Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ನೈಸರ್ಗಿಕ ಹೇರ್ ಪ್ಯಾಕ್ - ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ...
ಇಂದಿನ ದಿನಗಳಲ್ಲಿ ಕೂದಲು ಉದುರುವುದು, ಕೂದಲು ತೆಳ್ಳಗೆ ಆಗುವುದು ಮತ್ತು ತಲೆ ಬುರುಡೆಯಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗಳು ನಮ್ಮ ಸಂಪೂರ್ಣ ತಲೆಯನ್ನೇ ಹಾಳುಗೆಡವುತ್ತದೆ. ಒತ್ತಡ, ಸರಿಯಾಗಿಲ್ಲದ ಜೀವನಶೈಲಿ, ಅನಾರೋಗ್ಯಕರ ಆಹಾರ, ನೀರು ಮತ್ತು ಕೂದಲಿನ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು ಕೂದಲಿನ ಸಮಸ್ಯೆಗಳಿಗೆ ಕಾರಣವಾಗಿದೆ.
ಸಂಪೂರ್ಣವಾಗಿ ನೀವು ಬೋಳು ತಲೆಯವರು ಆಗುವ ಮೊದಲು ಇದಕ್ಕೆ ನೈಸರ್ಗಿಕವಾದ ಕೆಲವೊಂದು ಔಷಧಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು.... ಚಿಂತಿಸದಿರಿ ಇವೆಲ್ಲಾ ಸಮಸ್ಯೆಗೆ ಮನೆಯಲ್ಲೇ ತಯಾರಿಸಿದ ಕೂದಲಿನ ಪ್ಯಾಕ್‌ನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ. ಈ ಕೂದಲಿನ ಪ್ಯಾಕ್‌ಗೆ ಬಳಸುವ ಕೆಲವೊಂದು ಸಾಮಗ್ರಿಗಳು ತುಂಬಾ ಪ್ರಯೋಜನಕಾರಿ. ಇದು ಕೂದಲಿನ ಆರೈಕೆ ಮಾಡುವುದರೊಂದಿಗೆ ಕೂದಲು ದಷ್ಟಪುಷ್ಟವಾಗಿ ಬೆಳೆಯಲು ನೆರವಾಗುವುದು....

ಪಪ್ಪಾಯಿ+ಮೊಸರು ಬೆರೆಸಿ ಮಾಡಿದ ಹೇರ್ ಪ್ಯಾಕ್
ಒಂದು ಚೆನ್ನಾಗಿ ಹಣ್ಣಾದ ಪಪ್ಪಾಯಿ ಹಣ್ಣನ್ನು ರಬ್ಬಿಕೊಂಡು, ಅದಕ್ಕೆ ಒಂದು ಕಪ್ ಮೊಸರು ಸೇರಿಸಿಕೊಂಡು, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಚೆನ್ನಾಗಿ ಲೇಪಿಸಿ. 30 ನಿಮಿಷ ಬಿಟ್ಟು, ನಂತರ ಇದನ್ನು ತೊಳೆಯಿರಿ. ಇದು ಒಡೆದ ಮತ್ತು ಹಾಳಾದ ಕೂದಲಿಗೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.

ಮೊಟ್ಟೆ, ಲಿ೦ಬೆ, ಹಾಗೂ ಆಲಿವ್ ಎಣ್ಣೆ
ಬಟ್ಟಲೊ೦ದರಲ್ಲಿ ಮೊಟ್ಟೆಯೊ೦ದನ್ನು ಒಡೆದು, ಅದಕ್ಕೆ ಅರ್ಧಹೋಳಿನಷ್ಟು ಲಿ೦ಬೆಯ ರಸವನ್ನು ಬೆರೆಸಿರಿ. ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಈ ಮಿಶ್ರಣಕ್ಕೆ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಪುನ: ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವೆಲ್ಲವೂ ಪರಸ್ಪರ ಚೆನ್ನಾಗಿ ಬೆರೆತುಕೊ೦ಡ ಬಳಿಕ, ಮಿಶ್ರಣವನ್ನು ಕೇಶರಾಶಿಗೆ ಲೇಪಿಸಿಕೊಳ್ಳಿರಿ.ನೆತ್ತಿಯನ್ನೂ ಹಾಗೂ ಕೂದಲ ಎಳೆಗಳನ್ನೂ ಸಮನಾಗಿ ಆವರಿಸಿಕೊಳ್ಳುವ೦ತೆ ಹಚ್ಚಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಹಚ್ಚಿಕೊ೦ಡ ಬಳಿಕ ಅರ್ಧಘ೦ಟೆಯ ಕಾಲ ಅದನ್ನು ಹಾಗೆಯೇ ಇರಗೊಡಿರಿ. ಬಳಿಕ ತಣ್ಣೀರಿನಿ೦ದ ಕೇಶರಾಶಿಯನ್ನು ತೊಳೆದುಕೊ೦ಡು ತದನ೦ತರ ಶಾ೦ಪೂವಿನಿ೦ದ ತೊಳೆಯಿರಿ.

