Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೇರ್ಲೈನ್ ಸಾಧನೆ-ಶಸ್ತ್ರಚಿಕಿತ್ಸೆ ಇಲ್ಲದೇ ಕೂದಲು ಕಸಿ..!
ತಲೆಗೂದಲು ಚಿಕಿತ್ಸೆಯಲ್ಲಿ ಪ್ರಮುಖ ಸಂಸ್ಥೆಯಾಗಿರುವ ಹೇರ್‍ಲೈನ್ ಇಂಟರ್‌ನ್ಯಾಷನಲ್ ಸ್ಕಿನ್ ಅಂಡ್ ಹೇರ್ ಕ್ಲಿನಿಕ್ ಕೂದಲು ಉದುರುವಿಕೆ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಹೊಸ ಹೊಸ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಪರಿಚಯಿಸುತ್ತಿದೆ. ಆದಗ್ಯೂ, ಹಲವು ಗ್ರಾಹಕರು ಶಸ್ತ್ರಚಿಕಿತ್ಸೆ ಎಂದಾಕ್ಷಣ ಭಯಪಟ್ಟು, ಶಸ್ತ್ರಚಿಕಿತ್ಸೆ ಇಲ್ಲದೇ ಕೂದಲು ಕಸಿ ಮಾಡಿಸಿಕೊಳ್ಳುವ ವಿಧಾನಗಳನ್ನು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೇರ್‌ಲೈನ್ ಇಂಟರ್‌ನ್ಯಾಷನಲ್ ಸಂಸ್ಥೆ ಶಸ್ತ್ರಚಿಕಿತ್ಸೆ ಇಲ್ಲದೇ ಕೂದಲು ನೇಯ್ಗೆಯಂತಹ ಹಲವು ತಾಂತ್ರಿಕತೆಗಳನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಫಲಿತಾಂಶವನ್ನು ಗ್ರಾಹಕರಿಗೆ ತಂದುಕೊಡುತ್ತಿದೆ.
ಕೂದಲು ಕೂಡಿಸುವಿಕೆಗೆ ಕೂದಲು ನೇಯ್ಗೆ ಎಂದೂ ಕರೆಯಲಾಗುತ್ತದೆ. ಕೂದಲು ಕಸಿ ಮಾಡಲು ಇಂತಹ ಹಲವಾರು ಶಸ್ತ್ರಚಿಕತ್ಸೆಯೇತರ ವಿಧಾನಗಳಿವೆ. ಪ್ರತಿಯೊಂದು ವಿಧಾನದಲ್ಲೂ ಮೊದಲು ಈಗಿರುವ ಕೂದಲು, ಕೂದಲಿನ ಸಾಂದ್ರತೆ, ಹಾಗೂ ಈ ವಿಧಾನದಿಂದ ಗ್ರಾಹಕನ ನಿರೀಕ್ಷೆ ಏನಿದೆ ಎಂಬುದನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಈ ಕೂದಲು ನೇಯ್ಗೆಯಲ್ಲಿ ಮೂರು ವಿಧಾನಗಳಿರುತ್ತವೆ. ಅವುಗಳೆಂದರೆ:-

ಕೂದಲು ನೇಯ್ಗೆ: ಹಾಲಿ ಇರುವ ಕೂದಲುಗಳೊಂದಿಗೆ ಟ್ರ್ಯಾಕ್ ಮಾಡಿ, ಅವುಗಳನ್ನು ಔಷದೀಯ ಗುಣವೊಂದಿರುವ ದಾರದೊಂದಿಗೆ ಬಲಗೊಳಿಸಲಾಗುತ್ತದೆ. ಇದನ್ನು ಹೊರಗಿನ ಕೂದಲಿಗೆ ಮೂಲವನ್ನಾಗಿ ಮಾಡಿಕೊಳ್ಳಲಾಗುತ್ತದೆ. ನಂತರ ಎರಡೂ ಬಗೆಯ ಕೂದಲುಗಳನ್ನು ನೇಯಲಾಗುತ್ತದೆ. ಈ ಕೂದಲು ಯಾವ ರೀತಿ ಬೇಕಾದರೂ ವಿನ್ಯಾಸ ಮಾಡಬಹುದಾಗಿದೆ.
