Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ತಿಂಗಳೊಳಗೆ ಕೂದಲ ಸಮಸ್ಯೆಯ ಪರಿಹಾರಕ್ಕೆ ತೆಂಗಿನೆಣ್ಣೆಯ ಮೊರೆ ಹೋಗಿ
ವಿಟಮಿನ್ ಇ ಸಮೃದ್ಧವಾಗಿರುವ ಎಣ್ಣೆಗಳಲ್ಲಿ ತೆಂಗಿನೆಣ್ಣೆಯೂ ಒಂದು. ಆರೋಗ್ಯದ ವಿಚಾರದಲ್ಲಿ ಇದನ್ನು ಬಹಳ ಅತ್ಯುತ್ತಮವಾದ ಎಣ್ಣೆ ಎಂದು ಕರೆಯುತ್ತಾರೆ. ಚಿಕ್ಕಪುಟ್ಟ ಗಾಯಗಳನ್ನು ಗುಣಪಡಿಸುವುದರಿಂದ ಹಿಡಿದು ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಸಹ ನಿಯಂತ್ರಿಸುವ ಸಾಮಥ್ರ್ಯವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರಾವಳಿ ತೀರದ ಜನರು ತೆಂಗಿನೆಣ್ಣೆಯನ್ನು ದಿನಬಳಕೆಗೆ ಉಪಯೋಗಿಸುತ್ತಾರೆ. ಕುರುಕಲು ತಿಂಡಿಗಳನ್ನು ತಯಾರಿಸಲು, ಸಿಹಿ ಖಾದ್ಯಗಳಿಗೆ, ಆಹಾರ ಪದಾರ್ಥಗಳ ತಯಾರಿ ಹಾಗೂ ಇನ್ನಿತರ ಔಷಧದ ಉಪಯೋಗಕ್ಕಾಗಿಯೂ ಬಳಸುತ್ತಾರೆ.
ದೇಹದ ಮಸಾಜ್, ಕೂದಲ ಆರೈಕೆ, ಶಿಶುಗಳ ಸ್ನಾನಕ್ಕೆ ಹೀಗೆ ಅನೇಕ ಬಗೆಯ ಉಪಯೋಗಕ್ಕೆ ಬಳಸುತ್ತಾರೆ. ಇದರ ಬಳಕೆಯಿಂದ ಸೌಂದರ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಸಹ ನಿವಾರಿಸಿ ಕೊಳ್ಳಬಹುದು. ಚರ್ಮದ ಮೇಲಿನ ಗುಳ್ಳೆಗಳು, ಉರಿ, ಮೊಡವೆ, ಸೀಳು, ಕಲೆ ಹೀಗೆ ಅನೇಕ ಸಮಸ್ಯೆಗಳಿಗೆ ದಿವ್ಯ ಔಷಧ. ತೆಂಗಿನೆಣ್ಣೆಯನ್ನು ನಿತ್ಯವು ಗಣನೀಯವಾಗಿ ಕೇಶ ಆರೈಕೆಗೆ ಬಳಸಿದರೆ ಕೂದಲ ಸಮಸ್ಯೆಗಳು ಮಾಯವಾಗುತ್ತವೆ.
ಇದರಲ್ಲಿರುವ ಆರೋಗ್ಯಕರವಾದ ಅಂಶಗಳ ಜೊತೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಬಳಸಿದರೆ ಇದರ ಶಕ್ತಿಯು ಇನ್ನಷ್ಟು ದ್ವಿಗುಣವಾಗುತ್ತದೆ. ಇವು ನೈಸರ್ಗಿಕ ಉತ್ಪನ್ನಗಳೇ ಆಗಿರುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗದು. ಹಾಗಾದರೆ ಇನ್ನೇಕೆ ತಡ? ನಿಮಗೂ ನಿಮ್ಮ ಕೇಶರಾಶಿಯ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುವ ತವಕ ಇದ್ದರೆ ಈ ಮುಂದೆ ನೀಡಿರುವ ಔಷದೋಪಚಾರಗಳ ಪರಿಯನ್ನು ಅರಿಯಿರಿ...

