Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಬ್ಯೂಟಿ ಟಿಪ್ಸ್: ಸಹಜ ಚೆಲುವೆಯರ ಕೇಶರಾಶಿಯ ಗುಟ್ಟು
ಸುಂದರವಾದ ಕೂದಲು ನಮಗೂ ಇರಬೇಕು ಎಂಬ ಆಸೆ ಯಾರಿಗಿಲ್ಲ. ಸುಂದರವಾದ ಕೂದಲು ಇದ್ದರೆ ಅದನ್ನು ಹೊಂದಿರುವವರು ಸುಂದರವಾಗಿಯೇ ಇರುತ್ತಾರೆ. ಹಾಗೆಂದು ಸುಂದರವಾದ ಕೂದಲನ್ನು ಹೊಂದುವುದು ಅದೃಷ್ಟವೇನು ಅಲ್ಲ. ಒಂದು ವೇಳೆ ಅದೃಷ್ಟವಶಾತ್ ಅದು ಬಂದರು, ಅದನ್ನು ಕಾಪಾಡಿಕೊಂಡು ಬರುವುದು ಕಷ್ಟವಾಗಿರುತ್ತದೆ.

ಆದರೆ ವಾಸ್ತವದಲ್ಲಿ ಕೂದಲನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ರಾಸಾಯನಿಕಗಳಿಂದ ಕೂಡಿದ ಶಾಂಪೂ ಕೂದಲಿನ ಬುಡವನ್ನು ಹಾಳು ಮಾಡಿಬಿಡುತ್ತದೆ. ಏಕೆಂದರೆ ಶಾಂಪೂ ಇಲ್ಲದೆ ಕೂದಲನ್ನು ತೊಳೆದುಕೊಳ್ಳುವುದನ್ನು ಇತ್ತೀಚಿನ ದಿನಗಳಲ್ಲಿ ಊಹಿಸಿ ನೋಡಲು ಸಾಧ್ಯವಿಲ್ಲ. ಅದಕ್ಕಾಗಿ ಬೋಲ್ಡ್‌ಸ್ಕೈ ಇಂದು ನಿಮ್ಮ ಕೂದಲನ್ನು ಸುಂದರವಾಗಿ ಇರಿಸಿಕೊಳ್ಳಲು ಎರಡು ಪದಾರ್ಥಗಳನ್ನು ನಿಮಗೆ ತಿಳಿಸುತ್ತಿದ್ದೇವೆ. ಇವು ನಿಮಗೆ ಮೃದುವಾದ ಮತ್ತು ರೇಷ್ಮೆಯಂತಹ ಕೂದಲನ್ನು ನೀಡುತ್ತದೆ. ಆ ಎರಡು ಪದಾರ್ಥಗಳು ಯಾವುವು ಎಂಬುದನ್ನು ಮುಂದೆ ನೋಡಿ:
1. ಅಲೋವೆರಾ ಜೆಲ್
ಅಲೋವೆರಾದಿಂದ ತೆಗೆದ ಜೆಲ್ ಅನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ 10-15 ನಿಮಿಷ ಮಸಾಜ್ ಮಾಡಿ. ನಂತರ ಇದನ್ನು 2-3 ಗಂಟೆಗಳ ಕಾಲ ಬಿಡಿ. ನಂತರ ಒಂದು ಮೈಲ್ಡ್ ಶಾಂಪೂ ಮತ್ತು ಕಂಡೀಶನರ್ ಬಳಸಿ ಕೂದಲನ್ನು ತೊಳೆಯಿರಿ. ಇದು ನಿಮ್ಮ ಕೂದಲನ್ನು ಬಲಗೊಳಿಸುವುದರ ಜೊತೆಗೆ ನಿಮ್ಮ ಕೂದಲನ್ನು ಮೃದು ಮತ್ತು ರೇಷ್ಮೆಯಂತೆ ಮಾಡುತ್ತದೆ. ಈ ಜೆಲ್ ಜೊತೆಗೆ ನೀವು ಹರಳೆಣ್ಣೆ ಇತ್ಯಾದಿಗಳನ್ನು ಸಹ ಬಳಸಿಕೊಳ್ಳಬಹುದು. ಇದನ್ನು ಬಳಸಿ ನೀವು ಹೇರ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಬಹುದು.
2. ಆಲೀವ್ ಎಣ್ಣೆ
ನಿಮ್ಮ ಕೂದಲಿಗೆ ಆಲೀವ್ ಎಣ್ಣೆಯ ಮಸಾಜ್ ಅನ್ನು ರಾತ್ರಿಯ ಸಮಯದಲ್ಲಿ ಮಾಡಿ. ಆಲೀವ್ ಎಣ್ಣೆಯಲ್ಲಿರುವ ಆಂಟ ಬ್ಯಾಕ್ಟೀರಿಯಾ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಕೂದಲಿಗೆ ಒಳ್ಳೆಯದು. ಇದನ್ನು ಪ್ರತಿದಿನ ಬಳಸುತ್ತಿದ್ದಲ್ಲಿ ಕೂದಲು ತನ್ನ ಮೂಲ ಹೊಳಪನ್ನು ಪಡೆದುಕೊಳ್ಳುತ್ತದೆ. ಈ ಎರಡು ಪದಾರ್ಥಗಳನ್ನು ಕೂದಲಿಗೆ ಲೇಪಿಸಿದರೆ, ಕೂದಲು ಮತ್ತು ಅದರ ಬುಡಗಳು ಹೊಳಪಿನಿಂದ ಕೂಡುತ್ತವೆ. ಇದನ್ನು ಲೇಪಿಸಿದ ನಂತರ ಶಾಂಪೂ ಮತ್ತು ಕಂಡೀಶನರ್ ಹಾಕಿ ತೊಳೆದುಕೊಳ್ಳಿ. ಇದನ್ನು ಬಳಸಿ ನೋಡಿ, ಅದರ ಫಲಿತಾಂಶವನ್ನು ನೋಡಿ ನೀವೇ ಬೆರಗಾಗುವಿರಿ.



Click it and Unblock the Notifications