ಸಿಲಿಕಾನ್ ಜೆಲ್ ಸಿಸ್ಟಂ: ಈ ವಿಧಾನದಿಂದ ಕೂದಲಿನ ನಿರ್ವಹಣೆ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಸಿಲಿಕಾನ್ ಜೆಲ್ ನೆತ್ತಿಯ ಮೇಲೆ ಕೂದಲು ಬಿಗಿಯಾಗಿ ಅಂಟಿಕೊಂಡಿರುತ್ತವೆ. ಪ್ರತಿ ಎರಡು ತಿಂಗಳಿಗೊಮ್ಮೆ ಈ ಜೆಲ್ ಮೂಲಕ ಕೂದಲು ಕಸಿ ಮಾಡಿಸಿಕೊಳ್ಳಬಹುದು. ಈ ಚಿಕಿತ್ಸೆ ಮೂಲಕ ಗ್ರಾಹಕರು ತಮಗೆ ಬೇಕಾದ ರೀತಿಯಲ್ಲಿ ಕೇಶವಿನ್ಯಾಸ ಮಾಡಿಸಿಕೊಳ್ಳಲೂ ಅವಕಾಶವಿದೆ. ಕಸ್ಟಮ್ ಮೇಡ್ ಟೌಪೀಸ್: ಹೇರ್‌ಲೈನ್ ಇಂಟರ್‌ನ್ಯಾಷನಲ್ ಗ್ರಾಹಕರಿಗೆ ಗ್ರಾಹಕಸ್ನೇಹಿ ಮತ್ತು ಅವರಿಗಿಷ್ಟವಾದ ಬಗೆಯಲ್ಲಿ ಕೂದಲು ಕಸಿ ಮಾಡುವುದರಲ್ಲಿ ನಂಬಿಕೆ ಇಟ್ಟಿದೆ. ಈ ಮೂಲಕ ಗ್ರಾಹಕರು ತಮಗೆ ಒಪ್ಪುವ ರೀತಿಯಲ್ಲಿ ಕೇಶವಿನ್ಯಾಸ ಮಾಡಿಸಿಕೊಳ್ಳಬಹುದು.
ಹೇರ್‌ಲೈನ್ ಇಂಟರ್‌ನ್ಯಾಷನಲ್ ಗ್ರಾಹಕರಿಗೆ ಹೇರ್‍ಲೈನ್ ಸೂಪರ್ ಸಾಫ್ಟ್ ಒರಿಜಿನ್ ಎಂಬ ಚಿಕಿತ್ಸೆಯನ್ನು ನೀಡುತ್ತದೆ. ಇಂತಹ ಸೌಲಭ್ಯ ಬೇರೆ ಎಲ್ಲಿಯೂ ಲಭ್ಯವಿಲ್ಲ. ಈ ಚಿಕಿತ್ಸೆ ಆರಾಮದಾಯಕವಾಗಿರುತ್ತದೆ. ಅಲ್ಲದೇ, ಬೋಳು ಜಾಗದಲ್ಲಿ ಕೂದಲನ್ನು ಅಂಟಿಸುವ ಮೂಲಕ ತಲೆ ತುಂಬಾ ಕೂದಲು ಕಾಣುವಂತೆ ಮಾಡುತ್ತದೆ. ದಿ ಸೂಪರ್ ಫೈನ್ ಕ್ಯಾಲಿಫೋರ್ನಿಯನ್ ಚಿಕಿತ್ಸೆ ಮತ್ತೊಂದು ವಿಧಾನ. ಇದು ನೈಜ ನೋಟವನ್ನು ಕೊಡುತ್ತದೆ. ಇದು ವಿವಿಧ ಬಣ್ಣ ಮತ್ತು ಗಾತ್ರಗಳಲ್ಲಿ ಲಭ್ಯವಿರುತ್ತದೆ.
ಈ ಅತ್ಯುತ್ತಮ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ನೀಡಿರುವ ಹೇರ್‍ಲೈನ್ ಇಂಟರ್‍ನ್ಯಾಷನಲ್‍ನ ಡರ್ಮಟೋ ಸರ್ಜನ್ ಡಾ.ದಿನೇಶ್‍ಗೌಡ, ಕೂದಲು ಉದುರುವಿಕೆ ಸಮಸ್ಯೆ ಎದುರಿಸುತ್ತಿರುವ ಪ್ರತಿಯೊಬ್ಬರೊಂದಿಗೆ ಪ್ರತಿದಿನ ಮಾತನಾಡುತ್ತೇವೆ. ಈ ಸಂದರ್ಭದಲ್ಲಿ ಕೂದಲು ಕಸಿ ಮಾಡಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಈ ಹಿನ್ನೆಲೆಯಲ್ಲಿ ನಾವು ಶಸ್ತ್ರಚಿಕಿತ್ಸೆಯೇತರ ವಿಧಾನಗಳಿಂದ ಕೂದಲು ಕಸಿ ಮಾಡುತ್ತಿರುವುದು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಹೇರ್‍ಲೈನ್ ಇಂಟರ್‍ನ್ಯಾಷನಲ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಬನಿ ಆನಂದ್, ಅಂತಾರಾಷ್ಟ್ರೀಯ ತಾಂತ್ರಿಕತೆ ಬಳಸಿಕೊಂಡು ಇಂತಹ ಚಿಕಿತ್ಸಾ ವಿಧಾನಗಳ ಮೂಲಕ ತಲೆಯಲ್ಲಿ ನೈಜವಾದ ಕೂದಲು ಇರುವಂತೆ ಮಾಡಲು ಸಾಧ್ಯ ಎಂಬುದನ್ನು ಹೇರ್‌ಲೈನ್ ಇಂಟರ್‌ನ್ಯಾಷನಲ್‌ನ ಸಂಶೋಧನಾ ಘಟಕ ಕಂಡುಕೊಂಡಿದೆ. ಈ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ನಾವು ಕೂದಲು ಕಸಿ ಮಾಡಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕರೆ ಮಾಡಿ 080-25299002/03 ಅಥವಾ ಲಾಗ್ ಆನ್ ಮಾಡಿ...www.hairline.in



Click it and Unblock the Notifications

