Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲುದುರುವ ಸಮಸ್ಯೆಯನ್ನು ಪರಿಹರಿಸುವ ಪುದೀನಾ ಎಣ್ಣೆ
ಕೂದಲುದುರುವ ಸಮಸ್ಯೆ ಅತಿಯಾದಾಗ ನೀವು ಇದನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ದಿನದಲ್ಲಿ ಒಂದು ನೂರು ಕೂದಲು ಸಾಮಾನ್ಯವಾಗಿ ಉದುರುತ್ತದೆ. ಆದರೆ ಈ ಸಂಖ್ಯೆ ವಿಪರೀತವಾಗುತ್ತಿದೆ ಎಂದಾದಲ್ಲಿ ಕೂದಲಿಗೆ ಎಲ್ಲೋ ಪೋಷಣೆಯ ಕೊರತೆ ಉಂಟಾಗುತ್ತಿರುವುದಂತೂ ಖಂಡಿತ. ನೀವು ಸೇವಿಸುವ ಆಹಾರ, ಕೂದಲು ತೊಳೆಯುವ ಶಾಂಪೂ, ನೀರು, ಎಣ್ಣೆ ಹೀಗೆ ಪ್ರತಿಯೊಂದೂ ಪರಿಣಾಮವನ್ನು ಬೀರುತ್ತದೆ. ಕೂದಲುದುರುವಿಕೆ ಅನುವಂಶಿಕ ಕಾರಣಗಳಿಂದ ಉಂಟಾಗುತ್ತಿದೆ ಎಂದಾದಲ್ಲಿ ನಿಮ್ಮ ನಿತ್ಯ ಕ್ರಮದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡು ಕೂದಲುದುರುವಿಕೆಯನ್ನು ತಡೆಗಟ್ಟಬಹುದಾಗಿದೆ.

ಸರಳ ಡಯೆಟ್ ಬದಲಾವಣೆಗಳು ಮತ್ತು ಸೂಕ್ತವಾದ ಕೂದಲಿನ ಆರೈಕೆ ಕ್ರಮಗಳನ್ನು ನಿಮ್ಮದಾಗಿಸಿಕೊಂಡು ಕೂದಲುದುರುವುದನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಕೂದಲು ಉದುರುವಿಕೆಗೆ ಪೋಷಕಾಂಶಗಳ ಕೊರತೆ ಎಂದೇ ಹೇಳಲಾಗುವುದಿಲ್ಲ. ಜಾಹೀರಾತಿಗೆ ಮರುಳಾಗಿ ನೀವು ಖರೀದಿಸುವ ಬ್ರ್ಯಾಂಡೆಡ್ ಉತ್ಪನ್ನಗಳೂ ಕೂದಲನ್ನು ಬಲಿ ತೆಗೆದುಕೊಳ್ಳುತ್ತವೆ. ಆದರೆ ಇದನ್ನು ಪರಿಹರಿಸಲು ಇರುವ ಒಂದೇ ಮಾರ್ಗವೆಂದರೆ ನೈಸರ್ಗಿಕ ವಿಧಾನಗಳನ್ನು ನಿಮ್ಮದಾಗಿಸುವುದಾಗಿದೆ.
ಹೌದು ಇಂದಿನ ಲೇಖನದಲ್ಲಿ ಕೂದಲುದುರುವಿಕೆಯನ್ನು ತಡೆಯುವ ಪುದೀನಾ ಎಣ್ಣೆಯ ತಯಾರಿ ಮತ್ತು ಮಹತ್ವದ ಬಗ್ಗೆ ನಾವು ತಿಳಿಸಲಿದ್ದೇವೆ. ಈ ಎಣ್ಣೆ ಕೂದಲಿನ ಬೆಳವಣಿಗೆಯಲ್ಲಿ ಹೇಗೆ ಪಾತ್ರ ವಹಿಸುತ್ತದೆ ಮತ್ತು ಎಣ್ಣೆಯನ್ನು ಕೂದಲಿಗೆ ಹೇಗೆ ಬಳಸಬೇಕು ಎಂಬುದನ್ನು ನಾವು ತಿಳಿಸಲಿದ್ದು ಇದರಿಂದ ಈ ಎಣ್ಣೆಯ ಮಹತ್ವವನ್ನು ನಿಮಗೆ ತಿಳಿಯಬಹುದಾಗಿದೆ. ಬನ್ನಿ ಈ ಎಣ್ಣೆಯ ಬಗ್ಗೆ ಮತ್ತಷ್ಟು ಅಂಶಗಳನ್ನು ಅರಿತುಕೊಳ್ಳೋಣ.
