Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ತಲೆಕೂದಲಿನ ರಕ್ಷಣೆಗೆ ಪಡವಲಕಾಯಿ ಪವರ್ ಫುಲ್ ಮ್ಯಾಜಿಕ್
ತಲೆಕೂದಲು. ಅಬ್ಬಬ್ಬಾ ಮಹಿಳೆಯರಿಗೆ ತಲೆಕೂದಲಿಂದ ಆಗುವ ಸಮಸ್ಯೆಗಳು ಒಂದಾ ಎರಡಾ. . ಕೂದಲಿಗೆ ರಕ್ಷಣೆಗೆ ಮಹಿಳೆಯರು ಮಾಡೋ ಕಸರತ್ತುಗಳು ಒಂದಾ ಎರಡಾ.. ಎಷ್ಟೇ,ಏನೇ ಮಾಡಿದ್ರೂ ಅವ್ರ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ಸಾಲ್ವ್ ಆಗ್ತನೇ ಇರಲ್ಲ. ಸಮಸ್ಯೆಯಿಂದ ಬಳಲಿ ಬೆಂಡಾಗಿ ಹೋಗೋ ಅದೆಷ್ಟೋ ಮಹಿಳೆಯರು ನನ್ನ ಕೂದಲು ಚೆನ್ನಾಗಿ ಇರೋಕೆ ಏನು ಮಾಡ್ಬೇಕು ಅಂತ ನೂರೆಂಟು ಬಾರಿ ಯೋಚಿಸ್ತಲೇ ಇರ್ತಾರೆ.
ಥತ್ತೆರಿಕೆ, ಕೂದಲು ಚೆನ್ನಾಗಿ ಇದ್ದಿದ್ರೆ ಎಷ್ಟು ಸ್ಟೈಲ್ ಮಾಡ್ಬಹುದಿತ್ತು. ಎಷ್ಟು ವೆರೈಟಿಯಾಗಿ, ಟ್ರೆಂಡಿ ಆಗಿ ಹೇರ್ ಸ್ಟೈಲ್ ಮಾಡ್ಕೊಬಹುದಿತ್ತು ಅಂತ ಚಿಂತಿಸೇ ಚಿಂತಿಸಿರ್ತಾರೆ. ಹಾಗಾದ್ರೆ ದಿನದಿಂದ ದಿನಕ್ಕೆ ಹಾಳಾಗ್ತಾ ಇರೋ ಕೂದಲು ಚೆನ್ನಾಗಿ ಕಾಣ್ಬೇಕು ಅಂದ್ರೆ ಏನು ಮಾಡ್ಬೇಕು? ನಿಮ್ಮ ತಲೆಕೂದಲು ಉದುರದೆ, ಡ್ಯಾಂಡ್ರಫ್ ಸಮಸ್ಯೆಯಿಂದ ಮುಕ್ತಿ ಪಡೆದು, ಸ್ಪ್ಲಿಟ್ ಎಂಡ್ಸ್ ಸಮಸ್ಯೆ ದೂರ ಆಗ್ಬೇಕು ಅಂದ್ರೆ ನೀವು ಯಾವುದೇ ಪಾರ್ಲರ್ರೋ, ಇಲ್ಲ ಇನ್ಯಾವುದೋ ಚಿಕಿತ್ಸೆಯ ಮೊರೆ ಹೋಗುವ ಅಗತ್ಯ ಇಲ್ಲ. ಆಸ್ಪತ್ರೆ ಅಲೆಯಬೇಕಂತನೂ ಇಲ್ಲ. ಮನೆಯಲ್ಲೇ, ನಿಮ್ಮ ಕೈಯಾರೆ ನೀವು ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೀಬಹುದು. ಹೇಗೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ಇಟ್ಸ್ ವೆರಿ ಸಿಂಪಲ್.
ಹೌದು ತುಂಬಾ ಈಸಿಯಾಗಿ, ತುಂಬಾ ಸಿಂಪಲ್ ಆಗಿ ನೀವು ನಿಮ್ಮ ತಲೆಕೂದಲಿನ 90 ಶೇಕಡಾ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದಾದ ಸ್ಪೆಷಲ್ ಹೇರ್ ಪ್ಯಾಕ್ ಒಂದನ್ನು ನಾವು ತೋರಿಸ್ತೀವಿ. ಈ ಹೇರ್ ಪ್ಯಾಕ್ ಕೊಂಡುಕೊಳ್ಳೋಕೆ ನೀವು ಎಲ್ಲೆಲ್ಲೂ ಅಲೆಯೂ ಅಗತ್ಯವೂ ಇಲ್ಲ. ಮನೆಯಲ್ಲೇ ಮಾಡ್ಕೋಬಹುದು. ಹೇಗೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಮುಂದೆ ಇದೆ..

