Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮೆಂತೆ ಬಳಸಿ ಕೇಶ ಉದುರುವಿಕೆಯನ್ನು ನಿಲ್ಲಿಸಿ
ಈಗಿನ ಯುವಜನಾಂಗಕ್ಕೆ ಕೇಶದ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಒಲವು ಆದರೆ ಅದರ ಆರೈಕೆಯಲ್ಲಿ ಮಾತ್ರ ನಿರ್ಲಕ್ಷ ಧೋರಣೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ವಿಧದ ರಾಸಾಯನಿಕ ಕೇಶವರ್ಧಕಗಳ ಮೊರೆಹೋಗುತ್ತಿದ್ದಾರೆ. ಆದರೆ ಇವುಗಳಿಂದ ನಿರೀಕ್ಷಿತ ಫಲಿತಾಂಶ ದೊರಕದೆ ಕಂಗಾಲಾಗುತ್ತಿದ್ದಾರೆ. ಇದು ಎಲ್ಲರನ್ನೂ ಕಾಡುತ್ತಿರುವ ವಿಷಯವಾಗಿದೆ. ಆದರೆ ನಾವು ನಿಮಗಾಗಿ ವಿಶಿಷ್ಟ ಸಂಗತಿಯೊಂದನ್ನು ತಿಳಿಸುತ್ತಿದ್ದೇವೆ. ನಾವು ಸಾಂಬಾರಿಗೆ ಬಳಸುವ ಮೆಂತೆ ಕಾಳುಗಳಿಂದ ನಿಮ್ಮ ಕೇಶದ ಸೌಂದರ್ಯವನ್ನು ಹೆಚ್ಚಿಸುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ.
ಹೌದು, ಮೆಂತೆ ಕಾಳುಗಳನ್ನು ನಾವು ದಿನನಿತ್ಯದ ಅಡಿಗೆಗೆ ಬಳಸುತ್ತಿರುವುದು ಸಹಜ ಸಂಗತಿಯಾಗಿದೆ. ಆದರೆ ಮೆಂತೆಯಿಂದ ಕೂದಲ ಪೋಷಣೆ ಮಾಡುವುದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಮೆಂತೆಯ ಎಲೆಗಳಲ್ಲಿ ನೈಸರ್ಗಿಕ ಸತ್ವಗಳು ಹೇರಳವಾಗಿದ್ದು, ಇದರಲ್ಲಿರುವ ನಿಕೊಟೀನ್ ಆಮ್ಲವು ಕೂದಲ ಸಹಜ ಬೆಳವಣಿಗೆಗೆ ಹೆಚ್ಚು ಸಹಕಾರಿ. ಇದರಿಂದ ಕೇಶದ ಬೆಳವಣಿಗೆ ಮತ್ತು ಅದರ ಬೇರಿನ ಭಾಗವು ಹೆಚ್ಚು ಸದೃಢಗೊಳ್ಳುತ್ತದೆ.

ಮೆಂತೆಯ ಪೇಸ್ಟ್ ರಕ್ತ ಸಂಚಲನವನ್ನು ಸುಗಮಗೊಳಿಸಿ ಹೊಸ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ನೀರಿನಲ್ಲಿ ಕರಗುವ ವಿಶಿಷ್ಟ ಗುಣವಿದ್ದು ತಲೆಯ ನೆತ್ತಿಯ ಚರ್ಮದ ಪಿಹೆಚ್ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕೂದಲ ಉದುರುವಿಕೆ ಹಾಗೂ ಹೊಟ್ಟನ್ನು ನಿಯಂತ್ರಿಸುತ್ತದೆ. ಒಂದು ಚಮಚ ಮೆಂತೆ ಕಾಳುಗಳನ್ನು ಬೇಯಿಸಿ ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ಒಂದು ರಾತ್ರಿ ಹಾಗೆಯೇ ಬಿಡಿ. ನೆತ್ತಿಯನ್ನು ಈ ಎಣ್ಣೆಯಿಂದ ಚೆನ್ನಾಗಿ ಪ್ರತಿ ದಿನ ತಿಕ್ಕಿ. ಇದರಿಂದ ಕೂದಲ ಉದುರುವಿಕೆ ಕಡಿಮೆಯಾಗಿ ಅದರ ಬೇರುಗಳು ಸದೃಢವಾಗುತ್ತವೆ.
