Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಕೂದಲುದುರುತ್ತಿದೆಯೇ? ಒಮ್ಮೆ ಈ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ..
ಇಂದಿನ ದಿನಗಳಲ್ಲಿ ವಯಸ್ಸು ಇಪ್ಪತ್ತೈದು ಎಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತ್ತದೆ! ಹಿಂದಿನ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಇಂದು ಹಾಗಲ್ಲ, ಹದಿಹರೆಯದವರ ಕೂದಲು ಉದುರಲು ಆರಂಭವಾಗಿದ್ದು, ಇದು ದಿನೇ ದಿನೇ ಹೆಚ್ಚುತ್ತಿದೆ.
ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಮಾಲಿನ್ಯವನ್ನು ಇದಕ್ಕೆ ದೂಷಿಸಬಹುದು. ಈ ಕಾರಣಗಳು ಮಾತ್ರವಲ್ಲದೆ ಕ್ರಮಬದ್ಧವಲ್ಲದ ಆಹಾರಕ್ರಮ, ಕಲವು ಔಷಧಿಗಳ ಅಡ್ಡ ಪರಿಣಾಮ, ವಿಟಮಿನ್ ಮತ್ತು ಖನಿಜಾಂಶ ಕೊರತೆಯಿಂದ ಕೂಡ ಕೂದಲು ಉದುರುತ್ತದೆ. ಹಾಗಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರಗಳಿಲ್ಲವೇ...?
ಖಂಡಿತವಾಗಿಯೂ ಇದೆ, ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ಸರಳವಾದ ನೈಸರ್ಗಿಕ ಮನೆಮದ್ದನ್ನು ಸೂಚಿಸಿದ್ದು, ಇದು ಯಾವುದೇ ಅಡ್ಡಪರಿಣಾಮಗಳು ಬೀರದೇ ಅತ್ಯ೦ತ ತ್ವರಿತಗತಿಯಲ್ಲಿ ಕೂದಲು ಉದುರುವುದನ್ನು ಪರಿಹರಿಸಬಲ್ಲ ಶಕ್ತಿ ತನ್ನಲ್ಲಿ ಅಡಗಿಸಿಕೊಂಡಿದೆ, ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ....

ತೆಂಗಿನ ಎಣ್ಣೆ
ತೆಂಗಿನಎಣ್ಣೆಯು ಮನೆ ಮದ್ದುಗಳಲ್ಲಿ ಅಗ್ರ ಸ್ಥಾನ ಪಡೆದ ಪದಾರ್ಥವಾಗಿದೆ. ಇದು ನಿಮ್ಮ ಕೂದಲಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕರಿಸುವುದರ ಜೊತೆಗೆ ಅದನ್ನು ಕಂಡೀಶನ್ ಅನ್ನು ಸಹ ಮಾಡುತ್ತದೆ. ಇದರಲ್ಲಿ ಅವಶ್ಯಕವಾದ ಕೊಬ್ಬುಗಳು, ಖನಿಜಗಳು ಮತ್ತು ಪ್ರೋಟಿನ್‌ಗಳು ಜೊತೆಗೆ ಇದರಲ್ಲಿರುವ ಪೊಟಾಶಿಯಂ ಮತ್ತು ಕಬ್ಬಿಣಾಂಶವು ಸಹ ಕೂದಲು ಒಡೆಯುವಿಕೆಯನ್ನು ತಡೆಯುತ್ತವೆ. ಕೂದಲು ಉದುರುವಿಕೆಯನ್ನು ತಡೆಯಲು ತೆಂಗಿನ ಎಣ್ಣೆ ಅಥವಾ ತೆಂಗಿನ ಹಾಲನ್ನು ಬಳಸಿ.

ಬಳಸುವ ವಿಧಾನಗಳು
*ಸ್ವಲ್ಪ ಹೊತ್ತು ತೆಂಗಿನ ಎಣ್ಣೆಯನ್ನು ಕಾಯಿಸಿ ಮತ್ತು ಅದನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೆ ಲೇಪಿಸಿ ಮಸಾಜ್ ಮಾಡಿ.
*ಒಂದು ಗಂಟೆ ಬಿಟ್ಟು ತೊಳೆಯಿರಿ. ಅಥವಾ ಒಂದು ತೆಂಗಿನಕಾಯಿಯನ್ನು ತುರಿದುಕೊಳ್ಳಿ ಮತ್ತು ಅದರಿಂದ ಹಾಲನ್ನು ತೆಗೆದು, ಒಂದು ಲೀಟರ್ ನೀರಿನಲ್ಲಿ ಬೆರೆಸಿಕೊಳ್ಳಿ.
*ತೆಂಗಿನ ಎಣ್ಣೆಯನ್ನು ಕೂದಲು ತೆಳ್ಳಗಾದ ಭಾಗದಲ್ಲಿ ಅಥವಾ ಬೊಕ್ಕ ತಲೆ ಕಾಣಿಸಿಕೊಂಡ ಭಾಗದಲ್ಲಿ ಲೇಪಿಸಿ.
*ರಾತ್ರಿಯಿಡೀ ಇದನ್ನು ನೆನೆಯಲು ಬಿಡಿ ಮತ್ತು ಬೆಳಗ್ಗೆ ಎದ್ದು ಸ್ನಾನ ಮಾಡಿ.

