Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಸುಂದರ ಕೂದಲಿನ ಆರೈಕೆಗೆ ಸ್ಟೆಪ್ ಬೈ ಸ್ಟೆಪ್ ಟಿಪ್ಸ್...
ಸೌಂದರ್ಯದ ಆರಾಧಕರೇ ಹೆಚ್ಚಾಗಿ ಇರುವ ಕಾಲದಲ್ಲಿ ದೇಹದ ಪ್ರತಿಯೊಂದು ಅಂಗವನ್ನು ಸುಂದರವಾಗಿಟ್ಟುಕೊಳ್ಳಬೇಕಾದ ಅನಿವಾರ್ಯತೆ ನಮಗಿದೆ. ಇಂತಹ ಸಮಯದಲ್ಲಿ ನಾವು ಯಾವುದನ್ನೂ ಕಡೆಗಣಿಸುವಂತಿಲ್ಲ. ಅದರಲ್ಲೂ ಕೂದಲು ದೇಹದ ಸೌಂದರ್ಯವನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಯಾಕೆಂದರೆ ಬೋಳು ತಲೆಯವರು ಎಷ್ಟು ಸುಂದರವಾಗಿದ್ದರೂ ಅಷ್ಟೇ.

ಎಲ್ಲಾ ಬಣ್ಣವನ್ನು ಮಸಿ ನುಂಗಿ ಹಾಕಿತು ಎನ್ನುವಂತೆ ಅವರ ಬೋಳುತಲೆ ಎಲ್ಲಾ ಸೌಂದರ್ಯವನ್ನು ಕಿತ್ತುಕೊಳ್ಳುತ್ತದೆ. ಕೇವಲ ಕೂದಲು ಇದ್ದರೆ ಮಾತ್ರ ಸಾಕಾಗದು, ಕೂದಲು ಆರೋಗ್ಯ ಹಾಗೂ ಸುಂದರವಾಗಿರಬೇಕು. ಕಂದು ಹಾಗೂ ಬಿಳಿ ಕೂದಲು ಇದ್ದರೆ ಕೂದಲಿನ ಸೌಂದರ್ಯ ಹಾಳಾಗುತ್ತದೆ. ಇಂದಿನ ದಿನಗಳಲ್ಲಿ ನಾವು ತಿನ್ನುವಂತಹ ಆಹಾರ ಕೂದಲಿನ ಸೌಂದರ್ಯವನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದಕ್ಕಾಗಿ ಮನೆಯಲ್ಲೇ ಸಿಗುವಂತಹ ಕೆಲವೊಂದು ಆಹಾರವನ್ನು ಬಳಸಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?
ಹದವಾಗಿ ಬೇಯಿಸಿದ ಕೋಸುಗಡ್ಡೆ, ಜಲಸಸ್ಯ ಮತ್ತು ಪಾಲಕದಂತಹ ತರಕಾರಿಗಳು ಕೂದಲಿನ ಬೆಳವಣಿಗೆಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಬೇಯಿಸಿದ ಬೀಟ್ ರೂಟ್ ಮತ್ತು ಕ್ಯಾರೆಟ್ ಕೂಡ ಕೂದಲಿನ ಆರೋಗ್ಯ ಕಾಪಾಡುವುದು. ಪುದೀನಾ ಮತ್ತು ಗ್ರೀನ್ ಟೀ ಸೇವನೆ ಮಾಡುವುದರಿಂದ ಕೂದಲು ಆರೋಗ್ಯವಾಗಿರುತ್ತದೆ.
ಸ್ನಾನ ಮಾಡುವಾಗ ಬಳಸುವ ನೀರು ಕೂಡ ಕೂದಲಿನ ಉದುರುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಹಾನಗರ ಪಾಲಿಕೆ ಸರಬರಾಜು ಮಾಡುವಂತಹ ನೀರಿನಲ್ಲಿ ಹಲವಾರು ರೀತಿಯ ರಾಸಾಯನಿಕ ಹಾಗೂ ಕಬ್ಬಿಣದ ಅಂಶಗಳು ಒಳಗೊಂಡಿರುತ್ತದೆ. ಇದರಿಂದ ಫೀಲ್ಟರ್ ಅಳವಡಿಸಿಕೊಂಡರೆ ಕೂದಲಿಗೆ ಹಾನಿಯಾಗುವುದನ್ನು ತಡೆಯಬಹುದು. ಬೊಕ್ಕತಲೆಯಲ್ಲಿ ಕೂದಲು ಚಿಗುರಿಸಲು ಆಯುರ್ವೇದ ಚಿಕಿತ್ಸೆ
ಕೂದಲಿಗೆ ಶಾಂಪೂ ಮತ್ತು ಕಂಡೀಷನರ್ ಬಳಸಿ. ಶಾಂಪೂ ಮತ್ತು ಕಂಡೀಷನರ್ ಖರೀದಿಸುವ ಮೊದಲು ಅದರಲ್ಲಿನ ಲೇಬಲ್ ಅನ್ನು ಸರಿಯಾಗಿ ಓದಿಕೊಳ್ಳಿ. ಇದರಲ್ಲಿ ಗಡಸಾಗಿರುವ ರಾಸಾಯನಿಕಗಳು ಸೇರ್ಪಡೆಯಾಗಿದೆಯಾ ಎಂದು ಮೊದಲು ತಿಳಿದುಕೊಳ್ಳಿ. ಇದರಿಂದ ನಿಮ್ಮ ಕೂದಲು ಕಂದು ಬಣ್ಣಕ್ಕೆ ತಿರುಗುವುದು.
