Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಕೇಶರಾಶಿಯ ಸೌಂದರ್ಯಕ್ಕೆ, ಶಕ್ತಿಶಾಲಿ ಮನೆಮದ್ದು
ಒಂದು ವೇಳೆ ಆಕರ್ಷಕವಾದ ಉದ್ದ ಕೂದಲು ಹೊಂದಬೇಕು ಎಂದು ಬಯಸುವವರಲ್ಲಿ ನೀವು ಸಹ ಒಬ್ಬರಾಗಿದ್ದಲ್ಲಿ, ನಿಮಗಾಗಿ ಈ ಅಂಕಣ. ಇದನ್ನು ನೀವು ತಪ್ಪದೆ ಓದಬೇಕು. ಮಾರುಕಟ್ಟೆಯಲ್ಲಿ ನಿಮ್ಮ ಕೂದಲನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಬೇಕಾದ ಹಲವಾರು ಶಾಂಪೂ, ಎಣ್ಣೆ, ಕಂಡೀಶನರ್‌ಗಳು ದೊರೆಯುತ್ತವೆ. ಇವೆಲ್ಲವೂ ನಿಮ್ಮ ಕೂದಲಿನ ಬೆಳವಣಿಗೆ ಸಹಕರಿಸುತ್ತವೆ ಎಂದು ಪ್ರಚಾರ ಮಾಡಲಾಗಿರುತ್ತದೆ. ಕೂದಲಿನ ಸಮಸ್ಯೆಗೆ, ನೈಸರ್ಗಿಕ ಎಲೆಗಳಿಂದ ಆರೈಕೆ
ಆದರೆ ಸೌಂದರ್ಯ ತಜ್ಞರ ಪ್ರಕಾರ, ಮನೆ ಮದ್ದುಗಳ ಮುಂದೆ ಇವೆಲ್ಲವು ಸೊನ್ನೆಯಂತೆ!. ಹೌದು ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಮನೆ ಮದ್ದುಗಳು ಅಂಗಂಡಿಯಲ್ಲಿ ದೊರೆಯುವ ಉತ್ಪನ್ನಗಳಿಗಿಂತ ಒಂದು ಕೈ ಮೇಲೆಯೇ ಎನ್ನುವುದು ಇವುಗಳನ್ನು ಬಳಸಿದ ಹಲವರ ಅಭಿಪ್ರಾಯವಾಗಿದೆ.

ಅಡುಗೆ ಮನೆಯಲ್ಲಿ ದೊರೆಯುವ ಹಲವಾರು ಪದಾರ್ಥಗಳಲ್ಲಿ ಆರೋಗ್ಯಕರ ಅಂಶಗಳು ಅಡಗಿರುವುದು ತಿಳಿದಿರುವ ಸಂಗತಿಯೇ. ಇವುಗಳನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ವಾಸ್ತವ ಏನಪ್ಪಾ ಎಂದರೆ ದೀರ್ಘ ಕಾಲ ಇವುಗಳನ್ನು ಬಳಸಿದರೆ ಉತ್ತಮ ಕೂದಲು ನಿಮ್ಮದಾಗುವುದು ಖಂಡಿತ.
ಇಂದು ಬೋಲ್ಡ್‌ಸ್ಕೈ ನಿಮಗಾಗಿ ಎರಡು ಶಕ್ತಿಶಾಲಿ ಪದಾರ್ಥಳ ಮಹತ್ವವನ್ನು ತಿಳಿಸಿಕೊಡುತ್ತಿದೆ. ಇವು ನಿಮ್ಮ ಕೂದಲಿಗೆ ಬೇಕಾದ ಹೊಳಪಿನ ಜೊತೆಗೆ ಆರೋಗ್ಯವನ್ನು ಸಹ ನೀಡುತ್ತವೆ. ಅವು ಯಾವುವೆಂದರೆ ಜೇನು ತುಪ್ಪ ಮತ್ತು ಆಲೀವ್ ಎಣ್ಣೆ. ಹೌದು ಇವುಗಳನ್ನು ಬೆರೆಸಿಕೊಂಡು ನಿಮ್ಮ ಕೂದಲಿಗೆ ಲೇಪಿಸಿದರೆ ಅದರಿಂದ ಬರುವ ಪ್ರಯೋಜನಗಳು ಅಗಾಧ. ಕೂದಲುದುರುವಿಕೆ ತಡೆಯಲು ನೈಸರ್ಗಿಕ ವಿಧಾನಗಳು
ಈ ಮಿಶ್ರಣವನ್ನು ತಯಾರಿಸುವ ವಿಧಾನ
ಒಂದು ಬಟ್ಟಲಿನಲ್ಲಿ ಆಲೀವ್ ಎಣ್ಣೆಯನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಕಪ್ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಒಂದು ವೇಳೆ ಈ ಮಿಶ್ರಣವು ಅಂಟು, ಅಂಟಾಗಿ ಕಂಡುಬಂದಲ್ಲಿ ಮತ್ತಷ್ತು ಆಲೀವ್ ಎಣ್ಣೆಯನ್ನು ಬೆರೆಸಿಕೊಳ್ಳಿ. ಈಗ ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ 3 ನಿಮಿಷಗಳ ಕಾಲ ಕಾಯಿಸಿ. ಇದು ಮುಗಿದ ಮೇಲೆ, ಇದನ್ನು ತಂಪಾಗಲು ಬಿಡಿ.
