Latest Updates
-
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ
ತಲೆಹೊಟ್ಟು ಸಮಸ್ಯೆಗೆ ಏಳು ಅತ್ಯುತ್ತಮ ಮನೆಮದ್ದುಗಳು
ಕೂದುಲು ಉದುರುವಿಕೆ ಸಾಮಾನ್ಯವಾಗಿ ಹೆಚ್ಚಿನವರು ಎದುರಿಸುವ ಸಮಸ್ಯೆ. ಬ್ಯಾಹ್ಯ ನೋಟಕ್ಕೆ ಸುಂದರವಾಗಿ ಕಾಣಿಸಲು ಈ ಸಮಸ್ಯೆಯಿಂದ ಮುಕ್ತರಾಗಿರಬೇಕಾಗಿರುವುದು ಅತ್ಯವಶ್ಯಕ. ಈ ಸಮಸ್ಯೆ ಆರಂಭವಾಗಲು ಇಂತಿಷ್ಟ ವಯಸ್ಸು ಅಂತಿಲ್ಲ, ಪುರುಷರು ಮತ್ತು ಮಹಿಳೆಯರು ಎನ್ನುವ ತಾರತಮ್ಯವಿಲ್ಲ. ಈ ಸಮಸ್ಯೆ ಯಾವ ರೀತಿ ಶುರುವಾಗುತ್ತೆ, ಇದಕ್ಕೆ ಮನೆಯಿಂದ ತಯಾರಿಸಬಹುದಾದ ಮದ್ದೇನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಕೂದಲು ಉದುರುವಿಕೆಗೆ ಒಂದು ಪ್ರಮುಖ ಕಾರಣವೆಂದರೆ ತಲೆ ಹೊಟ್ಟು, ಇದು ಎಲ್ಲರೂ ಎದುರಿಸುತ್ತಿರುವ ಸಮಸ್ಯೆ. ಹಾಗಾಗಿ, ಮನೆಮದ್ದು ಉಪಯೋಗಿಸಿ ತಲೆಹೊಟ್ಟಿನ ಸಮಸ್ಯೆಯಿಂದ ಪಾರಾಗುವುದು ಮಾತ್ರವಲ್ಲದೆ ಕೂದಲಿನ ಉತ್ತಮ ಬೆಳವಣಿಗೆಗೆ ಉಪಾಯವನ್ನು ಈ ಲೇಖನದ ಮೂಲಕ ತಿಳಿಸುತ್ತಿದ್ದೇವೆ.

ಇಲ್ಲಿ ತಿಳಿಸುವ ಕೆಲವು ವಿಧಾನಗಳು ಕೆಲಸ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ವಾರಾಂತ್ಯದಲ್ಲಿ ಒಂದು ಗಂಟೆಯ ಸಮಯವನ್ನು ಎದುರಿಸುತ್ತಿರುವ ಸಮಸ್ಯೆಯ ಪರಿಹಾರಕ್ಕಾಗಿ ಮೀಸಲಿಟ್ಟರೆ ಒಳ್ಳೆಯದು. ನೈಸರ್ಗಿಕ ವಿಧಾನಗಳನ್ನು ಬಳಸುವುದರಿಂದ ಇದರ ಯಾವುದೇ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ ಮತ್ತು ಇವುಗಳನ್ನು ಪದೇ ಪದೇ ಬಳಸುವುದರಿಂದ ಕೂದಲಿನ ಸಮಸ್ಯೆಯನ್ನು ಬುಡದಿಂದ ಕಿತ್ತು ಹಾಕಬಹುದು. ಅಷ್ಟೇ ಅಲ್ಲದೆ ತಲೆಯ ಚಿಪ್ಪಿನ ಆರೋಗ್ಯವನ್ನೂ ಕಾಪಾಡುವಲ್ಲೂ ನೈಸರ್ಗಿಕ ವಿಧಾನಗಳು ಸಹಕಾರಿಯಾಗುತ್ತದೆ.
ಮೊಟ್ಟೆ ಬಳಸಿ ತಲೆಹೊಟ್ಟು ನಿವಾರಿಸಿಕೊಳ್ಳಿ
ಹೊಟ್ಟಿನ ಸಮಸ್ಯೆಯಿಂದ ಪಾರಾಗಲು ಮೊಟ್ಟೆಯ ಬಳಕೆ ಒಂದು ಸರಳ ಮತ್ತು ನೇರ ಉಪಾಯ. 1 ರಿಂದ 2ಮೊಟ್ಟೆಗಳನ್ನು ಒಡೆದು ತುಸು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ನಂತರ ಕೂದಲನ್ನು ಬಿಸಿ ನೀರಿನಲ್ಲಿ ಸ್ವಲ್ಪ ಒದ್ದೆ ಮಾಡಿಕೊಂಡು ಮೊಟ್ಟೆಯ ಮಿಶ್ರಣವನ್ನು ತಲೆಯ ಬುಡಕ್ಕೆ ಚೆನ್ನಾಗಿ ಉಜ್ಜಬೇಕು. ಈ ಮಿಶ್ರಣವು ಚೆನ್ನಾಗಿ ತಲೆ ಬುಡದಲ್ಲಿ ಕುಳಿತುಕೊಳ್ಳುವ ಹಾಗೆ ನೋಡಬೇಕು. ಇದನ್ನು 15 ನಿಮಿಷದಿಂದ ಒಂದು ಗಂಟೆಗಳ ಕಾಲ ಬಿಡಬೇಕು.
