Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಂದಿನ ಜಮಾನದಲ್ಲಿ ಹೇರ್ ಸ್ಟೈಲ್ ಕೂಡ ಕಥೆ ಹೇಳುತ್ತೆ..!
ಆಧುನಿಕ ಮಹಿಳೆ ಇಂದಿನ ಯುಗದಲ್ಲಿ ಪ್ರತಿಯೊಂದರಲ್ಲೂ ನಾವೀನ್ಯತೆಯನ್ನು ಬಯಸುತ್ತಾಳೆ. ಆದ್ದರಿಂದಲೇ ಸೌಂದರ್ಯದ ವಿಷಯದಲ್ಲಿ ಕೂಡ ಹೊಸತನವನ್ನು ಆಕೆ ಬಯಸುತ್ತಿರುವುದು. ಮಾರುಕಟ್ಟೆಗೆ ಬರುತ್ತಿರುವ ಹೊಸ ಹೊಸ ಮೇಕಪ್‌ಗಳ ಮೊರೆಹೋಗದೇ ಆಕೆ ಹೊರಗೆ ಕಾಲಿಡಲಾರಳು ಅಷ್ಟೊಂದು ಸೌಂದರ್ಯ ಪ್ರಜ್ಞೆ ಆಕೆಯಲ್ಲಿ ಮೂಡಿದೆ. ಅದಕ್ಕೆ ತಕ್ಕಂತೆ ಇಂದು ಸೌಂದರ್ಯ ಉತ್ಪಾದಕ ಕಂಪೆನಿಗಳೂ ಕೂಡ ತಮ್ಮ
ಬ್ರ್ಯಾಂಡ್‌ಗಳನ್ನು ಮಹಿಳೆಯರ ಮನಸ್ಸಿಗೆ ಒಪ್ಪುವಂತೆ ಬಿಡುಗಡೆ ಮಾಡುತ್ತಿದೆ. ಸೌಂದರ್ಯದ ವಿಷಯಕ್ಕೆ ಬಂದಾಗ ಇದರಲ್ಲಿ ಕೇಶ ಶೃಂಗಾರ ಕೂಡ ಒಂದು. ನಿಮ್ಮ ಮನಕ್ಕೊಪ್ಪುವ ನಿಮ್ಮ ಸ್ಟೈಲ್ ಅನ್ನು ಇನ್ನಷ್ಟು ತೋರ್ಪಡಿಸುವ ಕೇಶ ವಿನ್ಯಾಸವನ್ನು ನೀವು ಅವಲಂಬಿಸುವುದು ನಿಜ. ಆದರೆ ನಿಮ್ಮ ಮನಕ್ಕೊಪ್ಪುವ ಕೇಶ ವಿನ್ಯಾಸ ಹೇಗಿರಬೇಕು ಅಂತೆಯೇ ಈ ಕೇಶ ವಿನ್ಯಾಸಗಳು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ನೀವು ಆಯ್ಕೆಮಾಡುವ ಪ್ರತಿಯೊಂದು ಹೇರ್ ಸ್ಟೈಲ್ ಕೂಡ ನಿಮ್ಮನ್ನು ಕುರಿತು ಚಂದದ ಕಥೆಯನ್ನು ಹೇಳುತ್ತದೆ. ನಿಮ್ಮ ವ್ಯಕ್ತಿತ್ವದ ಕೈಗನ್ನಡಿ ಎಂದೆನಿಸಿದೆ ನಿಮ್ಮ ಕೇಶವಿನ್ಯಾಸ ಎಂದರೆ ನೀವು ನಂಬಲೇಬೇಕು. ಅದನ್ನೇ ನಮ್ಮ ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ. ಈ ಲೇಖನದಿಂದ ನಿಮಗೊಪ್ಪುವ ಕೇಶವಿನ್ಯಾಸವನ್ನು ನೀವು ಆರಿಸಿಕೊಳ್ಳಬಹುದು ಮತ್ತು ಅದನ್ನೇ ನಿಮ್ಮ ಸ್ಟೈಲ್ ಐಕಾನ್ ಆಗಿ ತೋರ್ಪಡಿಸಿ ಕೊಳ್ಳಬಹುದು.

ಕ್ಲೋಸ್ ಕ್ರಾಪ್
ಶಾರ್ಟ್ ಹೇರ್ ಸ್ಟೈಲ್ ಆಗಿರುವ ಇದು ನಿಮ್ಮ ಬೋಲ್ಡ್ ಸ್ವಭಾವವನ್ನು ಎದ್ದುಗಾಣಿಸುತ್ತದೆ. ಯಾವುದೇ ರೀತಿಯ ತೊಂದರೆಯನ್ನು ತೆಗೆದು ಕೊಳ್ಳುವುದಕ್ಕೂ ನೀವು ಹಿಂಜರಿಯುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಕೊನೆಯ ಹ್ಯಾರಿ ಪೋಟರ್ ಚಿತ್ರಕ್ಕಾಗಿ ಎಮ್ಮಾ ವಾಟ್ಸನ್ ಇದೇ ಮಾದರಿಯ ಕೇಶ ವಿನ್ಯಾಸವನ್ನು ಆಯ್ದುಕೊಂಡಿದ್ದರು. ನಿಮ್ಮನ್ನು ಹೆಚ್ಚು ಗ್ಲಾಮರಸ್ ಆಗಿ ತೋರಿಸುವ ಈ ಕೇಶವಿನ್ಯಾಸ ಯುವತ್ವ ಮತ್ತು ತಾಜಾತನವನ್ನು ನಿಮ್ಮಲ್ಲಿ ಮೂಡಿಸುತ್ತದೆ. ಆಧುನಿಕ ಲುಕ್ ಅನ್ನು ಈ ಹೇರ್ ಸ್ಟೈಲ್ ನಿಮಗೆ ನೀಡುವುದು ಖಂಡಿತ.
