Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಹೆಲ್ಮೆಟ್‌ನೊಳಗೊಂದು ಸೌಂದರ್ಯ ರಹಸ್ಯ..
ಟ್ರಾಫಿಕ್ ನ ಹೊಸ ರೂಲ್ಸ್ ನಿಂದಾಗಿ ಈಗಂತೂ ಎಲ್ಲೆಲ್ಲೂ ಹೆಲ್ಮೆಟ್ ಬಗ್ಗೆಯೇ ಚರ್ಚೆಗಳು ಶುರುವಾಗಿದೆ.. ದ್ವಿಚಕ್ರ ವಾಹನದಲ್ಲಿ ಓಡಾಡುವವರೆಲ್ಲರಿಗೂ ಹೆಲ್ಮೆಟ್ ಕಡ್ಡಾಯವಾಗಿದೆ. ಮುಂದೆ ಡ್ರೈವ್ ಮಾಡುವವರೂ ಹೆಲ್ಮೆಟ್ ಧರಿಸಬೇಕು, ಹಿಂದೆ ಕೂತಿರುವವರೂ ಹೆಲ್ಮೆಟ್ ಧರಿಸ್ಬೇಕು. ಮೊದಲೆ ಹೆಲ್ಮೆಟ್ ಧರಿಸಿದ್ರೆ ಕೂದಲು ಹಾಳಾಗುತ್ತೆ. ಮುಖದ ಕಾಂತಿ ಹಾಳಾಗುತ್ತೆ ಅಂತ ಪರಿತಪಿಸ್ತಾ ಇದ್ದವರೆಲ್ಲ, ಹಿಂದೆ ಕೂತಾಗಲೂ ಈ ಗೋಳು ಶುರುವಾಗಿದ್ಯಲ್ಲ ಅಂತ ಗೋಳಾಡುವಂತಾಗಿದೆ.
ಹೌದು, ಹೆಲ್ಮೆಟ್ ಹೆಚ್ಚಿನವರಿಗೆ ಹೇರ್ ಫಾಲ್, ಡ್ಯಾಂಡ್ರಫ್, ತಲೆ ತುರಿಕೆ, ಹೀಗೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತೆ. ಹೆಲ್ಮೆಟ್ ಧರಿಸಿವಾಗ ಸ್ವಲ್ಪ ಕಾಳಜಿ ತೆಗೆದುಕೊಂಡ್ರೆ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು, ಜೊತೆಗೆ ಹೆಲ್ಮೆಟ್ ಧರಿಸುವಾಗ್ಲೂ ಒಂದಷ್ಟು ರೂಲ್ಸ್ ಫಾಲೋ ಮಾಡಬೇಕಾಗುತ್ತೆ. ಆಗ ನಿಮ್ಮ ಸೌಂದರ್ಯವನ್ನು ನೀವು ಕಾಪಾಡಿಕೊಳ್ಳಬಹುದು.. ಬನ್ನಿ ಹೆಲ್ಮೆಟ್‌ನಿಂದಾಗುವ ಕೂದಲಿನ ಸಮಸ್ಯೆಗೆ ಕೆಲವೊಂದು ಸೂಕ್ತ ಸಲಹೆಗಳನ್ನು ನೀಡಿದ್ದೇವೆ ಮುಂದೆ ಓದಿ...

ಹೆಲ್ಮೆಟ್ ಖರೀದಿಸುವಾಗಲೇ ಜಾಗೃತಿ ಬೇಕು
ಮೊದಲನೆಯದಾಗಿ ಹೆಲ್ಮೆಟ್ ಖರೀದಿಸುವಾಗಲೇ ಕೆಲವು ಇಂಪಾರ್ಟೆಂಟ್ ಅಂಶಗಳನ್ನು ಮನದಲ್ಲಿಟ್ಟುಕೊಂಡಿರಬೇಕು. ಉತ್ತಮ ಕಂಪೆನಿಯ ಪ್ರೊಡಕ್ಟ್ ಗಳನ್ನೇ ಆಯ್ಕೆ ಮಾಡಿಕೊಳ್ಳಿ, ಹೆಲ್ಮೆಟ್ ಒಳಗೆ ಗಾಳಿಯಾಡುವಂತೆ ಹೋಲ್ ಗಳಿದ್ದಲ್ಲಿ, ಚರ್ಮದ ಉಸಿರಾಟಕ್ಕೆ ನೆರವಾಗಲಿದೆ. ನಿಮ್ಗೆ ಬೆವತಂತೆ ಫೀಲ್ ಆಗುವುದನ್ನು ತಡೆಯಲು ಇವು ಸಹಕಾರಿಯಾಗಿರುತ್ತೆ. ಆದ್ರೆ ಮುಖ ಫುಲ್ ಕವರ್ ಆಗಿರುವಂತ ಹೆಲ್ಮೆಟ್ ಗಳನ್ನು ಖರೀದಿಸುವುದು ಉತ್ತಮ, ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಹ ಹೆಲ್ಮೆಟ್ ಗಳನ್ನು ಧರಿಸದೇ ಇರುವುದೇ ಸೂಕ್ತ. ಹೆಲ್ಮೆಟ್ ನಿಮ್ಮ ಜೀವರಕ್ಷಕ ಅನ್ನೋದನ್ನು ಮರೀಬೇಡಿ,. ಕೇವಲ ಸೌಂದರ್ಯದ ನೆಪದಿಂದ ನಿಮ್ಮ ಹೆಲ್ಮೆಟ್ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ಕೇವಲ ಸ್ಟೈಲಿಶ್ ಹೆಲ್ಮೆಟ್ ಗಳಿಗೆ ಮಾತ್ರ ಮೊರೆ ಹೋಗದೆ, ಸೇಫ್ಟಿಯ ಬಗ್ಗೆಯೂ ಸ್ವಲ್ಪ ತಿಳಿದು ಖರೀದಿಸುವುದು ಲೇಸು..

