ಸೌಂದರ್ಯ ವೃದ್ಧಿಯಲ್ಲಿ ಹಸಿರು ಸೊಪ್ಪುಗಳ ಕೈಚಳಕ

ಇಂದಿನ ಬದಲಾಗುತ್ತಿರುವ ಕಾಲಮಾನದಲ್ಲಿ ರಾಸಾಯನಿಕ ಉತ್ಪನ್ನಗಳಿಗೆ ನಾವು ನಮ್ಮನ್ನು ಹೆಚ್ಚು ಒಗ್ಗಿಸಿಕೊಳ್ಳುತ್ತಿದ್ದೇವೆ. ಸೌಂದರ್ಯ ಪ್ರಸಾಧನಗಳನ್ನು ಬಳಸಿ ಹೆಚ್ಚು ಕಡಿಮೆ ನಮ್ಮ ಸುಂದರ ತ್ವಚೆ, ಹಾಗೂ ಕೂದಲು ಕಾಂತಿ ಕಳೆದುಕೊಳ್ಳಲು ನಾವೇ ಪರೋಕ್ಷವಾಗಿ ಕಾರಣವಾಗುತ್ತಿದ್ದೇವೆ. ಆಯುರ್ವೇದ ಪದ್ಧತಿಯಲ್ಲಿ ಉಲ್ಲೇಖಿಸಿರುವ ಹಲವಾರು ವಿಧಾನಗಳು ಪರಿಣಾಮಗಳನ್ನು ನಿಧಾನವಾಗಿ ಉಂಟುಮಾಡಿದರೂ ಶಾಶ್ವತವಾಗಿ ಅವುಗಳು ನಮ್ಮ ಸೌಂದರ್ಯದ ಮೇಲೆ ಅದ್ಭುತಗಳನ್ನು ಉಂಟುಮಾಡುವಂಥದ್ದವುಗಳಾಗಿವೆ.

ನೀವು ನಿತ್ಯವೂ ಅಡುಗೆಮನೆಯಲ್ಲಿ ಬಳಸುವ ಹಸಿರು ಸೊಪ್ಪುಗಳು ನಿಮ್ಮ ಸೌಂದರ್ಯ ವೃದ್ಧಿಯಲ್ಲಿ ಹೇಗೆ ಪರಿಣಾಮವನ್ನು ಬೀರಬಲ್ಲವು ಎಂಬುದನ್ನು ನೀವು ಅರಿತಿದ್ದೀರಾ? ಹೌದು ಇಂದಿನ ನಮ್ಮ ಲೇಖನದಲ್ಲಿ ಈ ಹಸಿರು ಸೊಪ್ಪುಗಳ ಅದ್ಭುತ ಪ್ರಯೋಜನಗಳನ್ನು ಕುರಿತು ನಿಮ್ಮ ಮುಂದೆ ಕೆಲವೊಂದು ವಿಧಾನಗಳನ್ನು ನಾವು ಸ್ಲೈಡರ್‌ಗಳಲ್ಲಿ ತಿಳಿಸಿದ್ದು ಈ ಸರಳ ವಿಧಾನಗಳನ್ನು ಮನೆಯಲ್ಲ ತಯಾರಿಸಿ ತ್ವಚೆಯ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.

ನುಗ್ಗೆ ಸೊಪ್ಪಿನ ಎಲೆ

ನುಗ್ಗೆ ಸೊಪ್ಪಿನ ಎಲೆ

ಆಯುರ್ವೇದದಲ್ಲಿ ನುಗ್ಗೆಗಿಡದ ಎಲ್ಲಾ ಭಾಗಗಳು- ಅಂದರೆ ಎಲೆ, ಕಾಂಡ, ತೊಗಟೆ, ಬೇರು ಎಲ್ಲವೂ ವಿವಿಧ ಔಷಧೀಯ ಗುಣಗಳನ್ನು ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಸುಮಾರು ಒಂದು ಮುಷ್ಠಿಯಷ್ಟು ನುಗ್ಗೆ ಎಲೆಗಳಿಗೆ ನಾಲ್ಕಾರು ಹನಿ ಲಿಂಬೆರಸ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗಂಧದ ಒಣ ಪುಡಿ (ಅಥವಾ ಹೊಟ್ಟು) ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. (ಕಲ್ಲಿನ ಮೇಲೆ ಅರೆದರೆ ಉತ್ತಮ, ಮಿಕ್ಸಿಯಲ್ಲಿ ಅರೆದರೆ ಬಿಸಿಯಾಗುವ ಮೂಲಕ ಎಲೆಗಳು ಗುಣಗಳನ್ನು ಕಳೆದುಕೊಳ್ಳಬಹುದು). ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಸಂಜೆ ಈ ಲೇಪನವನ್ನು ಹಚ್ಚಿ ಮರುದಿನ ಸ್ನಾನ ಮಾಡಿದರೆ ಉತ್ತಮ ಪರಿಣಾಮ ದೊರಕುತ್ತದೆ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುವುದರಿಂದ ತ್ವಚೆಯ ಕಾಂತಿಯನ್ನು ವೃದ್ಧಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ 4 ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಳ್ಳಿ ಹಾಗೂ 15 ನಿಮಿಷಗಳವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಸೀಬೆ ಎಲೆ

