ರೇಷ್ಮೆಯಂತಹ ಕೂದಲಿಗೆ ತಲೆಗಿಷ್ಟು ನೈಸರ್ಗಿಕ ಶಾಂಪೂ

By Arshad

ತಲೆಗೂದಲಿಗೆ ಯಾವುದೇ ಹಾನಿಯಾಗದಂತೆ ತೊಳೆದುಕೊಳ್ಳುವುದೇ ದೊಡ್ಡ ಸವಾಲು. ಏಕೆಂದರೆ ತಲೆಗೂದಲ ಚರ್ಮದಲ್ಲಿ ಕೂದಲ ಸಾಂದ್ರತೆಯೂ ಹೆಚ್ಚು ಮತ್ತು ಇಲ್ಲಿನ ಚರ್ಮ ಹೆಚ್ಚು ಸೂಕ್ಷ್ಮವೂ ಹೌದು. ಕೊಳೆ ತೆಗೆಯಲೆಂದು ಸೋಪು ಅಥವಾ ಶಾಂಪೂಗಳನ್ನು ತೀಕ್ಷ್ಣವಾಗಿಸಿದರೆ ಅದು ಕೂದಲಿನ ಕೊಳೆಯ ಜೊತೆಗೇ ಚರ್ಮದ ಅಡಿಯಲ್ಲಿದ್ದ ಅಗತ್ಯ ತೈಲವನ್ನೂ ತೊಳೆದುಕೊಂಡು ಹೋಗಿಬಿಡಬಹುದು. ಅತಿ ಸೌಮ್ಯವೂ ಆಗಿದ್ದರೆ ಕೊಳೆಯನ್ನೇ ತೆಗೆಯದಿರಬಹುದು.

ಒಂದು ವೇಳೆ ಎರಡೂ ಆಗಿದ್ದರೆ ಬೇರೊಂದು ವಿಧದ ಚರ್ಮದವರಿಗೆ ಸೇರದೇ ಇರಬಹುದು. ಆದ್ದರಿಂದ ರಾಸಾಯನಿಕ ಶಾಂಪೂಗಳ ತಯಾರಕರು ಪ್ರತಿ ವಿಧದ ಚರ್ಮಕ್ಕೆ ಅಗುವಂತಹ ಒಂದು ಸಾಮಾನ್ಯ ಮಟ್ಟದ್ದನ್ನೇ ತಯಾರಿಸುತ್ತಾರೆ. ಒಂದರ್ಥದಲ್ಲಿ ಇದು ಎಲ್ಲಾ ಬಗೆಯ ಚರ್ಮಕ್ಕೆ ಸೂಕ್ತವಾದರೂ ಚಿಕ್ಕ ಪ್ರಮಾಣದಲ್ಲಾದರೂ ಒಂದು ಬಗೆಯ ಚರ್ಮದವರಿಗೆ ಸೂಕ್ತವಾಗಲಾರದು. ಆದ್ದರಿಂದ ನಿಸರ್ಗ ನೀಡಿರುವ ಸಾಮಾಗ್ರಿಗಳನ್ನು ಉಪಯೋಗಿಸುವುದೇ ಜಾಣತನ. ಕೃತಕ ರಾಸಾಯನಿಕಗಳಷ್ಟು ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ, ಆದರೆ ಫಲಪ್ರದವಾಗಿ ಮತ್ತು ಯಾವುದೇ ಹಾನಿ ಮತ್ತು ಅಡ್ಡಪರಿಣಾಮಗಳಿಲ್ಲದೇ ಇವು ನೀಡುವ ಪೋಷಣೆ ಬಹುಕಾಲ ಉಳಿಯುವ ಮತ್ತು ಆರೋಗ್ಯಕರವೂ ಆಗಿವೆ.

ನಿಯಮಿತವಾದ ಉಪಯೋಗದಿಂದ ಕೂದಲ ಬುಡಕ್ಕೆ ವಿಶೇಷವಾದ ಪೋಷಣೆ ದೊರೆಯುವ ಮೂಲಕ ಕೂದಲು ಸ್ವಚ್ಛಗೊಳ್ಳುವುದು ಮಾತ್ರವಲ್ಲದೇ ನೀಳವಾಗಿ, ಕಾಂತಿಯುಕ್ತವಾಗಿ, ಸಿಕ್ಕುರಹಿತವಾಗಿ, ಹಗುರವಾಗಿ ಗಾಳಿಗೆ ಹಾರುವಂತೆ ಮತ್ತು ಆರೋಗ್ಯಕರವೂ ಆಗಿರುತ್ತವೆ. ನಿಸರ್ಗದ ಕೊಡುಗೆಗಳಲ್ಲಿ ಉತ್ತಮ ಆಯ್ಕೆಗಳೆಂದರೆ ಅಂಟುವಾಳ ಕಾಯಿ, ದಾಸವಾಳದ ಹೂವು ಮತ್ತು ಎಲೆ, ಮುಲ್ತಾನಿ ಮಿಟ್ಟಿ ಇತ್ಯಾದಿ. ಇವುಗಳಲ್ಲಿ ನಿಮಗೆ ಯಾವುದು ಸೂಕ್ತ ಎಂದು ಆರಿಸಿಕೊಂಡು ಬಳಸಲು ಪ್ರಾರಂಭಿಸಲು ಇಂದು ಬೋಲ್ಡ್ ಸ್ಕೈ ತಂಡ ಮಹತ್ವದ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲು ಹರ್ಷಿಸುತ್ತದೆ....