ಹೆಲ್ಮೆಟ್ ಧರಿಸುವ ಮೊದಲು..
ನೀವು ಯಾವುದೇ ಹೆಲ್ಮೆಟ್ ಧರಿಸುವ ಮೊದಲು ಒಂದು ಹೇರ್ ಕ್ಯಾಪ್ ಧರಿಸುವುದು ಸೂಕ್ತ. ಹೆಲ್ಮೆಟ್ ನೊಳಗೆ ಧರಿಸಲೆಂದೇ ಸಿಗುವ ಹೇರ್ ಕ್ಯಾಪ್ ಗಳನ್ನು ಖರೀದಿಸಬಹುದು. ಇಲ್ಲವೇ ಕಾಟನ್ ವೇಲ್, ಖರ್ಚೀಫ್ ಗಳನ್ನು ಕೂದಲು ಕವರ್ ಆಗುವಂತೆ ಧರಿಸಿದ್ರೆ ಹೆಲ್ಮೆಟ್ ನಿಮ್ಮ ಕೂದಲಿಗೆ ನೇರವಾಗಿ ಮಾಡುವ ಅಡ್ಡ ಪರಿಣಾಮಗಳನ್ನು ತಪ್ಪಿಸಿಕೊಳ್ಳಬಹುದು.

ಶುಷ್ಕ ಕೂದಲಿನವರು ಹೆಲ್ಮೆಟ್ ಧರಿಸುವಾಗವ ಮೊದಲು..
ನೀವು ಶುಷ್ಕ ಕೂದಲಿನವರಾಗಿದ್ರೆ, ಹೆಲ್ಮೆಟ್ ಧರಿಸುವಾಗ ಸ್ವಲ್ಪ ಹೆಚ್ಚೇ ಕೇರ್ ತೆಗೆದುಕೊಳ್ಳಬೇಕಾಗುತ್ತೆ. ಶುಷ್ಕ ಕೂದಲಿನವರು ಹೆಲ್ಮೆಟ್ ನ್ನು ಗಂಟೆಗಳ ಕಾಲ ಧರಿಸಿದಾಗ ಕೂದಲು ಮತ್ತಷ್ಟು ಹಿಂಸೆ ಅನುಭವಿಸಿ ಬೇಗನೆ ಕಟ್ ಆಗುವ ಸಾಧ್ಯತೆಗಳಿರುತ್ತೆ. ಹಾಗಾಗಿ ತೀರಾ ಡ್ರೈ ಇದ್ದಾಗ ಹೆಲ್ಮೆಟ್ ಧರಿಸಲು ಹೋಗಬೇಡಿ. ನೀವು ಹೆಲ್ಮೆಟ್ ಧರಿಸುವಾಗ ಕೂದಲಿನಲ್ಲಿ ಸ್ವಲ್ಪ ನೀರಿನಂಶ ಯಾವಾಗಲೂ ಇರುವಂತೆ ನೋಡಿಕೊಳ್ಳಿ. ಆದ್ರೆ ಅದು ಬೆವರುವಿಕೆಯಿಂದ ಬಂದಿರುವ ನೀರಾಗಿರಬಾರದು.

