Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಕೂದಲುದುರುವುದನ್ನು ಸೂಚಿಸುವ ಸಂಜ್ಞೆಗಳು, ನಿರ್ಲಕ್ಷಿಸಬೇಡಿ
ಕೂದಲು ಉದುರುವುದು ಯುವಜನತೆಯ ನಿದ್ದೆಗೆಡಿಸುವ ವಿಚಾರವಾಗಿದೆ. ಪ್ರತಿಬಾರಿ ತಲೆ ಬಾಚಿಕೊಂಡ ಬಳಿಕ ಬಾಚಣಿಗೆಯಲ್ಲಿ ಅಂಟಿಕೊಂಡು ಬರುವ ಕೂದಲುಗಳು ಚಿಂತೆ ಹೆಚ್ಚಿಸುತ್ತವೆ. ಇದು ಒಂದಿಬ್ಬರ ಕಥೆಯಲ್ಲ, ವಿಶ್ವದಾದ್ಯಂತ ಕೋಟ್ಯಂತರ ಯುವಜನರ ಚಿಂತೆಯಾಗಿದೆ. ವಾಸ್ತವವಾಗಿ ನಾವೆಲ್ಲರೂ ಪ್ರತಿದಿನವೂ ಸುಮಾರು ನೂರರಷ್ಟು ತಲೆಕೂದಲುಗಳನ್ನು ಕಳೆದುಕೊಳ್ಳುತ್ತೇವೆ. ದೇಹದ ಇತರ ಭಾಗಗಳಿಂದಲೂ ಕೂದಲು ಉದುರುತ್ತದಾದರೂ ಇದು ಪುನಃ ಹುಟ್ಟುತ್ತದೆ. ತಲೆಗೂದಲೂ ಅಷ್ಟೇ, ಉದುರಿದ ಪ್ರಮಾಣದಷ್ಟೇ ಹೊಸ ಕೂದಲು ಹುಟ್ಟಿದರೆ ಚಿಂತೆಗೆ ಕಾರಣವಿಲ್ಲ. ಕೂದಲು ಉದುರುವಿಕೆಗೆ ಪ್ರಮುಖ 10 ಕಾರಣಗಳು
ಆದರೆ ಕೆಲವು ಕಾರಣಕ್ಕೆ ತಲೆಗೂದಲುಗಳು ಪುನಃ ಹುಟ್ಟುವ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಉದುರಿದರೆ ಮಾತ್ರ ಚಿಂತೆ ಹೆಚ್ಚುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಪುರುಷರಲ್ಲಿ ಇದು ವಂಶವಾಹಿನಿಯ ಕಾರಣವಾಗಿದ್ದು ಕ್ರಮೇಣ ಬಕ್ಕತಲೆಯತ್ತ ಕೊಂಡೊಯ್ಯುತ್ತದೆ. ಇತರ ಕಾರಣಗಳೆಂದರೆ ಮಾನಸಿಕ ಒತ್ತಡ, ಕೆಲವು ಔಷಧಿಗಳ ಅಡ್ಡಪರಿಣಾಮಗಳು, ತಪ್ಪು ತಪ್ಪಾದ ಆಹಾರ ಕ್ರಮ, ಆರೈಕೆಯ ಕೊರತೆ, ಸೂಕ್ತ ಪ್ರಮಾಣದ ನಿದ್ದೆ ಇಲ್ಲದಿರುವುದು, ಬಿಸಿಲು, ಪ್ರದೂಷಣೆ ಮೊದಲಾದವೂ ಕೂದಲು ಉದುರಲು ಕಾರಣವಾಗಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ಔಷಧಿಗಳು ಲಭ್ಯವಿವೆಯಾದರೂ ಮನೆಮದ್ದುಗಳು ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಇವುಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಸುರಕ್ಷಿತವೂ ಆಗಿದೆ. ಕೂದಲು ಉದುರುವ ಕಿರಿಕಿರಿ - ಮನೆಮದ್ದೇ ಸರಿ
ಕೂದಲನ್ನು ಉಳಿಸಿಕೊಳ್ಳಲು ಕೂದಲಿನ ಆರೈಕೆ ಮಾಡುವುದು ಪ್ರಥಮ ಆದ್ಯತೆಯಾಗಿದೆ. ತಲೆಗೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆದುಕೊಳ್ಳುವುದು, ಮನೆಯಲ್ಲಿಯೇ ಕೊಬ್ಬರಿ ಎಣ್ಣೆಯನ್ನು ತಲೆಗೂದಲಿಗೆ ಹಚ್ಚಿ ನಯವಾಗಿ ಮಸಾಜ್ ಮಾಡುವುದು, ಕೂದಲು ತೊಳೆದುಕೊಳ್ಳಲು ಕೇವಲ ಮನೆಯಲ್ಲಿಯೇ ತಯಾರಿಸಿದ ಶಾಂಪೂಗಳನ್ನು ಉಪಯೋಗಿಸುವುದು, ಒತ್ತಡರಹಿತ ಜೀವನ ಸಾಗಿಸುವುದು ಮೊದಲಾದವು ಕೂದಲ ಆರೈಕೆಯ ಅಂಗಗಳಾಗಿವೆ. ಕೂದಲು ಉದುರುತ್ತಿದೆ ಎಂದು ಖಚಿತವಾದರೆ ಆರೈಕೆ ನಡೆಸಲೂ ಸುಲಭವಾಗುತ್ತದೆ. ಕೆಳಗಿನ ಸ್ಲೈಡ್ ಶೋನಲ್ಲಿ ನೀಡಲಾಗಿರುವ ವಿವರಗಳು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿ ತಡಮಾಡದೇ ಸೂಕ್ತ ಕ್ರಮವನ್ನು ಕೈಗೊಳ್ಳಲು ನೆರವಾಗಬಹುದು:

ಕೂದಲು ತೆಳ್ಳಗಾಗುವುದು
ತಲೆಕೂದಲಲ್ಲಿ ಬೆರಳುಗಳನ್ನು ಆಡಿಸಿದಾಗ ಸುಲಭವಾಗಿ ತಲೆಬುರುಡೆಯ ಚರ್ಮ ಬೆರಳುಗಳಿಗೆ ತಾಕಿದರೆ ತಲೆಗೂದಲು ಉದುರಿದೆ ಎಂದು ಖಾತ್ರಿಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲು ತೆಳ್ಳಗಾಗುವುದು
ಏಕೆಂದರೆ ಕೂದಲು ಸರಿಸುಮಾರಾಗಿ ಒಂದೇ ಕಡೆಯಿಂದ ಉದುರದೇ ಎಲ್ಲೆಡೆಯಿಂದ ನಡುನಡುವೆ ಉದುರುವುದರಿಂದ ಮೇಲ್ನೋಟಕ್ಕೆ ಥಟ್ಟನೇ ಪ್ರಕಟವಾಗದೇ ಇರುವುದು ಇದಕ್ಕೆ ಕಾರಣ. ಇದು ಹೌದಾದರೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಬಕ್ಕತಲೆಯ ಲಕ್ಷಣಗಳು
ಬಕ್ಕತಲೆ ಏಕಾಗುತ್ತದೆ ಮತ್ತು ಇದನ್ನು ತಡೆಯುವುದು ಹೇಗೆ ಎಂಬ ವಿಷಯದ ಮೇಲೆ ಲಕ್ಷಾಂತರ ಸಂಶೋಧನೆಗಳು ನಡೆಯುತ್ತಿದ್ದರೂ ಇದುವರೆಗೆ ಖಚಿತವಾದ ಉತ್ತರ ದೊರೆತಿಲ್ಲ. ಏಕೆಂದರೆ ಬಕ್ಕತಲೆ ಮೊತ್ತ ಮೊದಲು ಹುಬ್ಬುಗಳ ಮೇಲಿನ ಭಾಗ, ಅಂದರೆ ಹಣೆಯ ಮೇಲ್ಭಾಗದಿಂದ ಪ್ರಾರಂಭವಾಗಿ ಕ್ರಮೇಣ ಹಿಂದೆ ಸರಿಯುತ್ತಾ ಹೋಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಕ್ಕತಲೆಯ ಲಕ್ಷಣಗಳು
ಅಂತೆಯೇ ತಲೆಯ ಹಿಂಭಾಗದ ಮೇಲ್ಭಾಗದ ಚರ್ಮ ಹೆಚ್ಚಿನ ಕೂದಲುಗಳನ್ನು ಕಳೆದುಕೊಳ್ಳುತ್ತದೆ. ಈ ಸೂಚನೆಗಳು ಬಕ್ಕತಲೆ ಆವರಿಸುತ್ತಿರುವ ಲಕ್ಷಣಗಳಾಗಿವೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಸಡಿಲವಾದ ಕೂದಲು
ಒಂದು ವೇಳೆ ಕೂದಲು ಬಾಚಿದ ಬಳಿಕ ಬಾಚಣಿಗೆಯಲ್ಲಿ ಹೆಚ್ಚಿನ ಕೂದಲು ಕಂಡುಬಂದರೆ ಇದು ಕೂದಲ ಬುಡಗಳು ಸಡಿಲವಾಗಿರುವ ಲಕ್ಷಣಗಳನ್ನು ನೀಡುತ್ತವೆ. ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಲು ವಾರಕ್ಕೆರಡು ಬಾರಿ ಉತ್ತಮ ತೈಲವನ್ನು ಹಚ್ಚಿ ಮಸಾಜ್ ಮಾಡುವುದು ಉತ್ತಮ ಕ್ರಮವಾಗಿದೆ.

ಕೂದಲ ಅಂಚು ಹಿಂದೆ ಸರಿಯುತ್ತಿರುವುದು
ಪುರುಷರಲ್ಲಿ ಕೂದಲ ಅಂಚು ಹಣೆಯಿಂದ ಹಿಂದೆ ಸರಿಯುತ್ತಿರುವುದು ಮತ್ತು ಮಹಿಳೆಯರಲ್ಲಿ ಬೈತಲೆ ಅಗಲವಾಗಿರುವುದು ಕೂದಲು ಕಳೆದುಕೊಂಡಿರುವ ಲಕ್ಷಣಗಳಾಗಿವೆ. ಈ ವ್ಯಕ್ತಿಗಳು ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಗಮನಿಸಿದರೆ ತಲೆದಿಂಬಿನಲ್ಲಿ ಕೆಲವು ಕೂದಲುಗಳು ಉದುರಿರುವುದು ಕಂಡುಬರುತ್ತವೆ. ಈಗ ಕೂದಲ ಆರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇಲ್ಲದಿದ್ದರೆ ದಿನೇ ದಿನೇ ಈ ಪ್ರಮಾಣ ಹೆಚ್ಚುತ್ತಾ ಹೋಗಿ ಒಂದು ಹಂತದಲ್ಲಿ ಸರಿಪಡಿಸಲಾರದಷ್ಟು ಮುಂದುವರೆಯುತ್ತದೆ.



Click it and Unblock the Notifications