*ಹಿಟ್ಟಿನಂತೆ ರುಬ್ಬಿಕೊಳ್ಳಿ
ಒಂದು ಬಟ್ಟಲು ನೀರಿನಲ್ಲಿ ಮೂರು ಚಮಚ ಮೆಂತೆ ಕಾಳುಗಳನ್ನು ಆರು ಗಂಟೆಗಳ ಕಾಲ ಅದ್ದಿ ಇಡಿ. ನಂತರ ಈ ಕಾಳುಗಳನ್ನು ಸ್ವಲ್ಪ ನೀರು ಬಳಸಿ ಪೇಸ್ಟ್ ಆಗುವವರೆಗೆ ಚೆನ್ನಾಗಿ ಹಿಟ್ಟಿನಂತೆ ರುಬ್ಬಿಕೊಳ್ಳಿ. ಇದಕ್ಕೆ ಮೂರು ಚಮಚ ಸೀಗೆಕಾಯಿ ಪುಡಿಯನ್ನು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ತಲೆಯ ಚರ್ಮದ ಭಾಗಕ್ಕೆ ಚೆನ್ನಾಗಿ ತಿಕ್ಕಿ 30 ನಿಮಿಷ ಹಾಗೆಯೇ ಬಿಡಿ. ನಂತರ ಸೌಮ್ಯವಾದ ಶಾಂಪೂವಿನಿಂದ ನಯವಾಗಿ ಸ್ವಚ್ಛಗೊಳಿಸಿ. ಕೇಶದ ಸಮೃದ್ಧ ಬೆಳವಣಿಗೆಗೆ ಈ ಪ್ರಕ್ರಿಯೆಯನ್ನು ಪ್ರತೀ ವಾರ ಒಂದು ಬಾರಿ ಮಾಡುತ್ತಾ ಹೋಗಿ.
*ನೀರಿನಲ್ಲಿ ನೆನೆಸಿಡಿ
ಎರಡು ಚಮಚ ಮೆಂತೆ ಕಾಳುಗಳನ್ನು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ಒಣಗಿಸಿ ಎರಡು ಚಮಚ ಒಣ ಮೆಂತೆ ಎಲೆಗಳನ್ನು ಮತ್ತು ಒಂದು ಬಟ್ಟಲು ತೆಂಗಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೇವದ ಕೇಶಕ್ಕೆ ಹಚ್ಚಿ 20 ನಿಮಿಷಗಳ ನಂತರ ಶ್ಯಾಂಪೂವಿನಿಂದ ಸ್ವಚ್ಛಗೊಳಿಸಿ. ಇದರಿಂದ ಕೇಶದ ಕಾಂತಿಯು ನಳನಳಿಸಿ ಕೂದಲ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.
*ತಲೆಹೊಟ್ಟು ಹಾಗೂ ಸಿಕ್ಕುಸಿಕ್ಕಾದ ಕೂದಲಿನ ಆರೈಕೆಗೆ
ತಲೆಹೊಟ್ಟು ಹಾಗೂ ಸಿಕ್ಕುಸಿಕ್ಕಾದ ಕೂದಲಿನ ಆರೈಕೆಗೆ ಮಾಡಲು ನೀವು ಮೆ೦ತೆಯ ಪೇಸ್ಟ್ ಅನ್ನು ಇತರ ನೈಸರ್ಗಿಕ ಅಡುಗೆ ಮನೆ ಸಾಮಗ್ರಿಗಳಾದ ಮೊಸರು, ಆಪಲ್ ಸೈಡರ್ ವಿನೆಗರ್, ಹಾಗೂ ಇನ್ನೂ ಅನೇಕ ಬಗೆಯ ವಸ್ತುಗಳೊ೦ದಿಗೆ ಮಿಶ್ರಗೊಳಿಸಬಹುದು.
*ನೆತ್ತಿಯ ತುರಿಕೆಗೆ ರಾಮಬಾಣ
ಚೆನ್ನಾಗಿ ಜಜ್ಜಿದ ಮೆ೦ತೆಕಾಳುಗಳನ್ನು ಬೆಚ್ಚಗಿನ ತೈಲದಲ್ಲಿ ಬೆರೆಸಿದಲ್ಲಿ, ಈ ಮಿಶ್ರಣವು ನೆತ್ತಿಯ ತುರಿಕೆಯನ್ನೂ ಹಾಗೂ ತಲೆಹೊಟ್ಟಿನ ಕಿರಿಕಿರಿಯನ್ನೂ ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತದೆ.
*ನೆಲ್ಲಿಕಾಯಿ ಹಾಗೂ ಮೆಂತೆ ಬೀಜ
ಮೆಂತೆ ಬೀಜದ ಜೊತೆ ನೆಲ್ಲಿಕಾಯಿ ಹಾಕಿ ರುಬ್ಬಿ ತಲೆಗೆ ಹಚ್ಚಿದರೆ ಕೂದಲಿಗೆ ನೆಲ್ಲಿಕಾಯಿ ಮತ್ತು ಮೆಂತೆ ಬೀಜದ ಗುಣ ಎರಡೂ ದೊರೆಯುವುದರಿಂದ ಕೂದಲು ಮತ್ತಷ್ಟು ಸೊಂಪಾಗಿ ಬೆಳೆಯುವುದು.



Click it and Unblock the Notifications

