Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಫಳಫಳ ಹೊಳೆಯುವ ಕೂದಲಿಗಾಗಿ ಮೆಹೆಂದಿಯನ್ನು ಹೀಗೆ ಬಳಸಿ
ಮೆಹೆಂದಿ ಅಥವಾ ಗೋರಂಟಿ ಎಲೆಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಇದರ ಪ್ರಭಾವ ಇಡೀ ವಿಶ್ವವ್ಯಾಪಿ ಹಬ್ಬಿದೆ. ವಿಶೇಷವಾಗಿ ಭಾರತದಲ್ಲಿ ಇದಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ. ಇದರಿಂದ ಕೈಗಳಿಗೆ ಚಿತ್ತಾರ ಬಿಡಿಸಿದರೆ, ಅದರ ಅಂದ ನೋಡಲು ಎರಡು ಕಣ್ಣು ಸಾಲದು. ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಇದನ್ನು ಕೈಗಳಿಗೆ ಮತ್ತು ಚರ್ಮದ ಮೇಲೆ ಚಿತ್ತಾರ ಮೂಡಿಸಿಕೊಳ್ಳುತ್ತಾರೆ. ಮೆಹೆಂದಿಯು ಕೇವಲ ಚಿತ್ತಾರಕ್ಕೇ ಮೀಸಲಾಗದೇ ನಮ್ಮ ಕೂದಲ ಆರೈಕೆಗೂ ಸಹ ನೆರವಾಗುತ್ತದೆ. ಕೇಶದ ಸಮಸ್ಯೆಗಳನ್ನು ನಿವಾರಿಸುವ ವಿಧಾನಗಳಲ್ಲಿ ಮೆಹಂದಿ ವಿಧಾನವೂ ಸಹ ಮುಖ್ಯವಾದದ್ದು. ಕೇಶದ ಆರೈಕೆಯಲ್ಲಿ ಮೆಹೆಂದಿಯಿಂದ ಉಪಯುಕ್ತವಾಗುವ ಕೆಲವು ವಿಶಿಷ್ಟ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಮುಂದೆ ಓದಿ.

1. ಮೆಹಂದಿಯು ಕೂದಲ ಆರೈಕೆಗೆ ಉತ್ತಮವಾದ ಸಾಧನವಾಗಿದ್ದು, ನಿಮ್ಮ ಕೂದಲನ್ನು ಹೆಚ್ಚು ಕಾಂತಿಯುಕ್ತಗೊಳಿಸಿ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ಅದರ ಲೇಪನವು ಕೂದಲು ತುಂಡಾಗುವುದನ್ನು ತಡೆಯುತ್ತದೆ.
2. ತಲೆಯ ಭಾಗದ ಚರ್ಮದಲ್ಲಿನ ಸ್ವಾಭಾವಿಕ ಆಸಿಡ್-ಆಲ್ಕಲೈನ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗಲಿದ್ದು, ರಾಸಾಯನಿಕ ಉತ್ಪನ್ನಗಳಿಂದ ಉಂಟಾಗುವ ಅಡ್ಡಪರಿಣಾಮಗಳು ಇದರ ಬಳಕೆಯಲ್ಲಿ ಕಂಡುಬರುವುದಿಲ್ಲ.
3. ಕೂದಲ ಬೆಳವಣಿಗೆಯನ್ನು ಹೆಚ್ಚಿಸಿ, ತಲೆ ಹೊಟ್ಟು ಮತ್ತು ನೆತ್ತಿಯ ಚರ್ಮದ ಸೋಂಕನ್ನು ನಿವಾರಿಸಿ ಕೂದಲುದುರುವುದನ್ನು ನಿವಾರಿಸುತ್ತದೆ. ಇದನ್ನು ನಿಮ್ಮ ಕೂದಲಿಗೆ ಬಣ್ಣ ಹೊಂದಲು ಸಹ ಬಳಸಬಹುದು.
ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಮತ್ತು ಕೇಶಕ್ಕೆ ಒಳಗಿನಿಂದಲೇ ಬಣ್ಣ ನೀಡಿ ಕೆಂಪು ವರ್ಣ ಹೊಂದುತ್ತದೆ.