ತೆಂಗಿನ ಎಣ್ಣೆ + ಮೊಟ್ಟೆಯ ಬಿಳಿಭಾಗ
- ಒಂದು ಬೌಲ್‍ನಲ್ಲಿ ಮೊಟ್ಟೆಯ ಬಿಳಿಭಾಗ ಹಾಗೂ 2 ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ.
- ಮಿಶ್ರಗೊಳಿಸಿದ ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
- 30 ನಿಮಿಷಗಳ ಕಾಲ ಆರಲು ಬಿಟ್ಟು, ನಂತರ ಮೃದುವಾದ ಶಾಂಪೂಗಳನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಿ.
- ವಾರದಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸಿದರೆ ಕೇಶರಾಶಿಯನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು.

ತೆಂಗಿನ ಎಣ್ಣೆ + ಬೆಣ್ಣೆ ಹಣ್ಣು
- ಚೆನ್ನಾಗಿ ಹಣ್ಣಾದ ಬೆಣ್ಣೆ ಹಣ್ಣಿನ ತಿರುಳು ಮತ್ತು 2 ಟೇಬಲ್ ಚಮಚ ತೆಂಗಿನ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
- 30 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶಾಂಪುಗಳನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಿ.
- ತಿಂಗಳಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸಿದರೆ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ತೆಂಗಿನ ಎಣ್ಣೆ + ಜೇನುತುಪ್ಪ
- 2 ಟೇಬಲ್ ಚಮಚ ತೆಂಗಿನ ಎಣ್ಣೆ ಮತ್ತು 2 ಟೀ ಚಮಚ ಜೇನುತುಪ್ಪ ಸೇರಿಸಿ ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
- 20-25 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.
- ವಾರಕ್ಕೆ ನಿಯಮಿತವಾಗಿ ಅನ್ವಯಿಸುವುದರಿಂದ ಮೃದು ಹಾಗೂ ದೃಢವಾದ ಕೇಶರಾಶಿಯನ್ನು ಪಡೆಯಬಹುದು.

ತೆಂಗಿನ ಎಣ್ಣೆ+ ಬಾಳೆಹಣ್ಣು
- ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಕಿವುಚಿ, 2 ಟೇಬಲ್ ಚಮಚ ತೆಂಗಿನ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
- 15 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶಾಂಪುಗಳನ್ನು ಬಳಸಿ ಸ್ವಚ್ಛಗೊಳಿಸಿ.
- ವಾರಕ್ಕೆ ನಿಯಮಿತವಾಗಿ ಅನ್ವಯಿಸುವುದರಿಂದ ಕೇಶರಾಶಿಯ ಬೆಳವಣಿಗೆಯನ್ನು ಉತ್ತಮ ಪಡಿಸಬಹುದು.

ತೆಂಗಿನ ಎಣ್ಣೆ + ಹಾಲು
- 2 ಟೇಬಲ್ ಚಮಚ ತೆಂಗಿನ ಎಣ್ಣೆ ಮತ್ತು 1 ಟೇಬಲ್ ಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
- ಅನ್ವಯಿಸಿದ ಮಿಶ್ರಣ ಒಣಗಿದ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶಾಂಪುಗಳನ್ನು ಬಳಸಿ ಸ್ವಚ್ಛಗೊಳಿಸಿ.
- ವಾರಕ್ಕೆ ನಿಯಮಿತವಾಗಿ ಅನ್ವಯಿಸುವುದರಿಂದ ಶುಷ್ಕ ಕೇಶರಾಶಿಯು ಆರೋಗ್ಯ ಪೂರ್ಣ ಬೆಳವಣಿಗೆ ಕಾಣುವುದು.

