Latest Updates
-
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು!
ಕೂದಲು ವೇಗವಾಗಿ ಬೆಳೆಯಬೇಕೇ? ಹೀಗೆ ಮಾಡಿ
ದಟ್ಟವಾದ ಕೂದಲು ಯಾರಿಗೆ ಇಷ್ಟವಿಲ್ಲ? ಕೆಲವು ಕಾರಣಕ್ಕೆ ಗಿಡ್ಡವಾಗಿದ್ದ ಕೂದಲಿನ ಉದ್ದ ಹೆಚ್ಚಿಸಿಕೊಳ್ಳುವುದು ಎಲ್ಲರ ಕನಸು. ಆದರೆ ಕೂದಲು ಬೆಳೆಯುವ ವೇಗದ ಗತಿ ಆಮೆವೇಗಕ್ಕಿಂತಲೂ ಅತಿ ನಿಧಾನವಾಗುವ ಕಾರಣ ಹೆಚ್ಚಿನ ಸಂದರ್ಭದಲ್ಲಿ ನಿರಾಸೆಯೇ ಗತಿಯಾಗುತ್ತದೆ. ಆದರೆ ಇದಕ್ಕೆ ಕಾರಣ ಕೂದಲಿಗೆ ನಾವು ನೀಡುವ ಆರೈಕೆಯಲ್ಲಿ ಮಾಡುವ ಕೊರತೆ. ಆದರೆ ಈಗ ಹೆಚ್ಚು ಚಿಂತಿಸಬೇಕಾಗಿಲ್ಲ. ಏಕೆಂದರೆ ಇದಕ್ಕಾಗಿ ಸುಲಭ ವಿಧಾನವೊಂದಿದೆ. ಒಂದು ಚೆನ್ನಾಗಿ ಕಳಿತ ಬಾಳೆಹಣ್ಣಿನ ತಿರುಳನ್ನು ಕಿವುಚಿ ಅರ್ಧ ಲಿಂಬೆಯ ರಸವನ್ನು ಸೇರಿಸಬೇಕು.
ಜೊತೆಗೆ ಮೊಟ್ಟೆಯ ಹಳದಿ ಭಾಗವನ್ನು ಪ್ರತ್ಯೇಕಿಸಿ ಸೇರಿಸಿ ಮಿಶ್ರಣ ಮಾಡಿ ದಪ್ಪನಾದ ಲೇಪನ ತಯಾರಿಸಿ. ಈ ಲೇಪನವನ್ನು ಕೂದಲಿಗೆ ಬುಡದಿಂದ ತುದಿಯವರೆಗೂ ಆವರಿಸುವಂತೆ ಹಚ್ಚಿ. ಒಂದು ಘಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸುವ ಮೂಲಕ ಇದರಿಂದ ಪಡೆಯುವ ಪರಿಣಾಮ ನಿಮ್ಮ ಮೊಗದಲ್ಲಿ ಹರ್ಷ ಮೂಡಿಸುವುದು ಖಂಡಿತ. ಬನ್ನಿ, ಕೂದಲ ಆರೈಕೆಗಾಗಿ ಇನ್ನೂ ಕೆಲವು ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಹರಳೆಣ್ಣೆ ಬಳಸಿ
ಹರಳೆಣ್ಣೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಮತ್ತು ಕೊಬ್ಬಿನ ತೈಲವಿದೆ. ಆಗಾಗ ಹರಳೆಣ್ಣೆಯಿಂದ ತಲೆಗೆ ನಯವಾದ ಮಸಾಜ್ ಮಾಡುವ ಮೂಲಕ ಕೂದಲ ಉದ್ದ ಹೆಚ್ಚಲು ಸಾಧ್ಯವಾಗುತ್ತದೆ.

ಪ್ರೋಟೀನ್ ಯುಕ್ತ ಆಹಾರ
ದೇಹಕ್ಕೆ ಅಗತ್ಯವಿರುವಂತೆಯೇ ಕೂದಲ ಬೆಳವಣಿಗೆಗೂ ಪ್ರೋಟೀನು, ಖನಿಜಗಳು ಮತ್ತು ವಿಟಮಿನ್ನುಗಳ ಅಗತ್ಯವಿದೆ. ಇದಕ್ಕಾಗಿ ಮೊಟ್ಟೆ, ಹಾಲು, ಮೊಸರು, ಚೀಸ್, ಪಾಲಕ್ ಸೊಪ್ಪು, ಸಾಲ್ಮನ್ ಮೀನು, ಎಲೆಕೋಸು, ಓಟ್ಸ್, ಬೆಣ್ಣೆಹಣ್ಣು, ಕಂದು ಬ್ರೆಡ್ ಮೊದಲಾದವುಗಳನ್ನು ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ.