ಸಾಸಿವೆ ಎಣ್ಣೆ+ ದಾಲ್ಚಿನ್ನಿ ಪುಡಿ
*ಸಾಸಿವೆ ಎಣ್ಣೆ- ಎರಡು ಟೇಬಲ್ ಚಮಚ
*ದಾಲ್ಚಿನ್ನಿ ಪುಡಿ- 2 ಟೀಚಮಚ
ತಯಾರಿಸುವ ಮತ್ತು ಬಳಸುವ ವಿಧಾನ
•ಮೇಲೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಸಣ್ಣ ಬೌಲ್‌ಗೆ ಹಾಕಿಕೊಂಡು ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಸರಿಯಾಗಿ ಕಲಸಿಕೊಳ್ಳಿ. •ಇನ್ನು ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಅದರಲ್ಲೂ ತಲೆಬುರುಡೆಗೆ ಹೆಚ್ಚು ಹಚ್ಚಿಕೊಳ್ಳಿ.
•ಕೆಲವು ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿಕೊಳ್ಳಿ.
•25 ನಿಮಿಷಗಳ ಕಾಲ ಕೂದಲನ್ನು ಹಾಗೆ ಬಿಡಿ.
•ನಂತರ ಕೂದಲನ್ನು ಉಗುರುಬೆಚ್ಚಗಿನ ನೀರು ಹಾಗೂ ಶಾಂಪೂನಿಂದ ತೊಳೆಯಿರಿ, ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಮೂರು ಬಾರಿ ಮಾಡಿ......

ಮದರಂಗಿ ಮತ್ತು ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆ ಮತ್ತು ಮದರಂಗಿಯ ಮಾಸ್ಕ್ ಕೂದಲಿನ ಬೆಳವಣಿಗೆ ಹಾಗೂ ಕೂದಲಿನ ಬುಡದಲ್ಲಿರುವ ಕಿರುಚೀಲಗಳನ್ನು ಬಲಗೊಳಿಸುತ್ತದೆ. ಒಂದು ಕಪ್ ಮದರಂಗಿ ಹುಡಿಗೆ ಸ್ವಲ್ಪ ಸಾಸಿವೆ ಎಣ್ಣೆ ಹಾಕಿಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಒಂದು ಚಮಚ ನಿಂಬೆ ರಸ ಮತ್ತು ಎರಡು ಚಮಚ ಮೊಸರು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಂಪಾದ ನೀರಿನಿಂದ ತೊಳೆಯಿರಿ.

ಮೊಟ್ಟೆ ಲೋಳೆಯ ಪ್ಯಾಕ್
ಒಂದು ಮೊಟ್ಟೆಯ ಲೋಳೆ ತೆಗೆದು ಅದಕ್ಕೆ ತೆಂಗಿನ ಹಾಲು ಮಿಶ್ರಣ ಮಾಡಿಕೊಳ್ಳಿ. ವಿಟಮಿನ್ ಇ ಕ್ಯಾಪ್ಸೂಲ್ ನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಮೊಟ್ಟೆಯ ಬಿಳಿ ಭಾಗವನ್ನು ಹಾಕಿಕೊಳ್ಳಬೇಡಿ. ಇದರಿಂದ ತಲೆಬುರುಡೆ ಒಣಗುವುದು ಮತ್ತು ತಲೆಹೊಟ್ಟು ನಿರ್ಮಾಣವಾಗಬಹುದು. ಒಂದು ಬ್ರಷ್ ಅಥವಾ ಹತ್ತಿ ಉಂಡೆ ಬಳಸಿಕೊಂಡು ಈ ಮಾಸ್ಕ್ ಅನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿ. 45 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಪಿಎಚ್ ಮಟ್ಟ ನಿಯಂತ್ರಣದಲ್ಲಿರುವ ಶಾಂಪೂ ಹಾಕಿ ತೊಳೆಯಿರಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ ಪ್ಯಾಕ್
ಕೂದಲಿನ ಮರುನಿರ್ಮಾಣವಾಗಲು ಸಲ್ಫರ್ ಒಳ್ಳೆಯ ಕೆಲಸ ಮಾಡುವುದು. ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ನಲ್ಲಿ ಸಲ್ಫರ್ ಇದೆ. ಬೆಳ್ಳುಳ್ಳಿ ಮತ್ತು ಈರುಳ್ಳಿ ಪೇಸ್ಟ್ ಮಾಡಿ ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಕೂದಲು ಒಣಗಿದ್ದರೆ ಪೇಸ್ಟ್ ಗೆ ಸ್ವಲ್ಪ ಹರಳೆಣ್ಣೆ ಹಾಕಿ ಮಿಶ್ರಣ ಮಾಡಿ. ಕೂದಲಿಗೆ ಈ ಪ್ಯಾಕ್ ಹಾಕಿಕೊಳ್ಳುವ ಮೊದಲು ಹರಳೆಣ್ಣೆ ಮತ್ತು ತೆಂಗಿನೆಣ್ಣೆಯ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಬಹುದು. ಈರುಳ್ಳಿ ಮತ್ತು ಬೆಳ್ಳುಳ್ಳಿಯ ರಸವು ಅತಿಯಾಗಿದ್ದರೆ ಅದನ್ನು ತಲೆಬುರುಡೆಗೆ ಸರಿಯಾಗಿ ಉಜ್ಜಿಕೊಳ್ಳಿ. ಈ ಪ್ಯಾಕ್ ನ್ನು ಎಷ್ಟು ತಲೆಯಲ್ಲಿ ಇಡಲು ಸಾಧ್ಯವೋ ಅಷ್ಟು ಹೊತ್ತು ಇಡಿ. ಕಡಿಮೆಯೆಂದರೆ 45 ನಿಮಿಷ ಕಾಲ ತಲೆಯಲ್ಲಿರಲಿ.

