Latest Updates
-
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ
ಕೂದಲಿನ ಆರೈಕೆಗೆ ಇಲ್ಲಿದೆ ನೈಸರ್ಗಿಕ ಮನೆಮದ್ದು
ನೈಸರ್ಗಿಕ ಪದಾರ್ಥ, ಗಿಡಮೂಲಿಕೆಗಳಿಂದ ತಯಾರಿಸಲ್ಪಡುವ ಮದ್ದುಗಳು ಕೃತಕ ಮದ್ದುಗಳಿಗಿಂತ ನಿಧಾನವಾದರೂ ಶಾಶ್ವತ ಪರಿಹಾರ ನೀಡಬಲ್ಲದು ಎನ್ನುವುದು ಬಹಳಷ್ಟು ಬಾರಿ ರುಜುವಾತಾಗಿದೆ. ಕಾರ್ಖಾನೆಗಳಲ್ಲಿ ವಿವಿಧ ಕೆಮಿಕಲ್ ಬಳಸಿ ತಯಾರಿಸಲ್ಪಡುವ ವಸ್ತುಗಳು ಮೇಲ್ನೋಟಕ್ಕೆ ಆಕರ್ಷಿತವಾಗಿ, ತಕ್ಷಣ ಪರಿಹಾರ ನೀಡುವಂತಿದ್ದರೂ ನೈಸರ್ಗಿಕ ವಸ್ತುಗಳಿಂದ ತಯಾರಾಗುವ ಪದಾರ್ಥಗಳೇ ಉತ್ತಮ.
ನೈಸರ್ಗಿಕ ವಿಧಾನಗಳಿಂದ, ಮನೆಯಲ್ಲಿ ತಯಾರಿಸಲ್ಪಡುವ ವಸ್ತುಗಳಿಂದ ಕೂದಲನ್ನು ಪೋಷಿಸಲು ಇರುವ ಕೆಲವೊಂದು ವಿಧಾನಗಳನ್ನು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ಸಾದರ ಪಡಿಸುತ್ತಿದೆ. ಮನೆಯಲ್ಲಿ ತಯಾರಿಸಲಾದ ನೈಸರ್ಗಿಕ ವಿಧಾನಗಳಿಂದ ಮಾಡಲಾದ ಮದ್ದಿನಿಂದ ಕೂದಲನ್ನು ಪೋಷಿಸುವ ವಸ್ತುಗಳನ್ನು ಬಳಸಿ ನಿರ್ಜೀವ ಕೂದಲಿಗೆ ಗುಡ್ ಬೈ ಹೇಳಲು ಬಯಸಿದ್ದವರಿಗೆ ಈ ಲೇಖನ ಕೆಲವೊಂದು ಉಪಯುಕ್ತ ಮಾಹಿತಿಯನ್ನು ನೀಡುತ್ತಿದೆ.
ಕೆಲವೊಂದು ಸುಲಭ ವಿಧಾನಗಳನ್ನು ಬಳಸಿ ಮನೆಯಲ್ಲೇ ಕಂಡೀಷನರ್ ಗಳನ್ನು ತಯಾರಿಸಬಹುದಾಗಿದೆ. ಇದರಿಂದ ಅತ್ತ್ಯುತ್ತಮವಾದ ಫಲಿತಾಂಶವೂ ಸಿಗುತ್ತದೆ. ಬ್ರಾಂಡೆಡ್ ಕಂಡೀಷನರ್ ಗಳು ಕೃತಕ ಸುವಾಸನೆ ಉಳ್ಳದ್ದಾಗಿದ್ದು ಅದು ಕೂದಲು ಹಾಗೂ ದೇಹಕ್ಕೆ ಉತ್ತಮವಾದುದಲ್ಲ. ಹೊರಗಡೆ ಸಿಗುವ ಕಂಡೀಷನರ್ ಗಳಲ್ಲಿ ಸಾಮಾನ್ಯವಾಗಿ ಕೂದಲನ್ನು ಪೋಷಿಸುವ ಹಾಗೂ ತೇವಾಂಶವನ್ನು ಕಾಪಾಡುವ ನೈಸರ್ಗಿಕ ತೈಲದ ಅಂಶವು ಇರುವುದಿಲ್ಲ ಹಾಗೂ ಇದರಲ್ಲಿ ಡೈಮೆಥಿಕೋನ್ ಅಂಶ ಹೆಚ್ಚಾಗಿ ಇರುವುದರಿಂದ ಇದು ಕೂದಲಿನ ತೇವಾಂಶವನ್ನು ಕಾಪಾಡದೇ ಹೋಗಲಾಡಿಸುತ್ತದೆ. ಇನ್ನೊಂದು ಕಡೆ ನಾವು ಬಳಸುವ ನೈಸರ್ಗಿಕ ಕಂಡೀಷನರ್ ಗಳಲ್ಲಿ ಹೇರಳವಾದ ತೈಲದ ಅಂಶ ಇರುವುದರಿಂದ ಇದು ನಿಮ್ಮ ಕೂದಲಿನ ತೇವಾಂಶವನ್ನು ಉತ್ತಮ ರೀತಿಯಲ್ಲಿ ಕಾಪಾಡುತ್ತದೆ.