ಮೆಹಂದಿ
ಇದನ್ನು ಕೂದಲಿಗೆ ಬಣ್ಣ ನೀಡಲು ಅಥವಾ ಕಂಡೀಶನರ್ ಆಗಿ ಬಳಸಲಾಗುತ್ತದೆ. ಆದರೆ ಮೆಹಂದಿಯಲ್ಲಿ ಇವೆರಡರ ಜೊತೆಗೆ ಕೂದಲನ್ನು ಬಲಗೊಳಿಸುವ ಅಂಶ ಸಹ ಇರುತ್ತದೆ.
ಬಳಸುವ ವಿಧಾನಗಳು
*250 ಮಿ.ಲೀ ಸಾಸಿವೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ 60 ಗ್ರಾಂ ತೊಳೆದು ಒಣಗಿಸಿದ ಮೆಹಂದಿ ಎಲೆಗಳನ್ನು ಹಾಕಿಕೊಳ್ಳಿ. *ಈಗ
ಈ ಪಾತ್ರೆಯನ್ನು ಬೇಯಿಸಿ, ಎಲೆಗಳು ಬೆಂದು ಎಣ್ಣೆಯನ್ನು ಬಿಡುತ್ತವೆ.
*ಈ ಎಣ್ಣೆಯಿಂದ ನಿಮ್ಮ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಹಾಗು ಉಳಿದ ಎಣ್ಣೆಯನ್ನು ಬಾಟಲಿಯಲ್ಲಿ ಹಾಕಿ ಇಡಿ.
*ಮೆಹಂದಿ ಪೌಡರ್ ಅನ್ನು ಮೊಸರಿನ ಜೊತೆಗೆ ಸೇರಿಸಿ ಒಂದು ಹೇರ್ ಪ್ಯಾಕ್ ಸಹ ತಯಾರಿಸಿಕೊಳ್ಳಬಹುದು.ಇದನ್ನು ನೆತ್ತಿಗೆ ಹಾಗು ಕೂದಲಿಗೆ ಲೇಪಿಸಿ
ಒಂದು ಗಂಟೆ ಕಾಲ ಬಿಡಿ.
*ಒಂದು ವೇಳೆ ನಿಮಗೆ ಸುಂದರ ಕೂದಲು ಬೇಕಾದಲ್ಲಿ ಈ ಮೆಹಂದಿ ಪ್ಯಾಕ್ ಅನ್ನು ತಪ್ಪದೆ ಪ್ರಯೋಗಿಸಿ.

ದಾಸವಾಳ ಹೂವಿನ ದಳಗಳು
*ದಾಸವಾಳದ ಹೂವಿನ ದಳಗಳು ಮತ್ತು ಎಲೆಗಳನ್ನು ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಸಮ ಪ್ರಮಾಣದ ತೆಂಗಿನ ಎಣ್ಣೆ ಮತ್ತು ಕಂಪು ಪದಾರ್ಥದ ಎಣ್ಣೆಯನ್ನು ಇದಕ್ಕೆ ಹಾಕಿಕೊಳ್ಳಿ. ಪಾರದರ್ಶಕವಾಗಿರುವ ಬಾಟಲಿಯಲ್ಲಿ ಇದನ್ನು ಹಾಕಿಡಿ.
*ಎಣ್ಣೆಯು ದಾಸವಾಳದ ಎಲೆ ಹಾಗೂ ಹೂವಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ರಾತ್ರಿಯಿಡಿ ಇದನ್ನು ಹಾಗೆಯೇ ಇಡಿ.
*ಮರುದಿನ ಬೆಳಿಗ್ಗೆ ಬಾಟಲಿಯಲ್ಲಿನ ಸ್ವಲ್ಪ ಎಣ್ಣೆಯನ್ನು ತೆಗೆದು ಬಿಸಿ ಮಾಡಿ ತಲೆಬುರುಡೆಗೆ ಹಚ್ಚಿಕೊಳ್ಳಿ. ತಲೆಬುರುಡೆಗೆ ಸರಿಯಾಗಿ ಮಸಾಜ್
ಮಾಡುವುದರಿಂದ ರಕ್ತದ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ಸರಿಯಾಗಿ ಆಗುವುದು.
*ದಾಸವಾಳವು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆ, ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.