ತಲೆ ಬುರುಡೆಯನ್ನು ಮೃಧುವಾದ ಬ್ರಶ್‌ನಿಂದ ದಿನದಲ್ಲಿ ಎರಡು ಸಲ ಉಜ್ಜಿಕೊಳ್ಳಿ. ಇದರಿಂದ ಕೂದಲಿನ ಬುಡಕ್ಕೆ ಸರಿಯಾಗಿ ಪೋಷಕಾಂಶಗಳು ಹೋಗಲು ನೆರವಾಗುವುದು. ಹಿಂದಕ್ಕೆ ಹಾಗೂ ಮುಂದಕ್ಕೆ ಬ್ರಶ್ ನಲ್ಲಿ ಉಜ್ಜುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗಿ ಕೂದಲು ಬಣ್ಣ ಕಳೆದುಕೊಳ್ಳುವುದನ್ನು ತಡೆಯುವುದು. ಸೊಂಪಾದ ಕೂದಲಿಗಾಗಿ ಕಲರ್ ಕಲರ್ ಹೇರ್ ಪ್ಯಾಕ್!
ಸರಿಯಾಗಿ ವಿಶ್ರಾಂತಿ ಪಡೆಯಿರಿ ಮತ್ತು ಹೆಚ್ಚಿನ ಒತ್ತಡಕ್ಕೆ ಒಳಗಾಗಬೇಡಿ, ಮದುವೆಯಾಗಿ ಮಕ್ಕಳಿದ್ದರೆ ಆಗ ಸರಿಯಾಗಿ ಚಿಂತಿಸಿ ಯೋಜನೆ ರೂಪಿಸಿ. ಒಳ್ಳೆಯ ಅಭ್ಯಾಸಗಳನ್ನು ಬೆಳೆಸುವುದರಿಂದ ಒತ್ತಡಮುಕ್ತ ಜೀವನ ನಡೆಸಬಹುದಾಗಿದೆ. ಇದರಿಂದ ನಿಮ್ಮ ಕೂದಲು ಕಂದು ಬಣ್ಣಕ್ಕೆ ತಿರುಗುವುದನ್ನು ತಪ್ಪಿಸಬಹುದು. ರಾತ್ರಿ ವೇಳೆ ತೆಂಗಿನ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿಕೊಳ್ಳಿ ಮತ್ತು ರಾತ್ರಿ ಹಾಗೆ ಬಿಡಿ. ಮರುದಿನ ಶಾಂಪೂ ಹಾಕಿ. ಇದು ನಿಮ್ಮ ಕೂದಲಿನ ಬಣ್ಣವನ್ನು ವೃದ್ಧಿಸಿ ಕಾಂತಿಯುತವಾಗಿ ಮಾಡುವುದು.
ಈ ಆರೋಗ್ಯಕಾರಿ ಅಭ್ಯಾಸ ಮತ್ತು ಜೀವನಶೈಲಿಯನ್ನು ಬೆಳೆಸಿಕೊಂಡರೆ ನಿಮ್ಮ ಕೂದಲು ತುಂಬಾ ಆರೋಗ್ಯಕಾರಿ ಹಾಗೂ ಬಲಯುತವಾಗುವುದು. ಇದರಿಂದ ನಿಮ್ಮ ಕೂದಲು ಬೇಗನೆ ಕಂದು ಬಣ್ಣಕ್ಕೆ ತಿರುಗುವುದು ತಪ್ಪುವುದು ಮತ್ತು ನೈಸರ್ಗಿಕ ಬಣ್ಣವನ್ನು ಕಾಪಾಡುವುದು.



Click it and Unblock the Notifications


