Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಸ್ಟ್ರೈಟ್ ಕೂದಲಿಗಾಗಿ ನೈಸರ್ಗಿಕ ಪರಿಹಾರೋಪಾಯಗಳು
ಹೊಳೆಯುವ ನಯವಾದ ಕೂದಲು ಹೆಣ್ಣಿಗೆ ಶೋಭೆಯನ್ನು ತಂದುಕೊಡುವುದಲ್ಲದೆ ಆಕೆಯ ಸೌಂದರ್ಯವನ್ನು ಇಮ್ಮಡಿಸುತ್ತದೆ. ಇಂದಿನ ಫ್ಯಾಷನ್ ಯುಗದಲ್ಲಿ ಕೂಡ ಹೊಳೆಯುವ ಕಪ್ಪನೆಯ ದಟ್ಟ ಕೂದಲು ಪ್ಲಸ್ ಪಾಯಿಂಟ್ ಎಂದೆನಿಸಿದೆ. ಆಕೆ ಎಷ್ಟೇ ಸೌಂದರ್ಯವತಿಯಾಗಿದ್ದರೂ ಬಳುಕುವ ಬಳ್ಳಿಯಂತಹ ದೇಹ ಸೌಂದರ್ಯವನ್ನು ಪಡೆದುಕೊಂಡಿದ್ದರೂ ಆಕೆಯ ಕೇಶರಾಶಿಗೆಯೇ ಹೆಚ್ಚಿನ ಅಂಕಗಳು ಎಂಬುದರಲ್ಲಿ ಸಂದೇಹವೇ ಇಲ್ಲ.
ಫ್ಯಾಷನ್ ಶೋಗಳಲ್ಲಿ ಕೂಡ ಕೂದಲಿಗೂ ಬೇರೆಯದೇ ಶ್ರೇಣಿಗಳಿದ್ದು ಅದಕ್ಕೂ ಅಂಕಗಳನ್ನು ತೆಗೆದುಕೊಂಡು ರೂಪದರ್ಶಿಯರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಕೂದಲಿನ ಹೊಳೆಯು, ಉದ್ದ, ನಯಗಾರಿಕೆ, ಸೌಂದರ್ಯ ಇದೆಲ್ಲವೂ ಅಲ್ಲಿ ಮಾನ್ಯವಾಗುತ್ತದೆ. ನಿಮ್ಮ ಕೂದಲೆಂದರೆ ಅದು ಚಿನ್ನದಷ್ಟು ಮೌಲ್ಯಯುತವಾದುದು ಎಂಬುದನ್ನು ಮರೆಯದಿರಿ. ಆದ್ದರಿಂದ ಬೇಕಾಬಿಟ್ಟಿಯಾಗಿ ಕೂದಲನ್ನು ಬೆಳೆಯಿಸದೇ ಅದಕ್ಕೆ ಸೂಕ್ತ ಆರೈಕೆಯನ್ನು ಮಾಡಿ ಕಾಪಾಡಿಕೊಳ್ಳಿ.
ಸ್ಟ್ರೈಟ್ ಕೂದಲು ಎಲ್ಲಾ ಹೆಣ್ಮಕ್ಕಳ ಕನಸಾಗಿದೆ. ನೇರವಾಗಿ ರೇಷ್ಮೆಯಂತೆ ನಯವಾಗಿರುವ ಕೂದಲು ಎಂದರೆ ಯಾರಿಗೆ ತಾನೇ ಬಯಕೆಯುಂಟಾಗದು. ಆದರೆ ಇಂತಹ ಕೂದಲನ್ನು ಎಲ್ಲರಿಗೂ ಪಡೆದುಕೊಳ್ಳಲು ಸಾಧ್ಯವಿಲ್ಲ ಅಂತಹ ಸಮಯದಲ್ಲಿ ಸ್ಟ್ರೈಟ್ನರ್ಗಳು ಸಹಾಯಕ್ಕೆ ಬರಬಹುದಾದರೂ ಅವುಗಳ ಅಪರಿಮಿತ ಬಳಕೆ ಕೂದಲಿಗೆ ಹಾನಿಯನ್ನು ಉಂಟುಮಾಡುತ್ತದೆ ಎಂಬುದು ನೆನಪಿರಲಿ. ಹಾಗಾದರೆ ಸ್ವಲ್ಪ ಇರಿ ಧೈರ್ಯಗುಂದದಿರಿ, ಸ್ಟ್ರೈಟ್ನರ್ ಬಳಸದೆಯೇ ಕೂದಲನ್ನು ಸ್ಟ್ರೈಟ್ ಮಾಡುವ ಸಲಹೆಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಹೌದು ಸ್ವಾಭಾವಿಕ ವಿಧಾನದಲ್ಲಿ ಕೂದಲನ್ನು ಸ್ಟ್ರೈಟ್ಮಾ ಡಬಹುದಾಗಿದ್ದು ಅದರಿಂದ ಯಾವುದೇ ರೀತಿಯ ದುಷ್ಪರಿಣಾಮ ನಿಮಗೆ ಕೂದಲಿಗೆ ಉಂಟಾಗುವುದಿಲ್ಲ. ಈ ನೈಸರ್ಗಿಕ ವಿಧಾನಗಳು ಕೂದಲಿಗೆ ಮಾಯಿಶ್ಚರೈಸರ್ ಅನ್ನು ಒದಗಿಸಿ ವಿರಾಮ ನೀಡುತ್ತದೆ ಅಂತೆಯೇ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಿದ್ದರೆ ಆ ವಿಧಾನಗಳನ್ನು ಅರಿತುಕೊಳ್ಳೋಣ....

