Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಚಿಂತಿಸದಿರಿ, ನೀವೂ ಕೂಡ ಕಪ್ಪು ಕೂದಲಿನ ಒಡತಿಯಾಗಬಹುದು
ಸೌಂದರ್ಯವೆಂಬುದು ಹೆಣ್ಣಿಗೆ ವರದಾನವಿದ್ದಂತೆ. ತಿದ್ದಿ ತೀಡಿದ ಹುಬ್ಬು, ಅರಳಿದ ಕಣ್ಣುಗಳು, ಸಂಪಿಗೆ ಮೂಗು, ಹೀಗೆ ಹೆಣ್ಣಿನ ಸೌಂದರ್ಯವನ್ನು ಕವಿಗಳು ವರ್ಣಮಯವಾಗಿ ಬಣ್ಣಿಸಿದ್ದಾರೆ. ಸೌಂದರ್ಯಕ್ಕೆ ಮೊಗದ ಸುಂದರತೆ ಹೇಗೆ ಪ್ರಧಾನವೋ ಅಂತೆಯೇ ಸಂಪದ್ಭರಿತ ಕೂದಲೂ ಕೂಡ ಹೆಣ್ಣಿನ ಸೌಂದರ್ಯಕ್ಕೆ ಕಿರೀಟವಿಟ್ಟಂತೆ. ಕಪ್ಪು ಹೊಳೆಯುವ ಸೊಗಸಾದ ಕೂದಲು ಯಾವ ಹೆಣ್ಣಿಗೆ ಕೂಡ ಮನಸ್ಸಿನಲ್ಲಿ ಹಂಬಲವನ್ನುಂಟು ಮಾಡುವುದು ಸಹಜವೇ. ಆಕೆಯ ಮೆರುಗನ್ನು ಹೆಚ್ಚಿಸುವ ಕೂದಲು ಸೊಂಪಾಗಿದ್ದರೆ ಮಾತ್ರ ಆಕೆಯ ಸೌಂದರ್ಯಕ್ಕೆ ಸಂಪೂರ್ಣತೆ ದೊರಕುವುದು.
ಇತ್ತೀಚಿನ ಆಧುನಿಕ ಜನಜೀವನ, ವಾತಾವರಣದ ಕಲುಷಿತತೆ ಸೌಂದರ್ಯಕ್ಕೆ ಮಾರಕವಾಗಿದೆ. ಹಳ್ಳಿಗಾಡಿನ ಸೊಗಡೇ ಬೇರೆ ಪೇಟೆಯ ಫ್ಯಾಷನ್ ಮಂತ್ರವೇ ಬೇರೆ. ಹಳ್ಳಿಯ ವಾತಾವರಣ ನಿಮ್ಮ ಸೌಂದರ್ಯಕ್ಕೆ ಪೂರಕವಾಗಿದ್ದರೆ ನಗರದ ಆಧುನೀಕತೆ ನಿಮ್ಮ ಸೌಂದರ್ಯಕ್ಕೆ ಮಾರಕವಾಗಿರುತ್ತದೆ. ಈ ಮಾಲಿನ್ಯಕ್ಕೆ ನೇರವಾಗಿ ಒಳಗಾಗುವುದೇ ನಿಮ್ಮ ತಲೆಗೂದಲು. ತಲೆಹೊಟ್ಟು, ಕೂದಲು ಉದುರುವಿಕೆ, ಕಪ್ಪು ಕೂದಲು ಬಿಳಿಯಾಗುವುದು ಹೀಗೆ ಒಂದಿಲ್ಲೊಂದು ಕೇಶ ಸಮಸ್ಯೆಗಳನ್ನು ನೀವು ಅನುಭವಿಸುತ್ತಲೇ ಇರುತ್ತೀರಿ. ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?
ಬೇರೆಲ್ಲಾ ಸಮಸ್ಯೆಗಳಿಗಿಂತಲೂ ಅಕಾಲದಲ್ಲಿ ಕೂದಲು ಬಿಳಿಯಾಗುವುದು ಮಾತ್ರ ಹೆಚ್ಚು ದುಃಖವನ್ನು ತರುವಂಥದ್ದಾಗಿದೆ. ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಚಿಂತೆ ಮಾಡದೇ ಕುಳಿತಿರದೇ ಕೆಲವೊಂದು ಮನೆಮದ್ದುಗಳ ಪ್ರಯೋಗಗಳನ್ನು ಮಾಡಿ ನೆರೆಗೂದಲಿನ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ....