ತೆಂಗಿನ ಎಣ್ಣೆ+ ಆರ್ಗಾನ್ ಎಣ್ಣೆ
- 1 ಟೀ ಚಮಚ ಆರ್ಗಾನ್ ಎಣ್ಣೆಗೆ 2 ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
- ಅನ್ವಯಿಸಿ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶಾಂಪುಗಳನ್ನು ಬಳಸಿ ಸ್ವಚ್ಛಗೊಳಿಸಿ.
- ವಾರಕ್ಕೆ ಒಮ್ಮೆ ನಿಯಮಿತವಾಗಿ ಅನ್ವಯಿಸುವುದರಿಂದ ಶುಷ್ಕ ಕೇಶರಾಶಿಯ ಆರೋಗ್ಯದಿಂದ ಕೂಡಿರುವುದು.

ತೆಂಗಿನ ಎಣ್ಣೆ+ಆಪಲ್ ಸೈಡರ್ ವಿನೆಗರ್
- 2-3 ಟೇಬಲ್ ಚಮಚ ತೆಂಗಿನ ಎಣ್ಣೆ ಮತ್ತು 1/2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
- ಅನ್ವಯಿಸಿ 30 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶಾಂಪುಗಳನ್ನು ಬಳಸಿ ಸ್ವಚ್ಛಗೊಳಿಸಿ.
- ನಿಯಮಿತವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಶುಷ್ಕ ಕೇಶರಾಶಿಯು ಆರೋಗ್ಯದಿಂದ ಕೂಡಿರುವುದು.

ತೆಂಗಿನ ಎಣ್ಣೆ+ ವಿಟಮಿನ್ ಇ ಎಣ್ಣೆ
- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ತೆಗೆದುಕೊಳ್ಳಿ. ಬಳಿಕ 2 ಟೇಬಲ್ ಚಮಚ ತೆಂಗಿನ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇರತ ಭಾಗಗಳಿಗೆ ಅನ್ವಯಿಸಿ ಮಸಾಜ್ ಮಾಡಿ.
- 40-45 ನಿಮಿಷಗಳ ಕಾಲ ಆರಲು ಬಿಟ್ಟು, ಬಳಿಕ ಬೆಚ್ಚಗಿನ ನೀರು ಮತ್ತು ಶಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ.
- ವಾರದಲ್ಲಿ ಒಮ್ಮೆ ಈ ಆರೈಕೆ ಮಾಡುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ತೆಂಗಿನ ಎಣ್ಣೆ + ಬೆಣ್ಣೆ
- 2-3 ಟೇಬಲ್ ಚಮಚ ತೆಂಗಿನ ಎಣ್ಣೆಗೆ 2 ಟೀ ಚಮಚ ಬೆಣ್ನೆಯನ್ನು ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇರತ ಭಾಗಗಳಿಗೆ ಅನ್ವಯಿಸಿ ಮಸಾಜ್ ಮಾಡಿ.
- 20-25 ನಿಮಿಷಗಳ ಕಾಲ ಆರಲು ಬಿಟ್ಟು, ಬಳಿಕ ಬೆಚ್ಚಗಿನ ನೀರು ಮತ್ತು ಶಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ.
- ಪ್ರತಿ ವಾರ ನಿಯಮಿತವಾಗಿ ಅನ್ವಯಿಸುವುದರಿಂದ ಆರೋಗ್ಯ ಪೂರ್ಣ ಕೇಶರಾಶಿಯನ್ನು ಹೊಂದಬಹುದು.

ತೆಂಗಿನ ಎಣ್ಣೆ ಆಲಿವ್ ಎಣ್ಣೆ ಗ್ರೀನ್ ಟೀ
- ಒಂದು ಬೌಲ್‍ನಲ್ಲಿ 2 ಟೇಬಲ್ ಚಮಚ ತೆಂಗಿನ ಎಣ್ಣೆ, 1 ಟೇಬಲ್ ಚಮಚ ಆಲಿವ್ ಎಣ್ಣೆ+ 2 ಟೀ ಚಮಚ ಸಕ್ಕರೆ ರಹಿತವಾದ ಗ್ರೀನ್ ಟೀ ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇರತ ಭಾಗಗಳಿಗೆ ಅನ್ವಯಿಸಿ.
- ಒಂದು ಗಂಟೆಯ ಬಳಿಕ ಬೆಚ್ಚಗಿನ ನೀರು ಮತ್ತು ಶಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ.



Click it and Unblock the Notifications











