Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲಿನ ಸಮೃದ್ಧ ಪೋಷಣೆಗಾಗಿ- ನೈಸರ್ಗಿಕ ಹೇರ್ ಪ್ಯಾಕ್
ತಲೆಗೂದಲಿನ ಸಮಸ್ಯೆಗಳನ್ನು ನಿವಾರಿಸಲು ಮನೆಮದ್ದುಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ ಹಿಂದಿನ ಲೇಖನದಲ್ಲಿ ನಾವು ತಿಳಿಸಿದ್ದೇವೆ. ನೀವು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಉತ್ಪನ್ನಗಳನ್ನು ಕೂದಲಿಗೆ ಬಳಸಿದಷ್ಟೂ ಕೂದಲು ಒರಟಾಗಿ ಉದುರುವಿಕೆ ಹೆಚ್ಚಾಗುವುದು ಖಂಡಿತ. ಹಾಗಿದ್ದರೆ ರಾಸಾಯನಿಕ ಉತ್ಪನ್ನಗಳನ್ನು ಬಳಸದೇ ಕೂದಲಿನ ಸುಂದರತೆಗಾಗಿ ಹೇರ್ ಪ್ಯಾಕ್ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಮನೆಯಲ್ಲೇ ತಯಾರಿಸುವ ಕೂದಲಿನ ಚಿಕಿತ್ಸೆಗಳು ಕಡಿಮೆ ದರದಲ್ಲಿ ಅದ್ಭುತ ಪರಿಣಾಮಗಳನ್ನು ಉಂಟುಮಾಡುವುದು ಖಂಡಿತ. ಆಧುನಿಕ ಸ್ಟೈಲ್ಗೆ ಮಾರು ಹೋಗಿ ಕೂದಲನ್ನು ಸ್ಟ್ರೈಟ್ನಿಂಗ್ ಮಾಡುವುದು ಬಣ್ಣ ಹಚ್ಚುವುದೂ ಕೂಡ ಕೂದಲಿಗೆ ಹಾನಿಕಾರಕವಾಗಿದೆ. ಇದರಿಂದ ಕೂಡ ಕೇಶವು ತನ್ನ ಹೊಳಪನ್ನು ಕಳೆದುಕೊಂಡು ಉದುರಲು ಆರಂಭವಾಗುತ್ತದೆ. ನಿಮ್ಮ ನಿಸ್ತೇಜ ಕೂದಲಿಗೆ ಮರುಜೀವ ನೀಡುವಂತಹ ಅತ್ಯದ್ಭುತ ಹೇರ್ ಪ್ಯಾಕ್ ವಿವರಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇದರ ಬಳಕೆಯನ್ನು ನಿಮ್ಮ ಕೂದಲಿಗೆ ಮಾಡಿದಾಗ ನೀವು ಅದ್ಭುತ ಪ್ರಯೋಜನಗಳನ್ನು ಪಡೆಯುವುದು ಖಂಡಿತ. ಹಾಗಿದ್ದರೆ ಕೆಳಗಿನ ಸ್ಲೈಡರ್ಗಳಲ್ಲಿ ನಾವು ನೀಡುತ್ತಿರುವ ಮಾಹಿತಿ ನೋಡಿ....

ಮೊಟ್ಟೆ + ಆಲೀವ್ ಆಯಿಲ್
ಹಸಿ ಮೊಟ್ಟೆ ಮತ್ತು ಆಲೀವ್ ಆಯಿಲ್ ಬಳಸಿಕೊಂಡು ನಿಮ್ಮ ಕೂದಲಿನ ಸೊಬಗನ್ನು ಇನ್ನಷ್ಟು ವೃದ್ಧಿಗೊಳಿಸಬಹುದು. 2-3 ಮೊಟ್ಟೆಯನ್ನು ತೆಗೆದುಕೊಂಡು 5-6 ಚಮಚ ಆಲೀವ್ ಆಯಿಲ್ ಅನ್ನು ಮಿಶ್ರ ಮಾಡಿಕೊಳ್ಳಿ ಇದನ್ನು ಒಣಕೂದಲಿಗೆ ಹಚ್ಚಿಕೊಳ್ಳಿ. ನಂತರ ಪ್ಲಾಸ್ಟಿಕ್ ಶವರ್ ಕ್ಯಾಪ್ನಿಂದ ಕೂದಲನ್ನು ವ್ರಾಪ್ ಮಾಡಿಕೊಳ್ಳಿ ದೇಹದಲ್ಲಿ ಉತ್ಪತ್ತಿಯಾಗಿರುವ ಉಷ್ಣತೆಯು ಪ್ಲಾಸ್ಟಿಕ್ ಕವರ್ನಲ್ಲಿ ಉತ್ಪತ್ತಿಯಾಗಿ ಕೂದಲಿನ ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ ಇದರಿಂದ ಕೂದಲಿನ ಬುಡಕ್ಕೆ ಇನ್ನಷ್ಟು ಕಂಡೀಷನರ್ ಅಂಶಗಳು ದೊರೆಯುತ್ತದೆ.

