Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಕೂದಲಿಗೆ ಕಾಫಿಯನ್ನು ಬಳಸಿ, ಬಣ್ಣ ಹೆಚ್ಚಿಸಿಕೊಳ್ಳಿ
ನೈಸರ್ಗಿಕ ಕೂದಲು ಡೈ ಪಾಕವಿಧಾನಗಳಲ್ಲಿ ಹಲವಾರು ವಿಧಾನಗಳಿವೆ, ಅವುಗಳಲ್ಲಿ ಕಾಫಿ ಕೂಡ ಒಂದು ಎಂಬುದು ನಿಮಗೆ ತಿಳಿದಿದೆಯೆ? ಹೌದು, ವಾಸ್ತವವಾಗಿ ಕಾಫಿ ಕೂಡ ನಿಮ್ಮ ಕೂದಲನ್ನು ಬಣ್ಣ ಮಾಡಬಲ್ಲದು, ಇದು ದುಬಾರಿ ಅಲ್ಲದ ಉತ್ಪನ್ನ, ಇದಕ್ಕಿಂತ ಹೆಚ್ಚು ನಾವಿನ್ನೇನು ಕೇಳಬಹುದು. ಡೈ ಮಾಡುವುದು ಕೇವಲ ಬಿಳಿ ಕೂದಲು ಮರೆಮಾಚಲು ಅಲ್ಲ, ಜೊತೆಗೆ ನಮ್ಮ ಕೂದಲಿಗೆ ಉತ್ತಮವಾದ ಬಣ್ಣ ಬರುತ್ತದೆ ಮತ್ತು ಇದರಲ್ಲಿ ರಾಸಾಯನಿಕ ಅಂಶಗಳು ಕಡಿಮೆ ಪ್ರಮಾಣದಲ್ಲಿರುತ್ತದೆ. ಈಗಿನ ದಿನಗಳಲ್ಲಿ ವಯಸ್ಸಿಗಿಂತ ಮೊದಲೇ ತಲೆಕೂದಲು ಬಿಳಿಯಾಗುವುದು ಸಾಮಾನ್ಯ, ಅದರಲ್ಲೂ ಯುವ ಜನರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕೇಳಿ ಬರುತ್ತದೆ.
ಇಂದಿನ ಯಾಂತ್ರಿಕ ಜೀವನದಲ್ಲಿ ಒತ್ತಡ ಮತ್ತು ಆತಂಕಗಳ ನಡುವೆ ಬಿಳಿಗೂದಲು ಬೇಗನೇ ಆವರಿಸುವುದು ಒಂದು ದೊಡ್ಡ ವಿಷಯವಾಗಿದೆ. ಸಲೂನ್ ಹೋಗಿ ಡೈ ಮಾಡುವುದು ನಿಜವಾಗಿಯೂ ನೋಡಲು ಸುಲಭವಾಗಿರಬಹುದು ಆದರೆ ಇದು ಮೌಲ್ಯದಾಯಕವೇ? ಡೈ ಮಾಡುವುದರಿಂದ ಇದರಲ್ಲಿರುವ ರಾಸಾಯನಿಕ ಅಂಶಗಳು ಮುಖ್ಯವಾಗಿ ನಿಮಗೆ ಚರ್ಮದ ಅಲರ್ಜಿಗಳು, ಆರೋಗ್ಯದಲ್ಲಿ ತೊಂದರೆ ಅಥವಾ ಗರ್ಭಿಣಿಯರ ಆರೋಗ್ಯಕ್ಕೆ ಹಾನಿಕಾರಕ ಆಗಬಲ್ಲದು. ಆದುದರಿಂದ ನೈಸರ್ಗಿಕ ವಿಧಾನಗಳನ್ನು ರೂಢಿ ಮಾಡಿಕೊಳ್ಳುವುದು ಉತ್ತಮ. ಇಲ್ಲಿ ಕೆಲವು ಸರಳವಾದ ಕಾಫಿಯ ಡೈಯ ವಿಧಾನಗಳಿವೆ ಅವುಗಳನ್ನು ನೀವು ನಿಮ್ಮ ಮನೆಗಳಲ್ಲಿ ಸರಳವಾಗಿ ಮಾಡಬಹುದಾಗಿದೆ. ಸೌಂದರ್ಯ ವೃದ್ಧಿಗೆ ಒಂದು ಚಮಚ ಕಾಫಿ ಪುಡಿ ಸಾಕು!