ಎಣ್ಣೆ ಜಿಡ್ಡಿನ ಕೂದಲಿಗೆ ಹೆಲ್ಮೆಟ್ ಧರಿಸಬೇಡಿ
ಕೂದಲಿಗೆ ಎಣ್ಣೆ ಹಚ್ಚಿಕೊಂಡಿದ್ದಾಗ ಯಾವುದೇ ಕಾರಣಕ್ಕೂ ಹೆಲ್ಮೆಟ್ ಧರಿಸಬೇಡಿ. ಇದು ಕೂದಲಿಗೂ ಅಪಾಯ ಮತ್ತು ಹೆಲ್ಮೆಟ್ ಕೂಡ ಸ್ಮೆಲ್ ಆಗುವ ಸಾಧ್ಯತೆಗಳಿರುತ್ತೆ. ಎಣ್ಣೆ ಹಚ್ಚಿದ ಕೂದಲಿಗೆ ಹೆಲ್ಮೆಟ್ ಧರಿಸುವ ಅಗತ್ಯತೆ ಎದುರಾದಾಗ ಒಂದು ಕರ್ಚೀಫ್ ಅಥವಾ ಟವೆಲ್ ನ್ನು ತಲೆಗೆ ಕಟ್ಟಿಕೊಂಡು ನಂತ್ರ ಹೆಲ್ಮೆಟ್ ಧರಿಸಿ, ಮತ್ತು ಆ ಬಟ್ಟೆಯನ್ನು ಒಮ್ಮೆ ಮಾತ್ರ ಬಳಸಿ ವಾಷ್ ಮಾಡಿ..

ಡ್ಯಾಂಡ್ರಫ್ ಇರುವವರು ಹೆಲ್ಮೆಟ್ ಧರಿಸುವಾಗ ಏನು ಮಾಡಬೇಕು
ನಿಮ್ಮ ಕೂದಲಿನಲ್ಲಿ ಡ್ಯಾಂಡ್ರಫ್ ಸಿಕ್ಕಾಪಟ್ಟೆ ಇದಿಯಾ.ಹಾಗಾದ್ರೆ ಅದು ನಿಮ್ಮ ಹೆಲ್ಮೆಟ್ ಧರಿಸುವಿಕೆಯಿಂದಲೇ ಆಗಿರುವ ಡ್ಯಾಂಡ್ರಫ್ ಆಗಿರಬಹುದು. ಅಥವಾ ಇನ್ಯಾವುದೇ ಕಾರಣದಿಂದ ಆಗಿರುವ ಡ್ಯಾಂಡ್ರಫ್ ಆಗಿರಬಹುದು. ಆದ್ರೆ ಡ್ಯಾಂಡ್ರಫ್ ಇದ್ದಾಗ ನಿಮ್ಮ ಹೆಲ್ಮೆಟ್ ಬಗ್ಗೆ ಹೆಚ್ಚು ಕೇರ್ ಫುಲ್ ಆಗಿರಬೇಕು. ನಿಮ್ಮ ತಪ್ಪು ನಿಮಗೆ ಮಾರಕವಾಗಿರಬಹುದು. ಹೆಲ್ಮೆಟ್ ಧರಿಸಿದಾಗ ಹೆಲ್ಮೆಟ್ ಎಷ್ಟು ಕ್ಲೀನ್ ಆಗಿ ಇದ್ದರೂ ಸಾಲದು.

ಡ್ಯಾಂಡ್ರಫ್ ಇರುವವರು ಹೆಲ್ಮೆಟ್ ಧರಿಸುವಾಗ ಏನು ಮಾಡಬೇಕು
ಆದಷ್ಟು ಹೆಲ್ಮೆಟ್ ನ್ನು ವಾರಕ್ಕೊಮ್ಮೆ ಒಣ ಬಟ್ಟೆಯಿಂದ ಒರೆಸಿ ಕ್ಲೀನ್ ಮಾಡಬೇಕು. ಹೆಲ್ಮೆಟ್ ನ ಒಳಭಾಗದಲ್ಲಿ ಡ್ಯಾಂಡ್ರಫ್ ಉದುರಿ ಬ್ಯಾಕ್ಟೀರಿಯಾಗಳ ಸಂತತಿ ಹೆಲ್ಮೆಟ್ ಒಳಗಡೆ ಅಧಿಕಗೊಂಡು ಅದು ಮಾರನೇ ದಿನ ನೀವು ಹೆಲ್ಮೆಟ್ ಧರಿಸಿದಾಗ ನಿಮ್ಮ ಕೂದಲಿನ ಚರ್ಮಕ್ಕೆ ಹಾನಿ ಮಾಡಿ ಮತ್ತಷ್ಟು ಡ್ಯಾಂಡ್ರಫ್ ಗೆ ಕಾರಣವಾಗಬಹುದು. ಹಾಗಾಗಿ ಪ್ರತಿ ದಿನ ಹೆಲ್ಮೆಟ್ ನ ಒಳಭಾಗವನ್ನು ಶುದ್ಧವಾದ ಬಟ್ಟೆಯಿಂದ ಒರೆಸಿ ಕ್ಲೀನ್ ಮಾಡಿ.

