Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೂದಲಿನ ಸರ್ವ ರೋಗಕ್ಕೂ-ಮೊಸರಿನ ಹೇರ್ ಪ್ಯಾಕ್
ಮೊಸರು ಎಲ್ಲರ ಮನೆಯಲ್ಲೂ ದೊರೆಯುವ ಸಾಮಾಗ್ರಿಯಾಗಿದ್ದು, ವಿವಿಧ ಖಾದ್ಯಗಳ ತಯಾರಿಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ಮೊಸರನ್ನ, ದಹಿ ಚಾಟ್ ಹೀಗೆ ಮೊಸರನ್ನು ಬಳಸಿಕೊಂಡು ಬಾಯಲ್ಲಿ ನೀರೂರಿಸುವ ಸರಳ ರೆಸಿಪಿಗಳನ್ನು ಸಿದ್ಧಪಡಿಸಿ ಕೊಳ್ಳಬಹುದಾಗಿದೆ. ಆದ್ದರಿಂದಲೇ ಮೊಸರು ಹೆಚ್ಚಿನವರು ಮನವನ್ನು ಕದಿಯುವಲ್ಲಿ ಯಶಸ್ವಿಯಾಗಿದೆ. ಬರಿಯ ನಾಲಗೆಯ ಸ್ವಾದವನ್ನು ಇಮ್ಮಡಿಗೊಳಿಸುವ ಶಕ್ತಿಯನ್ನು ಹೊಂದಿರದೇ ಮೊಸರು ಆರೋಗ್ಯ ಮತ್ತು ಸೌಂದರ್ಯದ ವಿಷಯದಲ್ಲೂ ಎತ್ತಿದ ಕೈಯಾಗಿದೆ.
ಪೋಷಕಾಂಶಭರಿತವಾಗಿರುವ ಮೊಸರು, ಕ್ಯಾಲ್ಸಿಯಂ ಅಂಶಗಳನ್ನು ಒಳಗೊಂಡಿರುವುದರಿಂದ ಬಲಯುತವಾದ ಸ್ನಾಯುಗಳನ್ನು ರಚಿಸುವಲ್ಲಿ ಪ್ರಧಾನವಾಗಿದೆ. ಅಂತೆಯೆ ರೋಗ ವರ್ಧಕ ಶಕ್ತಿಯನ್ನು ಇಮ್ಮಡಿಗೊಳಿಸುವ ಆರೋಗ್ಯಕಾರಿ ಬ್ಯಾಕ್ಟೀರಿಯಾ ಉತ್ಪಾದನೆಯಲ್ಲೂ ಮೊಸರು ಪಾತ್ರ ವಹಿಸಿದೆ.
ಈಗಾಗಲೇ ನಾವು ತಿಳಿಸಿರುವಂತೆ ಮೊಸರು ಆರೋಗ್ಯಕಾರಿ ಗುಣಗಳನ್ನು ಹೊಂದಿರುವುದರಿಂದಾಗಿ ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಪ್ರೋತ್ಸಾಹಿಸುವಲ್ಲಿ ಪ್ರಧಾನವಾಗಿದೆ. ಕೂದಲನ್ನು ಆರೋಗ್ಯಕರವಾಗಿ ಬಲಶಾಲಿಯನ್ನಾಗಿ ಮಾಡುವ ಮೊಸರು ಪಾರ್ಲರ್ಗೆ ಹೋಗಿ ಕೂದಲನ್ನು ಅಂದವಾಗಿಸುವ ನಿಮ್ಮ ಸಮಯ ಮತ್ತು ಹಣವನ್ನು ಉಳಿಸುವಲ್ಲಿ ಸಹಕಾರಿಯಾಗಿದೆ. ಮೊಸರನ್ನು ಬಳಸಿ ಬೇರೆ ಬೇರೆ ಕೂದಲಿನ ಚಿಕಿತ್ಸಾ ಪದ್ಧತಿಗಳನ್ನು ಸ್ವತಃ ನೀವೇ ತಯಾರಿಸಿಕೊಳ್ಳಬಹುದಾಗಿದ್ದು ಅದೇನು ಎಂಬುದನ್ನು ಕೆಳಗಿನ ಸ್ಲೈಡರ್ಗಳ ಮೂಲಕ ನಾವು ತಿಳಿಸುತ್ತಿದ್ದೇವೆ.