ಗುಂಗುರು ಕೂದಲು
ಹೆಚ್ಚಿನ ಮಹಿಳೆಯರು ತಮ್ಮ ನೇರ ಕೂದಲನ್ನು ಗುಂಗುರನ್ನಾಗಿಸುತ್ತಿದ್ದಾರೆ. ನಿಮ್ಮನ್ನು ಹೆಚ್ಚು ಸ್ವಾಭಾವಿಕವಾಗಿ ತೋರಿಸುವ ಗುಂಗುರು ಕೂದಲು ನಿಮ್ಮ ಸೌಂದರ್ಯವನ್ನು ಎದ್ದುಗಾಣಿಸುತ್ತದೆ. ಬಾಲಿವುಡ್ ಪ್ರಸಿದ್ಧ ನಟಿ ಕಂಗನಾ ರಾಣಾವತ್ ಗುಂಗುರು ಕೂದಲಿನ ಒಡತಿಯಾಗಿದ್ದಾರೆ. ಗುಂಗುರು ಕೂದಲಿಗೆ ಹೆಚ್ಚುವರಿ ಕಂಡೀಷನ್ ಅಗತ್ಯವಿದೆ ಆದ್ದರಿಂದ ಪ್ರತೀ ವಾರ ಹೇರ್ ಮಾಸ್ಕ್ ಅನ್ನು ನಿಮ್ಮ ಕೂದಲಿಗೆ ನೀವು ಹಚ್ಚಿಕೊಳ್ಳಬೇಕು ಅಂತೆಯೇ ಕೂದಲನ್ನು ತೊಳೆದುಕೊಂಡ ನಂತರ ಎಣ್ಣೆ ಅಥವಾ ಕ್ರೀಮ್ ಅನ್ನು ಕೂದಲಿಗೆ ಹಚ್ಚಿಕೊಳ್ಳಬೇಕು. ಎಂಬುದು ಕೇಶವಿನ್ಯಾಸಕಿ ಅಸ್ಗರ್ ಸಾಬೂ ಮಾತಾಗಿದೆ.
ಹೈ ಪೋನಿ ಟೈಲ್
ಚಿತ್ರಾಂಗದಾ ಸಿಂಘ್ ಮತ್ತು ಕೆಂಡಾಲ್ ಜೆನ್ನರ್ ಹೈ ಪೋನಿ ಟೈಲ್‌ಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ನಿಮ್ಮ ವ್ಯಕ್ತಿತ್ವವನ್ನು ಪ್ರತ್ಯೇಕವಾಗಿಸುವ ಪೋನಿ ಟೈಲ್ ನೀವು ಸಂಘಟಿತರು, ವೃತ್ತಿಪರರು ಮತ್ತು ಗಂಭೀರವಾಗಿ ಪ್ರತಿಯೊಂದನ್ನು ತೆಗೆದುಕೊಳ್ಳುವವರು ಎಂಬುದನ್ನು ತೋರ್ಪಡಿಸುತ್ತದೆ. ಕಚೇರಿ ಮತ್ತು ಮುಖ್ಯ ಮೀಟಿಂಗ್‌ಗಳಿಗೆ ಹೈ ಪೋನಿ ಟೈಲೇ ಆದ್ಯತೆ. ಕಾರ್ಪೋರೇಟ್ ಚಿತ್ರದಲ್ಲಿ ಬಿಪಾಶಾರ ಹೈ ಪೋನಿ ಟೇಲ್ ಕೇಶವಿನ್ಯಾಸ ಆಕೆಗೆ ಒಬ್ಬ ಶಕ್ತಿಯುತ ವ್ಯವಹಾರಸ್ಥೆಯ ಲುಕ್ ಅನ್ನು ನೀಡಿತ್ತು.
ಬ್ಲೋಂಡ್ ಹೈಲೈಟ್ಸ್
ಈ ರೀತಿಯ ಕೇಶವಿನ್ಯಾಸ ನೀವು ಮಹತ್ವಾಕಾಂಕ್ಷಿ ಮಹಿಳೆ ಎಂಬುದನ್ನು ತೋರಿಸುತ್ತದೆ. ನೀವು ಗ್ಲಾಮರಸ್ ಆಗಿರುವಿರಿ ಮತ್ತು ನಿಮ್ಮ ಸ್ತ್ರೀತ್ವಕ್ಕೆ ಈ ರೀತಿಯ ಕೇಶವಿನ್ಯಾಸ ಕನ್ನಡಿ ಹಿಡಿದಂತೆ. ಕಿಮ್ ಕರ್ದಶಿಯಾನ್ ತಮ್ಮ ಮಗಳ ಜನನದ ನಂತರ ಈ ಮಾದರಿಯ ಕೇಶ ವಿನ್ಯಾಸವನ್ನು ಮಾಡಿಕೊಂಡಿದ್ದಾರೆ. ಇನ್ನು ಈ ರೀತಿಯ ಕೇಶವಿನ್ಯಾಸವನ್ನು ನೀವು ಮಾಡಿಕೊಂಡ ನಂತರ ಇದರ ನಿರ್ವಹಣೆಗೆ ಆದ್ಯತೆಯನ್ನು ನೀವು ನೀಡಬೇಕಾಗುತ್ತದೆ.



Click it and Unblock the Notifications