ಹಸಿರು ಟೀ ಮತ್ತು ಕೊಬ್ಬರಿ ಎಣ್ಣೆ
ಕೊಂಚ ಹಸಿರು ಟೀಪುಡಿಯನ್ನು ನಿಮ್ಮ ನೆಚ್ಚಿನ ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯೊಡನೆ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಕೂದಲ ಬುಡಕ್ಕೆ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಈ ಲೇಪನದಲ್ಲಿ ಎಣ್ಣೆಗಿಂತಲೂ ಹಸಿರು ಟೀ ಪ್ರಮಾಣವೇ ಹೆಚ್ಚಿರಲಿ.

ಗ್ರೀನ್ ಟೀ ಮತ್ತು ಪುದೀನಾ ಎಲೆಗಳು
ಎರಡು ಕಪ್ ಟೀ ಮಾಡಲು ಅಗತ್ಯವಿರುವಷ್ಟು (ಅಥವಾ ಎರಡು ಮುಳುಗಿಸಬಹುದಾದ ಸ್ಯಾಶೆಗಳ) ಹಸಿರು ಟೀ ಪುಡಿಯನ್ನು ಐದು ಪುದೀನಾ ಎಲೆಗಳೊಂದಿಗೆ ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ಕನಿಷ್ಠವಾಗಿಸಿ ಅರ್ಧ ಗಂಟೆ ಹಾಗೇ ಇರಿಸಿ. ಬಳಿಕ ಉರಿ ಆರಿಸಿ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರಿಗೆ ಒಂದು ದೊಡ್ಡ ಗಾತ್ರದ ಲಿಂಬೆರಸವನ್ನು ಸೇರಿಸಿ ತಣಿಯಲು ಬಿಡಿ. ಈ ನೀರಿನಿಂದ ಇಡಿಯ ತಲೆಯನ್ನು ನೆನೆಸಿ ಹದಿನೈದು ನಿಮಿಷ ಕಾಲ ಹಾಗೇ ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಬೆಚ್ಚಗಿನ ಎಣ್ಣೆಯ ಚಿಕಿತ್ಸೆ
ಯಾವುದೇ ಸ್ವಾಭಾವಿಕ ಎಣ್ಣೆ - ಆಲಿವ್ ಎಣ್ಣೆ, canola ಎಣ್ಣೆ, ಅಥವಾ castor ಎಣ್ಣೆ
ವಿಧಾನ
1. ಮೇಲಿನ ಯಾವುದೇ ಎಣ್ಣೆಯನ್ನು ಅದು ಬೆಚ್ಚಗಾಗುವವರೆಗೆ ಬಿಸಿ ಮಾಡಿಕೊಳ್ಳಿ
2. ಇನ್ನು ಬೆಚ್ಚಗಿನ ಈ ಎಣ್ಣೆಯನ್ನು ನಿಮ್ಮ ತೆಲೆಗೆ ನಯವಾಗಿ ಮಸಾಜ್ ಮಾಡಿ
3. ತದನಂತರ ಮಸಾಜ್ ಮಾಡಿದ ಎಣ್ಣೆಯನ್ನು ಹಾಗೆಯೇ ನಿಮ್ಮ ಕೇಶರಾಶಿಯಲ್ಲಿ ಒಂದು ರಾತ್ರಿಯಿಡೀ ಅಥವಾ ಒಂದು ಗಂಟೆಯವರೆಗೆ ಇರಗೊಡಿರಿ,
ನಂತರ ನಿಮ್ಮ ಕೇಶರಾಶಿಯನ್ನು ಶಾಂಪೂ ಉಪಯೋಗಿಸಿ ತೊಳೆಯಿರಿ.

