ಉದ್ದನೆಯ ಕೂದಲು ಪಡೆಯಲು ಇಲ್ಲಿದೆ ಸರಳ ಟಿಪ್ಸ್

By manjula balaraj

ಉದ್ದನೆಯ ಮತ್ತು ಸುಧೃಡವಾದಂತಹ ಕೂದಲು ಎಲ್ಲಾ ಹುಡುಗಿಯರ ಕನಸು, ಆದರೆ ಇದು ಒಂದು ದಿನದಲ್ಲಿ ಆಗುವಂತ ಕೆಲಸವಲ್ಲ. ಹುಡುಗಿಯರು ಸಾಮಾನ್ಯವಾಗಿ ಕೂದಲಿನ ಆರೈಕೆಗೆ ಜಾಹೀರಾತು ಉತ್ಪನ್ನಗಳ ಹಿಂದೆ ಬೀಳುತ್ತಾರೆ. ಆದರೆ ಅಂತಹ ಉತ್ಪನ್ನಗಳನ್ನು ಬಳಸಿದ ನಂತರ ಅದರಿಂದ ಅಂತಹ ಉತ್ತಮ ಪ್ರಯೋಜನವಿಲ್ಲ ಎನ್ನುವುದರ ಅರಿವಾಗುತ್ತದೆ. ಆ ಉತ್ಪನ್ನಗಳಲ್ಲಿರುನ ರಾಸಾಯನಿಕ ಅಂಶಗಳು ಕೂದಲನ್ನು ರಕ್ಷಿಸುವ ಭಾಗಗಳನ್ನು ಹಾನಿ ಮಾಡುತ್ತದೆ ಮತ್ತು ಕೂದಲು ಬೆಳವಣಿಗೆ ನಿಧಾನಗೊಳ್ಳುತ್ತದೆ. ಕೂದಲು ಬೇಗನೆ ಉದ್ದ ಬೆಳೆಯಬೇಕೆ? ಇಲ್ಲಿದೆ ಟಿಪ್ಸ್

ಆದರೆ, ಇನ್ನೂ ಕೆಲವು ಸರಳವಾದ ಪರಿಣಾಮಕಾರಿ ಕ್ರಮಗಳನ್ನು ಬಳಸಿದರೆ ಕೂದಲು ಉದ್ದ ಮತ್ತು ಸುದೃಢವಾಗಿ ಹಾಗೂ ಆರೋಗ್ಯಕರ ಬೆಳೆಯಲು ಇದರಿಂದ ಸಾಧ್ಯವಾಗುತ್ತದೆ. ಉದ್ದನೆಯ ಕೂದಲು ಕವಲೊಡೆಯುವುದು ಜಾಸ್ತಿ ಹಾಗಾಗಿ ಹುಡುಗಿಯರು ಇದರಿಂದ ಮುಕ್ತಿ ಪಡೆಯಲು ಕೂದಲನ್ನು ಕತ್ತರಿಸುವಲ್ಲಿ ಒಲವು ತೋರಿಸುತ್ತಾರೆ. ಈ ಕಾರಣಕ್ಕಾಗಿ ಅನೇಕ ಹುಡುಗಿಯರು ಉದ್ದ ಕೂದಲು ಬೆಳೆಸಲು ಅವರು ಇಚ್ಚಿಸುವುದಿಲ್ಲ. ಆದರೆ ಇಲ್ಲಿ ಪ್ರಮುಖ ವಿಷಯ ಏನೆಂದರೆ ಕೂದಲು ಮತ್ತು ನೆತ್ತಿಯ ಆರೈಕೆಯನ್ನು ಮಾಡುವುದು. ತಲೆಯ ಚಿಪ್ಪು ಆರೋಗ್ಯಕರವಾಗಿ ಇಲ್ಲದೇ ಇದ್ದ ಪಕ್ಷದಲ್ಲಿ, ನಿಮ್ಮ ಕೂದಲು ಬೇರುಗಳು ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ನೀಳ ಕೇಶರಾಶಿ ಚೆಲುವೆಗೆ ಏಳು ವಿಶೇಷ ಸಲಹೆ