ಪಡವಲಕಾಯಿ ಹಾಗೂ ಮೆಂತೆ
ಈ ಹೇರ್ ಪ್ಯಾಕ್ ಮಾಡೋದಕ್ಕೆ ಬೇಕಾಗಿರೋದು ಜಸ್ಟ್ ಎರಡೇ ವಸ್ತುಗಳು.. ಒಂದು ಪಡವಲಕಾಯಿ ಇನ್ನೊಂದು ಮೆಂತೆ... ಹೌದು.. ಇವೆರಡರ ಕಾಂಬಿನೇಷನ್ ನಿಮ್ಮ ತಲೆಕೂದಲಿನ ಸಮಸ್ಯೆಗೆ ಪರಿಹಾರಕೊಡುತ್ತೆ.

ಪಡವಲಕಾಯಿ ಹಾಗೂ ಮೆಂತೆ
ನೀವು ಮಾಡ್ಬೇಕಿರೋದು ಇಷ್ಟೇ.. ಹಾಗೆ ಮಾರ್ಕೆಟ್ ಕಡೆ ತರಕಾರಿ ತರೋಕೆ ಹೋದಾಗ ಒಂದು ಪಡವಲಕಾಯಿಯನ್ನು ಕೊಂಡುಕೊಂಡು ಬನ್ನಿ. ಪಡವಲಕಾಯಿಯ ಒಂದು ಬದಿಯನ್ನು ಚಾಕುವಿನಿಂದ ಸೀಳುಮಾಡಿ... ಸೀಳುಮಾಡಿದ ಪಡವಲಕಾಯಿಯೊಳಗೆ ಮೆಂತ್ಯೆಕಾಳುಗಳನ್ನು ಹಾಕಿ.. ಒಂದು ಪಡವಲಕಾಯಿಯೊಳಗೆ ಮೂರುನಾಲ್ಕು ಸ್ಪೂನ್ ಮೆಂತ್ಯೆ ಕಾಳುಗಳು ಹಿಡಿಯುತ್ತೆ. ಮೆಂತ್ಯೆಕಾಳುಗಳನ್ನು ಪಡವಲಕಾಯಿಯೊಳಗೆ ಹಾಕಿ ಸ್ವಲ್ಪ ನೀರು ಹಾಕಿ..

ತಲೆಕೂದಲಿನ ರಕ್ಷಣೆಗೆ ಸಹಕಾರಿ
ಪಡವಲಕಾಯಿ ಅಥ್ವಾ ಪಟ್ಲಕಾಯಿ ಅಂತ ಕರೆಯುವ ಈ ತರಕಾರಿಯಲ್ಲಿ ಹೈ ಪ್ರೊಟೀನ್, ವಿಟಮಿನ್ ಇರೋದ್ರಿಂದ ಇವು ನಿಮ್ಮ ತಲೆಕೂದಲಿನ ರಕ್ಷಣೆಗೆ ಸಹಕಾರಿಯಾಗಿರುತ್ತೆ. ಅಷ್ಟೇ ಅಲ್ಲ, ಎಲ್ಲರಿಗೂ ಗೊತ್ತಿರೋ ಹಾಗೆ ಮೆಂತ್ಯೆ ತಲೆಗೆ ಗುಡ್ ಕಂಡೀಷನರ್. ಕೂದಲಿನ ಆರೋಗ್ಯ ವೃದ್ಧಿಗೆ ಮತ್ತು ಕೂದಲು ಸ್ಮೂತ್ ಎಂಡ್ ಶೈನಿ ಆಗೋದಕ್ಕೆ ಮೆಂತ್ಯೆಕಾಳುಗಳು ಬೆಸ್ಟ್..

