Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಚಹಾದಿಂದ ಕೂಡ ಕೂದಲಿನ ಸೌಂದರ್ಯ ವೃದ್ಧಿ!
ಕೇಶಸೌಂದರ್ಯಕ್ಕಾಗಿ ನಾವು ಹಲವಾರು ವಿಧಾನಗಳನ್ನು ಅನುಸರಿಸುತ್ತೇವೆ. ಮಿರಮಿರನೆ ಮಿಂಚುವ ದಟ್ಟನೆಯ ಕೇಶರಾಶಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಆದರೆ ಪ್ರದೂಷಿತ ವಾತಾವರಣ ಮತ್ತು ನಾವು ಅನುಸರಿಸುವ ಆರೋಗ್ಯ ಪದ್ಧತಿಯಿಂದ ನಮ್ಮ ಕೂದಲಿನ ಸೌಂದರ್ಯವನ್ನು ನಾವು ಹಾಳುಮಾಡುತ್ತಿದ್ದೇವೆ. ನಂತರ ನಮ್ಮನ್ನು ನಾವೇ ದೂಷಿಸಿ ಇಲ್ಲವೇ ಮರುಗಿ ಪ್ರಯೋಜನವಾದರೂ ಏನು? ಅದಾಗ್ಯೂ ಕೂದಲಿನ ಚೆಲುವನ್ನು ವರ್ಧಿಸಲು ಹಲವಾರು ಮನೆಮದ್ದುಗಳು ಲಭ್ಯವಿದ್ದು ಅವುಗಳನ್ನು ಬಳಸಿ ನಿಮ್ಮ ಕೂದಲಿನ ಚೆಲುವನ್ನು ಉಳಿಸಿಕೊಳ್ಳಬಹುದು.
ಇಂತಹ ಮನೆಮದ್ದುಗಳಲ್ಲಿ ಚಹಾ ಕೂಡ ಒಂದು. ಬೇರೆ ಬೇರೆ ಚಹಾವನ್ನು ಬಳಸಿಕೊಂಡು ದಟ್ಟನೆಯ ಆರೋಗ್ಯಪೂರ್ಣ ಮೆರುಗಿನ ಕೂದಲನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಕೂದಲು ಡ್ರೈ ಮತ್ತು ತುರಿಕೆಯದ್ದಾಗಿದೆ ಎಂದಾದಲ್ಲಿ ಈ ಚಹಾ ಖಂಡಿತವಾಗಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು. ನಿಮ್ಮ ಕೂದಲಿಗೆ ಈ ಚಹಾವನ್ನು ಹಚ್ಚಿಕೊಂಡು ನೆತ್ತಿಯನ್ನು ಮಸಾಜ್ ಮಾಡಿದರೆ ಸಾಕು ಇದು ರಕ್ತ ಪ್ರಸಾರವನ್ನು ವರ್ಧಿಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ. ಅಂತೆಯೇ ನೆರೆಗೂದಲನ್ನು ಮರೆಮಾಡಲು ಕೂಡ ಚಹಾದ ಬಳಕೆಯನ್ನು ಕೂದಲಿಗೆ ಮಾಡಬಹುದಾಗಿದೆ. ಹಾಗಿದ್ದರೆ ಕೂದಲಿನ ಸೌಂದರ್ಯವನ್ನು ವೃದ್ಧಿಸುವ ಆ ಚಹಾಗಳಾವುವು ಎಂಬುದನ್ನು ನೋಡಲು ಇಂದಿನ ಲೇಖನ ನಿಮಗೆ ನೆರವಾಗಲಿದೆ, ಸ್ಲೈಡ್ ಕ್ಲಿಕ್ ಮಾಡಿ...

ಗ್ರೀನ್ ಟೀ
ಪ್ರತಿ ದಿನ ತಲೆಗೆ ಹಚ್ಚಿಕೊಳ್ಳುವ ಎಣ್ಣೆಯೊಂದಿಗೆ ಗ್ರೀನ್ ಟೀ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಬೆರಳಿನಿಂದ ವರ್ತುಲಾಕಾರವಾಗಿ ಮಸಾಜ್ ಮಾಡಿಕೊಳ್ಳುತ್ತಾ ಇರಬೇಕು. ಹೀಗೆ ಆಗಾಗ್ಗೆ ಮಾಡಿಕೊಳ್ಳುತ್ತಿದ್ದರೆ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ.