ಅಲ್ಲದೆ ಇದರ ಪರಿಣಾಮವಾಗಿ ನಿಮ್ಮ ಕೂದಲು ಉದರಬಹುದು. ನಿಮ್ಮ ಕೂದಲು ಆರೋಗ್ಯಕರವಾಗಿ ಬೆಳೆಯುವಂತೆ ಮಾಡಲು, ಸಾಕಷ್ಟು ಪೋಷಣೆಯನ್ನು ಮಾಡಬೇಕಾಗುತ್ತದೆ. ಸಾಕಷ್ಟು ನಿದ್ರೆ ಹಾಗೂ ಸಮತೋಲಿತ ಆಹಾರ ಕೂದಲಿನ ಬೆಳವಣಿಗೆಗೆ ಅಗತ್ಯ. ಶಾಖದಿಂದ ತಪ್ಪಿಸಿಕೊಳ್ಳಲು ಆದಷ್ಟು ಪ್ರಯತ್ನಿಸಿ, ಬಿಸಿ ನೀರಿನಲ್ಲಿ ಸ್ನಾನ ಅಥವಾ ಕೂದಲಿಗೆ ಶಾಂಪೂ ಬಳಕೆಯಿಂದಾಲೂ ಇಂತಹ ಸಮಸ್ಯೆ ಎದುರಾಗಬಹುದು. ಕೆಳಗಿರುವ ಕೆಲವು ವಿಧಾನಗಳು ನಿಮ್ಮ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಆದುದರಿಂದ ಉದ್ದನೆಯ, ನಯವಾದ ಮತ್ತು ಆರೋಗ್ಯವಂತ ಕೂದಲು ಬಯಸುವವರು, ಕೂದಲು ಉದ್ದ ಬೆಳೆಯಲು ಕೆಲವು ಸುಲಭ ವಿಧಾನಗಳನ್ನು ಈ ಲೇಖನದಲ್ಲಿ ಹೇಳುತ್ತಿದ್ದೇವೆ. ಇದನ್ನು ನೀವು ಒಮ್ಮೆ ಪ್ರಯತ್ನಿಸಿ ನೋಡಿ....

ನಿಮ್ಮ ಕೂದಲನ್ನು ಚೆನ್ನಾಗಿ ಬಾಚುವುದರಿಂದ

ನಿಮ್ಮ ಕೂದಲನ್ನು ಚೆನ್ನಾಗಿ ಬಾಚುವುದರಿಂದ

ನಿಮ್ಮ ಕೂದಲನ್ನು ಮಲಗುವ ಮುನ್ನ ಒಮ್ಮೆ ಚೆನ್ನಾಗಿ ಬಾಚಬೇಕು. ನೀವು ಮಲಗುವ ಮೊದಲು ಕೂದಲನ್ನು ಬಾಚುವುದರಿಂದ ತಲೆಯಲ್ಲಿರುವ ನೈಸರ್ಗಿಕ ತೈಲವು ನಿಮ್ಮ ತಲೆಯ ಮೂಲೆ ಮೂಲೆಗಳಿಗೂ ಹರಡುತ್ತದೆ. ಇದರಿಂದ ರಕ್ತ ಸಂಚಾರವು ಸುಗಮವಾಗಿ ಆಗುತ್ತದೆ ಇದರಿಂದ ನಿಮ್ಮ ಕೂದಲು ಉತ್ತಮವಾಗಿ ಬೆಳೆಯಲು ಸಹಾಯವಾಗುತ್ತದೆ.

ಕೂದಲನ್ನು ಟ್ರಿಂ ಮಾಡುವುದರಿಂದ

ಕೂದಲನ್ನು ಟ್ರಿಂ ಮಾಡುವುದರಿಂದ

ನೀವು ಉದ್ದನೆಯ ಕೂದಲು ಬೆಳೆಯಲು ಸರಳ ಹಾಗೂ ಇನ್ನೂ ಪರಿಣಾಮಕಾರಿ ಕ್ರಮಗಳನ್ನು ಹುಡುಕುತ್ತಿರುವಿರಾ? ಹಾಗಾದರೆ ಇಲ್ಲಿದೆ ಕೆಲವು ವಿಧಾನಗಳು. ಕೂದಲು ಕತ್ತರಿಸುವುದರಿಂದ ನಿಮಗೆ ಕೂದಲು ಉದ್ದವಾಗುವುದಿಲ್ಲ ಎನ್ನುವುದು ಸತ್ಯ. ಆದರೆ ಇದು ಕೂದಲು ಕವಲೊಡೆಯುವುದನ್ನು ತಪ್ಪಿಸಲು ಸಹಾಯವಾಗುತ್ತದೆ. ಹೀಗೆ ಮಾಡುವುದರಿಂದನಿಮ್ಮ ಕೂದಲಿನ ತುದಿಯು ಉತ್ತಮವಾಗಿ ಬೆಳೆಯುತ್ತದೆ