ಇದು ತಲೆಯ ಚರ್ಮನ್ನು ಎಳೆದುಕೊಳ್ಳುತ್ತಾ, ನಿರ್ಜೀವ ಚರ್ಮಕ್ಕೆ ಕಾಂತಿಯನ್ನು ತರುವುದಲ್ಲದೇ ಕೂದಲಿಗೆ ಹೊಸ ಜೀವವನ್ನು ತರುವಲ್ಲಿ ಸಹಕಾರಿಯಾಗಲಿದೆ. ಮೊಟ್ಟೆಯ ಈ ಮಿಶ್ರಣವನ್ನು ತಲೆಗೆ ಹಚ್ಚಿದ ನಂತರ ತಲೆಯನ್ನು ಯಾವುದಾದರೂ ಷವರ್ ಕ್ಯಾಪ್ ಮತ್ತು ಬಟ್ಟೆಯಿಂದ ತಲೆಯನ್ನು ಪೂರ್ತಿಯಾಗಿ ಮುಚ್ಚಿಕೊಳ್ಳಬೇಕು.
ಹೀಗೆ ಮಾಡುವುದರಿಂದ ತಲೆಯ ತಾಪಮಾನವನ್ನು ಕಾಪಾಡಿ ಮೊಟ್ಟೆಯ ಮಿಶ್ರಣವು ಬುಡದಿಂದ ಪಸರಿಸಲು ಸಹಕಾರಿಯಾಗುತ್ತದೆ ಇದರಿಂದ ಸತ್ವರಹಿತ ಚರ್ಮ ಮತ್ತು ಕೊಳೆಯು ನಿವಾರಣೆಯಾಗುತ್ತದೆ. ಷವರ್ ಕ್ಯಾಪ್ ಮೇಲೆ ಹೇರ್ ಡ್ರೈಯರ್ ಉಪಯೋಗಿಸಿ ಕೂದಲನ್ನು ಒಣಗಿಸಬಹುದಾಗಿದೆ.
ಕೂದಲನ್ನು ಹಬೆಯ ಕೆಳಗಡೆ ಇಡುವುದು ಕೂಡ ತುಂಬಾ ಪ್ರಯೋಜನಕಾರಿ ಮತ್ತು ಒಂದು ಉತ್ತಮವಾದ ವಿಧಾನ. ಮೊಟ್ಟೆಯ ಬಳಕೆ ಒಂದು ಹೊಟ್ಟಿನ ನಿವಾರಣೆಗೆ ಒಂದು ಉತ್ತಮವಾದ ವಿಧಾನ. ಆದುದರಿಂದ ಈ ವಿಧಾನವನ್ನು ಬಳಸಿದ ನಂತರ ಸ್ವಚ್ಚವಾದ ಬಟ್ಟೆಯಿಂದ ಕೂದಲನ್ನು ಒರೆಸಿಕೊಳ್ಳಬೇಕು. ಮೊಟ್ಟೆಯು ಕೂದಲಿಗೆ ಮಾತ್ರವಲ್ಲದೇ ತಲೆಯ ಬುಡಕ್ಕೆ ಉತ್ತಮವಾದ ಪೌಷ್ಟಿಕತೆಯನ್ನು ಕೊಡುತ್ತದೆ ಇದರಲ್ಲಿರುವ ಅಮಿನೋ ಆಮ್ಲವಾದ ಸಿಸ್ಟೇನ್ ಮತ್ತು ಮೆಥಿಯೊನಿನ್ ಕೂದಲಿನ ಬುಡವನ್ನು ಸದೃಢಗೊಳಿಸಿ ಕೂದಲು ಸುಂದರವಾಗಿ ಬೆಳೆಯುವಂತೆ ಮಾಡುತ್ತದೆ.
