Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕೂದಲಿನ ಸಮಸ್ಯೆಗೆ ಇಲ್ಲಿದೆ ಅತ್ಯದ್ಭುತ ಹೇರ್ ಮಾಸ್ಕ್
ದಪ್ಪವಾದ ನೀಳ ಕೇಶರಾಶಿ ಹಾಗೂ ಹೊಳಪಿನಿಂದ ಕೂಡಿರುವ ಸದೃಢ ಕೇಶರಾಶಿಯನ್ನು ಹೊಂದಿರಬೇಕು ಎನ್ನುವ ಕನಸನ್ನು ಅನೇಕರು ಹೊಂದಿರುತ್ತಾರೆ. ಆದರೆ ನಿಜ ಜೀವನದಲ್ಲಿ ಬಹುಪಾಲು ಮಹಿಳೆಯರಿಗೆ ತೆಳುವಾದ ಕೇಶರಾಶಿ, ಮಂದವಾದ ಹಾಗೂ ದುರ್ಬಲವಾದ ಕೇಶರಾಶಿ ಯನ್ನು ಹೊಂದಿರುತ್ತಾರೆ.
ಅಕಾಲಿಕವಾಗಿ ಉದುರುವುದು ಹಾಗೂ ಕೇಶರಾಶಿಯು ತುಂಡಾಗಿ ಬೀಳುವುದು, ಅಸ್ವಸ್ಥತೆ, ಆರೋಗ್ಯ ಸಂಬಂಧಿ ಸಮಸ್ಯೆಗಳು, ಒತ್ತಡ, ಮಾಲಿನ್ಯ, ಅಸಮತೋಲಿತ ಆಹಾರ, ಅಸಮರ್ಪಕವಾದ ಕೇಶರಾಶಿಯ ಆರೈಕೆ, ಕೂದಲು ಒಡೆಯುವ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳು ಸೌಂದರ್ಯವನ್ನು ಹಾಳುಮಾಡುತ್ತವೆ. ಇವುಗಳ ಆರೈಕೆಗೆ ಅನೇಕರು ದುಬಾರಿ ಬೆಲೆಯನ್ನು ತೆತ್ತುತ್ತಾರೆ. ಕೆಲವು ಬಾರಿ ಆರೈಕೆ ಮಾಡುವುದರ ಅಡ್ಡ ಪರಿಣಾಮದಿಂದ ಇನ್ನಷ್ಟು ಕೇಶದ ಆರೋಗ್ಯವು ಹದಗೆಡುವುದು. ತೆಳುವಾದ ಮತ್ತು ಕೂದಲು ಒಡೆಯುವ ಸಮಸ್ಯೆಯು ಲಕ್ಷಾಂತರ ಜನರಿಗೆ ಇರುತ್ತದೆ.
ಪ್ರತಿಯೊಬ್ಬ ಮಹಿಳೆಯ ಕನಸೆಂದರೆ ತಾನು ನಾಲ್ಕು ಜನರ ಮುಂದೆ ಸುಂದರವಾಗಿ ಕಾಣಬೇಕು. ಎಲ್ಲರೂ ನನ್ನ ಸೌಂದರ್ಯವನ್ನೇ ಹೊಗಳುತ್ತಿರಬೇಕು ಎನ್ನುವ ಆಸೆಯು ಪ್ರತಿಯೊಬ್ಬರಲ್ಲೂ ಇರುವುದು. ಸೌಂದರ್ಯ ಪಡೆಯಲು ಪ್ರಮುಖವಾಗಿ ಮುಖ, ದೇಹ ಹಾಗೂ ಕೂದಲು ತುಂಬಾ ಪ್ರಮುಖ ಪಾತ್ರ ವಹಿಸುವುದು. ಅದರಲ್ಲೂ ದಪ್ಪ ಹಾಗೂ ದಟ್ಟ ಕೂದಲು ಪ್ರತಿಯೊಬ್ಬ ಮಹಿಳೆಗೂ ತುಂಬಾ ಇಷ್ಟವಾಗುವುದು.
ಇಂತಹ ಕೂದಲು ಇರುವಂತಹ ಮಹಿಳೆಯರು ನಾಲ್ಕು ಜನರ ಮಧ್ಯೆ ನಿಂತಿದ್ದರೂ ತುಂಬಾ ಭಿನ್ನವಾಗಿ ಕಾಣಿಸಿಕೊಳ್ಳುವರು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಕಾಡುವಂತಹ ಸಮಸ್ಯೆಯೆಂದರೆ ಕೂದಲು ತೆಳುವಾಗುವುದು. ಈ ಸಮಸ್ಯೆಗೆ ಕಾರಣಗಳು ಹಲವಾರು ಇದ್ದರೂ ಪ್ರತಿಯೊಬ್ಬ ಮಹಿಳೆಗೂ ಇದು ತುಂಬಾ ಚಿಂತೆಯ ವಿಷಯವಾಗಿರುತ್ತದೆ. ಇಂದಿನ ಲೇಖನದಲ್ಲಿ ಕೂದಲಿನ ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ನೀಡುವ ಹೇರ್ ಮಾಸ್ಕ್‌ಗಳ ವಿವರಗಳನ್ನು ನೀಡಿದ್ದು ಅದಕ್ಕಾಗಿಯೇ ಕೆಳಗೆ ಕೆಲವೊಂದು ಕೂದಲಿನ ಮಾಸ್ಕ್‌ಗಳ ವಿವರಗಳನ್ನು ನೀಡುತ್ತಿದ್ದೇವೆ...