ಹಾಲು
ಸಮಪ್ರಮಾಣದಲ್ಲಿ ಹಾಲು ಮತ್ತು ನೀರನ್ನು ಬೆರೆಸಿಕೊಳ್ಳಿ. ಸ್ಪ್ರೇ ಬಾಟಲಿಗೆ ಈ ಮಿಶ್ರಣವನ್ನು ಹಾಕಿರಿ. ಇನ್ನು ಈ ಸ್ಪ್ರೇಯನ್ನು ಕೂದಲಿಗೆ ಸಿಂಪಡಿಸಿ ಅರ್ಧಗಂಟೆಗಳ ಅದನ್ನು ಹಾಗೆಯೇ ಬಿಡಿ. ತದನಂತರ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಂಡು ಕಂಡೀಶನ್ ಮಾಡಿ.

ಮೊಟ್ಟೆ ಮತ್ತು ಆಲೀವ್ ಆಯಿಲ್
ಎರಡು ಮೊಟ್ಟೆಗಳನ್ನು ಒಡೆದುಕೊಂಡು ನಾಲ್ಕು ಚಮಚದಷ್ಟು ಆಲೀವ್ ಎಣ್ಣೆಯಲ್ಲಿ ಅದನ್ನು ಮಿಶ್ರಮಾಡಿಕೊಳ್ಳಿ. ನಿಮ್ಮ ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ಚೆನ್ನಾಗಿ ಬಾಚಿ. ಅರ್ಧಗಂಟೆ ಹಾಗೆಯೇ ಬಿಡಿ. ಉಗುರು ಬೆಚ್ಚನೆಯ ನೀರಿನಲ್ಲಿ ಕೂದಲನ್ನು ತೊಳೆದುಕೊಳ್ಳಿ.

ಬಿಸಿ ಎಣ್ಣೆ ಚಿಕಿತ್ಸೆಗಳು
ನಿಮ್ಮ ಕೂದಲನ್ನು ನುಣುಪಾಗಿಸಿ ಆರೋಗ್ಯವಂತವಾಗಿಸಲು ನಿಯಮಿತ ಬಿಸಿ ಎಣ್ಣೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ. ತೆಂಗಿನೆಣ್ಣೆ, ಆಲೀವ್, ಬಾದಾಮಿ ಅಥವಾ ಹರಳೆಣ್ಣೆಯನ್ನು ಇದಕ್ಕೆ ಬಳಸಿಕೊಳ್ಳಬಹುದು. ಎಣ್ಣೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಉಗುರು ಬೆಚ್ಚನೆಯ ನೀರಿನಲ್ಲಿ ಕೂದಲು ತೊಳೆದುಕೊಳ್ಳಿ.