ಪಡವಲಕಾಯಿ ಹಾಗೂ ಮೆಂತ್ಯೆಯನ್ನು ನೆನೆಸಿಡಿ
ಸೀಳುಮಾಡಿದ ಪಡವಲಕಾಯಿಗೆ ಮೆಂತ್ಯೆ ಹಾಕಿದ ನಂತ್ರ ಒಂದು ರಾತ್ರಿ ಮೆಂತ್ಯೆಕಾಳುಗಳು ಪಡವಲಕಾಯಿಯೊಳಗೆ ನೆನೆಯುವಂತೆ ಇಟ್ಟುಬಿಡಿ,. ಆಲ್ ಮೋಸ್ಟ್ 12 ಗಂಟೆಗಳ ಕಾಲ ನೆನೆದ್ರೆ,. ಮೆಂತ್ಯೆಕಾಳುಗಳು ಪಡವಲಕಾಯಿಯೊಳಗೆ ನೆನೆದಿರುವುದನ್ನು ನೀವೇ ಗಮನಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಡವಲಕಾಯಿ ಹಾಗೂ ಮೆಂತ್ಯೆಯನ್ನು ನೆನೆಸಿಡಿ
ಹೀಗೆ 12 ಗಂಟೆ ಪಡವಲಕಾಯಿಯಲ್ಲಿ ಮೆಂತ್ಯೆಕಾಳುಗಳನ್ನು ನೆನೆಸಿದ ನಂತ್ರ. ಅದನ್ನು ಮಿಕ್ಸಿ ಮಾಡ್ಬೇಕು. ಸೋ ಅದನ್ನು ಸಣ್ಣಸಣ್ಣ ಪೀಸ್ಗ ಳನ್ನಾಗಿ ಕತ್ತರಿಸಿ. ಸ್ವಲ್ಪ ನೀರು ಹಾಕಿ, ರುಬ್ಬಿಕೊಳ್ಳಿ. ತರಿತರಿಯಾಗುವಂತೆ ರುಬ್ಬಬೇಡಿ. ಚೆನ್ನಾಗಿ ಗ್ರೈಂಡ್ ಮಾಡಿ..

ನೀಟ್ ಆಗಿ ತಲೆಗೆ ಅಪ್ಲೈ ಮಾಡಿ
ಹೀಗೆ ತಯಾರಿಸಿಕೊಂಡ ಮಿಶ್ರಣವನ್ನು ತಲೆಗೆ ಅಪ್ಲೈ ಮಾಡ್ಬೇಕು. ಮಿಕ್ಸಿ ಮಾಡಿದ ನಂತ್ರ ತುಂಬಾ ಹೊತ್ತು ಬಿಡಬೇಡಿ. ಕೂಡಲೇ ತಲೆಗೆ ಹಚ್ಚಿಕೊಂಡ್ರೆ ಒಳ್ಳೆದು. ಆದ್ರೆ ತಲೆಗೆ ಅಪ್ಲೈ ಮಾಡೋದಕ್ಕೂ ಕ್ರಮ ಇದೆ.. ಹೆೇಗೇಗೋ ಹಚ್ಚಿಕೊಳ್ಳುವ ಬದಲು ಕ್ರಮಬದ್ಧವಾಗಿ, ನೀಟ್ ಆಗಿ ತಲೆಗೆ ಅಪ್ಲೈ ಮಾಡಿದ್ರೆ ಪಡವಲಕಾಯಿ ಹೇರ್ ಪ್ಯಾಕ್ ಸರಿಯಾದ ಎಫೆಕ್ಟ್ ನೀಡಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು.