ನೈಸರ್ಗಿಕ ಕಂಡೀಷನರ್ ಗಳು ಸುವಾಸನೆ ರಹಿತ ಮತ್ತು ಸುವಾಸನೆಯುಕ್ತ ಹೀಗೆ ಎರಡೂ ರೀತಿಯಲ್ಲಿ ದೊರೆಯುತ್ತದೆ. ಇದಕ್ಕೆ ನೀವು ನಿಮ್ಮ ಆಯ್ಕೆಯ ಯಾವುದಾದರೂ ಎಣ್ಣೆಯನ್ನು ಬಳಸಿಕೊಳ್ಳಬಹುದಾಗಿದೆ. ಕೂದಲಿನ ಸುಂದರತೆಯನ್ನು ಇನ್ನೂ ಹೆಚ್ಚಿಸಲು, ಕೂದಲಿನ ನಿರ್ಜೀವತೆಯನ್ನು ಹೋಗಲಾಡಿಸಲು ಈ ನೈಸರ್ಗಿಕ ವಿಧಾನವನ್ನು ಬಳಸಿ. ಇದು ಕೂದಲಿನ ಸದೃಢತೆ ಮತ್ತು ನೈಸರ್ಗಿಕ ಕಾಂತಿ ಮರಳಿ ತರಲು ಈ ನೈಸರ್ಗಿಕ ಕಂಡಿಷನರ್ ಪಾಕವಿಧಾನಗಳನ್ನು ಬಳಸಿ. ಹೆಚ್ಚು ಖರ್ಚಿಲ್ಲದೆ ಪಕ್ಕದ ಮಾರುಕಟ್ಟೆಯಲ್ಲಿ ಸಿಗುವಂತಹ ಸರಳ, ಸುಲಭ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ನಿಮ್ಮ ಒರಟಾದ ಮತ್ತು ನಿರ್ಜೀವ ಕೂದಲನ್ನು ಸುಂದರ ಕಾಣುವಂತೆ ಮಾಡಿ.

ವಿಧಾನ 1.
ಒಂದು ಪಾತ್ರೆಯಲ್ಲಿ ಆರು ಟೇಬಲ್ ಚಮಚ ಜೊಜೊಬಾ ಎಣ್ಣೆಯನ್ನು ಒಂದು ಲೋಟ ಅಲೊವೇರಾ ಜೆಲ್ ಮಿಶ್ರಣದೊಂದಿಗೆ ಸೇರಿಸಿ ಇಟ್ಟುಕೊಳ್ಳಬೇಕು. ಜೊಜೊಬಾ ಎಣ್ಣೆಯು ಕೂದಲನ್ನು ಪುನಶ್ಚೇತನಗೊಳಿಸುವಲ್ಲಿ ಮತ್ತು ತೇವಾಂಶವನ್ನು ಕಾಪಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಕ್ಕೆ ಒಂದು ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಸೇರಿಸಬೇಕು. ಸುವಾಸನೆಗಾಗಿ ಲ್ಯಾವೆಂಡರ್ ಎಣ್ಣೆಯನ್ನು (ಸುಗಂಧ ದ್ರವ್ಯ) ಸೇರಿಸಿ ಒಂದು ಬಾಟಲಿಯಲ್ಲಿ ಇವೆಲ್ಲದರ ಮಿಶ್ರಣವನ್ನು ಮಾಡಿಟ್ಟು ಕೊಂಡಿರಬೇಕು. ಈ ಕಂಡಿಷನರಿನ ದಕ್ಷತೆಯನ್ನು ಸುಧಾರಿಸುವ ಸಲುವಾಗಿ, ಇದನ್ನು ರೆಫ್ರಿಜರೇಟರ್ ನಲ್ಲಿ ಒಂದು ಕಪ್ಪು ಬಣ್ಣದ ಬಾಟಲ್ ನಲ್ಲಿ ಸಂಗ್ರಹಿಸಿಯಿಡುವುದು ಉತ್ತಮ.