ಮುಲ್ತಾನಿ ಮಿಟ್ಟಿ
ಎರಡು ಚಮಚದಷ್ಟು ಅಕ್ಕಿಹುಡಿಯೊಂದಿಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿಕೊಂಡು ಒಂದು ಕಪ್ನಷ್ಟು ಮುಲ್ತಾನಿ ಮಿಟ್ಟಿಯನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಅರ್ಧಗಂಟೆ ಹಾಗೆಯೇ ಬಿಡಿ. ನೀರಿನೊಂದಿಗೆ ಅದನ್ನು ತೊಳೆದುಕೊಂಡು ಕಂಡೀಶನರ್ ಮಾಡಿ.

ಅಲೋವೇರಾ
ನಿಮ್ಮ ಕೂದಲನ್ನು ಮೃದುಗೊಳಿಸಿ ಕಾಂತಿಯುಕ್ತಗೊಳಿಸಿ ಮಾಯಿಶ್ಚರೈಸ್ ಮಾಡುವ ಗುಣ ಅಲೋವೇರಾಗಿದೆ. ಇದರಲ್ಲಿರುವ ಮಾಯಿಶ್ಚರೈಸ್ ಗುಣ ಕೂದಲನ್ನು ನೇರಗೊಳಿಸುತ್ತದೆ. ತಲೆಬುರುಡೆಗೆ ಇದನ್ನು ಹಚ್ಚಿ ಅರ್ಧಗಂಟೆ ಕಳೆದು ತಣ್ಣೀರಿನಲ್ಲಿ ಕೂದಲು ತೊಳೆದುಕೊಳ್ಳಿ.

ಆಪಲ್ ಸೀಡರ್ ವಿನೇಗರ್
ನಿಮ್ಮ ಕೂದಲನ್ನು ನೇರಗೊಳಿಸಲು ಇದೊಂದು ಅತ್ಯುತ್ತಮ ವಿಧಾನವಾಗಿದೆ. ನಿಮ್ಮ ಕೂದಲಿನ ನೈಸರ್ಗಿಕ ಪಿಎಚ್ಚ ಮಟ್ಟವನ್ನು ಹಿಂತಿರುಗಿಸಲಿದ್ದು ಆರೋಗ್ಯವಂತ ಕೂದಲ ಬೆಳವಣಿಗೆಗೆ ಸಹಕಾರಿ. ಶುದ್ಧ ನೀರಿನಲ್ಲಿ ಒಂದು ಚಮಚದಷ್ಟು ವಿನೇಗರ್ ಅನ್ನು ಮಿಶ್ರಮಾಡಿಕೊಳ್ಳಿ. ಈ ಮಿಶ್ರಣ ಡ್ರೈಯಾಗಲಿ. ನಂತರ ಅದನ್ನು ತೊಳೆದುಕೊಳ್ಳಿ.

ಹರಳೆಣ್ಣೆ ಮತ್ತು ಸೋಯಾಬೀನ್ ಎಣ್ಣೆ
2:1 ಅನುಪಾತದಲ್ಲಿ ಹರಳೆಣ್ಣೆ ಮತ್ತು ಸೋಯಾಬೀನ್ ಎಣ್ಣೆಯನ್ನು ಮಿಶ್ರಮಾಡಿಕೊಳ್ಳಿ. ಹಚ್ಚಿಕೊಳ್ಳುವ ಮುನ್ನ ಕೊಂಚ ಬಿಸಿ ಮಾಡಿಕೊಳ್ಳಿ, ಅಲ್ಲದೆ ಸುಮಾರು ಒಂದು ಗಂಟೆಗಳಷ್ಟು ಕಾಲ ತಲೆಬುರುಡೆಯಲ್ಲಿ ಈ ಮಿಶ್ರಣ ಇರಲಿ. ಉಗುರು ಬೆಚ್ಚನೆಯ ನೀರಿನಲ್ಲಿ ಕೂದಲನ್ನು ತೊಳೆದುಕೊಳ್ಳಿ ಮತ್ತು ಕಂಡೀಷನರ್ ಹಚ್ಚಿಕೊಳ್ಳಿ.



Click it and Unblock the Notifications