ಇದು ಪಕ್ಕಾ ಹರ್ಬಲ್ ಹೇರ್ ಪ್ಯಾಕ್
ಪಡವಲಕಾಯಿ ಮತ್ತು ಮೆಂತ್ಯೆ ಕಾಂಬಿನೇಷನ್ನಿನ ಹೇರ್ ಪ್ಯಾಕ್ ಪಕ್ಕಾ ಹರ್ಬಲ್ ಆಗಿರೋದ್ರಿಂದ ಆರಾಮಾಗಿ ಅಪ್ಲೈ ಮಾಡಿಕೊಳ್ಳಬಹುದು.. ಕೆಮಿಕಲ್ ಗಳಾದ್ರೆ ಕೈಗೆ ಗ್ಲೌಸ್ ಹಾಕ್ಬೇಕಾಗುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇದು ಪಕ್ಕಾ ಹರ್ಬಲ್ ಹೇರ್ ಪ್ಯಾಕ್
ಆದ್ರೆ ಈ ಹೇರ್ ಪ್ಯಾಕ್ ಅಪ್ಲೈ ಮಾಡೋದಕ್ಕೆ ಯಾವುದೇ ಗ್ಲೌಸ್ ಹಾಕಿಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ, ಕೈಯಲ್ಲೇ ಅಪ್ಲೈ ಮಾಡೋದ್ರಿಂದ ಈ ಮಿಶ್ರಣ ನಿಮ್ಮ ಕೈ ಅಂದವನ್ನೂ ಹೆಚ್ಚಿಸುತ್ತೆ ಅನ್ನೋದನ್ನ ಮರೀಬೇಡಿ..

ಕೂದಲಿನ ಸರ್ವ ಸಮಸ್ಯೆಗೆ ರಾಮಬಾಣ...
ಇನ್ನು ಅತ್ಯಂತ ಕಡಿಮೆ ಕೂದಲಿರುವವರು, ಡ್ಯಾಂಡ್ರಫ್ ಇರುವವರು,. ಅಥ್ವಾ ಕೂದಲಿನ ಇನ್ನಿತರ ಯಾವುದೇ ಸಮಸ್ಯೆ ಇರುವವರು ಈ ಹೇರ್ ಪ್ಯಾಕ್ ಬಳಸಬಹುದು. ಮೊದಲು ತಲೆಯ ಮಧ್ಯಭಾಗದಿಂದ ಅಪ್ಲೈ ಮಾಡೋದನ್ನು ಆರಂಭಿಸಿ..

ಕೂದಲಿನ ಸರ್ವ ಸಮಸ್ಯೆಗೆ ರಾಮಬಾಣ...
ಬೈತಲೆ ತೆಗೆದು ಸ್ಕಾಲ್ಪ್‌ಗೆ ಚೆನ್ನಾಗಿ ಅಪ್ಲೈ ಮಾಡಿ.. ಸ್ಕಾಲ್ಪ್ ಗೆ ಅಪ್ಲೈ ಮಾಡೋದೆ ತುಂಬಾ ಇಂಪಾರ್ಟೆಂಟ್.. ಕೆಮಿಕಲ್ ಆದ್ರೆ ಸ್ಕಾಲ್ಪ್ ಗೆ ಹಚ್ಚಿದ್ರೆ ಎಫೆಕ್ಟ್ ಆಗುತ್ತೆ. ಆದ್ರಿದು ಹರ್ಬಲ್, ಅದೂ ಅಲ್ದೇ ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಹೇರ್ ಪ್ಯಾಕ್. ಸೋ ನಿಮ್ಮ ಸ್ಕಾಲ್ಪ್ ನಲ್ಲೇ ಇದು ಫರ್ಫೆಕ್ಟ್ ವರ್ಕ್ ಮಾಡೋದು.

ಇದೊಂದು ಸರಳವಾದ ಹೇರ್ ಪ್ಯಾಕ್...
ತಲೆಕೂದಲುಗಳನ್ನು ಒಂದೊಂದೇ ಪಾರ್ಟಿಷಿಯನ್ ಮಾಡಿ ಚೆನ್ನಾಗಿ ಅಪ್ಲೈ ಮಾಡಿ. ನೀವೇ ನಿಮ್ಗೆ ಅಪ್ಲೈ ಮಾಡಿಕೊಳ್ಳಬಹುದು. ಇಲ್ಲವೇ ಮನೆಯ ಇತರೆ ಸದಸ್ಯರ ಸಹಾಯ ಕೂಡ ಪಡೆಯಬಹುದು. ಯಾವ್ಯಾವುದೋ ಔಷಧಿ ಮಾಡುವ ಬದಲು ಈಸಿಯಾಗಿ ಮಾಡಿಕೊಳ್ಳಬಹುದಾದ ಹೇರ್ ಪ್ಯಾಕ್.. ಅದೂ ಅಲ್ದೇ, ಯಾವುದೇ ವಯಸ್ಸಿನವ್ರೂ ಕೂಡ ಈ ಹೇರ್ ಪ್ಯಾಕ್ ಬಳಸ್ಬಹುದು.