ಬ್ಲ್ಯಾಕ್ ಟೀ ಹೇರ್ ಮಾಸ್ಕ್
ಬ್ಲ್ಯಾಕ್ ಟೀಯೊಂದಿಗೆ ಕೂದಲು ತೊಳೆದುಕೊಳ್ಳುವ ಹವ್ಯಾಸವನ್ನು ನೀವು ಬೆಳೆಸಿಕೊಂಡಲ್ಲಿ ನಿಮಗೆ ಇದು ಉತ್ತಮ ಫಲವನ್ನು ನೀಡುವುದು ಖಂಡಿತ. ಬಿಳಿಗೂದಲನ್ನು ಇದು ಕಪ್ಪು ಮಾಡುವುದರ ಜೊತೆಗೆ ಕೂದಲನ್ನು ನಯಗೊಳಿಸುವುದರ ಜೊತೆಗೆ ಹೊಳೆಯುವಿಕೆಯನ್ನು ನೀಡುತ್ತದೆ.

ಬಾದಾಮಿ ಎಣ್ಣೆ ಮಸಾಜ್
ತೆಂಗಿನೆಣ್ಣೆಯ ನಂತರ, ನಿಮ್ಮ ಕೂದಲಿಗೆ ಬಳಸಬಹುದಾದ ಉತ್ತಮ ಎಣ್ಣೆ ಎಂದರೆ ಅದು ಬಾದಾಮಿ ಎಣ್ಣೆಯಾಗಿದೆ. ಈ ಎಣ್ಣೆಯನ್ನು ಬಳಸಿ ಕೂದಲಿನ ಬುಡ ಮತ್ತು ಕೂದಲಿನ ತುದಿಗೆ ಚೆನ್ನಾಗಿ ಮಸಾಜ್ ಮಾಡಿ. ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ನಂತರ ಹಚ್ಚಿಕೊಳ್ಳುವುದರಿಂದ ಕೂಡ ಹೆಚ್ಚಿನ ಫಲಿತಾಂಶ ನಿಮಗೆ ದೊರೆಯಲಿದೆ. ವಿಟಮಿನ್ ಇ ಈ ಎಣ್ಣೆಯಲ್ಲಿದ್ದು ಕೂದಲಿನ ಬೆಳವಣಿಗೆಯನ್ನು ಇದು ಮಾಡುವುದರ ಜೊತೆಗೆ ದಪ್ಪನೆಯ ಕಪ್ಪು ಕೂದಲನ್ನು ನೀಡುತ್ತದೆ.

ಆಲೂಗಡ್ಡೆಯ ಮಾಸ್ಕ್
ನಿಮ್ಮ ಬಿಳಿಕೂದಲನ್ನು ಕಪ್ಪಗಾಗಿಸಲು, ಹಸಿ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ ನಂತರ ಆ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಒಣಗಿದ ನಂತರ ಕೂದಲಿಗೆ ಮೊಸರಿನ ಮಾಸ್ಕ್ ಅನ್ನು ಹಚ್ಚಿಕೊಳ್ಳಿ ಹತ್ತು ನಿಮಿಷಗಳ ನಂತರ ಕೂದಲನ್ನು ತೊಳೆದುಕೊಳ್ಳಿ.

