Latest Updates
-
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ
ಕೂದಲುದುರುವ ಸಮಸ್ಯೆಗೆ -'ತುಳಸಿ ಎಲೆಯ' ಹೇರ್ ಪ್ಯಾಕ್...
ನೈಸರ್ಗಿಕ ಗಿಡಮೂಲಿಕೆಗಳು ಅನಾದಿ ಕಾಲದಿಂದಲೂ ನಮ್ಮ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದು ಇಂದಿನ ಆಧುನಿಕ ಔಷಧೀಯ ಪದ್ಧತಿಯಲ್ಲೂ ಇವುಗಳು ತಮ್ಮ ಬೇಡಿಕೆಯನ್ನು ಕಳೆದುಕೊಂಡಿಲ್ಲ. ದುಬಾರಿ ಮೊತ್ತದ ಔಷಧಗಳಿಂದಲೂ, ಹೆಚ್ಚು ಪರಿಣಾಮಕಾರಿಯಾಗಿ ನೈಸರ್ಗಿಕ ಉತ್ಪನ್ನಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸಿದ ದೃಷ್ಟಾಂತಗಳಿವೆ.
ನಮ್ಮ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಲು ಪ್ರಾಕೃತಿಕ ಗಿಡಮೂಲಿಕೆಗಳು ಉಪಯೋಗಕಾರಿಯಾಗಿವೆ. ಇಂತಹ ಸಸ್ಯವಾಗಿರುವ ತುಳಸಿಯೇ ಕುರಿತು ನಾವು ಹೆಚ್ಚಿನ ಪರಿಣಾಮಕಾರಿ ಅಂಶಗಳನ್ನು ತಿಳಿಸಲಿದ್ದೇವೆ. ಹೆಚ್ಚುವರಿ ಕೂದಲು ಉದುರುವಿಕೆ ಸಮಸ್ಯೆಗಳನ್ನು ತುಳಸಿ ಹೋಗಲಾಡಿಸಲಿದ್ದು, ಇದರಲ್ಲಿ ವಿಟಮಿನ್ ಎ, ಸಿ, ಇ ಮತ್ತು ಕೆ ಇವೆ. ಆರೋಗ್ಯ ರಕ್ಷಕ- 'ತುಳಸಿ ಎಲೆಯ' ಜಬರ್ದಸ್ತ್ ಪವರ್
ಹೆಚ್ಚು ಪರಿಣಾಮಕಾರಿ ಉತ್ಕರ್ಷಣ ಗುಣಗಳನ್ನು ತುಳಸಿ ಹೊಂದಿದ್ದು, ಹಾನಿಗೊಳಗಾದ ಕೂದಲಿನ ಕಿರುಚೀಲಗಳನ್ನು ಇದು ರಿಪೇರಿ ಮಾಡುತ್ತದೆ. ಹಾಗಿದ್ದರೆ ತುಳಸಿಯಿಂದ ಕೂದಲಿನ ಮಾಸ್ಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ....

ಹಂತ1
ಮುಷ್ಟಿಯಷ್ಟು ತುಳಸಿ ಎಲೆಗಳನ್ನು ತೆಗೆದುಕೊಂಡು ನೀರಿನಿಂದ ತೊಳೆದುಕೊಳ್ಳಿ. ಸೂರ್ಯನ ಬಿಸಿಲಿನಲ್ಲಿ ಇಟ್ಟು ಒಣಗಿಸಿಕೊಳ್ಳಿ. ಒಮ್ಮೆ ಒಣಗಿದ ನಂತರ, ಉತ್ತಮವಾದ ಪೌಡರ್ ತಯಾರಿಸಿಕೊಳ್ಳಲು ಅವುಗಳನ್ನು ಗ್ರೈಂಡ್ ಮಾಡಿಕೊಳ್ಳಿ.

ಹಂತ 2
1 ಚಮಚದಷ್ಟು ನೆಲ್ಲಿಕಾಯಿ ಹುಡಿಯನ್ನು ತೆಗೆದುಕೊಂಡು, ಇದಕ್ಕೆ 1 ಚಮಚದಷ್ಟು ಶುದ್ಧವಾದ ತುಳಸಿ ಎಲೆ ಹುಡಿಯನ್ನು ಸೇರಿಸಿ. ಅರ್ಧ ಕಪ್‌ನಷ್ಟು ನೀರನ್ನು ಬೆರೆಸಿಕೊಂಡು, ಮೃದುವಾದ ಪೇಸ್ಟ್ ತಯಾರಿಸಿ. ರಾತ್ರಿ ಪೂರ್ತಿ ನೆನೆಯಲು ಬಿಡಿ.