ಇದೊಂದು ಸರಳವಾದ ಹೇರ್ ಪ್ಯಾಕ್...
ಗಿಡಮೂಲಿಕೆಗಳ ಶಕ್ತಿಯೇ ಅಂತದ್ದು ಅನ್ನಿಸುತ್ತೆ. ಹಸಿರುಹಸಿರಾಗಿ ಕಾಣುವ ಈ ಹೇರ್ ಪ್ಯಾಕ್ ಮಹಿಳೆಯರ ತಲೆಕೂದಲ ಸಮಸ್ಯೆಗೆ ರಾಮಬಾಣವಿದ್ದಂತೆ. ಆಗಾಗ ಈ ಹೇರ್ ಪ್ಯಾಕ್ ಅಪ್ಲೈ ಮಾಡ್ಕೊಳ್ಳೋದ್ರಿಂದ ನಿಮ್ಮ ಕೂದಲ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತೆ.

ತಂಪು ತಂಪು ಕೂಲ್ ಕೂಲ್...
ಇನ್ನು ಹೀಗೆ ಅಪ್ಲೈ ಮಾಡ್ಕೊಂಡ ನಂತ್ರ ನೀವು ಗಂಟೆಗಟ್ಟಲೆ ಇಟ್ಕೊಳ್ಳೋದು ಹೇಗೆ. ಅಲ್ಲಿಇಲ್ಲಿ ಓಡಾಡೋಕೆ ಆಗಲ್ಲ. ಮನೆಕೆಲ್ಸ ಮಾಡೋಕೆ ಆಗಲ್ಲ ಅಂತ ಚಿಂತೆ ಪಡಬೇಕಾಗಿಲ್ಲ. ಕಂಪ್ಲೀಟ್ ತಲೆಗೆ ಅಪ್ಲೈ ಮಾಡ್ಕೊಂಡ ನಂತ್ರ ಹೇರ್ ಮಾಸ್ಕ್ ನಿಂದ ಕವರ್ ಮಾಡ್ಕೊಳ್ಳಿ. ಮಾಸ್ಕ್ ಹಾಕ್ಕೊಂಡು ಸ್ವಲ್ಪ ಪ್ರೆಸ್ ಮಾಡ್ಕೊಳ್ಳಿ. ಈ ಹೇರ್ ಪ್ಯಾಕ್ ಅಪ್ಲೈ ಮಾಡ್ತಾ ಇದ್ದ ಹಾಗೆ ತಂಪು ತಂಪು ಕೂಲ್ ಕೂಲ್ ಫೀಲ್ ಆಗುತ್ತೆ.

ತಂಪು ತಂಪು ಕೂಲ್ ಕೂಲ್...
ರಿಲ್ಯಾಕ್ಸ್ ಫೀಲ್ ಆಗುತ್ತೆ. ಪಡವಲಕಾಯಿ ಹೇರ್ ಪ್ಯಾಕ್‌ನಿಂದ ಜಸ್ಟ್ ಕೂದಲಿಗೆ ಮಾತ್ರ ಬೆನಿಫಿಟ್ ಅಲ್ಲ, ಬದಲಾಗಿ ಮನಸ್ಸಿಗೂ ಬೆನಿಫಿಟ್ ಇದೆ. ಹೇಗೆ ಅಂತಿರಾ.. ಈ ಹೇರ್ ಪ್ಯಾಕ್ ರಿಲ್ಯಾಕ್ಸ್ ಫೀಲ್ ನೀಡೋದ್ರಿಂದ ತಲೆನೋವು, ತಲೆಭಾರ ಅನ್ನಿಸೋದು, ಟೆಕ್ಷನ್ ಕೂಡ ರಿಲೀಫ್ ಆಗಲಿದೆ.