ಸೀಬೆ ಎಲೆ

ಒಂದು ಲೀಟರ್ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಮುಷ್ಟಿಯಷ್ಟು ಸೀಬೆಯ ಎಲೆಗಳನ್ನು ಕುದಿಸಿಕೊಳ್ಳಿ. ಚೆನ್ನಾಗಿ ಕುದಿದ ನಂತರ, ತಣ್ಣಗಾಗಲು ಬಿಡಿ. ನೀರನ್ನು ಬಸಿದು ಅದನ್ನು ಕೂದಲ ಬುಡದಿಂದ ತುದಿಯವರೆಗೆ ತಕ್ಷಣವೇ ಹಚ್ಚಿಕೊಳ್ಳಿ. ಸೀಬೆ ಎಲೆಯೊಂದಿಗೆ ಕುದಿಸಿರುವ ನೀರನ್ನು ಕೂದಲಿಗೆ ಬಳಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

ಕರಿಬೇವಿನ ಎಲೆ

ಕರಿಬೇವಿನ ಎಲೆ

ಇ೦ದಿನ ದಿನಮಾನಗಳಲ್ಲಿ ಇನ್ನೂ ಇಪ್ಪತ್ತರ ಹರೆಯಕ್ಕೆ ಕಾಲಿಡುತ್ತಿರುವ ಲಲನಾಮಣಿಗಳೂ ಕೂಡ ಬೂದುಬಣ್ಣದ ಕೇಶರಾಶಿಯುಳ್ಳವರಾಗಿರುವುದನ್ನು ನಾವಿ೦ದು ಕಾಣುತ್ತಿದ್ದೇವೆ. ಇದಕ್ಕೆಂದೇ ಒಂದು ಸರಳವಾದ ಮನೆಮದ್ದನ್ನು ಸೂಚಿಸಿದ್ದೇವೆ, ಅದೇ ಕರಿಬೇವಿನ ಎಲೆಯ ಮಾಸ್ಕ್. ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಳ್ಳಿರಿ. ನೀರು ಹಾಗೂ ಇದನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳುವುದಕ್ಕೆ ಮೊದಲು ಮಿಶ್ರಣವನ್ನು ತಲೆಯ ಮೇಲೆ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಕೂದಲ ಬುಡ ಸಡಿಲವಾಗಲು ಕಬ್ಬಿಣದ ಕೊರತೆ ಪ್ರಮುಖ ಕಾರಣವಾಗಿದೆ. ಪಾಲಕ್ ಮತ್ತು ಬಸಲೆ ಸೊಪ್ಪುಗಳಲ್ಲಿರುವ ಕಬ್ಬಿಣದ ಅಂಶ ಇದನ್ನು ಪೂರೈಸುವ ಕಾರಣ ಕೂದಲ ಉದುರುವಿಕೆಯನ್ನು ಸಮರ್ಥವಾಗಿ ತಡೆಯಬಹುದು. ಒಂದರ್ಥದಲ್ಲಿ ಕೂದಲ ಉದುರುವಿಕೆಗೆ ಇವು ಸೂಪರ್ ಆಹಾರಗಳಾಗಿವೆ. ಕೂದಲು ಬಹಳವಾಗಿ ಉದುರುವ ಸಮಸ್ಯೆ ಇರುವವರು ದಿನಕ್ಕೊಂದು ಲೋಟ ಪಾಲಕ್ ಸೊಪ್ಪಿನ ಜ್ಯೂಸ್ ಮಾಡಿಕೊಂಡು ನೇರವಾಗಿ ಕುಡಿದರೆ ಉತ್ತಮ ಪರಿಣಾಮವನ್ನು ಕೆಲವೇ ದಿನಗಳಲ್ಲಿ ಕಾಣಬಹುದು. ಈ ಜ್ಯೂಸ್ ನಿಮ್ಮ ಬೆಳಗ್ಗಿನ ಪ್ರಥಮ ಆಹಾರವಾಗಿದ್ದರೆ ಉತ್ತಮ.

Story first published: Saturday, December 5, 2015, 23:06 [IST]
X
Desktop Bottom Promotion