ಸುಂದರ ಕೂದಲಿಗಾಗಿ
ಸಾಮಾಗ್ರಿಗಳು: ಮೊಸರು, ತೆಂಗಿನೆಣ್ಣೆ ಮತ್ತು ಅಲೊವೇರಾ
ಕೂದಲನ್ನು ಹೈಡ್ರೇಟ್ ಮಾಡುವ ಮೂಲಕ ಮೃದುಗೊಳಿಸುವ ವಿಧಾನವನ್ನು ಈ ರೆಸಿಪಿ ಹೊಂದಿದೆ. ನಿಯಮಿತವಾಗಿ ಈ ವಿಧಾನದ ಮೂಲಕ ಕೂದಲಿಗೆ ಮೊಸರಿನ ಬಳಕೆಯನ್ನು ಮಾಡಿದಲ್ಲಿ ಕಳೆಗುಂದಿದ ಕೂದಲು ಮರುಜೀವವನ್ನು ಪಡೆದುಕೊಳ್ಳುತ್ತದೆ ಅಂತೆಯೇ ತೆಂಗಿನೆಣ್ಣೆ ಮತ್ತು ಅಲೊವೇರಾ ನೈಸರ್ಗಿಕ ತೇವಾಂಶ ಏಜೆಂಟ್ಗಳಂತೆ ಕಾರ್ಯನಿರ್ವಹಿಸುತ್ತವೆ.

ಕೂದಲಿನ ಪೋಷಣೆಗಾಗಿ
ಮಾಡುವ ವಿಧಾನ
.ಮೂರು ಚಮಚ ಮೊಸರಿಗೆ, 2 ಚಮಚ ತೆಂಗಿನೆಣ್ಣೆ ಮತ್ತು ನಾಲ್ಕು ಚಮಚ ಅಲೊವೇರಾವನ್ನು ಮಿಶ್ರ ಮಾಡಿ
.ಇದನ್ನು ಚೆನ್ನಾಗಿ ಕಲಸಿಕೊಂಡು ಪೇಸ್ಟ್ನಂತೆ ತಯಾರಿಸಿಕೊಳ್ಳಿ
.ಇದನ್ನು ಕೂದಲಿಗೆ ಹಚ್ಚಿಕೊಂಡು ಎಲ್ಲಾ ಕಡೆ ಹರಡುವಂತೆ ನೋಡಿಕೊಳ್ಳಿ.

ಸುಂದರ ಕೇಶರಾಶಿಗಾಗಿ
15 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಮೃದುವಾದ ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ.

ಕೂದಲಿನ ಗಡಸುತನ ನಿವಾರಣೆಗಾಗಿ
ಸಾಮಾಗ್ರಿಗಳು: ಮೊಸರು, ಬಾದಾಮಿ ಎಣ್ಣೆ, ಮತ್ತು ಮೊಟ್ಟೆ
ಕೂದಲಿನ ಬುಡದಿಂದ ತುದಿಯವರೆಗಿನ ಪೋಷಣೆಯನ್ನು ಈ ಹೇರ್ ರೆಸಿಪಿ ಮಾಡುವುದರ ಜೊತೆಗೆ ಕ್ಯುಟಿಕಲ್ಗಳನ್ನು ಹೈಡ್ರೇಟ್ ಮಾಡುತ್ತದೆ. ಮೊಟ್ಟೆ ಹಾಗೂ ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ಗಳು ಮತ್ತು ಮಿನರಲ್ಗಳು ಕೂದಲಿನ ಗಡಸುತನವನ್ನು ನಿವಾರಿಸಿ ಮೃದುಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಅಂತೆಯೇ ತಲೆಹೊಟ್ಟಿನ ನಿವಾರಣೆಗೆ ಈ ರೆಸಿಪಿ ಸಹಕಾರಿಯಾಗಿದೆ.

