Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಉತ್ತಮ ಕೂದಲಿನ ಆರೈಕೆಗೆ ಹಸಿರು ಪದಾರ್ಥಗಳ ಕೊಡುಗೆ
ಮನುಷ್ಯನ ಸೌಂದರ್ಯಕ್ಕೆ ವಿಶೇಷ ಮೆರುಗು ನೀಡುವಲ್ಲಿ ಕೂದಲಿನ ಪಾತ್ರ ಬಹುಮುಖ್ಯ. ಈ ಕೂದಲು ಮನುಷ್ಯನಿಗೆ ಎಷ್ಟು ಮುಖ್ಯವೋ, ಅದನ್ನು ಜೋಪಾನವಾಗಿ ಕಾಪಾಡಿಕೊಂಡು ಬರುವುದು ಕೂಡಾ ಅಷ್ಟೇ ಮುಖ್ಯ. ಹಾಗಾಗಿ ಕೂದಲಿನ ಸೌಂದರ್ಯವರ್ಧನೆ, ಉದುರುವಿಕೆ ಮುಂತಾದವುದಕ್ಕೆ ಪರಿಹಾರ ಏನು ಎನ್ನುವುದನ್ನು ಈ ಲೇಖನದಲ್ಲಿ ಸಾದರ ಪಡಿಸುತ್ತಿದ್ದೇವೆ.
ಕೂದಲು ನಮ್ಮ ಸೌಂದರ್ಯ ಮತ್ತು ವ್ಯಕ್ತಿತ್ವದ ಪ್ರತೀಕವಾಗಿದೆ. ನೀವು ನಿಮ್ಮ ಕೂದಲಿನ ಆರೈಕೆಯನ್ನು ಉತ್ತಮ ರೀತಿಯಿಂದ ಮಾಡುವಿರಾದರೆ ಹಸಿರು ಪದಾರ್ಥವನ್ನು ಬಳಸಿರಿ. ಇದು ನಿಮ್ಮ ಕೂದಲಿಗೆ ಆರೋಗ್ಯಕಾರಿ ಪರಿಣಾಮ ಬೀರಬಹುದು ಮತ್ತು ಅಪಾಯಕಾರಿ ಅಡ್ಡಪರಿಣಾಮಗಳನ್ನು ದೂರ ಮಾಡುತ್ತದೆ. ಇದಕ್ಕಾಗಿ ನೀವು ಹೆಚ್ಚು ಹುಡುಕಬೇಕಾಗಿಲ್ಲ ಈ ಹಸಿರು ಪದಾರ್ಥಗಳು ನಿಮ್ಮ ಅಡುಗೆ ಮನೆಯ ಸೆಲ್ಫ್ ನಲ್ಲಿಯೇ ಕಾಣಲು ಸಿಗುತ್ತದೆ.
ಅನೇಕ ಬಾಹ್ಯ ಅಂಶಗಳು ನಿಮ್ಮ ಕೂದಲಿನ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತವೆ. ಆದುದರಿಂದ ನಮ್ಮ ಕೂದಲಿನ ಆರೈಕೆಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಉತ್ತಮ. ನಿಮ್ಮ ದಿನಚರಿಯಲ್ಲಿ ಕೂದಲಿನ ಆರೈಕೆಗೆ ಸ್ವಲ್ಪ ಸಮಯ ಮೀಸಲಿಡುವುದರಿಂದ ಕೂದಲಿನಲ್ಲಿ ಉಂಟಾಗುವ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಸಮತೋಲಿತ ಆಹಾರ ತಿನ್ನುವುದರಿಂದಲೂ ಕೂದಲಿನ ಸಮಸ್ಯೆಗಳನ್ನು ಹೆಚ್ಚಿನ ರೀತಿಯಲ್ಲಿ ಬಗೆಹರಿಸಲು ಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಇದಲ್ಲದೇ, ನೀವು ಕೆಲವು ಹಸಿರು ಅಂಶಗಳನ್ನು ನೇರವಾಗಿ ಬಳಸುವುದರಿಂದ ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಪರಿಣಾಮಕಾರಿ ಆರೈಕೆ ಸಿಗಬಹುದು. ಆದುದರಿಂದ ಹಸಿರು ಪದಾರ್ಥವನ್ನು ಬಳಸುವುದು ನಿಮ್ಮ ಕೂದಲಿನ ಆರೋಗ್ಯಕ್ಕೆ ಸೂಕ್ತವಾದುದು. ನಿಮ್ಮ ಕೂದಲು ಬೆಳವಣಿಗೆ ಮತ್ತು ನಿಮ್ಮ ಕೂದಲನ್ನು ಹೆಚ್ಚಿಸಿ, ಪೋಷಿಸಿ ಪರಿಣಾಮಕಾರಿಯಾಗಿ ಸುರಕ್ಷಿತವಾಗಿರಿಸಲು ನೀವು ಏನು ಮಾಡಬೇಕೆಂದು ಹುಡುಕುತ್ತಿದ್ದರೇ, ಬೋಲ್ಡ್ ಸ್ಕೈ ನಿಮ್ಮ ಕೂದಲು ಆರೈಕೆಗೆ ಬಳಸಬಹುದು ಅತ್ಯಂತ ಜನಪ್ರಿಯ ಹಸಿರು ಪದಾರ್ಥಗಳ ಪಟ್ಟಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೇವೆ, ಮುಂದೆ ಓದಿ...

ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣು ಇದರಲ್ಲಿರುವ ಶಕ್ತಿಯುತ ನೈಸರ್ಗಿಕ ತೈಲಗಳು ಮತ್ತು ಪ್ರೊಟೀನ್ ನಿಮ್ಮ ಕೂದಲು ನಯ ಮತ್ತು ಹೊಳೆಯುವಂತೆ ಮಾಡುವ ಪರಿಣಾಮಕಾರಿ ಗುಣವನ್ನು ಹೊಂದಿದೆ. ಇದನ್ನು ಕೂದಲನ್ನು ಶಾಂಪೂವಿನಿಂದ ತೊಳೆದ ನಂತರ ಹಚ್ಚಬೇಕಾಗುತ್ತದೆ.

ಗ್ರೀನ್ ಟೀ (ಹಸಿರು ಚಹಾ)
ಹಸಿರು ಚಹಾದಲ್ಲಿ ನಿಮ್ಮ ಕೂದಲು ತೊಳೆಯುವುದರಿಂದ ಇದು ಕೂದಲಿಗೆ ಒಳ್ಳೆಯ ಕಂಡೀಷರ್ ನಂತೆ ಕೆಲಸಮಾಡುತ್ತದೆ. ಎಣ್ಣೆಯುಕ್ತ ಕೂದಲು ಇರುವವರಿಗೆ, ಹಸಿರು ಚಹಾದಲ್ಲಿ ನಿಂಬೆ ರಸ ಮಿಶ್ರಣ ಮಾಡಿ ಹಚ್ಚುವುದರಿಂದ ಉತ್ತಮ ಪರಿಣಾಮ ಬೀರುತ್ತದೆ. ಇದು ನಿಮ್ಮ ಕೂದಲನ್ನು ಸುಲಭವಾಗಿ ನಿರ್ವಹಣೆ ಮಾಡುತ್ತದೆ ಮತ್ತು ಹಿಂದೆಂದಿಗಿಂತ ಉತ್ತಮ ಹೊಳೆಯುವಂತೆ ಮಾಡುವ ಶಕ್ತಿಯನ್ನು ಹೊಂದಿದೆ.

ಆಲಿವ್ ಎಣ್ಣೆ
ನಿಮ್ಮ ಕೂದಲಿನ ಆರೈಕೆಗೆ ಆಲಿವ್ ಎಣ್ಣೆ ಮತ್ತೊಂದು ನೈಸರ್ಗಿಕ ಮತ್ತು ಒಳ್ಳೆಯ ಪದಾರ್ಥ. ಇದನ್ನು ನೇರವಾಗಿ ನಿಮ್ಮ ಕೂದಲಿಗೆ ಬಳಸಬಹುದು ಅಥವಾ ಇನ್ನಿತರ ಹೇರ್ ಪ್ಯಾಕ್ ಜೊತೆ ಕೂಡ ಬಳಸಬಹುದು.ಇದು ಸಹ ನಿಮ್ಮ ಕೂದಲಿನ ಉತ್ತಮ ಆರೋಗ್ಯಕ್ಕೆ ಒಂದು ಉತ್ತಮವಾದ ವಿಧಾನ.

ನೆಲ್ಲಿಕಾಯಿ
ನೆಲ್ಲಿಕಾಯಿಯನ್ನು ಕೂದಲು ವರ್ಧಕಗಳಲ್ಲಿ ಒಂದು ಮುಖ್ಯ ಪದಾರ್ಥವನ್ನಾಗಿ ಬಳಸುತ್ತಾರೆ. ಇದರ ಒಣಗಿದ ಪುಡಿಯನ್ನು ಕೂದಲಿನ ಮಾಸ್ಕ್ ತಯಾರಿಕೆಯಲ್ಲಿ ಬಳಸುವುದರಿಂದ ನಿಮ್ಮ ಕೂದಲು ಮತ್ತು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯಲು ಸಾಧ್ಯವಾಗುತ್ತದೆ, ಇದು ಕೂಡಾ ನಿಮ್ಮ ಕೂದಲಿನ ಆರೋಗ್ಯಕ್ಕೊಂದು ಉತ್ತಮವಾದ ವಿಧಾನ.

ಹೆನ್ನಾ(ಮೆಹೆಂದಿ)
ಕೂದಲಿನ ಆರೋಗ್ಯಕ್ಕೆ ಹೆನ್ನಾದ ಬಳಕೆಯು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದ್ದು. ಇದು ನಿಮ್ಮ ಕೂದಲನ್ನು ಬಲಯುತವಾಗಿ ಇರಿಸಲು ಸಹಾಯ ಮಾಡುತ್ತದೆ. ಜೊತೆಗೆ, ಕೂದಲು ಉದುರುವಿಕೆ, ತುರಿಸುವಿಕೆ ಮೊದಲಾದುವುಗಳಿಂದ ರಕ್ಸಣೆ ಮಾಡುತ್ತದೆ ಮತ್ತು ನಿಮ್ಮ ಕೂದಲು ಹೊಳೆಯುವಂತೆ ಮಾಡುತ್ತದೆ. ಈ ಗಿಡಮೂಲಿಕೆಯ ಪ್ಯಾಕನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು ಮತ್ತು ಯಾವುದೇ ಅಡ್ಡ ಪರಿಣಾಮಗಳ ಭಯವಿಲ್ಲದೇ ಬಳಸಬಹುದಾಗಿದೆ.



Click it and Unblock the Notifications
