ ಅದನ್ನು ಬಿಸಿಯಲ್ಲಿ ಕರಗಿಸಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಕೂದಲು ಎಷ್ಟು ಉದ್ದವಿದೆ ಎನ್ನುವ ಮೇಲೆ ನೀವು ಹಾಕುವ ಪ್ರಮಾಣವು ನಿರ್ಧಾರವಾಗುವುದು. ಬ್ರಷ್ ಬಳಸಿಕೊಂಡು ಕೂದಲಿಗೆ ಮಾಸ್ಕ್ ನ್ನು ಸರಿಯಾಗಿ ಹಚ್ಚಿಕೊಳ್ಳಿ. ಕೂದಲನ್ನು ಸಂಪೂರ್ಣವಾಗಿ ಈ ಮಾಸ್ಕ್ ನಿಂದ ಮುಚ್ಚಿಕೊಳ್ಳಿ. ಮಲಗುವ ಮೊದಲು ಕೂದಲನ್ನು ಬನ್ ಆಕಾರದಲ್ಲಿ ಕಟ್ಟಿಕೊಂಡು ಅದಕ್ಕೆ ಶಾವರ್ ಕ್ಯಾಪ್ ಅಥವಾ ಮೆತ್ತಗಿನ ಬಟ್ಟೆ ಸುತ್ತಿಕೊಳ್ಳಿ. ರಾತ್ರಿ ನೀವು ಈ ಮಾಸ್ಕ್ ನ್ನು ಹಾಗೆ ಬಿಡಿ. ಬೆಳಗ್ಗೆ ಎದ್ದ ಬಳಿಕ ಸಲ್ಫೇಟ್ ರಹಿತ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.
ತೆಂಗಿನೆಣ್ಣೆ ಮತ್ತು ಮೊಸರು
ತೆಂಗಿನೆಣ್ಣೆಯು ಕೂದಲಿನ ಬೆಳವಣಿಗೆ ಉತ್ತೇಜಿಸಲು ಪ್ರಮುಖ ಪಾತ್ರ ವಹಿಸುವುದು. ಮೊಸರಿನಲ್ಲಿ ಇರುವಂತಹ ಕಿಣ್ವಗಳು ಕೂದಲಿಗೆ ಪೋಷಣೆ ಹಾಗೂ ಮೊಶ್ಚಿರೈಸ್ ನೀಡುವುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಪ್ರೋಟೀನ್ ಮತ್ತು ಕೊಬ್ಬು ಕೂದಲಿನ ತುದಿ ಒಡೆಯುವುದನ್ನು ತಪ್ಪಿಸುವುದು. ತಲೆಬುರುಡೆಯ ಪಿಎಚ್ ಮಟ್ಟವನ್ನು ಕಾಪಾಡುವಲ್ಲಿ ಮೊಸರು ಪ್ರಮುಖ ಪಾತ್ರ ನಿರ್ವಹಿಸುವುದು.
ಬೇಕಾಗುವ ಸಾಮಗ್ರಿಗಳು
- ½ ಕಪ್ ಮೊಸರು
- 2 ಚಮಚ ತೆಂಗಿನೆಣ್ಣೆ
Most Read: ಕೂದಲು ದಪ್ಪವಾಗಿ ಬೆಳೆಯಬೇಕೇ? ಮೊಟ್ಟೆ, ತೆಂಗಿನೆಣ್ಣೆ ಹೇರ್ ಮಾಸ್ಕ್ ಬಳಸಿ
ತಯಾರಿಸುವ ವಿಧಾನ
ಮೊಸರು ಹಾಗೂ ತೆಂಗಿನೆಣ್ಣೆಯನ್ನು ಒಂದು ಶುದ್ಧವಾಗಿರುವಂತಹ ಪಿಂಗಾಣಿಯಲ್ಲಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಮೃಧುವಾಗುವ ತನಕ ಸರಿಯಾಗಿ ಮಿಶ್ರಣ ಮಾಡಿ. ಈಗ ಕೂದಲನ್ನು ಎರಡು ವಿಭಾಗ ಮಾಡಿಕೊಂಡು ಕೂದಲಿನ ಎಲ್ಲಾ ಭಾಗಗಳಿಗೆ ಸರಿಯಾಗಿ ಇದನ್ನು ಹಚ್ಚಿಕೊಳ್ಳಿ. ಕೂದಲಿಗೆ ಶಾವರ್ ಕ್ಯಾಪ್ ಹಾಕಿಕೊಂಡು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ನಿಮಗೆ ಬೇಕಿರುವಂತಹ ಶಾಂಪೂ ಬಳಸಿಕೊಂಡು ಸಾಮಾನ್ಯ ನೀರಿನಿಂದ ಕೂದಲು ತೊಳೆಯಿರಿ.



Click it and Unblock the Notifications