ಒತ್ತಡದಿಂದ ದೂರವಿರಿ
ಕೂದಲ ಬೆಳವಣಿಗೆಯ ಬದ್ದ ವೈರಿ ಎಂದರೆ ಮಾನಸಿಕ ಒತ್ತಡ. ಆದ್ದರಿಂದ ಯಾವುದೇ ಪರಿಸ್ಥಿತಿ ಇದ್ದರೂ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಇದರಿಂದ ಕೂದಲ ಬೆಳವಣಿಗೆ ಶೀಘ್ರ ಮತ್ತು ಉತ್ತಮವಾಗಿ ಆಗುತ್ತದೆ.

ಕೂದಲನ್ನು ತಲೆಹೊಟ್ಟಿನಿಂದ ಮುಕ್ತಿಗೊಳಿಸಿ
ತಲೆಗೂದಲ ಬೆಳವಣಿಗೆಗೆ ಅಡ್ಡಿಪಡಿಸುವ ಇನ್ನೊಂದು ಕಾರಣವೆಂದರೆ ತಲೆಹೊಟ್ಟು. ಇದರ ಮೂಲಕ ತಲೆಗೂದಲ ಬುಡಕ್ಕೆ ಹಲವು ಸೋಂಕುಗಳು ಎದುರಾಗಬಹುದಾಗಿದ್ದು ಕೂದಲ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಕೂದಲು ಉದುರಲೂ ಕಾರಣವಾಗುತ್ತದೆ. ಆದ್ದರಿಂದ ತಲೆಹೊಟ್ಟು ನಿವಾರಿಸುವ ಸಮರ್ಥ ವಿಧಾನವನ್ನು ಅನುಸರಿಸಿ.

ಕಂಡೀಶನರ್ ಉಪಯೋಗಿಸಿ
ಕೂದಲ ಆರೈಕೆಗೆ ಸೌಮ್ಯವಾದ ಕಂಡೀಶನರ್ ನಿಯಮಿತವಾಗಿ ಬಳಸಿ. ಇದರಿಂದ ನಿಮ್ಮ ಕೂದಲು ಆರೋಗ್ಯಕರ ಮತ್ತು ಮೃದುವಾಗಿಯೂ ಇರುತ್ತದೆ.

ಆಗಾಗ ಮಸಾಜ್ ಮಾಡುತ್ತಿರಿ
ಕೂದಲ ಬುಡಕ್ಕೆ ಉತ್ತಮ ಪ್ರಮಾಣದ ರಕ್ತಸಂಚಾರ ಅಗತ್ಯವಾಗಿದೆ. ಇದರಿಂದ ಇಲ್ಲಿ ಅಗತ್ಯವಿರುವ ಪೋಷಕಾಂಶಗಳು ಲಭ್ಯವಾಗಿ ಕೂದಲ ಬೆಳವಣಿಗೆಯನ್ನು ವೃದ್ದಿಸುತ್ತದೆ. ನಯವಾದ ಮಸಾಜ್ ಮೂಲಕ ರಕ್ತಸಂಚಾರವನ್ನು ಹೆಚ್ಚಿಸಿ ಹೆಚ್ಚಿನ ಪೋಷಣೆ ಪಡೆಯಬಹುದು.

ತುದಿಗಳು ಸೀಳಿದ್ದರೆ ಅದರ ಬುಡದಲ್ಲಿಯೇ ಕತ್ತರಿಸಿ
ಕೆಲವೊಮ್ಮೆ ಆರೈಕೆಯ ಕೊರತೆಯಿಂದ ಕೂದಲ ತುದಿಗಳು ಸೀಳಿರುವುದನ್ನು ಕಾಣಬಹುದು. ಇದನ್ನು ಹಾಗೇ ಬಿಟ್ಟರೆ ಸೀಳು ತಲೆಗೂದಲ ಬುಡದವರೆಗೂ ಬರಬಹುದು. ಆದ್ದರಿಂದ ಸೀಳು ಪ್ರಾರಂಭವಾಗಿರುವಲ್ಲಿಂದ ಕೊಂಚವೇ ಮೇಲೆ ಕತ್ತರಿಸುವ ಮೂಲಕ ಕೂದಲು ಉತ್ತಮವಾದ ಬೆಳವಣಿಗೆ ಪಡೆಯಲು ಸಾಧ್ಯವಾಗುತ್ತದೆ.



Click it and Unblock the Notifications