ಕಾಫಿ ಡೈ ಅಕಾಲಿಕ ಕೂದಲು ಹಣ್ಣಾಗುವಿಕೆಗೆ
*ಪದಾರ್ಥಗಳು : ಕಾಫಿ ಪುಡಿ 4 ಟೀ ಚಮಚ
*ಹೇರ್ ಕಂಡಿಷನರ್: ಅರ್ಧ ಕಪ್
ಬಳಸುವ ವಿಧಾನ:
ಒಂದು ಚಿಕ್ಕ ಪಾತ್ರೆಯಲ್ಲಿ ಕಾಫಿ ಪುಡಿಯನ್ನು ತೆಗೆದುಕೊಳ್ಳಬೆಕು ನಂತರ ಹೇರ್ ಕಂಡೀಷನ್ ನನ್ನು ಪಾತ್ರೆಯಲ್ಲಿ ಸೇರಿಸಿ ಚಾಕು ಅಥವಾ ಚಮಚದಿಂದ ಚೆನ್ನಾಗಿ ಬೆರೆಸಬೆಕು. ಕಾಫಿ ಪುಡಿ ಕಂಡಿಷನರ್ ನೊಂದಿಗೆ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೆಕು. ಡೈಯು ತಯಾರಾದ ಮೆಲೆ ಅದನ್ನು ತಲೆ ಕೂದಲಿಗೆ ಬ್ರಷ್ ನಿಂದ ಹಚ್ಚಿ, ಒಂದು ಸಲ ನಿಮ್ಮ ಕೂದಲಿಗೆ ಡೈಯನ್ನು ಹಚ್ಚಿದ ನಂತರ ಒಂದು ಗಂಟೆ ಹಾಗೆ ಒಣಗಲು ಬಿಡಬೆಕು. ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.
ಗಮನಿಸಬೇಕಾಗಿದ್ದು: ಉದ್ದನೆಯ ಕೂದಲು ಇರುವವರು ಕಾಫಿ ಪುಡಿ ಮತ್ತು ಕಂಡಿಷನರ್ ನ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ಕ್ರಮವಾಗಿ ಜಾಸ್ತಿ ಮಾಡಿಕೊಳ್ಳಬೇಕು. ಈಗ ತಾನೇ ಶುರುವಾಗಿರುವ ಬಿಳಿಗೂದಲಿಗೆ ಇದು ಚೆನ್ನಾಗಿ ವರ್ಕೌಟ್ ಆಗುತ್ತದೆ. ಈ ಡೈ ಪದ್ದತಿಯಿಂದ ನಿಮಗೆ ತೃಪ್ತಿಯಾಗದೇ ಇದ್ದಲ್ಲಿ ಎರಡನೇ ದಿನ ಮತ್ತೆ ಬಳಸಿದರೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ.
