Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಕೂದಲಿನ ಬಣ್ಣ ಬದಲಾಯಿಸುವ ಇರಾದೆಯೇ? ಈ ಲೇಖನ ಓದಿ
ಒಂದು ವೇಳೆ ನಿಮ್ಮಿಂದ ಸಮಯವನ್ನು ಹಿಂದೆ ಹಾಕಿ ಶರೀರವನ್ನು ಹಿಂದಿನ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯವಾಗುವುದಂತಿದ್ದರೆ ಏನನ್ನು ಬಯಸುತ್ತೀರಿ ಎಂದು ಕೇಳಿದರೆ ತಾರುಣ್ಯ, ದಟ್ಟವಾದ ಕೂದಲು, ದೃಢ ಶರೀರ ಎಂಬ ಉತ್ತರ ದೊರಕುತ್ತದೆ. ಆದರೆ ಇದು ಸಾಧ್ಯವಿಲ್ಲದ ಕಾರಣ ಹೆಚ್ಚಿನವರು ಈ ಕ್ರಿಯೆಯನ್ನು ಕೃತಕವಾಗಿ ಪಡೆಯಬಯಸುತ್ತಾರೆ. ಇದರಲ್ಲಿ ಒಂದು ಕೂದಲಿಗೆ ಬಣ್ಣ ಹಚ್ಚಿಕೊಂಡು ಹಿಂದಿನ ತಾರುಣ್ಯ ಪಡೆಯುವುದು.
ವಿಶೇಷವಾಗಿ ನೆರೆತ ಕೂದಲನ್ನು ಕಪ್ಪಗಾಗಿಸುವುದು ಇದರಲ್ಲಿ ಮುಖ್ಯವಾದುದು. ಆದರೆ ಕೆಲವರು ಕಪ್ಪಗಿನ ಬಣ್ಣಕ್ಕಿಂತ ಭಿನ್ನವಾದ ಬಣ್ಣವನ್ನು ಹಚ್ಚಿಕೊಂಡು ವಿಶೇಷ ಕಳೆ ಮತ್ತು ಆಕರ್ಷಣೆ ಪಡೆಯಲು ಬಯಸುತ್ತಾರೆ. ಉಳಿದವರು ತಮ್ಮ ನೆಚ್ಚಿನ ನಟಿ ಅಥವಾ ವ್ಯಕ್ತಿಯನ್ನು ಅನುಸರಿಸಲು ಕೂದಲ ಬಣ್ಣ ಹಚ್ಚಿಕೊಳ್ಳುತ್ತಾರೆ. ಯುವಜನತೆಯಂತೂ ಪ್ರಖರ ಬಣ್ಣದ ಕೂದಲು ಇದ್ದರೆ ತಮ್ಮ ಆಕರ್ಷಣೆ ಹೆಚ್ಚುತ್ತದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಬಣ್ಣ ಹಚ್ಚುವ ಭರದಲ್ಲಿ ಉಪಯೋಗಿಸುವ ಪ್ರಸಾದನಗಳು ಕೂದಲಿಗೆ ಮತ್ತು ಆರೋಗ್ಯಕ್ಕೆ ಮಾರಕವಾಗಬಹುದು. ಒಂದು ವೇಳೆ ನಿಮ್ಮ ಇರಾದೆಯೂ ಕೂದಲ ಬಣ್ಣ ಬದಲಿಸುವುದಾಗಿದ್ದರೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ನಿಮ್ಮ ನಿರ್ಧಾರವನ್ನು ಬದಲಿಸಬಹುದು.