ಕೂದಲು ಉದುರುವುದನ್ನು ತಡೆಯಲು
ನಿಮಗೆ ಬೇಕಾಗಿರುವುದು ಏನು?
1 ಚಮಚ ನೆಲ್ಲಿಕಾಯಿ ಹುಡಿ
1 ಚಮಚ ಅಂಟುವಾಳದ ಹುಡಿ
1/4 ಚಮಚ ಕರ್ಪೂರದ ಹುಡಿ
3 ಚಮಚ ರೋಸ್ ವಾಟರ್

ಬಳಸುವ ವಿಧಾನ
1. ಖಾಲಿ ಪಾತ್ರೆಯನ್ನು ತೆಗೆದುಕೊಂಡು ಎಲ್ಲಾ ಸಾಮಾಗ್ರಿಗಳನ್ನು ಅದರಲ್ಲಿ ಹಾಕಿ
2.ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ
3.ನಿಮ್ಮ ಕೂದಲಿನ ಬುಡಕ್ಕೆ ಮಾಸ್ಕ್ ಹಚ್ಚಿಕೊಳ್ಳಿ ಮತ್ತು ತುದಿಯನ್ನೂ ಇದು ತಲುಪಲಿ
4.ಈ ಮಾಸ್ಕ್ ಅನ್ನು 10 ನಿಮಿಷ ಹಾಗೆಯೆ ಬಿಡಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ
5.ವಾರದಲ್ಲಿ 2-3 ಬಾರಿ ಈ ಕ್ರಮ ಅನುಸರಿಸಿ

ಸೀಳು ತುದಿ ನಿವಾರಣೆಗೆ
1 ಚಮಚ ನೆಲ್ಲಿಕಾಯಿ ಹುಡಿ
1 ಚಮಚ ತೆಂಗಿನ ಹಾಲು
1 ಚಮಚ ಅಂಟುವಾಳದ ಹುಡಿ
1 ಚಮಚ ಶೀಕಾಕಾಯಿ ಹುಡಿ
1 ಚಮಚ ಹಾಲು
ಮಾಡುವ ವಿಧಾನ
1.ಬೌಲ್ ತೆಗೆದುಕೊಂಡು ಅದರಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಹಾಕಿ
2.ನಿಮ್ಮ ಕೂದಲಿನ ಬುಡ ಮತ್ತು ತುದಿಗೆ ಈ ಮಾಸ್ಕ್ ಹಚ್ಚಿಕೊಳ್ಳಿ
3.ನಿಮ್ಮ ಕೂದಲಿಗೆ ಮಸಾಜ್ ಮಾಡಿ
4.ಈ ಮಾಸ್ಕ್ ಕೂದಲಿನಲ್ಲಿ 30-40 ನಿಮಿಷ ಹಾಗೆಯೇ ಇರಲಿ
5.ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ

ತಲೆಹೊಟ್ಟು ನಿವಾರಣೆಗೆ
1 ಚಮಚ ನೆಲ್ಲಿಕಾಯಿ ಹುಡಿ
5-6 ಬೇವಿನ ಎಲೆಗಳು
1 ಚಮಚ ಶೀಕಾಕಾಯಿ ಹುಡಿ
1 ಚಮಚ ಮದರಂಗಿ ಹುಡಿ
1 ಚಮಚ ಅಂಟುವಾಳದ ಹುಡಿ
1 ಕಪ್ ನೀರು
ಬಳಸುವ ವಿಧಾನ
ಪ್ಯಾನ್ ತೆಗೆದುಕೊಂಡು ಅದರಲ್ಲಿ 1 ಕಪ್ ನೀರು ಹಾಕಿ ಕುದಿಸಿಕೊಳ್ಳಿ
ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿಕೊಳ್ಳಿ. ಪ್ಯಾನ್ ಮುಚ್ಚಿ ಮತ್ತು 10 ನಿಮಿಷ ಕುದಿಯಲು ಬಿಡಿ
ಮುಚ್ಚಳ ತೆರೆಯಿರಿ ಸ್ಟವ್ ಆಫ್ ಮಾಡಿ
ಇದು ತಣಿಯಲು ಬಿಡಿ
ಪಾತ್ರೆಯಲ್ಲಿ ದ್ರಾವಣವನ್ನು ತೆಗೆದುಕೊಳ್ಳಿ
ನಿಮ್ಮ ತಲೆಗೆ ಈ ದ್ರಾವಣವನ್ನು ಸುರಿದುಕೊಳ್ಳಿ ಮತ್ತು ನಿಮ್ಮ ಬೆರಳುಗಳ ಸಹಾಯದಿಂದ ನೆತ್ತಿಯನ್ನು ಮಸಾಜ್ ಮಾಡಿಕೊಳ್ಳಿ
ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ
ವಾರದಲ್ಲಿ 2- 3 ಬಾರಿ ಈ ಕ್ರಿಯೆ ಅನುಸರಿಸಿ