ಕೂದಲಿನ ಗಡಸುತನ ನಿವಾರಣೆಗಾಗಿ
ಮಾಡುವ ವಿಧಾನ
ಅರ್ಧ ಕಪ್ ಮೊಸರಿಗೆ 2 ಚಮಚ ಬಾದಾಮಿ ಎಣ್ಣೆ ಮತ್ತು ಒಡೆದ ಮೊಟ್ಟೆಯನ್ನು ಸೇರಿಸಿ
ದಪ್ಪನೆಯ ಪೇಸ್ಟ್ ತಯಾರಿಸುವುದಕ್ಕಾಗಿ ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ
ನಂತರ ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ

ಕೂದಲಿನ ಗಡಸುತನ ನಿವಾರಣೆಗಾಗಿ
30 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಕೂದಲನ್ನು ಮೃದು ಶಾಂಪೂ ಬಳಸಿ ತೊಳೆದುಕೊಳ್ಳಿ.

ಕೂದಲು ಉದುರುವುದನ್ನು ತಡೆಗಟ್ಟಲು
ಸಾಮಾಗ್ರಿಗಳು: ಮೊಸರು ಮತ್ತು ಮೆಂತೆ ಬೀಜಗಳು
ಮೆಂತೆ ಬೀಜಗಳು ಮತ್ತು ಮೊಸರು ನ್ಯೂಟ್ರೀನ್ಗಳ ಆಗರ ಎಂದೆನಿಸಿದ್ದು ಕೂದಲಿನ ಬುಡವನ್ನು ಗಟ್ಟಿ ಮಾಡುವಲ್ಲಿ ಸಹಕಾರಿಯಾಗಿದೆ. ಕೂದಲನ್ನು ಆರೋಗ್ಯಕರವಾಗಿ ಇರಿಸುವುದರ ಮೂಲಕ ಕೂದಲುದುರುವುದನ್ನು ಇದು ತಡೆಗಟ್ಟುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿ ಇರಿಸುತ್ತದೆ. ಅಂತೆಯೇ ಹಾನಿಗೊಳಗಾದ ಕೂದಲಿನ ಕ್ಯೂಟಿಕಲ್ಗಳನ್ನು ರಿಪೇರಿ ಮಾಡಿ ಹೊಳೆಯುವ ಆಕರ್ಷಕ ಕೂದಲನ್ನು ನಿಮಗೆ ನೀಡುತ್ತದೆ.

ಮಾಡುವ ವಿಧಾನ
ಮೆಂತೆ ಬೀಜಗಳನ್ನು ಗ್ರೈಂಡರ್ನಲ್ಲಿ ರುಬ್ಬಿ ಪುಡಿ ಮಾಡಿಟ್ಟುಕೊಳ್ಳಿ
ಈ ಮಿಶ್ರಣಕ್ಕೆ ಮೊಸರನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ
ನಿಮ್ಮ ನೆತ್ತಿ ಮತ್ತು ಕೂದಲಿಗೆ ಇದನ್ನು ಹಚ್ಚಿಕೊಳ್ಳಿ

ಕೂದಲು ಉದುರುವುದನ್ನು ತಡೆಗಟ್ಟಲು
ನೆತ್ತಿಯನ್ನು ಸ್ವಲ್ಪ ಹೊತ್ತು ಮಸಾಜ್ ಮಾಡುತ್ತಿರಿ
ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ
ಉತ್ತಮ ಫಲಿತಾಂಶವನ್ನು ಪಡೆಯಲು ಈ ವಿಧಾನವನ್ನು ಆಗಾಗ್ಗೆ ಮಾಡುತ್ತಿರಿ.



Click it and Unblock the Notifications