ಕಡಲೆಹಿಟ್ಟು ಮತ್ತು ಜೇನುತುಪ್ಪದ ಪ್ಯಾಕ್
ಸಾವಯವವಾಗಿರುವ ತಾಜಾ ಜೇನುತುಪ್ಪವನ್ನು ಎರಡು ಚಮಚ ಕಡಲೆಹಿಟ್ಟಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಹೆಚ್ಚು ದಪ್ಪ ಅಥವಾ ತೆಳು ಮಾಡಿಕೊಳ್ಳಬೇಡಿ. ಸರಿಯಾದ ಪ್ರಮಾಣದಲ್ಲಿ ಇದನ್ನು ಮಿಶ್ರಣ ಮಾಡಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಂಡು 45 ನಿಮಿಷ ಕಾಲ ಹಾಗೆ ಬಿಡಿ. ಇದನ್ನು ನಿಯಮಿತವಾಗಿ ಮಾಡುತ್ತಾ ಇದ್ದರೆ ಕಾಂತಿಯುತ ಕೂದಲು ನಿಮ್ಮದಾಗುವುದು. ಕೂದಲು ಮರುಬೆಳವಣಿಗೆಗೆ ಇದು ನೆರವಾಗುವುದು.

ಹಣ್ಣಾಗಿರುವ ಬಾಳೆಹಣ್ಣು ಮತ್ತು ಮಯೋನಿಸ್ ಪ್ಯಾಕ್
ತುಂಬಾ ಹಣ್ಣಾಗಿರುವ ಬಾಳೆಹಣ್ಣು ಮತ್ತು ಮಯೋನಿಸ್ ಸೇರಿಸಿಕೊಂಡು ಅದನ್ನು ಒಂದು ಹದಕ್ಕೆ ಬರುವ ತನಕ ರುಬ್ಬಿಕೊಳ್ಳಿ. ಈ ಪೇಸ್ಟ್ ಗೆ ಕೆಲವು ಹನಿ ತೆಂಗಿನೆಣ್ಣೆ ಅಥವಾ ಹರಳೆಣ್ಣೆ ಅಥವಾ ಆಲಿವ್ ತೈಲ ಹಾಕಿಕೊಳ್ಳಿ. ಇದಕ್ಕೆ ವಿಟಮಿನ್ ಇ ಎಣ್ಣೆಯನ್ನು ಹಾಕಿಕೊಳ್ಳಬಹುದು. ಕೂದಲು ಹಾಗೂ ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ಸುಮಾರು 45 ನಿಮಿಷ ಕಾಲ ಹಾಗೆ ಬಿಡಿ. ಒಣ ಹಾಗೂ ಹಾನಿಗೊಂಡಿರುವ ಕೂದಲಿಗೆ ಇದು ತುಂಬಾ ಒಳ್ಳೆಯದು. ನಿಯಮಿತವಾಗಿ ಇದನ್ನು ಬಳಸಿದರೆ ಕೂದಲು ಬೇಗನೆ ಬೆಳೆಯುವುದು. ಮೇಲೆ ತಿಳಿಸಿರುವಂತಹ ಹೇರ್ ಪ್ಯಾಕ್ ಗಳನ್ನು ಬಳಸಿಕೊಂಡು ಸುಂದರ ಹಾಗೂ ಕಾಂತಿಯುತ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.



Click it and Unblock the Notifications