ದಪ್ಪನೆಯ ಕೂದಲಿಗಾಗಿ ಹೇರ್ ಮಾಸ್ಕ್
1 ಚಮಚ ನೆಲ್ಲಿಕಾಯಿ ಹುಡಿ
1 ಚಮಚ ಶೀಕಾಕಾಯಿ ಹುಡಿ
1 ಚಮಚ ಅಂಟುವಾಳ ಹುಡಿ
2 ಚಮಚ ಎಳ್ಳಿನ ಎಣ್ಣೆ
1 ಚಮಚ ಅಲೊವೇರಾ ಜೆಲ್
ಬಳಸುವ ವಿಧಾನ
ಪಾತ್ರೆಯನ್ನು ತೆಗೆದುಕೊಂಡು ಇದರಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿಕೊಳ್ಳಿ
ನಂತರ ಇದಕ್ಕೆ ಅಲೊವೇರಾ ಜೆಲ್ ಸೇರಿಸಿ ಎಳ್ಳಿನ ಪೌಡರ್ ಮಿಶ್ರ ಮಾಡಿ ಮತ್ತು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ
ಕೂದಲಿನ ಬುಡಕ್ಕೆ ಮಾಸ್ಕ್ ಹಚ್ಚಿಕೊಳ್ಳಿ ನಂತರ ಮಸಾಜ್ ಮಾಡಿ
ಶವರ್ ಕ್ಯಾಪ್‌ನಿಂದ ಕೂದಲನ್ನು ಕವರ್ ಮಾಡಿ 30-40 ನಿಮಿಷ ಹಾಗೆಯೇ ಬಿಡಿ
ಮೃದು ಶ್ಯಾಂಪೂ ಬಳಸಿ ಕೂದಲು ತೊಳೆಯಿರಿ
ಕೂದಲಿನ ದಟ್ಟತೆಗಾಗಿ ಇದನ್ನು ವಾರದಲ್ಲಿ ಎರಡು ಬಾರಿ ಬಳಸಿ

ಮೃದುವಾದ ರೇಷ್ಮೆಯಂತಹ ಕೂದಲಿಗಾಗಿ
1 ಚಮಚ ನೆಲ್ಲಿಕಾಯಿ ಹುಡಿ
1 ಚಮಚ ಶೀಕಾಕಾಯಿ ಹುಡಿ
1 ಚಮಚ ಅಂಟುವಾಳದ ಹುಡಿ
1/2 ಚಮಚ ಜೇನು
1 ಮೊಟ್ಟೆ
ಬಳಸುವ ವಿಧಾನ:
ಗಾಜಿನ ಪಾತ್ರೆಯಲ್ಲಿ ಎಲ್ಲಾ ಸಲಕರಣೆಗಳನ್ನು ಹಾಕಿ
ಸ್ವಲ್ಪ ಪೇಸ್ಟ್ ರೂಪದಲ್ಲಿ ಇದನ್ನು ತಯಾರಿಸಿ
ನಿಮ್ಮ ತಲೆಯ ಬುಡಕ್ಕೆ ಮತ್ತು ತುದಿಗೆ ಈ ಮಾಸ್ಕ್ ಹಚ್ಚಿ
ಬೆರಳುಗಳಿಂದ ಕೆಲವು ನಿಮಿಷಗಳ ಕಾಲ ಕೂದಲಿನ ಬುಡವನ್ನು ಮಸಾಜ್ ಮಾಡಿಕೊಳ್ಳಿ
40-50 ನಿಮಿಷ ಹಾಗೆಯೇ ಬಿಡಿ
ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ

ಮೃದುವಾದ ರೇಷ್ಮೆಯಂತಹ ಕೂದಲಿಗಾಗಿ
ವಾರದಲ್ಲಿ ಎರಡು ಬಾರಿ ಈ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ ಕೂದಲು ರೇಷಿಮೆಯಂತೆ ಹೊಳೆಯುವುದು ಖಚಿತ.
ಗಮನದಲ್ಲಿಡಬೇಕಾದ ಅಂಶಗಳು
ನಿಮ್ಮ ಕೂದಲಿನ ಹಾನಿಯನ್ನು ತಪ್ಪಿಸಲು ಹೀಟ್ ಸ್ಟೈಲಿಂಗ್ ಟೂಲಿಂಗ್ ಬಳಕೆ ಮಾಡದಿರಿ
ರಾಸಾಯನಿಕ ಉತ್ಪನ್ನಗಳ ಬದಲಿಗೆ ಹರ್ಬಲ್ ಉತ್ಪನ್ನ ಬಳಕೆ ಮಾಡಿ
ಆರೋಗ್ಯಕರ ಜೀವನ ಶೈಲಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ



Click it and Unblock the Notifications