ಒದ್ದೆ ಕೂದಲಿಗೆ ಹೆಲ್ಮೆಟ್ ಧರಿಸಿದಾಗ
ತಲೆ ಸ್ನಾನ ಮಾಡಿರೋದಷ್ಟೋ.. ಎತ್ತಲೋ ಹೊರಡಬೇಕು. ಕೂದಲು ಒಣಗಿಸಿಕೊಳ್ಳೋಕೆ ಸಮಯವಿಲ್ಲ ಅಂತ ಕೆಲವೊಮ್ಮೆ ಒದ್ದೆ ಕೂದಲಿಗೆ ಹೆಲ್ಮೆಟ್ ಧರಿಸುವ ಸಂದರ್ಬ ಎದುರಾಗಬಹುದು. ಆಗ ಡೈರೆಕ್ಟ್ ಆಗಿ ಒದ್ದೆ ಕೂದಲಿಗೆ ಹೆಲ್ಮೆಟ್ ಧರಿಸಬೇಡಿ. ಹೆಲ್ಮೆಟ್ ನ ಒಳಭಾಗ ಕೂಡ ಒದ್ದೆಯಾಗಿ, ಕೆಲವೇ ನಿಮಿಷದಲ್ಲಿ ನಿಮ್ಮ ಸ್ಕಾಲ್ಪ್ ಭಾಗ ಬೆವರಿ ಹೆಲ್ಮೆಟ್ ತೆಗೆಯೋ ಸಂದರ್ಬದಲ್ಲಿ ಕೂದಲು ವಾಸನೆಯಾಗುವ ಸಾಧ್ಯತೆ ಇರುತ್ತೆ. ಇಂತಹ ಸಂದರ್ಬದಲ್ಲಿ ಕೂದಲನ್ನು ಗಟ್ಟಿಯಾಗಿ ಗಂಟು ಕಟ್ಟದೆ ಫ್ರೀ ಹೇರ್ ಬಿಟ್ಟು ಬಿಡಿ. ಆದಷ್ಟು ಕೂದಲನ್ನು ಒಣಗಿಸಿಕೊಂಡು ಹೆಲ್ಮೆಟ್ ಧರಿಸೋದು ಸೂಕ್ತ.

ಒದ್ದೆ ಕೂದಲಿಗೆ ಹೆಲ್ಮೆಟ್ ಧರಿಸಿದಾಗ
ಹೆಲ್ಮೆಟ್ ಧರಿಸಿದಾಗ ನಿಮ್ಮ ಸ್ಕಾಲ್ಪ್ ಭಾಗ ಅತಿಯಾಗಿ ಬೆವರುತ್ತಿದ್ದಲ್ಲಿ ಕೂಡಲೇ ಮನೆಗೆ ಬಂದವರೇ ಹೇರ್ ವಾಷ್ ಮಾಡ್ಕೊಳ್ಳಿ. ಅದೇ ಕೂದಲನ್ನು ನೀವು ಹಾಗೆಯೇ ಬಿಟ್ರೆ ನಿಮ್ಮ ಕೂದಲು ಹೆಚ್ಚು ದಿನ ನಿಮ್ಮ ತಲೆಯಲ್ಲಿ ಇರಲಿಕ್ಕಿಲ್ಲ. ಹಾಗಾಗಿ ಆದಷ್ಟು ಕ್ಲೆನ್ಸಿನೆಸ್ ಕಾಪಾಡಿಕೊಳ್ಳಲೇಬೇಕು. ಹೆಚ್ಚು ಸಮಯ ಹೆಲ್ಮೆಟ್ ಧರಿಸಿದಾಗ ಸಹಜವಾಗೇ ಸ್ಕಾಲ್ಪ್ ಭಾಗ ಬೆವರುತ್ತೆ. ಇದನ್ನು ಹೆಲ್ಮೆಟ್ ತೆಗೆದ ನಂತರವೂ ಹಾಗೆಯೇ ಬಿಟ್ರೆ ಡ್ಯಾಂಡ್ರಫ್, ತುರಿಕೆ, ಹೇನುಗಳ ಸಂತಾನಕ್ಕೂ ಕೂಡ ಕಾರಣವಾಗಬಹುದು. ಒಟ್ಟಿನಲ್ಲಿ ಹೆಲ್ಮೆಟ್ ಧರಿಸುವಾಗ ಸ್ವಲ್ಪ ಕಾಳಜಿ ತೆಗೆದುಕೊಂಡ್ರೆ ನಿಮ್ಮ ಕೂದಲು ಹೆಚ್ಚು ವರ್ಷ ಆರೋಗ್ಯಪೂರ್ಣವಾಗಿ ನಿಮ್ಮ ಸೌಂದರ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತೆ. ಇಲ್ಲ ಅಂದ್ರೆ ಹೆಲ್ಮೆಟ್ ಬಾಲ್ಡ್ ಹೆಡ್ ಮಾಡೋದು ಗ್ಯಾರೆಂಟಿ.



Click it and Unblock the Notifications