ಒಣ ಮತ್ತು ಘಾಸಿಗೊಂಡ ಕೂದಲು
ಒಮ್ಮೆ ಬಣ್ಣ ಹಚ್ಚಿಕೊಂಡರೆ ಇದರ ಆಕರ್ಷಣೆಯಿಂದ ಸಮಾಜದಲ್ಲಿ ದೊರಕುವ ಮನ್ನಣೆ ಮತ್ತು ಗುರುತಿಸುವಿಕೆಯನ್ನು ಕಳೆದುಕೊಳ್ಳಲು ಯಾರೂ ಬಯಸದ ಕಾರಣ ಹೆಚ್ಚೂ ಕಡಿಮೆ ನಿತ್ಯವೂ ಇದೇ ಬಣ್ಣವನ್ನು ಹಚ್ಚಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ ನಿರಂತರ ಅಥವಾ ಬಹುಕಾಲದವರೆಗೆ ಬಣ್ಣವನ್ನು ಹಚ್ಚುವ ಮೂಲಕ ಇದರ ರಾಸಾಯನಿಕಗಳು ಕೂದಲಿಗೆ ಹಲವು ರೀತಿಯಲ್ಲಿ ಹಾನಿಯುಂಟುಮಾಡುತ್ತವೆ. ಇದರಲ್ಲಿ ಮುಖ್ಯವಾದುದು ಕೂದಲು ತನ್ನ ಸ್ವಾಭಾವಿಕ ದೃಢತೆ ಕಳೆದುಕೊಳ್ಳುವುದು, ಕಾಂತಿ ಕಳೆದುಕೊಳ್ಳುವುದು, ಸುಲಭವಾಗಿ ತುಂಡಾಗುವುದು ಮೊದಲಾದವು ಎದುರಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಣ ಮತ್ತು ಘಾಸಿಗೊಂಡ ಕೂದಲು
ಏಕೆಂದರೆ ಈ ಬಣ್ಣಗಳಲ್ಲಿ ಅಮೋನಿಯಾ ಎಂಬ ರಾಸಾಯನಿಕವಿದ್ದು ಇದು ಕೂದಲನ್ನು ನಿಧಾನವಾಗಿ ಕರಗಿಸುತ್ತಾ ಹೋಗುತ್ತದೆ. ಒಂದರ್ಥದಲ್ಲಿ ಕಬ್ಬಿಣಕ್ಕೆ ತುಕ್ಕು ಹಿಡಿದಂತೆ. ಬಳಿಕ ಕೂದಲ ತುದಿಭಾಗ ಸೀಳುತ್ತಾ, ಹೆಚ್ಚುಕಡಿಮೆ ಉದ್ದ, ತುದಿಭಾಗ ಅತಿಯಾಗಿ ಸಪೂರವಾಗುವುದು ಮೊದಲಾದವುಗಳನ್ನು ನೋಡಲಾರದೇ ಅನಿವಾರ್ಯವಾಗಿ ಕೂದಲ ಉದ್ದವನ್ನು ಕಡಿಮೆ ಮಾಡಬೇಕಾಗುತ್ತದೆ. ನಿಧಾನವಾಗಿ ಈ ಉದ್ದ ಕಡಿಮೆಯಾಗುತ್ತಾ ಬಂದು ಬಾಪ್ ಕಟ್ ವರೆಗೂ ಮುಂದುವರೆಯಬಹುದು.

ಚರ್ಮದ ತುರಿಕೆ
ಯಾವುದೇ ಕೂದಲ ಬಣ್ಣ ಸಂಪೂರ್ಣವಾಗಿ ಸುರಕ್ಷಿತವಲ್ಲ. ಇದರಲ್ಲಿರುವ ಕೆಲವು ರಾಸಾಯನಿಕಗಳು ಅಲರ್ಜಿಕಾರಕವಾಗಿದ್ದು ಚರ್ಮಕ್ಕೆ ಹಾನಿ ಎಸಗುತ್ತದೆ. ಸತತ ಬಳಕೆಯಿಂದ ಚರ್ಮದಲ್ಲಿ ತುರಿಕೆ, ಕೆಂಪಗಾಗುವುದು, ಪೊರೆಯಂತೆ ಮೇಲ್ಪದರ ಪಕಳೆ ಏಳುವುದು ಮೊದಲಾದವು ಎದುರಾಗುತ್ತದೆ. ಅದರಲ್ಲೂ ಸೂಕ್ಷ್ಮ ಸಂವೇದಿ ಚರ್ಮದವರಿಗೆ ಇವು ಮೊದಲ ಬಳಕೆಯಲ್ಲಿಯೇ ಅಲರ್ಜಿ ಕಂಡುಬರುತ್ತದೆ. ಉಳಿದವರಿಗೆ ಇದರ ಪರಿಣಾಮ ನಿಧಾನವಾಗಿ ಕಂಡುಬರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ತುರಿಕೆ
ಆದರೆ ಅಷ್ಟು ಹೊತ್ತಿಗೆ ತಡವಾಗಿರುತ್ತದೆ. ಕೆಲವರಿಗೆ ಕಣ್ಣಿನ ಮೇಲ್ರೆಪ್ಪೆ ಮತ್ತು ಹೊರಗಿವಿಗಳಲ್ಲಿ ಹೆಚ್ಚಿನ ಪರಿಣಾಮ ಕಂಡುಬರುತ್ತದೆ. ಆದ್ದರಿಂದ ಯಾವುದೇ ಪ್ರಸಾದನ ಉಪಯೋಗಿಸುವ ಮೊದಲು ಇದು ನಿಮಗೆ ಅಲರ್ಜಿಕಾರಕವೇ ಎಂದು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ. ಇದಕ್ಕೆ ಪ್ಯಾಚ್ ಟೆಸ್ಟ್ ಎಂಬ ವಿಧಾನ ಅನುಸರಿಸಬಹುದು. ಒಂದು ವೇಳೆ ಕೊಂಚವೂ ಅನುಮಾನ ಬಂದರೂ ಈ ಬಣ್ಣವನ್ನು ಉಪಯೋಗಿಸಬೇಡಿ. ಉರಿ, ತುರಿಕೆ ಕಡಿಮೆಯಾಗದಿದ್ದರೆ ತಕ್ಷಣ ಚರ್ಮವೈದ್ಯರನ್ನು ಭೇಟಿಯಾಗಿ.

