ಕೂದಲಿನ ಶತ್ರುಗಳು-ನೀವು ಮಾಡುವ ಈ ಮೂರು ತಪ್ಪುಗಳು!

By Arshad

ಓರ್ವ ವ್ಯಕ್ತಿಯನ್ನು ಗುರುತಿಸಲು ಅವರ ತಲೆಗೂದಲು ಪ್ರಮುಖ ಪಾತ್ರ ವಹಿಸುತ್ತದೆ. ತಲೆಗೂದಲು ಉತ್ತಮವಾಗಿದ್ದರೆ ಎದುರಿನವರಿಂದ ಈ ಬಗ್ಗೆ ಪ್ರಶಂಸೆಯೂ ದೊರಕಬಹುದು. ನಿಮ್ಮ ಕೂದಲಿಗೆ ನೀವು ನೀಡುವ ಆರೈಕೆ ಪೋಷಣೆ ಮತ್ತು ಕಾಳಜಿಯ ಚರ್ಚೆಯೂ ಆಗಬಹುದು. ಇದು ನಿಮಗೆ ಅತೀವ ಸಂತೋಷವನ್ನೂ, ನೆಮ್ಮದಿಯನ್ನೂ ನೀಡುವ ವಿಷಯವಾಗಿದೆ. ಹಾಗಿಲ್ಲದೇ ಇದ್ದಲ್ಲಿ ಪ್ರಸಿದ್ಧ ವ್ಯಕ್ತಿಗಳು ತಮ್ಮ ತಲೆಗೂದಲ

ಆರೈಕೆಗಾಗಿ ಹಣ ಮತ್ತು ಸಮಯವನ್ನು ವ್ಯಯಿಸುತ್ತಿರಲಿಲ್ಲ. ಇವರ ಅಭಿಮಾನಿಗಳಂತೂ ಇವರದ್ದೇ ತಲೆಗೂದಲ ವಿನ್ಯಾಸವನ್ನು ಅನುಸರಿಸುವ ಮೂಲಕ ತಮ್ಮ ಅಭಿಮಾನವನ್ನು ವಿಶ್ವಕ್ಕೆಲ್ಲಾ ತಿಳಿಸುತ್ತಾ ಹೋಗುತ್ತಾರೆ. ತಲೆಗೂದಲ ಆರೈಕೆ ಮತ್ತು ವಿನ್ಯಾಸಕ್ಕಾಗಿ ವೃತ್ತಿಪರ ಸೇವೆ ಈಗ ಲಭ್ಯವಿದೆ. ಖ್ಯಾತನಾಮರಂತೂ ತಮ್ಮ ತಲೆಗೂದಲಿಗಾಗಿಯೇ ವೃತ್ತಿಪರರನ್ನು ನೇಮಿಸಿಕೊಳ್ಳುತ್ತಾರೆ.

Surprising Daily Habits That Damage Your Hair

ಇವರು ಕೂದಲಿಗೆ ಅಗತ್ಯವಿರುವ ಕಾಳಜಿ ಮತ್ತು ಪೋಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಕಾರಣ ಸ್ವಾಭಾವಿಕವಾಗಿಯೇ ತಾರೆಯರು ಅತ್ಯುತ್ತಮ ಹಾಗೂ ಆರೋಗ್ಯವಂತ ಮತ್ತು ಎದುರಿನವರಿಗೆ ಅಸೂಯೆ ಉಂಟುಮಾಡುವಂತಹ ತಲೆಗೂದಲನ್ನು ಸದಾ ಪ್ರದರ್ಶಿಸುತ್ತಿರುತ್ತಾರೆ. ಚೆಲುವೆಯ ಅಂದದ ತಲೆಗೂದಲಿಗೆ ಯಾವ ಎಣ್ಣೆ ಸೂಕ್ತ?