ಯಾವಾಗ ಲೇಪಿಸಿಕೊಳ್ಳಬೇಕು
ಈ ಅದ್ಭುತ ಚಿಕಿತ್ಸೆಯನ್ನು ಬಳಸುವ ಮುನ್ನ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ. ಅದು ಅರ್ಧ ಒಣಗಿದ್ದರೆ ಒಳ್ಳೆಯದು. ಬೆಚ್ಚಗಿನ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಲೇಪಿಸಿ ಮಸಾಜ್ ಮಾಡಿ. ಕೂದಲಿನ ಬುಡದಿಂದ ತುದಿಯವರೆಗೆ ಎಣ್ಣೆ ಲೇಪನವಾಗಲಿ. ಇದು ನಿಮ್ಮ ಕೂದಲಿನ ಮೇಲೆ 30 ನಿಮಿಷದ ಕಾಲ ಇರಲಿ. ನಂತರ ಎಣ್ಣೆ ಹೋಗುವ ರೀತಿ ಕೂದಲನ್ನು ತೊಳೆದುಕೊಳ್ಳಿ.
ಈ ಪದಾರ್ಥಗಳನ್ನು ಏಕೆ ಮಿಶ್ರಣ ಮಾಡಲಾಗುತ್ತದೆ?
ಮೊದಲೆ ತಿಳಿಸಿದಂತೆ, ಈ ಮಿಶ್ರಣದಲ್ಲಿರುವ ಆಲೀವ್ ಎಣ್ಣೆಯು ನಿಮ್ಮ ಕೂದಲಿಗೆ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಹಾನಿಗೊಂಡ ಕೂದಲನ್ನು ಸರಿಪಡಿಸುತ್ತದೆ. ಜೇನು ತುಪ್ಪವು ನಿಮ್ಮ ಕೂದಲಿಗೆ ಹೊಳಪನ್ನು ನೀಡುತ್ತದೆ ಮತ್ತು ಕೂದಲಿನ ಬುಡಕ್ಕೆ ಶಕ್ತಿಯನ್ನು ಸಹ ನೀಡುತ್ತದೆ.
ಯಾವಾಗ ಈ ಎರಡು ಪದಾರ್ಥಗಳು ಒಂದುಗೂಡುತ್ತವೆಯೋ, ಆಗ ಅದು ಕೂದಲಿನ ಬುಡಕ್ಕೆ ಪರಿಣಾಮಕಾರಿ ಪ್ರಯೋಜನಗಳನ್ನು ನೀಡುವ ದಿವ್ಯೌಷಧವಾಗುತ್ತದೆ. ಆಗ ಇದು ತಲೆ ಹೊಟ್ಟು, ಇನ್‌ಫೆಕ್ಷನ್, ಕೂದಲು ಉದುರುವಿಕೆ ಮತ್ತು ಹೇನು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಅಂಗೈಯಲ್ಲಿಯೇ ಇದೆ ಮದ್ದು!
ಈ ಮಿಶ್ರಣದಿಂದ ಗರಿಷ್ಠ ಪ್ರಯೋಜನಗಳನ್ನು ಹೇಗೆ ಪಡೆಯುವುದು
ಈ ಮಿಶ್ರಣದಿಂದ ಗರಿಷ್ಠ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಲು, ಇದನ್ನು ನೀವು ಲೇಪಿಸಿಕೊಂಡಾಗ, ಹೇರ್ ಮಾಸ್ಕ್ ಅನ್ನು ಧರಿಸಿ. ಇಡೀ ತಲೆಗೆ ಈ ಆರೋಗ್ಯಕಾರಿ ಮಿಶ್ರಣವನ್ನು ಲೇಪಿಸಿಕೊಂಡಾಗ, ಇಡೀ ತಲೆಯನ್ನು ಒಂದು ಒಣ ಟವೆಲ್‌ನಿಂದ ಸುತ್ತಿಕೊಳ್ಳಿ. ಈ ಮಾಸ್ಕ್ ನಿಮ್ಮ ತಲೆಗೆ ಬೇಕಾದ ತೇವಾಂಶವನ್ನು ಒದಗಿಸುತ್ತದೆ ಮತ್ತು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ.
ಈ ಮಿಶ್ರಣವನ್ನು ತಿಂಗಳಿಗೆ ಮೂರು ಬಾರಿ ಲೇಪಿಸಿಕೊಂಡಾಗ, ಅದರಿಂದ ಉಂಟಾಗುವ ಬದಲಾವಣೆಗಳನ್ನು ನೀವೇ ಗಮನಿಸಬಹುದು. ಇನ್ನೇಕೆ ತಡ ಇದನ್ನು ಇಂದೇ ತಯಾರಿಸಿಕೊಂಡು, ಪ್ರಯೋಗ ಮಾಡಿ.



Click it and Unblock the Notifications