ವಿನಿಗರ್ ಕೂಡ ಹೊಟ್ಟು ನಿವಾರಕ
ಆರು ಟೇಬಲ್ ಚಮಚ ನೀರಿನೊಂದಿಗೆ ಎರಡು ಟೀ ಚಮಚ ವಿನಿಗರ್ ಬೆರೆಸಿ ಕೂದಲಿಗೆ ಮಲಗುವ ಮುನ್ನ ಹಚ್ಚಿ ಮರುದಿನ ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆಯಬೇಕು. ಕೂದಲಿಗೆ ಸ್ನಾನಕ್ಕೆ 5-10 ನಿಮಿಷ ಮೊದಲು ಹುಳಿಯಾದ ಸೇಬುಹಣ್ಣಿನ ರಸ (apple cider) ವಿನಿಗರ್ ಹಚ್ಚುವುದರಿಂದ ಕೂದಲನ್ನು ಹೊಟ್ಟುರಹಿತ ಕೂದಲಾಗಿ ಖಂಡಿತವಾಗಿಯೂ ಮಾಡಬಹುದಾಗಿದೆ.
ಹೊಟ್ಟು ನಿವಾರಣೆಗೆ ಮೆಂತೆಯ ಪೇಸ್ಟ್
ನೀರಿನೊಂದಿಗೆ ಮೆಂತೆಯ ಪೇಸ್ಟ್ ಮಾಡಿಕೊಂಡು ತಲೆ ಬುಡಕ್ಕೆ ಹಚ್ಚಿ ಒಂದು ತಾಸಿನ ನಂತರ ತೊಳೆಯುವುದರಿಂದ ಹೊಟ್ಟು ಮಾತ್ರವಲ್ಲದೆ ಕೂದಲು ಉದುರುವುದನ್ನು ಕೂಡಾ ತಡೆಯಬಹುದು.
ಹೊಟ್ಟಿನ ಸಮಸ್ಯೆಯ ಪರಿಹಾರಕ್ಕೆ ಮೊಸರಿನ ಟ್ರೀಟ್ ಮೆಂಟ್
ಆಲಿವ್ ಎಣ್ಣೆ ಮತ್ತು ಶುಂಠಿಯ ಮಸಾಜ್
ಲಿಂಬೆಹಣ್ಣಿನ ರಸದಿಂದಲೂ ತಲೆಹೊಟ್ಟಿಗೆ ಪರಿಹಾರ
ತಲೆಹೊಟ್ಟಿನಿಂದ ಹೊರಬರಲು ಲಿಂಬೆಹಣ್ಣಿನ ರಸ ಮತ್ತು ಗಂಧದ ಎಣ್ಣೆ ಕೂಡಾ ಪರಿಹಾರ ನೀಡಬಲ್ಲದು. ಇವೆರಡನ್ನು ತಲೆಗೂದಲಿಗೆ ಉಪಯೋಗಿಸಿದರೆ ತಲೆಹೊಟ್ಟು ಸಮಸ್ಯೆಯಿಂದ ಹೊರಬರಬಹುದಾಗಿದೆ.
ಎರಡು ಟೀ ಚಮಚ ಲಿಂಬೆರಸ, ನೂರು ಗ್ರಾಂನಷ್ಟು ವಿಚ್ ಹಜಾಲ್ (witch hazel, ಒಂದು ರೀತಿಯ ಬಳ್ಳಿಯಲ್ಲಿ ಬೆಳೆಯುವ ಮೂಲಿಕೆ) ಮತ್ತು ಇನ್ನೂರು ಗ್ರಾಂ ಡಿಸ್ಟಿಲ್ಡ್ ನೀರು ತಲೆಹೊಟ್ಟಿನಿಂದ ದೂರಬರಬಹುದು. ತಾಜಾ ಲಿಂಬೆರಸವನ್ನು ಬೇರೆ ಬೇರೆ ರೀತಿಯಲ್ಲಿ ತಲೆಹೊಟ್ಟಿನಿಂದ ಹೊರಬರಲು ಬಳಸಿಕೊಳ್ಳಬಹುದು.
ತಲೆಹೊಟ್ಟು ನಿವಾರಣೆಗೆ ಹೀಗೂ ಒಂದು ಪರಿಹಾರ
ಗಂಧಕ (sulphar) ಪೌಡರ್, ಆಲ್ಮಂಡ್ ಎಣ್ಣೆ, ರೋಸ್ ನೀರು ಇವೆಲ್ಲವೂ ತಲೆಹೊಟ್ಟನ್ನು ನಿವಾರಿಸಲು ಇರುವ ಇನ್ನೊಂದು ವಿಧಾನ. ಇವೆಲ್ಲವನ್ನೂ ಮಿಶ್ರಣಗೊಳಿಸಿ ತಲೆಗೂದಲಿಗೆ ಹಚ್ಚಿ, ರಾತ್ರಿಯಿಡೀ ಬಿಟ್ಟು, ಬೆಳಗ್ಗೆ ಚೆನ್ನಾಗಿ ಸ್ನಾನ ಮಾಡಿ ಇದನ್ನು ತೊಳೆಯುವುದರಿಂದ ತಲೆಹೊಟ್ಟು ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು.



Click it and Unblock the Notifications

