ಆದರೆ ಈ ಸೇವೆ ಎಲ್ಲರಿಗೂ ಲಭ್ಯವಿಲ್ಲವಲ್ಲ, ಆಗ ಈ ಕಾಳಜಿ ಮತ್ತು ಪೋಷಣೆಯ ಜವಾಬ್ದಾರಿಯನ್ನು ನಾವೇ ಹೊರಬೇಕಾಗುತ್ತದೆ. ಕಾಳಜಿ, ಆರೈಕೆಯಲ್ಲಿ ಕೊರತೆಯಾದರೆ ಇದರ ಪರಿಣಾಮವನ್ನು ಕೂದಲು ಸ್ಪಷ್ಟವಾಗಿ ಪ್ರಕಟಿಸಿಬಿಡುತ್ತದೆ. ಇಲ್ಲದ ಕಾಂತಿ, ಸೀಳಿದ ತುದಿಗಳು, ಒಣಗಿ ಗುಂಗುರಾಗಿರುವುದು ಇತ್ಯಾದಿಗಳು ಅನಾರೋಗ್ಯ ಕೂದಲನ್ನು ತೋರ್ಪಡಿಸಿದರೆ ಕೆಲವೊಮ್ಮೆ ಕೂದಲು ಉದುರಿ ಬಕ್ಕತಲೆಯಾಗುವುದು, ತಲೆಹೊಟ್ಟು ಮೊದಲಾದ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ.

ಆದರೆ ಕೂದಲು ಘಾಸಿಗೊಳ್ಳಲು ಕೇವಲ ಆರೈಕೆಯ ಕೊರತೆ ಮಾತ್ರ ಕಾರಣವಲ್ಲ, ನಮ್ಮ ಕೆಲವು ಅಭ್ಯಾಸಗಳೂ ನಮಗರಿವಿಲ್ಲದಂತೆಯೇ ಕಾರಣವಾಗಬಹುದು. ಹೌದೇ, ಈ ಬಗ್ಗೆ ಗೊತ್ತೇ ಇರಲಿಲ್ಲವಲ್ಲ, ಏನವು? ಎಂದು ಕೇಳುವವರು ಕೆಳಗಿನ ಮಾಹಿತಿ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು. ರಾತ್ರಿ ಬೆಳಗಾಗುವುದರ ಒಳಗೆ ಕೂದಲುದುರುವ ಸಮಸ್ಯೆಗೆ ಪರಿಹಾರ!

ಬಿಗಿಯಾಗಿ ಕೂದಲನ್ನು ಕಟ್ಟುವುದು
ಕೆಲವು ಕೇಶವಿನ್ಯಾಸಗಳಲ್ಲಿ ಕೂದಲನ್ನು ಅತಿ ಬಿಗಿಯಾಗಿ ಎಳೆದು ಕಟ್ಟಲಾಗುತ್ತದೆ. ತಲೆಯ ಹಿಂದಿನ ತುರುಬು (ಹೈ ಬನ್), ಬಿಗಿಯಾದ ಜಡೆ, ಬಿಗಿಯಾಗಿ ರಬ್ಬರ್ ಬ್ಯಾಂಡ್ ಸುತ್ತಿ ನಿಲ್ಲಿಸಿದ ಜುಟ್ಟು ಮೊದಲಾದವು ಕೂದಲ ಬುಡಕ್ಕೆ ಸತತವಾಗಿ ಹೆಚ್ಚಿನ ಒತ್ತಡ ಮತ್ತು ಸೆಳೆತ ನೀಡಿ ಚರ್ಮದಿಂದ ಕೂದಲ ಬುಡ ಕಿತ್ತು ಬರುವಂತಾಗುತ್ತದೆ. ಹೀಗೆ ಮಾಡಬೇಡಿ ಎಂದು ಕೊಂಚ ನೋವಿನ ಮೂಲಕ ಈ ಕೂದಲ ಬುಡಗಳು ಚೀರಿದರೂ ಬಿಡದೇ ಕೆಲವು ಕೇಶ ವಿನ್ಯಾಸಕರು ಕೂದಲನ್ನು ಎಳೆದು ಜಡೆಗಟ್ಟುವ ಅಭ್ಯಾಸ ಆಗಾಗಲಾದರೆ ಹೆಚ್ಚು ಹಾನಿಕರವಲ್ಲ.
ಆದರೆ ಇದು ನಿತ್ಯವೂ ಮತ್ತು ವಿನ್ಯಾಸ ಮೂಡಿಸಿದ ಬಳಿಕ ದಿನದ ಬಹಳಷ್ಟು ಹೊತ್ತು ಬಿಚ್ಚದೇ ಇದ್ದರೆ ಮಾತ್ರ ಕೂದಲ ಬುಡ ನಿಧಾನವಾಗಿ ಸಡಿಲವಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ. ಇಡಿಯ ದಿನ ಸೆಳೆದೇ ಇದ್ದ ಕೂದಲ ಬುಡ ಕೊಂಚವಾಗಿ ತೆರೆದಿದ್ದು ಇಲ್ಲಿ ಬ್ಯಾಕ್ಟೀರಿಯಾಗಳು ತುಂಬಿಕೊಳ್ಳುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಆದ್ದರಿಂದ ಕೂದಲಿಗೆ ಹೆಚ್ಚು ಒತ್ತಡ ನೀಡದೇ ಸಡಿಲವಾಗಿರುವ ವಿನ್ಯಾಸಗಳನ್ನು ಆಯ್ದುಕೊಳ್ಳುವುದೇ ಜಾಣತನ.