4. ಇದರಿಂದ ನಿಮ್ಮ ಕೂದಲು ಬೂದು ಬಣ್ಣವಾಗದಂತೆ ತಡೆಯಬಹುದು ಮತ್ತು ಕೇಶದ ಸಮೃದ್ಧ ಬೆಳವಣಿಗೆಗೆ ಹೆಚ್ಚು ನೆರವಾಗಲಿದೆ. ಇದಲ್ಲದೇ, ಮೆಹಂದಿಯಿಂದ ಮೊಡವೆಗಳು, ಸುಟ್ಟಗಾಯ ಮತ್ತು ಸಣ್ಣ ಗಂಟುಗಳನ್ನು ನಿವಾರಣೆ ಮಾಡಬಹುದು. ನಿಮಗೆ ಸುಟ್ಟಗಾಯವಾಗಿದ್ದಲ್ಲಿ, ಮೆಹಂದಿ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚಿಕೊಂಡಲ್ಲಿ ತಕ್ಷಣ ಅದರ ಉರಿ ಮತ್ತು ನೋವು ನಿವಾರಣೆಯಾಗಲಿದೆ. ಕಳೆಗುಂದಿದ ಮೆಹೆಂದಿ ಬಣ್ಣವನ್ನು ನಿವಾರಿಸಲು ಸರಳ ಟಿಪ್ಸ್
ಮೆಹಂದಿ ಹೇರ್ ಪ್ಯಾಕ್
*ನಿಮಗೆ ತಲೆಹೊಟ್ಟಿನ ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ.
*ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ಅದ್ದಿ ಒಂದು ರಾತ್ರಿ ಪೂರ್ತಿ ಹಾಗೆಯೇ ಇಡಿ. ನಂತರ ಈ ಕಾಳುಗಳನ್ನು ರುಬ್ಬಿಕೊಳ್ಳಿ.
ಸ್ವಲ್ಪ ಸಾಸಿವೆಯನ್ನು ಎಣ್ಣೆಯಲ್ಲಿ ಬಿಸಿ ಮಾಡಿ ಅದರೊಂದಿಗೆ ಕೆಲವು ಮೆಹಂದಿ ಎಲೆಗಳನ್ನು ಹಾಕಿ ಹದವಾಗಿ ಬೇಯಿಸಿ. ಎಣ್ಣೆಯು ತಣ್ಣಗಾದ ನಂತರ ಉಳಿದೆಯ ಪದಾರ್ಥವನ್ನು ಬೇರ್ಪಡಿಸಿ. ರುಬ್ಬಿಕೊಂಡಿದ್ದ ಮೆಂತೆ ಪೇಸ್ಟ್ ಅನ್ನು ಈ ಮಿಶ್ರಣಕ್ಕೆ ಬೆರೆಸಿ ಚೆನ್ನಾಗಿ ಕಲಸಿ.
*ಈ ಮಿಶ್ರಣವನ್ನು ನೆತ್ತಿಯ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ. 30 ನಿಮಿಷಗಳ ನಂತರ ನೀರಿನಿಂದ ಸ್ವಚ್ಛಗೊಳಿಸಿ. ಇದನ್ನು ವಾರಕ್ಕೆ ಒಂದು ಬಾರಿ ಅನುಸರಿಸಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಇತ್ತ ಗಮನಿಸಿ
*ನೀವು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರೆ ಸಾಸಿವೆ ಎಣ್ಣೆಯನ್ನು ಮೆಹೆಂದಿ ಎಲೆಗಳೊಂದಿಗೆ ಬೆರೆಸಿಕೊಳ್ಳಿ. ನಂತರ ಮೆಂತೆಯನ್ನು ಇದಕ್ಕೆ ಬಳಸದೇ ಒಂದು ಚಮಚ ಲಿಂಬೆ ರಸ ಅಥವಾ ತಾಜಾ ಮೊಸರನ್ನು ಬೆರೆಸಿ. ಈ ಮಿಶ್ರಣವನ್ನು ನಿಮ್ಮ ನೆತ್ತಿಯ ಚರ್ಮದ ಭಾಗಕ್ಕೆ ತಿಕ್ಕಿಕೊಳ್ಳಿ. ಅರ್ಧ ಗಂಟೆಯ ನಂತರ ನೀರಿನಿಂದ ಸ್ವಚ್ಛಗೊಳಿಸಿ.
ನಿಮ್ಮ ಕೂದಲನ್ನು ಸುಸ್ಥಿತಿಯಲ್ಲಿಡಬೇಕೇ?
ಗ್ರೀನ್ ಟೀ ನಲ್ಲಿ ಮೆಹೆಂದಿ ಪುಡಿಯನ್ನು ಒಂದು ರಾತ್ರಿ ಪೂರ್ತಿ ಅದ್ದಿಡಿ. ಇದಕ್ಕೆ ಸ್ವಲ್ಪ ಅಡುಗೆ ಎಣ್ಣೆ ಅಥವಾ ಒಡೆದ ಮೊಟ್ಟೆಯ ರಸವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೇಶಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆಯ ಕಾಲ ಹಾಗೆಯೇ ಬಿಡಿ. ಇದು ನಿಮ್ಮ ಕೂದಲುಗಳನ್ನು ಸದೃಢಗೊಳಿಸಿ, ಕಾಂತಿಯನ್ನು ಹೆಚ್ಚಿಸಿ, ವಿನ್ಯಾಸವನ್ನು ಸುಸ್ಥಿತಿಯಲ್ಲಿರಿಸಿ, ನಳನಳಿಸುವಂತೆ ಮಾಡುತ್ತದೆ.



Click it and Unblock the Notifications