ಇದನ್ನು ಉಪಯೋಗಿಸುವ ಮುನ್ನ ಕೂದಲಿನ ಶೈಲಿಯನ್ನು ಬದಲಾಯಿಸುವ ಮೊದಲು ತೇವಕ್ಕಾಗಿ ಈ ಮಿಶ್ರಣವನ್ನು ಉಪಯೋಗಿಸಿ. ಕಂಡೀಷನರ್ ಅನ್ನು ಒಂದು ಲೋಟ ನೀರಿಗೆ, ಎರಡು ಟೀ ಚಮಚ ಸೂರ್ಯಕಾಂತಿ ಎಣ್ಣೆ, ಎರಡು ಎರಡು ಟೀ ಚಮಚ ಆಲಿವ್ ಎಣ್ಣೆ, ಮತ್ತು ನಾಲ್ಕು ಟೇಬಲ್ ಚಮಚದ ಅಳತೆಯೊಂದಿಗೆ ದಿನ ನಿತ್ಯದ ಕಂಡೀಷನರ್ ಜೊತೆಗೆ ಬಳಸಿಕೊಳ್ಳಬಹುದು. ಈ ನೈಸರ್ಗಿಕವಾದ ಕಂಡೀಷನರ್ ಅನ್ನು ಉಪಯೋಗಿಸುವುದರಿಂದ ಇದರಲ್ಲಿ ರಾಸಾಯನಿಕ ಅಂಶಗಳು ಇರುವುದಿಲ್ಲವಾದುದರಿಂದ ಕೂದಲು ಸುಂದರವಾಗಿ ಮತ್ತು ರೇಷ್ಮೆಯ ನುಣುಪು ಬರುವಂತೆ ಮಾಡುತ್ತದೆ.
ಸ್ಪ್ರೇ (ಸಿಂಚನ) ಮಾಡಿಕೊಳ್ಳುವ ಬಾಟಲಿಯಲ್ಲಿ ಒಮ್ಮೆಗೆ ಬೇಕಾಗುವಷ್ಟು ಮಾತ್ರ ತೆಗೆದಿಟ್ಟುಕೊಂಡು ಮತ್ತು ಇದನ್ನು ಸ್ನಾನ ಮಾಡುವಾಗ ಸ್ವಲ್ಪ ಪ್ರಮಾಣದಲ್ಲಿ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಬೇಕು. ಇದು ಕೂದಲಿಗೆ ಕಾಂತಿಯನ್ನು ಮಾತ್ರವಲ್ಲದೇ ಕೂದಲಿಗೆ ಬೇಕಾಗುವ ವಿಟಮಿನ್ ಗಳನ್ನು ಒದಗಿಸುವಂತಹ ಕಂಡೀಷನರ್ ಆಗಿರುತ್ತದೆ. ತೆಂಗಿನ ಎಣ್ಣೆಯನ್ನು ಅಂಗೈಯಲ್ಲಿ ತೆಗೆದುಕೊಂಡು ಉಜ್ಜಿ ಬಳಸುವುದರಿಂದ ಕಂಡೀಷನರ್ ಏಕರೂಪದಲ್ಲಿ ಎಲ್ಲಾ ಕಡೆ ಹರಡಲು ಅನುಕೂಲವಾಗುತ್ತದೆ. ತೆಂಗಿನ ಎಣ್ಣೆ ತಲೆಯ ಬುಡದಿಂದ ಉಜ್ಜುವುದರಿಂದ ಕೂದಲಿನ ಬೇರುಗಳಿಗೆ ಉತ್ತಮ ಫಲ ನೀಡುತ್ತದೆ. ಇದರಿಂದ ಕೂದಲು ಒಣಗಿದ ನಂತರ ಫೈಬ್ರಿಲ್ ಮೃದುವಾಗಿರುವಂತೆ ಮಾಡುತ್ತದೆ. ಇದು ಕಡಿಮೆ ಖರ್ಚುಳ್ಳ ಮತ್ತು ಒಳ್ಳೆಯ ಫಲಿತಾಂಶ ಕೊಡುವ ಉತ್ತಮ ಕಂಡೀಷನರ್ ಗಳಲ್ಲೊಂದು.