ರೋಸ್ ಮೇರಿ + ಆಪಲ್ ಸೀಡರ್ ವಿನೇಗರ್ + ನೀರು
ಈ ಸುಂದರವಾದ ಮಿಶ್ರಣ ಮನೆಯಲ್ಲೇ ತಯಾರು ಮಾಡಲಾದ ಕೂದಲಿನ ಹೇರ್ ಪ್ಯಾಕ್ ಎಂದೆನಿಸಿದ್ದು ಕೂದಲನ್ನು ಹೊಳೆಯಿಸಲು ಮತ್ತು ಕೂದಲಿನ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಪಲ್ ಸೀಡರ್ ವಿನೇಗರ್ ಇರುವ ಬೌಲ್ಗೆ ನೀರು ಮತ್ತು ರೋಸ್ ಮೇರಿಯನ್ನು ಸೇರಿಸಿಕೊಳ್ಳಿ. ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಕೂದಲಿನಲ್ಲಿ ಹಾಗೆಯೇ ಬಿಡಿ. ನಂತರ ಕೂದಲಿಗೆ ಶಾಂಪೂ ಮಾಡಿ ಕೂದಲು ಆರೋಗ್ಯಪೂರ್ಣವಾಗಿ ಹೊಳೆಯುತ್ತಿರುವುದನ್ನು ನಿಮಗೆ ಕಾಣಬಹುದು.

ಚಮೋಲಿ ಟೀ + ಆಪಲ್ ಸೀಡರ್ ವಿನೇಗರ್
ಮನೆಯಲ್ಲೇ ಈ ಹೇರ್ ಪ್ಯಾಕ್ ಅನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ. 3 ಚಮೋಲಿ ಟೀ ಬ್ಯಾಗ್ಸ್ ಅನ್ನು ತೆಗೆದುಕೊಂಡು ಇದಕ್ಕೆ ಆಪಲ್ ಸೀಡರ್ ವಿನೇಗರ್ ಬೆರೆಸಿ. ಚಮೋಲಿ ಟೀ ಯನ್ನು ಕುದಿಸಿಕೊಳ್ಳಿ 20-30 ನಿಮಿಷಗಳ ಕಾಲ ಕೂದಲಿನಲ್ಲಿ ಹಾಗೆಯೇ ಆರಲು ಬಿಡಿ. ನಂತರ ಕೂದಲು ತೊಳೆಯುವ ಸಂದರ್ಭದಲ್ಲಿ ಇದಕ್ಕೆ 1/4 ಚಮಚ ವಿನೇಗರ್ ಬೆರೆಸಿ. ಕೂದಲಿಗೆ ನೈಸರ್ಗಿಕ ಹೊಳೆವನ್ನು ಕಾಣಬಹುದು.

ಜೇನು + ಲಿಂಬೆ + ಬಾಳೆಹಣ್ಣು
ಜಿಡ್ಡಿನ ಕೂದಲನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆಯೇ? ಹಾಗಿದ್ದರೆ ಬಾಳೆಹಣ್ಣು, ಲಿಂಬೆ ಮತ್ತು ಜೇನಿನ ಹೇರ್ ಪ್ಯಾಕ್ ಅನ್ನು ನಿಮ್ಮ ಕೂದಲಿಗೆ ಪ್ರಯತ್ನಿಸಬಹುದಾಗಿದೆ. ನಿಮ್ಮ ಒಣ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿರಿ. ಹದಿನೈದು ನಿಮಿಷ ಈ ಹೇರ್ ಪ್ಯಾಕ್ ಅನ್ನು ಹಾಗೆಯೇ ಬಿಡಿ. ನಂತರ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.

ಎಣ್ಣೆಗಳ ಪ್ಯಾಕ್
ಕೂದಲು ಉದುರುವುದನ್ನು ತಡೆಗಟ್ಟಲು ಕೂಡ ಮನೆಯಲ್ಲೇ ಕೂದಲಿನ ಚಿಕಿತ್ಸೆಗಳನ್ನು ನಿಮಗೆ ಮಾಡಿಕೊಳ್ಳಬಹುದು. ಅವೊಕಾಡೊ ಅಥವಾ ಜೊಜೊಬಾ ಎಣ್ಣೆಯನ್ನು ನೇರವಾಗಿ ನೆತ್ತಿಗೆ ಹಚ್ಚಿಕೊಳ್ಳಿ. ನೆತ್ತಿಯ ಭಾಗದಲ್ಲಿ ವೃತ್ತಾಕಾರ ಮಾದರಿಯಲ್ಲಿ ಈ ಕ್ರಿಯೆಯನ್ನು ಮಾಡಿ. ಈ ಎಣ್ಣೆಗಳು ಕೂದಲಿನ ಅಭಿವೃದ್ಧಿಗೆ ಪೂರಕವಾಗಿದೆ. ತುಳಸಿ, ಕ್ಯಾರೆಟ್, ಸೈಪ್ರೆಸ್, ಲ್ಯಾವೆಂಡರ್, ಪುದೀನಾ ಮತ್ತು ಟೀ ಟ್ರಿ ಆಯಿಲ್ಗಳು ನಿರ್ದಿಷ್ಟ ಎಸೆನ್ಶಿಯಲ್ ಎಣ್ಣೆಗಳಾಗಿದ್ದು ಕೂದಲಿಗೆ ಇವುಗಳ ಜಾದೂವನ್ನೇ ಮಾಡುತ್ತವೆ. ಈ ಎಣ್ಣೆಗಳನ್ನು ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸುವುದು ಉತ್ತಮ.



Click it and Unblock the Notifications