ಕಂಡೀಷನರ್ ಹಾಕ್ಕೊಳ್ಳೋ ಅಗತ್ಯವಿಲ್ಲ....
ಸುಮಾರು ಒಂದರಿಂದ ಒಂದುವರೆ ಗಂಟೆಗಳ ಕಾಲ ಪ್ಯಾಕ್ ಹಾಗೆ ತಲೆಯಲ್ಲೇ ಇಟ್ಕೊಳ್ಳಿ. ಸೂಪರ್ ಫೀಲ್ ಪಡೆದು, ನಿಮ್ಮ ಕೆಲ್ಸಗಳನ್ನು ಆರಾಮಾಗಿ ಮಾಡ್ಕೊಳ್ತಾ ಇರಿ. ಆಮೇಲೆ ವಾಶ್ ಮಾಡ್ಕೊಳ್ಳಿ. ಈ ಹೇರ್ ಪ್ಯಾಕ್ ವಾಶ್ ಮಾಡ್ಕೊಳ್ಳೋವಾಗ ಕಂಡೀಷನರ್ ಹಾಕ್ಕೊಳ್ಳೋ ಅಗತ್ಯವಿಲ್ಲ. ಆಲ್ ರೆಡಿ ಮೆಂತ್ಯೆ ನಿಮ್ಮ ಕೂದಲಿಗೆ ಬೆಸ್ಟ್ ಕಂಡೀಷನರ್ ಆಗಿದೆ. ಶಾಂಪೂ ಮಾಡ್ಕೊಂಡ್ರೆ ಸಾಕು. ತಲೆಕೂದಲು ವಾಶ್ ಮಾಡಿದ ನಂತ್ರವೂ ಸ್ವಲ್ಪ ಕೇರ್ ತೆಗೆದುಕೊಳ್ಳಿ

ತಲೆಗೆ ಮಸಾಜ್ ಮಾಡಿಕೊಳ್ಳಿ
ಒಂದೆರಡು ಸ್ಪೂನ್ ತುಪ್ಪವನ್ನು ಬಿಸಿ ಮಾಡಿ.. ತಲೆಗೆ ಹಚ್ಚಿ ಅದ್ರಿಂದ ಮಸಾಜ್ ಮಾಡ್ಕೊಳ್ಳಿ. ಮಸಾಜ್ ಮಾಡ್ಕೊಳ್ಳೋದಕ್ಕೂ ಕ್ರಮವಿದೆ. ಹೇಗೆಗೋ ಪ್ರೆಸ್ ಮಾಡೋದಲ್ಲ. ಬದಲಾಗಿ ಅದಕ್ಕೊಂದು ಶಿಸ್ತುಪಾಲನೆ ಬೇಕೇಬೇಕು. ಒಮ್ಮೆ ಹೇರ್ ಪ್ಯಾಕ್ ಮಾಡ್ಕೊಂಡು ಸ್ನಾನ ಆದ ನಂತ್ರ, ಈ ಮಸಾಜ್ ತುಂಬಾ ಇಂಪಾರ್ಟೆಂಟ್. ಯಾಕಂದ್ರೆ, ಈ ಮಸಾಜ್ ನಿಂದ ಹೇರ್ ಸ್ಟ್ರಾಂಗ್ ಆಗುತ್ತೆ ಮತ್ತು ಕೂದಲ ಬೆಳವಣಿಗೆಗೆ ಸಹಕಾರಿಯಾಗುತ್ತೆ.

ತಲೆಗೆ ಮಸಾಜ್ ಮಾಡಿಕೊಳ್ಳಿ
ಅಷ್ಟೇ ಅಲ್ಲ, ಹೇರ್ ಗೆ ತುಪ್ಪದ ವಿಶೇಷ ಗುಣದಿಂದಾಗಿ ಕೂದಲ ಆರೈಕೆ ಫರ್ಫೆಕ್ಟ್ ಆಗುತ್ತೆ. ಈ ಹೇರ್ ಪ್ಯಾಕ್ ಕೇವಲ ಡ್ರೈ ಸ್ಕಾಲ್ಪ್ ಇರುವವರಿಗೆ ಅಥ್ವಾ, ಆಯಿಲಿ ಇರುವವರಿಗೆ ಅಂತ ಏನೂ ಇಲ್ಲ. ಯಾವುದೇ ರೀತಿಯ ಹೇರ್ ಆಗಿದ್ರೂ ಕೂಡ ಪಡವಲಕಾಯಿ ಹೇರ್ ಪ್ಯಾಕ್ ಮಾಡಿಕೊಳ್ಳಬಹುದು. ಟ್ರೈ ಮಾಡಿ ನೋಡಿ.



Click it and Unblock the Notifications