ಸಮತೋಲಿತ ಆಹಾರ

ಸಮತೋಲಿತ ಆಹಾರ

ಕೂದಲಿನ ಉತ್ತಮ ಬೆಳವಣಿಗೆಗೆ ಇದೊಂದು ಸರಳ ಮಾರ್ಗ. ಉದ್ದನೆಯ ಮತ್ತು ಆರೋಗ್ಯವಂತ ಕೂದಲು ಪಡೆಯಲು ದೇಹದ ಒಳಗಿನ ಭಾಗವೂ ಉತ್ತಮವಾಗಿರ ಬೇಕಾಗುತ್ತದೆ. ನಿಮ್ಮ ಆಹಾರದಲ್ಲಿ ಇಡೀ ಧಾನ್ಯಗಳನ್ನು ಉಪಯೋಗಿಸುವುದು, ಸೊಪ್ಪುಗಳು, ಹಸಿರು ತರಕಾರಿಗಳು, ಹಣ್ಣುಗಳು, ಒಮೆಗಾ -3 ಕೊಬ್ಬಿನ ಅಂಶಗಳು, ಮೀನುಗಳು ಇತ್ಯಾದಿ ಪ್ರೋಟೀನ್ ಇರುವ ಆಹಾರವನ್ನು ನಿಯಮಿತ ಆಹಾರದಲ್ಲಿ ಬಳಸುವುದರಿಂದ ಕೂದಲಿನ ಪೊಷಣೆ ಉತ್ತಮವಾಗಲು ಸಾಧ್ಯವಾಗುತ್ತದೆ.

ಚೆನ್ನಾಗಿ ನೀರು ಕುಡಿಯಿರಿ...

ಚೆನ್ನಾಗಿ ನೀರು ಕುಡಿಯಿರಿ...

ಇನ್ನೂ ಸರಳ ಮತ್ತು ಪರಿಣಾಮಕಾರಿ ಕ್ರಮಗಳನ್ನು ಉಪಯೋಗಿಸಿ ಉದ್ದ ಕೂದಲು ಬೆಳೆಯಲು ಬಯಸಿದರೆ, ನಿಮ್ಮ ದೇಹವನ್ನು ಹೈಡ್ರೀಕರಿಸಿ ಇರಿಸಿಕೊಳ್ಳಿ. ತಜ್ಞರ ನೀಡುವ ಸಲಹೆಯಂತೆ ಒಂದು ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯಬೇಕಾಗುತ್ತದೆ, ನೀರು ಕುಡಿಯುವುದು ಬೇಜಾರು ಎಂದಾದರೆ ಹಣ್ಣಿನ ರಸವನ್ನು ಸೇವಿಸಿ, ಆದರೆ ಕಾಫಿ ಮತ್ತು ಚಹಾದಿಂದ ಮಾತ್ರ ದೂರವಿರಿ.

ನೈಸರ್ಗಿಕ ಹೇರ್ ಪ್ಯಾಕ್

ನೈಸರ್ಗಿಕ ಹೇರ್ ಪ್ಯಾಕ್

ಮೊಸರು, ಮೊಟ್ಟೆ ಮತ್ತು ಬಾಳೆ ಪ್ಯಾಕ್ ಬಳಸಿ. ಇದು ತಲೆಯ ಇದು ತೇವವನ್ನು ಕಾಪಾಡುವ ಶಕ್ತಿಯನ್ನು ಹೊಂದಿದೆ. ಇದು ಉದ್ದನೆಯ ಕೂದಲಿನ ಬೆಳವಣಿಗೆಗೆ ಉತ್ತಮವಾದ ಮತ್ತು ಸರಳವಾದ ಮಾರ್ಗವಲ್ಲದೇ ಇನ್ನೇನು, ಅಲ್ಲವೇ?

ಕೂದಲಿಗೆ ಉಪಯೋಗಿಸುವ ಉಪಕರಣಗಳ ಕಡಿಮೆ ಬಳಕೆಯಿಂದ

ಕೂದಲಿಗೆ ಉಪಯೋಗಿಸುವ ಉಪಕರಣಗಳ ಕಡಿಮೆ ಬಳಕೆಯಿಂದ

ನಿಮಗೆ ಹೇರ್ ಡೈಯರ್, ರೋಲರ್, ಅಥವಾ ಸ್ಟ್ರೈಟ್ನರ್ ಇತ್ಯಾದಿಗಳನ್ನು ಉಪಯೋಗಿಸುವ ರೂಢಿ ಇದ್ದಲ್ಲಿ, ಇದರಿಂದ ದೂರವಿರಿ. ಈ ಉಪಕರಣಗಳಿಂದ ಹೊರ ಬರುವ ಶಾಖವು ನಿಮ್ಮ ಕೂದಲನ್ನು

ಹಾನಿಗೊಳಿಸುತ್ತದೆ ಇದರ ಪರಿಣಾಮವಾಗಿ ಕೂದಲು ಬೀಳುವುದು, ಕವಲೊಡೆಯುವುದು ಮುಂತಾದ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಆದುದರಿಂದ ಇಂತಹ ಉಪಕರಣಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ.

X
Desktop Bottom Promotion