ಪುದೀನಾ ಚಹಾ
ಕೂದಲಿಗೆ ತಂಪಿನ ಅನುಭವವನ್ನು ಪುದೀನಾ ಚಹಾ ನಿಮಗೆ ನೀಡುತ್ತದೆ. ನಿಮ್ಮ ಕೂದಲಿಗೆ ಪುದೀನಾ ಚಹಾವನ್ನು ಬಳಸಿದ ಸಂದರ್ಭದಲ್ಲಿ, ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಚಹಾವನ್ನು 15 ನಿಮಿಷಗಳ ಕಾಲ ನೆತ್ತಿಯಲ್ಲಿ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

ಶುಂಠಿ ಚಹಾ
ಉರಿಯೂತ ಗುಣಗಳನ್ನು ಶುಂಠಿ ಚಹಾ ಒಳಗೊಂಡಿರುವುದರಿಂದ ಇದನ್ನು ಯಾವುದೇ ಭಯವಿಲ್ಲದೆ ಕೂದಲು ಮತ್ತು ನೆತ್ತಿಗೆ ಬಳಸಿಕೊಳ್ಳಬಹುದಾಗಿದೆ. ತಲೆಹೊಟ್ಟಿನ ನಿವಾರಣೆಯನ್ನು ಮಾಡಲು ಶುಂಠಿ ಚಹಾ ಅತ್ಯುತ್ತಮವಾಗಿದ್ದು ಕೂದಲಿನ ಬುಡವನ್ನು ದೃಢಪಡಿಸುತ್ತದೆ ಮತ್ತು ನೆತ್ತಿಯ ಸೋಂಕನ್ನು ನಿವಾರಿಸುತ್ತದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಚಮೈಲಿ ಚಹಾ
ಉರಿಯೂತ ವಿರೋಧಿ, ಉದ್ರೇಕಕಾರಿ ಮತ್ತು ಸೂಕ್ಷ್ಮಜೀವಿ ಪ್ರತಿರೋಧಕ ಅಂಶಗಳನ್ನು ಚಮೈಲಿ ಚಹಾ ಒಳಗೊಂಡಿದ್ದು ಇದರಿಂದ ಕೂದಲನ್ನು ತೊಳೆದುಕೊಳ್ಳುವುದರಿಂದ ವ್ಯತ್ಯಾಸವನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ. ಕೂದಲಿನ ಬೆಳವಣಿಗೆಯನ್ನು ಈ ಚಹಾ ಮಾಡಲಿದ್ದು ಕೂದಲು ಉದುರುವುದು ಮತ್ತು ಕೂದಲು ತೆಳುವಾಗುವಿಕೆಯನ್ನು ಇದು ತಡೆಗಟ್ಟುತ್ತದೆ.

ಬ್ಲ್ಯಾಕ್ ಟೀ
ಕೂದಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬ್ಲ್ಯಾಕ್ ಟೀ ಪರಿಣಾಮಕಾರಿಯಾದುದು. ಬ್ಲ್ಯಾಕ್ ಟೀಯು ಡೀಹೈಡ್ರೊಟೆಸ್ಟ್ರೊನ್ ಹಾರ್ಮೋನು ಅನ್ನು ಒಳಗೊಂಡಿದ್ದು ಇದು ಕೂದಲುದುರುವುದನ್ನು ತಡೆಗಟ್ಟುತ್ತದೆ. ಆದ್ದರಿಂದ ವಾರದಲ್ಲಿ ಎರಡು ಬಾರಿ ನಿಮ್ಮ ಕೂದಲನ್ನು ಉಗುರು ಬೆಚ್ಚನೆಯ ಬ್ಲ್ಯಾಕ್ ಟೀಯಿಂದ ತೊಳೆದುಕೊಳ್ಳಿ ಮತ್ತು ಹೊಳೆಯುವ ಕೂದಲನ್ನು ಪಡೆಯಿರಿ.

ದಾಸವಾಳ ಚಹಾ
ದಾಸವಾಳ ಚಹಾ ಕೂದಲಿಗೆ ಬಹು ವಿಧದಲ್ಲಿ ಸಹಕಾರಿಯಾಗಲಿದೆ. ಕೂದಲು ಉದುರುವುದು ಮತ್ತು ಕೂದಲು ತೆಳ್ಳಗಾಗುವಿಕೆಯನ್ನು ಈ ಟೀ ತಡೆಗಟ್ಟುತ್ತದೆ. ಅಂತೆಯೇ ಬೇಸಿಗೆಯಲ್ಲಿ ದಾಸವಾಳ ಟೀಯ ಪರಿಮಳ ಕೂದಲಿಗೆ ಒಳ್ಳೆಯದಾಗಿದೆ. ದಾಸವಾಳ ಹೂವಿನ ಚಹಾ-ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..!



Click it and Unblock the Notifications