Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಾಂತಿಯುಕ್ತ ಚರ್ಮಕ್ಕೆ ಕೊಲಾಜೆನ್ ಚಿಕಿತ್ಸೆ
ಚರ್ಮಕ್ಕೆ ಪ್ರೋಟೀನ್ ಒದಗಿಸಲು ಕೊಲಾಜೆನ್ ಅತ್ಯಗತ್ಯ. ಸಮಯ ಮತ್ತು ವಯಸ್ಸಿಗನುಗುಣವಾಗಿ ಇದರ ಪ್ರೊಟೀನ್ ಉತ್ಪಾದನೆ ಕಡಿಮೆಯಾಗುತ್ತಾ ಬರುತ್ತದೆ. ಇದರ ಪರಿಣಾಮ ಸುಕ್ಕುಗಟ್ಟುವಿಕೆ ಮತ್ತು ವಯೋ ಸಂಬಂಧಿ ಕಲೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.
ಮೈಕ್ರೋ ಡರ್ಮೋಬ್ರಾಷನ್ ಎಂಬುದು ಒಂದು ಜನಪ್ರಿಯ ಚರ್ಮ ಹೊಳಪು ಮಾಡುವ ತಾಂತ್ರಿಕತೆ. ಅಲ್ಯುಮೀನಿಯಂ ಆಕ್ಸೈಡ್ ಕ್ರಿಸ್ಟಲ್‍ಗಳನ್ನು ಈ ತಾಂತ್ರಿಕತೆಯಲ್ಲಿ ಬಳಸಲಾಗುತ್ತದೆ. ಇದನ್ನು ಮುಖಕ್ಕೆ ಬಳಸಿದರೆ ಸುಕ್ಕುಗಟ್ಟಿದ ಚರ್ಮ ಮಾಯವಾಗಿ ಕಾಂತಿ ಮರು ಕಳಿಸುತ್ತದೆ. ಕೂದಲು ವೃದ್ಧಿಗೆ ಹೇರ್‌ಲೈನ್‌ನಿಂದ ಲೇಸರ್‌ಬ್ಯಾಂಡ್ 82 ಚಿಕಿತ್ಸೆ
ಕೊಲಾಜೆನ್ ರಕ್ತಸಾರವನ್ನು ಬಳಸುವ ಮೂಲಕ ಈ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಕೊಲಾಜೆನ್ ಇದು ಮೂಲತಃ ಪ್ರೊಟೀನ್. ಆದಾಗ್ಯೂ ಎಲ್ಲಾ ಪ್ರೊಟೀನ್‍ಗಳನ್ನು ಚರ್ಮ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತೇವಾಂಶವುಳ್ಳ ರಕ್ತಸಾರ ಪ್ರೊಟೀನ್‍ಗಳನ್ನು ಹೀರಿಕೊಳ್ಳಲು ಸಹಕಾರಿಯಾಗುತ್ತದೆ. ಮೈಕ್ರೋ ಡರ್ಮೋಬ್ರಾಷನ್ ತಾಂತ್ರಿಕತೆ ಬಳಸಿದ ಕೂಡಲೇ ಕೊಲಾಜೆನ್ ರಕ್ತಸಾರವನ್ನು ನೀಡಲಾಗುತ್ತದೆ. ಹಲವು ಬಾರಿ ಮೈಕ್ರೋ ಡರ್ಮೋಬ್ರಾಷನ್ ಪ್ರಕ್ರಿಯೆ ನೀಡುವುದರಿಂದ ಸ್ವಾಭಾವಿಕವಾಗಿ ಕೊಲಾಜೆನ್ ಪ್ರೊಟೀನ್ ಉತ್ಪಾದನೆ ಹೆಚ್ಚಾಗುತ್ತದೆ.

ಇದರಿಂದ ಚರ್ಮದ ಒಟ್ಟಾರೆ ಗುಣಮಟ್ಟ ಹೆಚ್ಚಾಗುತ್ತದೆ. ಚರ್ಮದ ಮೃದುತ್ವ ಸುಧಾರಣೆಯಾಗುತ್ತದೆ, ಚರ್ಮದ ಕಲೆಗಳನ್ನು ಹೋಗಲಾಡಿಸಿ ಕಾಂತಿಯನ್ನು ಹೆಚ್ಚಿಸುತ್ತದೆ.
ಮೈಕ್ರೋ ಡರ್ಮೋಬ್ರಾಷನ್ ಕೊಲಾಜೆನ್ ಉತ್ಪಾದನೆಯನ್ನು ಹೆಚ್ಚಳ ಮಾಡುತ್ತದೆ. ಕೊಲಾಜೆನ್ ಪ್ರೊಟೀನ್‍ನಲ್ಲಿನ ಹಾನಿಯಿಂದಾಗಿ ಚರ್ಮದಲ್ಲಿ ರಂಧ್ರ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೂಕ್ತವಾದ ಚರ್ಮ ರಕ್ಷಣೆ ಇಲ್ಲದಿದ್ದರೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ರೋಗಿಗಳು ಕೊಲಾಜೆನ್ ಸೇರಿದಂತೆ ಮೈಕ್ರೋ ಡರ್ಮೋಬ್ರಾಷನ್ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಒಂದು ವೇಳೆ ಈಗಾಗಲೇ ಚರ್ಮ ಸುಕ್ಕುಗಟ್ಟಿದ್ದರೆ ಮೈಕ್ರೋ ಡರ್ಮೋಬ್ರಾಷನ್ ಚಿಕಿತ್ಸೆ ಸಹಕಾರಿಯಾಗುವುದಿಲ್ಲ. ಆದರೆ, ಆರಂಭಿಕ ಹಂತದಲ್ಲಿ ಈ ಚಿಕಿತ್ಸೆ ಪಡೆಯುವುದು ಉತ್ತಮ. ಈ ಚಿಕಿತ್ಸೆಯ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ ಕಂಡುಬರುತ್ತದೆ.
ಕೆಲವು ಬಾರಿ ಇಂತಹ ಚಿಕಿತ್ಸೆ ಪಡೆಯುವುದು ಮುಖ್ಯ. 20 ವರ್ಷಕ್ಕಿಂತ ಮೇಲ್ಪಟ್ಟವರು ಪ್ರತಿ 15 ದಿನಕ್ಕೊಮ್ಮೆ 30 ರಿಂದ 45 ನಿಮಿಷಗಳವರೆಗೆ ಈ ಚಿಕಿತ್ಸೆ ಪಡೆಯುವುದು ಉತ್ತಮ. ಈ ಮೂಲಕ ಕಾಂತಿಯುಕ್ತ ಚರ್ಮವನ್ನು ಹೊಂದಬಹುದು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಚಿಕಿತ್ಸೆಯ ಅಂತಿಮ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆ ಆಗುತ್ತದೆ. ತಮ್ಮ ಚರ್ಮ ರಕ್ಷಣೆ ಬಗ್ಗೆ ಹೆಚ್ಚು ಆಸ್ಥೆ ಇದ್ದವರಿಗೆ ಇದು ಸೂಕ್ತ ಪರಿಹಾರ ನೀಡಬಲ್ಲದು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬೇಕಾದ ತಜ್ಞ ವೈದ್ಯ: ಡಾ. ಇಮ್ತಿಯಾಜ್. ದೂರವಾಣಿ: 080 22442260 ಅಥವಾ ವೆಬ್‍ಸೈಟ್: www.hairline.in.



Click it and Unblock the Notifications

