Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಿಳಿ ಕೂದಲಿನ ನಿಯಂತ್ರಣಕ್ಕೆ, ಆಹಾರ ಕ್ರಮ ಹೀಗಿರಲಿ
ತಲೆಯ ಮೇಲೆ ದಟ್ಟವಾದ ಮತ್ತು ಗಾಢವಾದ ಕಪ್ಪು ಕೂದಲು ರಾರಾಜಿಸುವುದು ಯಾರಿಗೆ ಬೇಕಿಲ್ಲ? ಆದರೆ ತಾರುಣ್ಯದ ದಿನಗಳುರುತ್ತಿದ್ದಂತೆಯೇ ಮಧ್ಯೆ ಮಧ್ಯೆ ಅಲ್ಲಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಸುಮಾರು ನಡುವಯಸ್ಸು ದಾಟಿದ ಮೇಲೆ ಕೂದಲು ಹಣ್ಣಾದರೆ ಹೆಚ್ಚಿನವರು ದೇವರು ಕೊಟ್ಟ ವರ ಎಂಬಂತೆ ಸಹಜವಾಗಿ ಸ್ವೀಕರಿಸಿ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಚಿಕ್ಕವಯಸ್ಸಿನಲ್ಲಿಯೇ ಕೂದಲು ನೆರೆದರೆ ಮಾತ್ರ ಆತಂಕ ಮನೆಮಾಡುವುದು ಸಹಜ.
ಅದರಲ್ಲಿಯೂ ಇತ್ತೀಚೆಗೆ ಯುವ ಜನರಲ್ಲಿ ಕೂದಲು ಅಕಾಲಿಕವಾಗಿ ನೆರೆಯುವುದು ಮತ್ತು ಉದುರುವುದು ಸಾಮಾನ್ಯವಾದ ಸಂಗತಿಯಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಪ್ರಮುಖವಾದುವು ಆಹಾರದಲ್ಲಿ ಕೆಲವು ಪೌಷ್ಟಿಕಾಂಶಗಳ ಕೊರತೆ, ಮಾನಸಿಕ ಒತ್ತಡ ಇತ್ಯಾದಿ. ಒಂದು ವೇಳೆ ಇದು ಪೋಷಕಾಂಶಗಳ ಕೊರತೆಯಿಂದಾಗಿದ್ದರೆ ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿರುವ ಆಹಾರಗಳ ಮಾಹಿತಿ ನಿಮ್ಮ ತಾರುಣ್ಯವನ್ನು ಬಹುಕಾಲ ಕಾಪಾಡಲು ನೆರವಾಗುತ್ತವೆ...

ಪಾಲಕ್ ಮತ್ತು ಬಸಲೆ ಸೊಪ್ಪು
ಕೂದಲು ಉದುರುವುದಕ್ಕೆ ಒಂದು ಪ್ರಮುಖ ಕಾರಣ ಕಬ್ಬಿಣದ ಕೊರತೆ. ವಿಶೇಷವಾಗಿ ರಜೋನಿವೃತ್ತಿ ಹೊಂದಿರುವ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಾಣಬರುತ್ತದೆ. ಈ ಕೊರತೆಯನ್ನು ಪಾಲಕ್ ಸೊಪ್ಪು ಮತ್ತು ಬಸಲೆ ಸೊಪ್ಪುಗಳು ಯಶಸ್ವಿಯಾಗಿ ಪೂರೈಸುತ್ತವೆ. ಈ ಸೊಪ್ಪುಗಳಲ್ಲಿರುವ ಕಬ್ಬಿಣ, ವಿಟಮಿನ್ನುಗಳು ಮತ್ತು ಇತರ ಪೋಷಕಾಂಶಗಳು ಕೂದಲಿಗೆ ದೃಢತೆ ನೀಡುವ ಜೊತೆಗೇ ಅಕಾಲಿಕ ನೆರೆ ಮತ್ತು ಉದುರುವುದನ್ನೂ ತಡೆಯುತ್ತದೆ.

ಕ್ಯಾರೆಟ್
ಕ್ಯಾರೆಟ್ಟುಗಳಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನುಗಳು ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ದೃಢತೆ ಮತ್ತು ನೀಳವಾಗುವಂತೆ ಮಾಡುತ್ತದೆ.