ಇದು ಹೇಗೆ ಕೆಲಸ ಮಾಡುತ್ತದೆ?
ಪುದೀನಾ ಎಣ್ಣೆ ಕೂದಲಿನ ಬೆಳವಣಿಗೆಗೆ ಮಾತ್ರ ಸಹಕಾರಿಯಾಗಿರದೇ ಕೂದಲಿನ ಬೆಳವಣಿಗೆಗೆ ಬೇಕಾದ ಅಂಶವಾಗಿರುವ ಆಲ್ಕಾಲೈನ್ ಫೋಸ್ಫಟೇಸ್ ಎಂಜೀಮ್ನ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದು ಕೂದಲನ್ನು ದಪ್ಪವಾಗಿಸುವುದು ಮಾತ್ರವಲ್ಲದೆ ಕೂದಲ ಕೋಶಗಳ ಸಂಖ್ಯೆಯನ್ನು ವೃದ್ಧಿಸಿ ಕೂದಲಿನ ಕೋಶದ ಆಳವನ್ನು ಅಭಿವೃದ್ಧಿಪಡಿಸುತ್ತದೆ ಇದರಿಂದ ಕೂದಲಿನ ಬೆಳವಣಿಗೆ ನಡೆಯುತ್ತದೆ. ನಾಲ್ಕು ವಾರಗಳ ನಂತರ ಪಿಇಒ 92% ದಷ್ಟು ಕೂದಲಿನ ಬೆಳವಣಿಗೆಯನ್ನು ತೋರಿಸುತ್ತದೆ ಇದನ್ನು ಮಿನಾಕ್ಸಿಡಿಲ್ಗೆ ಹೋಲಿಸಿದಾಗ (ಆಂಡ್ರಾಜೆನೆಟಿಕ್ ಅಲೊಪೇಸಿಯಾ (ಬೊಕ್ಕತಲೆ) ಚಿಕಿತ್ಸಿಸಿಸಲು ಹೆಚ್ಚು ಬಳಸುವ ಔಷಧ) ಇದು ಗಮನಾರ್ಹ ಪರಿಣಾಮವನ್ನು ಬೀರುವುದಂತೂ ಖಂಡಿತ. ಪಿಇಒ ಕೂದಲಿನ ಬೆಳವಣಿಗೆಯನ್ನು ಮಾಡುವುದರ ಜೊತೆಗೆ ಬಲಯುತಗೊಳಿಸುತ್ತದೆ ತ್ವಚೆಯ ಮೇಲ್ಭಾಗದ ಹೊದಿಕೆ ಎಪಿಡರ್ಮಿಸ್ನಿಂದ ಕೂದಲಿನ ಕಿರುಚೀಲಗಳನ್ನು ಉತ್ತೇಜಿಸಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಪುದೀನಾ ಎಣ್ಣೆಯನ್ನು ನೀವು ಹೇಗೆ ಬಳಸಬೇಕು?
ಅಪರಿಮಿತ ಕೂದಲುದುರುವಿಕೆ ಮತ್ತು ಬೋಳು ತೇಪೆಗಳ ಸಮಸ್ಯೆಗಳನ್ನು ಪರಿಹರಿಸಲು ಪುದೀನಾ ಎಣ್ಣೆಯನ್ನು ತೆಂಗಿನೆಣ್ಣೆಯೊಂದಿಗೆ ತೆಳು ಮಾಡಿ ಮತ್ತು ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಈ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಲು ಮರೆಯದಿರಿ ಏಕೆಂದರೆ ರಕ್ತ ಪರಿಚಲನೆಯನ್ನು ಸುಧಾರಿಸಲು ಮತ್ತು ಕೂದಲು ಬೆಳೆಯಲು ತಲೆಬುರುಡೆಯನ್ನು ಉತ್ತೇಜಿಸುವ ಅಂಶ ಮಸಾಜ್ನಿಂದ ದೊರೆಯುತ್ತದೆ. ಶಾಂಪೂ ಅಥವಾ ಕಂಡೀಷನರ್ನೊಂದಿಗೆ ಇದನ್ನು ಬಳಸಿಕೊಂಡು ಕೂದಲನ್ನು ಕೂಡ ತೊಳೆಯಬಹುದಾಗಿದೆ. ಉತ್ತಮ ಪರಿಣಾಮವನ್ನು ಕಂಡುಕೊಳ್ಳಲು ಈ ವಿಧಾನವನ್ನು ಕನಿಷ್ಟ ಪಕ್ಷ ನಾಲ್ಕು ವಾರಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆಯಾದರೂ ಮಾಡಿ.



Click it and Unblock the Notifications