ಸಾಸಿವೆ ಮತ್ತು ಮದರಂಗಿ ಎಲೆಗಳು
ವಿಧಾನ:
1. ಸ್ವಲ್ಪ ಸಾಸಿವೆ ಎಣ್ಣೆಯನ್ನು ತಳ ಆಳವಿರುವ ಪಾತ್ರೆಯಲ್ಲಿ ಕುದಿಸಿರಿ ಹಾಗೂ ಒಂದು ಚಿಟಿಕೆಯಷ್ಟು ಮದರಂಗಿ ಎಲೆಗಳನ್ನು ಕ್ರಮಕ್ರಮವಾಗಿ ಎಲ್ಲಾ ಎಲೆಗಳೂ ಸಹ ಈ ಎಣ್ಣೆಯಲ್ಲಿ ಸುಟ್ಟು ಹೋಗುವವರೆಗೆ ಸೇರಿಸಿರಿ.
2. ನಂತರ ಒಂದು ಸ್ವಚ್ಛವಾದ ಬಟ್ಟೆಯನ್ನುಪಯೋಗಿಸಿ ಈ ಎಣ್ಣೆಯನ್ನು ಸೋಸಿರಿ.
3. ನಿಯಮಿತವಾಗಿ ಈ ಎಣ್ಣೆಯನ್ನು ನಿಮ್ಮ ಕೇಶರಾಶಿಗೆ ಮಸಾಜ್ ಮಾಡಿರಿ ಹಾಗೂ ತನ್ಮೂಲಕ ಕೂದಲ ಬೆಳವಣಿಗೆಯನ್ನು ವೃದ್ಧಿಗೊಳಿಸಿರಿ.

ಹರಳೆಣ್ಣೆ
ಹರಳೆಣ್ಣೆಯಲ್ಲಿ ಬ್ಯಾಕ್ಟೀರಿಯಾ ಹಾಗೂ ಫಂಗಲ್ ವಿರೋಧಿ ಗುಣಗಳು ಇರುವ ಕಾರಣ ನಿಯಮಿತ ಬಳಕೆಯಿಂದ ತಲೆಬುರುಡೆಯಲ್ಲಿ ಯಾವುದೇ ಸೋಂಕು ಆಗದಂತೆ ತಡೆಯುವುದು. ಹರಳೆಣ್ಣೆಯನ್ನು ನಿಯಮಿತವಾಗಿ ಬಳಕೆ ಮಾಡುವವರಲ್ಲಿ ತಲೆಯಲ್ಲಿ ಕಾಣಿಸುವಂತಹ ಕಚ್ಚಿ ಸುತ್ತು ಮುಂತಾದ ಸಮಸ್ಯೆಗಳು ನಿವಾರಣೆಯಾಗಿದೆ.

ಬೆಳ್ಳುಳ್ಳಿ
*ಕೆಲವು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಜಜ್ಜಿಟ್ಟುಕೊಳ್ಳಿ. ಬಳಿಕ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಈ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಕೆಲವು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಕುದಿಸಿ.
*ನಂತರ ಉರಿ ಆರಿಸಿ ತಣಿಯಲು ಬಿಡಿ. ಸುಮಾರು ಉಗುರುಬೆಚ್ಚನೆಯಷ್ಟು ತಣ್ಣಗಾದ ಬಳಿಕ ಈ ಎಣ್ಣೆಯನ್ನು ತಲೆಗೂದಲ ಬುಡಕ್ಕೆ ನಯವಾದ ಮಸಾಜ್
ಮಾಡುತ್ತಾ ಇಡಿಯ ತಲೆಗೆ ಹಚ್ಚಿ. ಸುಮಾರು ಮೂವತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಕೂದಲನ್ನು ತೊಳೆದುಕೊಳ್ಳಿ.
*ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ.

ಈರುಳ್ಳಿ ರಸ
*ಒಂದು ಮಧ್ಯಮ ಗಾತ್ರದ ನೀರುಳ್ಳಿಯನ್ನು ಕೊಚ್ಚಿ ನುಣ್ಣಗೆ ಕಡೆದು ಹಿಂಡಿ ರಸ ಸಂಗ್ರಹಿಸಿ.
*ಈ ರಸವನ್ನು ತಲೆಯ ಚರ್ಮಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಬಳಿಕ ಕೂದಲನ್ನು ಹರಡಿ ಒಣಗಲು ಬಿಡಿ.
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ದಿನ ಈ ವಿಧಾನವನ್ನು ಅನುಸರಿಸಿ.

ಮೆ೦ತೆಕಾಳು
ಅಡುಗೆಮನೆಯಲ್ಲಿರುವ ಮೆ೦ತೆಕಾಳು ಕೂಡ ಕೂದಲಿನ ಸಮಸ್ಯೆಗೆ ಉಪಯುಕ್ತ ಮನೆಮದ್ದಾಗಿದೆ, ನೀವು ಮಾಡಬೇಕಾದದು ಇಷ್ಟೇ, ಮೆ೦ತೆಕಾಳುಗಳನ್ನು ಏಳೆ೦ಟು ಗಂಟೆಗಳ ನೆನೆಸಿಡಿರಿ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.



Click it and Unblock the Notifications