ಮೊಟ್ಟೆ
ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನುಗಳು ಮತ್ತು ಬಯೋಟಿನ್ ಎಂಬ ಪೋಷಕಾಂಶಗಳಿದ್ದು ಇವು ಕೂದಲ ಬುಡದ ಜೀವಕೋಶಗಳ ಬೆಳವಣಿಗೆಗೆ ಪೂರಕವಾಗಿವೆ. ಇದರಿಂದ ಕೂದಲು ಹೆಚ್ಚಿನ ದೃಢತೆ ಪಡೆಯುವುದರ ಜೊತೆಗೇ ಉದುರುವುದರಿಂದಲೂ ರಕ್ಷಣೆ ಪಡೆಯುತ್ತದೆ. ಪ್ರಾಣಿಗಳ ಮೇಲೆ ನಡೆಸಿದ ಪರೀಕ್ಷೆಗಳ ಮೂಲಕ ಕೂದಲ ದೃಢತೆ, ಕಾಂತಿ ಮತ್ತು ಉದ್ದವಾದ ಕೂದಲಿಗೆ ಈ ಬಯೋಟಿನ್ ಪೂರಕವಾಗಿದೆ ಎಂದು ತಿಳಿದುಬಂದಿದೆ.

ಅಕ್ರೋಟು
ಬಯೋಟಿನ್ ಹೊಂದಿರುವ ಏಕಮಾತ್ರ ಒಣಫಲವೆಂದರೆ ಅಕ್ರೋಟು. ಇದರ ಜೊತೆಗೇ ಇದರಲ್ಲಿರುವ ವಿಟಮಿನ್ ಬಿ ತಲೆಯ ಚರ್ಮಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲ ಬುಡಗಳನ್ನು ದೃಢಗೊಳಿಸಿ ಅಕಾಲಿಕ ನೆರೆ ಮತ್ತು ಉದುರುವುದನ್ನೂ ತಡೆಯುತ್ತದೆ.

ಅವರೆ ಮತ್ತು ದ್ವಿದಳಧಾನ್ಯಗಳು
ದ್ವಿದಳ ಧಾನ್ಯಗಳಲ್ಲಿ ಪ್ರೋಟೀನುಗಳು ವಿಪುಲವಾಗಿವೆ. ಇವು ಕೂದಲ ಜೀವಕೋಶಗಳ ವಿಭಜನೆಯಲ್ಲಿ ಸಹಕರಿಸುವ ಮೂಲಕ ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿರುವ ಫೋಲಿಕ್ ಆಮ್ಲ ಕೂದಲ ಬುಡಕ್ಕೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುವ ಮೂಲಕ ಕೂದಲ ದೃಢತೆ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ.

ಮೊಸರು
ಪ್ರೋಬಯೋಟಿಕ್ ಅಥವಾ ಸೀರುಸುರಿಯ ಮೊಸರು (ಅಂದರೆ ಜೀರ್ಣಕ್ರಿಯೆಯಲ್ಲಿ ಸಹಕರಿಸುವ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಮೊಸರು) ಸೇವಿಸುವ ಮೂಲಕ ಜೀರ್ಣಕ್ರಿಯೆಯ ಜೊತೆಗೇ ಕೂದಲ ಬೆಳವಣಿಗೆಯೂ ಉತ್ತಮವಾಗುತ್ತದೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ದೊರೆತು ಕೂದಲ ಕಾಂತಿ ಮತ್ತು ದೃಢತೆ ಹೆಚ್ಚಲು ಸಾಧ್ಯವಾಗುತ್ತದೆ.

ಕೋಳಿಮಾಂಸ
ಕೋಳಿಮಾಂಸದಲ್ಲಿಯೂ ಹೆಚ್ಚಿನ ಪ್ರಮಾಣದ ಪ್ರೋಟೀನು ಇದ್ದು ಸುಲಭವಾಗಿ ತುಂಡಾಗುವ ಕೂದಲಿಗೆ ವಿಶೇಷ ಆರೈಕೆ ನೀಡುತ್ತದೆ. ತಲೆಯ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳಿರುವ ಕಾರಣ ಕೋಳಿಮಾಂಸ ಉತ್ತಮ ಆಹಾರವಾಗಿದೆ.



Click it and Unblock the Notifications