ಲೋಳೆಸರ

ಲೋಳೆಸರ

ಆಲೋವೆರಾ ಅಥವಾ ಲೋಳೆಸರವರನ್ನು ಹಲವಾರು ಆಯುರ್ವೇದೀಯ ಮತ್ತು ರಾಸಾಯನಿಕ ಆಧಾರಿತ ಶಾಂಪೂಗಳಲ್ಲಿ ಬಳಸಲಾಗುತ್ತದೆ. ಕೂದಲಿಗೆ ಕಂಡೀಶನಿಂಗ್, ಆರ್ದ್ರತೆ ನೀಡುವ ಮೂಲಕ ಕೂದಲನ್ನು ಸೌಮ್ಯ, ಆರೋಗ್ಯಕರ ಮತ್ತು ರೇಷ್ಮೆಯಂತೆ ನುಣುಪಾಗಿಸುತ್ತದೆ. ಕೂದಲಿಗೆ ಮಾತ್ರವಲ್ಲ, ತಲೆಯ ಚರ್ಮಕ್ಕೂ ಪೋಷಣೆ ನೀಡುವ ಮೂಲಕ ತಲೆಹೊಟ್ಟು ಆಗುವುದು, ತುರಿಕೆ, ಚರ್ಮ ಕೆಂಪಗಾಗುವುದು ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತದೆ. ತಲೆಯನ್ನು ತಂಪಾಗಿಡುವ ಮೂಲಕ ಇತರ ಪರೋಕ್ಷ ತೊಂದರೆಗಳನ್ನೂ ನಿವಾರಿಸುತ್ತದೆ.

ದಾಸವಾಳ

ದಾಸವಾಳ

ದಾಸವಾಳದ ಹೂವಿನ ದಳಗಳನ್ನು ಜಜ್ಜಿದಾಗ ಒಸರುವ ದ್ರವ ಜಾರುವ ಲೋಳೆಯಂತಿರುತ್ತದೆ. ಇದು ತಲೆಯ ಚರ್ಮವನ್ನು ಸ್ವಚ್ಛಗೊಳಿಸಲು ಅತ್ಯುತ್ತಮವಾದ ನೈಸರ್ಗಿಕ ಮಾರ್ಜಕವಾಗಿದೆ. ಇದರಲ್ಲಿರುವ

ಪ್ರೋಟೀನುಗಳು ವಿಶೇಷವಾಗಿ ತಲೆಗೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಿ ತಲೆಹೊಟ್ಟಾಗದಂತೆ ತಡೆಯುತ್ತದೆ ಹಾಗೂ ಕೂದಲು ಉದುರದಂತೆ ತಡೆಯುತ್ತದೆ. ಅಲ್ಲದೇ ಕೂದಲ ಬುಡದ ಗ್ರಂಥಿಗಳಿಂದ ಒಸರುವ ನೈಸರ್ಗಿಕ ತೈಲಗಳನ್ನು ಹಿಡಿದಿಟ್ಟುಕೊಳ್ಳಲು ಸಹಕರಿಸಿ ಆರ್ದ್ರತೆಯನ್ನೂ ನೀಡುವ ಮೂಲಕ ಕೂದಲು ಸೊಂಪಾಗಿ ಬೆಳೆಯಲು ಸಹಕರಿಸುತ್ತದೆ.

ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿ

ನೈಸರ್ಗಿಕವಾಗಿ ಲಭ್ಯವಿರುವ ಈ ಜೇಡಿಯಲ್ಲಿ ಹಲವು ಖನಿಜಗಳಿದ್ದು ತಲೆಯ ಚರ್ಮದ ಕೊಳೆಗಳನ್ನು ನಿವಾರಿಸಲು ಸಮರ್ಥವಾಗಿವೆ. ನೋಡಲು ಇದು ಮಣ್ಣಿನಂತಿದ್ದರೂ ಸೂಕ್ಷ್ಮರೂಪದ ಸ್ಪಂಜಿನಂತಿರುವ ಕಾರಣ ತಲೆಯ ಕೊಳೆಗೆ ಕಾರಣವಾದ ಕಣಗಳನ್ನು ಹೀರಿಕೊಳ್ಳುತ್ತದೆ. ಆದರೆ ಇದರ ಸೂಕ್ಷ್ಮರಂಧ್ರಗಳು ತಲೆಯ ಕೂದಲ ಬುಡದಿಂದ ಒಸರುವ ತೈಲಗಳ ಕಣಕ್ಕಿಂತ ಚಿಕ್ಕದಾಗಿರುವ ಕಾರಣ ತೈಲವನ್ನು ಹೀರುವುದಿಲ್ಲ. ಇದೇ ಈ ಮುಲ್ತಾನಿ ಮಿಟ್ಟಿಯ ಹಿರಿಮೆ. ಅಲ್ಲದೇ ಇದರಲ್ಲಿರುವ ಖನಿಜಗಳು ಕೂದಲ ಬುಡವನ್ನು ದೃಢಗೊಳಿಸಲು ನೆರವಾಗಿ ಕೂದಲಿಗೆ ಉತ್ತಮವಾದ ಕಾಂತಿ ಮತ್ತು ಆರೋಗ್ಯ ನೀಡಲು ಸಹಕರಿಸುತ್ತದೆ.

ಅಕ್ಕಿನೆನೆಸಿದ ನೀರು

ಅಕ್ಕಿನೆನೆಸಿದ ನೀರು

ರಾತ್ರಿಯಿಡೀ ಬೆಳ್ತಿಗೆ ಅಕ್ಕಿಯನ್ನು ನೆನೆಸಿಟ್ಟ ನೀರು ಸಹಾ ಕೂದಲು ತೊಳೆದುಕೊಳ್ಳಲು ಉತ್ತಮವಾದ ಆಯ್ಕೆಯಾಗಿದೆ. ಇದರಲ್ಲಿರುವ ಇನೋಸಿಟಾಲ್ (inositol) ಎಂಬ ಪೋಷಕಾಂಶ ಕೂದಲ ಸ್ಥಿತಿಸ್ಥಾಪಕತ್ವ ಗುಣ, ಅಂದರೆ ಕೊಂಚ ಎಳೆದರೂ ತುಂಡಾಗದ (ಬದಲಿಗೆ ಕೊಂಚವೇ ನೀಳವಾಗುವ) ಗುಣವನ್ನು ಹೆಚ್ಚಿಸಿ ಕೂದಲು ತುಂಡಾಗದಂತೆ ತಡೆಯುತ್ತದೆ. ಅಲ್ಲದೇ ಕೂದಲಿಗೆ ಹೆಚ್ಚಿನ ಕಾಂತಿ, ಗಾಢವಾದ ಬಣ್ಣ ಮತ್ತು ದೃಢತೆಯನ್ನೂ ನೀಡುತ್ತದೆ.

ಕಡ್ಲೆಹಿಟ್ಟು

ಕಡ್ಲೆಹಿಟ್ಟು

ಕಡ್ಲೆಹಿಟ್ಟಿನಲ್ಲಿ ಸ್ಯಾಪೋನಿನ್ (saponin) ಎಂಬ ಪೋಷಕಾಂಶಗಳಿವೆ. ಕೂದಲಿಗೆ ಅಂಟಿಕೊಂಡಿದ್ದ ಕೊಳೆಯನ್ನು ತೊಡೆಯಲು ಇವು ಸಮರ್ಥವಾಗಿವೆ. ಅಲ್ಲದೇ ಹಿಟ್ಟಿನಲ್ಲಿರುವ ಪ್ರೋಟೀನುಗಳು ಕೂದಲಿಗೆ ದೃಢತೆ, ಕಾಂತಿ ಮತ್ತು ಆರೋಗ್ಯವನ್ನು ನೀಡುತ್ತವೆ. ಕೂದಲ ಬುಡದಲ್ಲಿ ತಲೆಹೊಟ್ಟು ಇಲ್ಲದಿದ್ದು ತುದಿಯವರೆಗೆ ಧೂಳು ಮತ್ತಿತರ ಕಣಗಳು ಅಂಟಿಕೊಂಡಿದ್ದು ಅಂಟಂಟಾಗಿದ್ದಾಗ ತೊಳೆದುಕೊಳ್ಳಲು ಕಡ್ಲೆಹಿಟ್ಟು ಉತ್ತಮ ಆಯ್ಕೆಯಾಗಿದೆ.

English summary

Best natural shampoos and conditioners for every hair

Shampoos and soaps are the only alternatives to clean your hair. Now, you can also cleanse your hair with the use of certain natural ingredients. Natural ingredients work the best in cleaning the hair. It is better to stick the natural ingredients to cleanse the hair because they do not harm the tresses. Using chemical-based shampoos strip the essential oils away from the tresses, making the hair appear dull and lifeless. It also contributes to hair loss.
Story first published: Thursday, March 10, 2016, 13:36 [IST]
X
Desktop Bottom Promotion