ಹಾಗಲಕಾಯಿ ಮಾಸ್ಕ್
ನಿಮ್ಮ ಬಿಳಿ ಕೂದಲನ್ನು ಕಪ್ಪಗಾಗಿಸಲು ಈ ಸರಳ ಟಿಪ್ಸ್ ಅನ್ನು ನಿಮ್ಮದಾಗಿಸಿ ಕೊಳ್ಳಬಹುದಾಗಿದೆ. ತೆಂಗಿನ ಎಣ್ಣೆಯೊಂದಿಗೆ ಹಾಗಲಕಾಯಿಯನ್ನು ಬೇಯಿಸಿಕೊಳ್ಳಿ ಬೆಂದ ನಂತರ ಅದನ್ನು ಎಣ್ಣೆಯೊಂದಿಗೆ ಹಿಸುಕಿಕೊಳ್ಳಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ. ಐದು ಬಾರಿ ಪ್ರಯೋಗ ಮಾಡಿದ ನಂತರ ನೀವು ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳುವುದು ಖಂಡಿತ.

ಬ್ಲ್ಯಾಕ್ ಕಾಫಿ
ಬ್ಲ್ಯಾಕ್ ಕಾಫಿಯ ದ್ರಾವಣವನ್ನು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಿ ಆದಷ್ಟು ಕೂದಲಿನ ಬುಡದಿಂದ ಆರಂಭಿಸಿ ನಂತರ ತುದಿಗೆ ಬನ್ನಿ. ಈ ಸಲಹೆ ಕೂಡಲೇ ಪರಿಣಾಮವನ್ನು ಬೀರದಿದ್ದರೂ ನಿಧಾನವಾಗಿ ನಿಮಗೆ ಸಹಕಾರಿಯಾಗಲಿದೆ. ಇದು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ.

ನೆಲ್ಲಿಕಾಯಿ
ಬಿಳಿ ಕೂದಲನ್ನು ಕಪ್ಪಗಾಗಿಸುವ ಸ್ವಾಭಾವಿಕ ಡೈ ಎಂದೇ ನೆಲ್ಲಿಕಾಯಿ ಜನಜನಿತವಾಗಿದೆ. ನೀರಿನಲ್ಲಿ ನೆಲ್ಲಿಕಾಯಿಯನ್ನು ಬೇಯಿಸಿಕೊಳ್ಳಿ ಮತ್ತು ಪೇಸ್ಟ್ನಂತೆ ಇದನ್ನು ತಯಾರಿಸಿಕೊಳ್ಳಿ. ಕೂದಲಿನ ಬುಡಕ್ಕೆ ನೇರವಾಗಿ ಇದನ್ನು ಹಚ್ಚಿಕೊಳ್ಳಿ. ಒಂದು ತಿಂಗಳು ಈ ಸಲಹೆಯನ್ನು ಪಾಲಿಸಿ ಅಂತೆಯೇ ನಿಮ್ಮ ಬಿಳಿಕೂದಲು ಕಪ್ಪಗಾಗುವು ಅದ್ಭುತ ಪರಿಣಾಮವನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಓಟ್ಸ್ ಮಾಸ್ಕ್
ಓಟ್ಸ್ನಲ್ಲಿ ಬಯೋಟಿನ್ ಅಂಶವಿದ್ದು ಇದು ಕೂದಲಿಗೆ ಗಾಢವಾದ ಮತ್ತು ಆಳವಾದ ಬಣ್ಣವನ್ನು ನೀಡುತ್ತದೆ. ತಲೆಹೊಟ್ಟಿಗೂ ಈ ನೈಸರ್ಗಿಕ ವಿಧಾನ ಪ್ರಯೋಜನಕಾರಿ ಎಂದೆನಿಸಿದ್ದು ಕೂದಲಿನ ನೈಸರ್ಗಿಕ ಬೆಳವಣಿಗೆಗೆ ಇದು ಕಾರಣವಾಗಿದೆ.



Click it and Unblock the Notifications