ವಿಧಾನ 2: ನಾಲ್ಕು ಟೇಬಲ್ ಚಮಚ ಹೊಂಬಣ್ಣದ ಜೊಜೊಬಾ ಎಣ್ಣೆಯ ಜೊತೆ ಅರ್ಧ ಲೋಟ ಶುದ್ಧ ನೀರು ಮತ್ತು ಆರು ತೊಟ್ಟು ಪೆಪ್ಪರ್ ಮಿಂಟ್ ಅಂಶವಿರುವ ಎಣ್ಣೆ ಇವೆಲ್ಲವನ್ನು ಸೇರಿಸಿ ಮಿಶ್ರಣ ಮಾಡಿ ಇಟ್ಟುಕೊಂಡಿರಬೇಕು. ಪೆಪ್ಪರ್ ಮಿಂಟ್ ಮತ್ತು ಜೊಜೊಬಾ, ಕೂದಲು ಹಾಳಾಗುವುದನ್ನು ತಡೆಗಟ್ಟುವಲ್ಲಿ ಮಹತ್ವದ ಕೆಲಸವನ್ನು ಮಾಡುತ್ತದೆ. ಹಾಗಾಗಿ, ಈ ವಿಧಾನವನ್ನು ಬಳಸಿ ನೈಸರ್ಗಿಕವಾದ ಪ್ರಯೋಗವನ್ನು ಬಳಸಿಕೊಳ್ಳಬಹುದಾಗಿದೆ.
ವಿಧಾನ 3: ಬಾಯ್ಲರ್ ನಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಟ್ಟುಕೊಂಡು, ನಂತರ ಇದಕ್ಕೆ ಬೆಹೆನ್ರಿಮೋನಿಯಮ್ ಕ್ಲೋರೈಡ್ ಮತ್ತ್ ಸಿಟಿಲ್ ಆಲ್ಕೋಹಾಲ್ ಅನ್ನು ಸೇರಿಸಿ, ನಂತರ ಇದನ್ನು ಒಂದು ಬ್ಲೆಂಡರಲ್ಲಿ ಹಾಕಿ ಸರಿಯಾಗಿ ಮಿಶ್ರಣ ಆಗುವಂತೆ ಮಾಡಬೇಕು. ಬೆಹೆನ್ರಿಮೋನಿಯಮ್ ಕ್ಲೋರೈಡ್ ಅಂಶ ಪೂರ್ತಿಯಾಗಿ ಕರಗುವುದಿಲ್ಲ, ಹಾಗಾಗಿ ಇದು ಬ್ಲೆಂಡರ್ ನಲ್ಲಿ ಮಾತ್ರ ಸರಿಯಾಗಿ ಕರಗುತ್ತದೆ. ಅಪ್ಪಟವಾದ ಗುಣಮಟ್ಟದ ಸರಕುಗಳನ್ನು ತಯಾರಿಸಲು, ಹೈಡ್ರಲೈಸ್ ಪ್ರೋಟೀನ್ ಮತ್ತು ಪಾನ್ತಿಲೋನ್ ಅನ್ನು ಬಳಸದೆಯೇ ಒಂದು ಉತ್ತಮ ಗುಣಮಟ್ಟದ ವಸ್ತುವನ್ನು ಪಡೆಯಬಹುದು. ಇದಕ್ಕೆ ತೆಂಗಿನ ಎಣ್ಣೆ ಹೊರತಾಗಿ ಬೇರೆ ಎಣ್ಣೆಗಳನ್ನೂ ಬಳಸಬಹುದಾಗಿದೆ.
ವಿಧಾನ 4:
ಒಣ ಕೂದಲು ಮೇಲೆ ಶುದ್ಧ ಆರ್ಗನ್ (ವ್ಯಾದ್ಯ) ತೈಲ ಲೇಪಿಸುವುದರಿಂದ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ ಮತ್ತು ಇದನ್ನು ಸ್ವಲ್ಪ ಪ್ರಮಾಣದಲ್ಲಿ ಅಳವಡಿಸಿಕೊಂಡರೆ ನಿಜವಾಗಿಯೂ ಉತ್ತಮ ಫಲಿತಾಂಶ ಕೊಡುವುದರಲ್ಲಿ ಅನುಮಾನವೇ ಇಲ್ಲ. ಇದನ್ನು ತೆಂಗಿನ ಎಣ್ಣೆ ಜೊತೆ ಸೇರಿಸಿ ಬಳಸಲು ಅಡ್ಡಿಯಿಲ್ಲ, ಜೊತೆಗೆ ಮನೆಯಲ್ಲೇ ತಯಾರಿಸಲಾದ ಕಂಡೀಷನರ್ ಇದಾಗಿರುವುದರಿಂದ ಖಂಡಿತವಾಗಿಯೂ ಇಷ್ಟವಾಗಬಹುದು.



Click it and Unblock the Notifications