ಕೇಶವಿನ್ಯಾಸ ಪ್ರಸಾಧನಗಳ ಅತಿ ಹೆಚ್ಚಿನ ಬಳಕೆ
ಯಾವುದೇ ರಾಸಾಯನಿಕ ಆಧಾರಿಕ ಕೇಶ ಉತ್ಪನ್ನ ಅಡ್ಡಪರಿಣಾಮಗಳಿಂದ ಹೊರತಾಗಿಲ್ಲ. ಶಾಂಪೂ, ಕಂಡೀಶನರ್, ಸೀರಂ, ಜೆಲ್ ಇತ್ಯಾದಿಗಳೆಲ್ಲಾ ತತ್ಕಾಲಕ್ಕೆ ಕೂದಲನ್ನು ಮಿರಿಮಿರಿ ಮಿಂಚಿಸಿದರೂ ದೀರ್ಘಕಾಲದಲ್ಲಿ ಇದರ ರಾಸಾಯನಿಕಗಳ ಪ್ರಭಾವ ವ್ಯತಿರಿಕ್ತವೇ ಆಗಿರುತ್ತದೆ. ಕೂದಲು ಸಹಾ ತನ್ನ ದೃಢತೆ ಕಳೆದುಕೊಳ್ಳುತ್ತಾ ಸುಲಭವಾಗಿ ತುಂಡಾಗುವಂತಿದ್ದು ಕಾಂತಿ ಕಳೆದುಕೊಳ್ಳುತ್ತದೆ. ಉದುರಿದ ಕೂದಲ ಸ್ಥಳದಲ್ಲಿ ಹೊಸ ಕೂದಲು ಬೆಳೆಯದೇ ಕೂದಲು ತೆಳ್ಳಗಾಗತೊಡಗುತ್ತದೆ. ಕೂದಲಿನ ಸಮಸ್ಯೆಗೆ ಮೊಟ್ಟೆಯ ಶಾಂಪೂ ಬಳಸಿ ನೋಡಿ!