ಬಿಳಿಗೂದಲಿಗೆ ಕಾಫಿ ಸ್ಪ್ರೇ
ಸಂಪೂರ್ಣ ಬಿಳಿಗೂದಲು ಇರುವವರು ಇದನ್ನು ಗಮನಿಸಬೇಕು. ಬಿಳಿಗೂದಲು ಬರದಂತೆ ತಡೆಗಟ್ಟುವುದು ಅಸಾಧ್ಯ. ಆದರೆ ಬಿಳಿಗೂದಲು ಇದ್ದರೆ ಒಂದು ಲಾಭವೇನೆಂದರೆ ನಮಗೆ ಬೇಕಾದ ಕಲರನ್ನು ನಾವು ಕೂದಲಿಗೆ ಹಚ್ಚಿಕೊಳ್ಳಲು ನಾವು ಸ್ವತಂತ್ರರು. ಸಾಮಾನ್ಯವಾಗಿ ಬಿಳಿಗೂದಲಿಗೆ ಬಣ್ಣ ಹಚ್ಚುವುದು ಸುಲಭ, ಜೊತೆಗೆ ಇದು ನಿಮ್ಮನ್ನು ಇನ್ನೂ ಯವಕ/ಯುವತಿಯರನ್ನಾಗಿ ಕಾಣುವಂತೆ ಮಾಡುತ್ತದೆ. ಕೂದಲಿಗೆ ಸಂಪೂರ್ಣ ಡೈ ಬೇಡವೆಂದರೆ ಇನ್ನೊಂದು ದಾರಿಯೂ ಇದೆ, ಅದುವೇ ಕಾಫಿ ಸ್ಪ್ರೇ. ಇದು ನಿಮ್ಮ ಕೂದಲಿಗೆ ಇನ್ನಷ್ಟು ಮೆರುಗನ್ನು ನೀಡುತ್ತದೆ. ಇನ್ನು ಇದೇ ಮೊದಲಬಾರಿಗೆ ಬಳಸುವವರಿಗೆ ಕಾಫಿ ಸ್ಪ್ರೇ ಉತ್ತಮ ಆಯ್ಕೆ. ಅಬ್ಬಬ್ಬಾ..! ಕಾಫಿ ಪುಡಿಯಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?
ವಿಧಾನ: ನಾವೇ ಕಾಫಿ ಸ್ಪ್ರೇ ತಯಾರಿಸಿಕೊಳ್ಳಲು, ಮೊದಲು ಸ್ಟ್ರಾಂಗ್ ಕಾಫಿ ರೆಡಿಮಾಡಿಕೊಂಡು ಒಲೆಯಲ್ಲಿಡಬೇಕು. ಇದಾದ ನಂತರ ಒಲೆಯಿಂದ ತೆಗೆದು, ರೂಮಿನ ವಾತಾವರಣಕ್ಕೆ ಸೆಟ್ ಆಗುವ ರೀತಿಯಲ್ಲಿಡಬೇಕು. ಅಷ್ಟೇ.. ಕಾಫಿ ಸ್ಪ್ರೇ ರೆಡಿ. ಇದಾದ ನಂತರ ಇದನ್ನು ಪಂಪ್ ರೀತಿಯಲ್ಲಿನ ಸಲಕರಣೆಗೆ ಹಾಕಿ, ಕೂದಲಿಗೆ ಸ್ಪ್ರೇ ಮಾಡಿಕೊಳ್ಳಬೇಕು. ನಿಮಗೆಲ್ಲಿ ಬೇಕೋ ಅಲ್ಲಿ ಸ್ಪ್ರೇ ಮಾಡಿ, ಕೂದಲನ್ನು ಮಸಾಜ್ ಮಾಡಿಕೊಳ್ಳಬೇಕು. ಡೈ ಕನಿಷ್ಠ ಪಕ್ಷ ಇಪ್ಪತ್ತು ನಿಮಿಷ ಇರುವಂತೆ ನೋಡಿಕೊಳ್ಳಬೇಕು. ಶಾಂಪೂ ಸ್ಥಾನದ ನಂತರ ಕಾಫಿಯನ್ನು ನೇರವಾಗಿ ತಲೆಗೆ ಹಾಕಿಕೊಳ್ಳಬಹುದು. ನೀವು ಬಯಸಿದಷ್ಟು ಕಲರ್ ಬರಲು ಕಾಫಿ ಸ್ಪ್ರೇ ಡೈವಿಧಾನವನ್ನು ಕೆಲವು ಬಾರಿ ಪ್ರಯೋಗಿಸಬಹುದು. ವಾರಕ್ಕೆರಡು ಬಾರಿ ಇದನ್ನು ಮಾಡಿದರೆ ಕೂದಲಿನ ಕಲರ್ ನೀವು ಬಯಸಿದಂತೆ ಆಗುತ್ತದೆ.



Click it and Unblock the Notifications