ಅಲರ್ಜಿಯ ಪರಿಣಾಮಗಳು
ಒಂದು ವೇಳೆ ಕೂದಲ ಪ್ರಸಾದನಗಳು ನಿಮಗೆ ಅಲರ್ಜಿಕಾರಕವಾಗಿದ್ದರೆ ತಲೆಯ ಚರ್ಮದಲ್ಲಿ ಸೂಕ್ಷ್ಮ ಗೀರು ಮತ್ತು ಅಲರ್ಜಿಕಾರಕ ಪರಿಣಾಮಗಳನ್ನು ಕಾಣಬಹುದು. ಈ ಪ್ರಸಾದನಗಳಲ್ಲಿ ಕನಿಷ್ಟ ಒಂದು ಡಜನ್ ಆದರೂ ಅಲರ್ಜಿಕಾರಕ ರಾಸಾಯನಿಕಗಳಿವೆ.

ಅಲರ್ಜಿಯ ಪರಿಣಾಮಗಳು
ಅಲ್ಲದೆ, ಇದರಲ್ಲಿ ಒಂದಾದರೂ ರಾಸಾಯನಿಕ ನಿಮಗೆ ಅಲರ್ಜಿಕಾರಕವಾಗಿದ್ದರೂ ಇದು ತಲೆಯ ಚರ್ಮಕ್ಕೆ ಬಹುವಾದ ಅಲರ್ಜಿಯನ್ನುಂಟುಮಾಡಬಹುದು. ಆದ್ದರಿಂದ ಬಳಸಿದ ಬಳಿಕ ಸ್ವಲ್ಪವಾದರೂ ತುರಿಕೆಯಾದರೆ ತಕ್ಷಣ ಚರ್ಮವೈದ್ಯರನ್ನು ಕಾಣುವುದು ಅನಿವಾರ್ಯ.

ಅಸ್ತಮಾ
ಅಸ್ತಮಾ ರೋಗಕ್ಕೆ ಚಿಕಿತ್ಸೆ ನೀಡುವ ವೈದ್ಯರು ಒಂದು ವಿಷಯವನ್ನು ಗಮನಿಸಿದ್ದಾರೆ. ಅದೆಂದರೆ ಹೆಚ್ಚಿನವರು ಸೌಂದರ್ಯ ಪ್ರಸಾದನಗಳೊಂದಿಗೇ ಜೀವನ ನಡೆಸುವವರಾಗಿದ್ದಾರೆ. ಅಂದರೆ ಈ ಪ್ರಸಾದನಗಳಲ್ಲಿರುವ ಸೂಕ್ಷ್ಮ ಪುಡಿ ಶ್ವಾಸಕೋಶಕ್ಕೆ ಹೋಗಿ ಅಲ್ಲಿ ತನ್ನ ಪ್ರಭಾವ ತೋರಿ ಅಸ್ತಮಾ ತೊಂದರೆ ಉಂಟುಮಾಡುತ್ತದೆ. ಈ ಪ್ರಸಾಧನಗಳಲ್ಲಿ ಕೂದಲ ಬಣ್ಣಗಳೂ ಹೊರತಲ್ಲ. ಕೂದಲ ಬಣ್ಣ ದ್ರವ ಎಂದು ಕಂಡುಬಂದರೂ ಒಣಗಿದ ಬಳಿಕ ಪುಡಿಯಾಗಿ ಸೂಕ್ಷ್ಮ ಧೂಳಿನ ಕಣವಾಗಿ ಗಾಳಿಗೆ ಬಿಡುಗಡೆಯಾಗುತ್ತದೆ.

ಅಸ್ತಮಾ
ಈ ಕಣಗಳು ಅಸ್ತಮಾಕ್ಕೆ ಮೂಲವಾಗಿವೆ. ಇದು ನಿಮಗೂ ಸುತ್ತಮುತ್ತಲ ನಿಮ್ಮ ಆಪ್ತರಿಗೂ, ವಿಶೇಷವಾಗಿ ಮಕ್ಕಳಿಗೂ ಅನಾರೋಗ್ಯಕಾರಕವಾಗಿವೆ. ಆದ್ದರಿಂದ ಕೂದಲ ಬಣ್ಣಗಳ ಮೋಹದಿಂದ ಹೊರಬಂದು ಸ್ವಾಭಾವಿಕ ಕೂದಲ ಪೋಷಣೆಗೆ ಆದ್ಯತೆ ನೀಡುವುದೇ ಜಾಣತನದ ಕ್ರಮವಾಗಿದೆ.



Click it and Unblock the Notifications