ಕೂದಲ ಅಲಂಕಾರಕ್ಕಾಗಿ ಬಳಸುವ ಸಾಧನಗಳು
ಕೂದಲನ್ನು ಹೇಗೆ ಬೇಕೋ ಹಾಗೆ ಬಗ್ಗಿಸಲು ಇಂದು ಹೇರ್ ಅಯರ್ನ್ ಅಥವಾ ಕೂದಲ ಇಸ್ತ್ರಿ ಎಂಬ ಸಾಧನ ಹೆಚ್ಚು ಬಳಕೆಯಲ್ಲಿದೆ. ಇದರಲ್ಲಿ ಕೂದಲನ್ನು ಸುರುಳಿಯಾಗಿಸಿ ಬಿಸಿಗಾಳಿಯನ್ನು ಕೂದಲ ಮೇಲೆ ಹಾಯಿಸಿ ಕೂದಲು ಆ ಸುರುಳಿಯಾಕೃತಿಯಲ್ಲಿರುವಂತೆ ಮಾಡಲಾಗುತ್ತದೆ. ಇಲ್ಲಿ ಏನಾಗುತ್ತಿದೆ ಗೊತ್ತೇ? ನಾವು ಅಷ್ಟು ಕಷ್ಟಪಟ್ಟು ಕೂದಲ ಬುಡಕ್ಕೆ ಎಣ್ಣೆ ಹಾಕಿ ಪೋಷಿಸಿ ಆರೈಕೆ ಮಾಡಿದ ಬಳಿಕವೇ ಆರೋಗ್ಯಕರ ಕೂದಲು ಬೆಳೆದಿರುತ್ತದೆ. ಕೂದಲು ತುಂಡಾಗುವಿಕೆಯನ್ನು ತಡೆಗಟ್ಟಲು 10 ವಿಧಾನಗಳು

ಈ ಬೆಳೆಯುವಿಕೆಯಲ್ಲಿ ಪ್ರಮುಖ ಪಾತ್ರ ಆರ್ದ್ರತೆ ಮತ್ತು ತೈಲದ ಅಂಶವಿದೆ. ಕೂದಲಿನ ಮೇಲೆ ಬಿಸಿಗಾಳಿಯನ್ನು ಹಾಯಿಸಿದಾಗ ಕೂದಲ ಒಳಗಣ ಆರ್ದ್ರತೆ ಮತ್ತು ಎಣ್ಣೆಯ ಅಂಶ ಆವಿಯಾಗಿ ಹೋಗುತ್ತದೆ. ಇನ್ನೇನಾಗಬೇಕು? ಒಣಗಿದ ಕೂದಲು ಒಣಗಿಸಿದ ಮೊದಲು ಬಗ್ಗಿಸಿದ್ದು ಹೇಗಿತ್ತೋ ಹಾಗೇ ಇರುತ್ತದೆ. ಕೂದಲ ವಿನ್ಯಾಸ ಪಡೆದೆ ಎಂದು ಹಿಗ್ಗುವವರು ತಾವೇನು ಕಳೆದುಕೊಂಡಿದ್ದೇವೆ ಎಂದು ಅರಿತರೆ ಇನ್ನೊಮ್ಮೆ ಕೂದಲನ್ನು ಬಿಸಿ ಮಾಡಲಾರರು.

ಅಷ್ಟೇ ಅಲ್ಲ, ಈ ಸಾಧನಗಳ ಹೆಚ್ಚಿನ ಬಳಕೆಯಿಂದ ಕೂದಲ ಬುಡಗಳೂ ಸಡಿಲವಾಗಬಹುದು ಅಥವಾ ಸತ್ತೇ ಹೋಗಬಹುದು. ಆದ್ದರಿಂದ ಅನಿವಾರ್ಯವಲ್ಲದ ಸಂದರ್ಭದಲ್ಲಿ ಈ ಸಾಧನಗಳನ್ನು ಬಳಸದೇ ಮಿತಗೊಳಿಸುವುದು ಹಾಗೂ ಒಮ್ಮೆ ಬಳಸಿದ ಬಳಿಕ ಒಣಗಿದ ಕೂದಲಿನೊಳಗೆ ಮತ್ತೆ ಆರ್ದ್ರತೆ ಮತ್ತು ತೈಲಗಳು ತುಂಬಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡುವುದೇ ಜಾಣತನದ ಕ್ರಮವಾಗಿದೆ.

English summary

3 Surprising Daily Habits That Damage Your Hair

Rightly termed as the 'crowning glory', our hair is one of the most important features of our body that is noticed first by the onlookers. If we have amazing tresses, our appearance will get amplified effortlessly! When we look at the models and celebrities flaunting their perfect hair, without a strand amiss, we tend to envy them for their lovely mane.
X
Desktop Bottom Promotion