ಹಂತ 3
ಬೆಳಗ್ಗೆ, ಪೇಸ್ಟ್ ತೆಗೆದುಕೊಂಡು ಫೋರ್ಕ್ ಸಹಾಯದಿಂದ ಮೃದುವಾಗುವವರೆಗೂ ಕಲಸಿಕೊಳ್ಳಿ. ಚಮಚದಷ್ಟು ಆಲೀವ್ ಎಣ್ಣೆ, 5 ಹನಿಗಳಷ್ಟು ರೋಸ್‌ಮೇರಿ ಎಣ್ಣೆ ಮತ್ತು 5 ಹನಿ ಬಾದಾಮಿ ಎಣ್ಣೆಯನ್ನು ಮಾಸ್ಕ್‌ಗೆ ಸೇರಿಸಿ. ಸಾಮಾಗ್ರಿಗಳು ಚೆನ್ನಾಗಿ ಮೃದುವಾಗಗುವರೆಗೂ ಕಲಸಿಕೊಳ್ಳಿ.

ಹಂತ 4
ಅಗಲ ಹಲ್ಲಿನ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಳ್ಳಿ ಮತ್ತು ಸಿಕ್ಕುಗಳನ್ನು ನಿವಾರಿಸಿ. ಕೂದಲು ತುಂಡಾಗುವುದನ್ನು ತಡೆಯಲು ಕೂದಲಿನ ಸ್ವಲ್ಪ ಭಾಗವನ್ನು ತೆಗೆದುಕೊಂಡು, ಅದನ್ನು ಮಧ್ಯದಲ್ಲಿ ಹಿಡಿದು ತುದಿಯಿಂದ ಕೂದಲನ್ನು ಬಾಚಿ ಸಿಕ್ಕು ಬಿಡಿಸಿಕೊಳ್ಳಿ.

ಹಂತ 5
ಕೂದಲನ್ನು ಸ್ವಲ್ಪ ಒದ್ದೆ ಮಾಡಿಕೊಳ್ಳಿ ಇದರಿಂದ ಮಾಸ್ಕ್ ಹಚ್ಚಿಕೊಳ್ಳಲು ಸುಲಭ. ಕೂದಲನ್ನು ಸಣ್ಣ ಭಾಗಗಳನ್ನಾಗಿ ಮಾಡಿ, ಮತ್ತು ಕೂದಲಿನ ಉದ್ದಕ್ಕೆ ಸಮನಾಗಿ ಮಾಸ್ಕ್ ಹಚ್ಚಿಕೊಳ್ಳಿ.

ಹಂತ 6
ನಿಮ್ಮ ಕೂದಲನ್ನು 5 ನಿಮಿಷಗಳ ಕಾಲ ಮಸಾಜ್ ಮಾಡಿ ಇದರಿಂದ ರಕ್ತ ಸಂಚಾರವುಂಟಾಗುತ್ತದೆ. ಕೂದಲನ್ನು ತುರುಬು ಕಟ್ಟಿ ಮತ್ತು ಶವರ್ ಕ್ಯಾಪ್‌ನಿಂದ ಕವರ್ ಮಾಡಿ.

ಹಂತ 7
ಮಾಸ್ಕ್‌ನ ನ್ಯೂಟ್ರಿಶಿಯನ್ ಅಂಶಗಳನ್ನು ಕೂದಲು ಹೀರಿಕೊಳ್ಳಲು ಬಿಡಿ ಮತ್ತು ಒಂದು ಗಂಟೆಯಷ್ಟು ಕಾಲ ಹಾಗೆಯೇ ಬಿಡಿ. ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ ನಂತರ ಸೂಕ್ತವಾದ ಕಂಡೀಷನರ್ ಹಚ್ಚಿಕೊಳ್ಳಿ. ತಿಂಗಳಿಗೆ ಎರಡು ಬಾರಿ ತುಳಸಿ ಹೇರ್ ಮಾಸ್ಕ್ ಅನ್ನು ಹಚ್ಚಿಕೊಳ್ಳಿ.ಕೂದಲಿನ ಸೌಂದರ್ಯವನ್ನು ವೃದ್ಧಿಸುವ ಇನ್ನಷ್ಟು ನೈಸರ್ಗಿಕ ಸಲಹೆಗಳು ನಿಮ್ಮ ಬಳಿ ಇವೆ ಎಂದಾದಲ್ಲಿ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.



Click it and Unblock the Notifications











